Shrirasthu Shubhamasthu: ಅಮ್ಮನ ಜೊತೆಗೆ ಜಗಳ ಮಾಡಲು ಬಂದ ಸಂಧ್ಯಾ: ಆಕ್ಸಿಡೆಂಟ್ ಆಗಿದ್ದು ಯಾರಿಗೆ..?
ಶಾರ್ವರಿ ಪ್ಲಾನ್ ಎಲ್ಲವೂ ಉಲ್ಟಾ ಆಗಿದೆ. ತನಗೇ ಗೊತ್ತಿಲ್ಲದ ಹಾಗೆ ಮಾಧವ್, ತುಳಸಿಯನ್ನು ಮದುವೆಯಾಗಿರುವುದಕ್ಕೆ ಅವಳ ದ್ವೇಷ ಡಬಲ್ ಆಗಿದೆ. ಆದರೆ, ಶಾರ್ವರಿ ಮಗಳು ನಿಧಿಗೆ ಈಗ ಬದುಕಿನ ಆತಂಕ ಹೆಚ್ಚಾಗಿದೆ. ಹೀಗಾಗಿ ಶಾರ್ವರಿ ಬಳಿ ಬಂದು ಪ್ರಶ್ನೆ ಮಾಡುತ್ತಾಳೆ. ದೊಡ್ಡಪ್ಪ ಮದುವೆ ಆಗಿರುವುದಕ್ಕೆ ಈಗ ನಿನ್ನ ಮರ್ಯಾದೆ ಕಡಿಮೆ ಆಗಿದೆ ಎನ್ನುತ್ತಾಳೆ.
ನಮ್ಮನ್ನು ಏನಾದರೂ ಬೀದಿಗೆ ಕಳಿಸಿದರೆ, ನಮ್ಮ ಬದುಕು ಹೇಗೆ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಶಾರ್ವರಿ ಅಷ್ಟೆಲ್ಲಾ ಆಗುವುದಿಲ್ಲ. ನನ್ನ ಪ್ಲಾನ್ ಪ್ರಕಾರ ಭಾವನಿಗೆ ದೊಡ್ಡ ಆಘಾತ ಕಾದಿದೆ ಎಂದು ಹೇಳುತ್ತಾಳೆ.

ಅಭಿ ಬೇರೆ ದೀಪಿಕಾಗೋಸ್ಕರ ಕಾಯುತ್ತಿರುತ್ತಾನೆ. ದೀಪಿಕಾ ಅಭಿ ಹಿಂದೆ ಬಿದ್ದಾಗ ಅವನಿಗೆ ಅವಳ ಪ್ರೀತಿ ಅರ್ಥವಾಗಿರಲಿಲ್ಲ. ಆದರೆ, ಈಗ ದೀಪಿಕಾ ದೋರ ಹೊಗುತ್ತಿರುವ ಸಂದರ್ಭದಲ್ಲಿ ಅಭಿಗೆ ಅವಳನ್ನು ಬಿಟ್ಟಿರುವುದು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ಅರ್ಥವಾಗಿದೆ. ದೀಪಿಕಾ ಅಭಿಯನ್ನು ಬಂದು ಭೇಟಿ ಮಾಡುತ್ತಾಳೆ.
ದೂರ ಹೋದ ದೀಪಿಕಾ
ಅಭಿ ತುಂಬಾ ಫಿಲಿಂಗ್ ನಲ್ಲಿ ಇರುತ್ತಾನೆ. ಯಾವುದೇ ಕಾರಣಕ್ಕೂ ನಿನ್ನನ್ನು ಬಿಟ್ಟಿರೋದಕ್ಕೆ ಆಗೋದಿಲ್ಲ. ನೀನು ನನ್ನಿಂದ ದೂರ ಆಗುತ್ತೀಯಾ ಎಂಬುದು ತಿಳಿದ ಮೇಲೆ ನಿನ್ನ ಬೆಲೆ ನನಗೆ ಗೊತ್ತಾಗುತ್ತಿದೆ. ಪ್ಲೀಸ್ ದೀಪಿಕಾ ನಾವಿಬ್ಬರೂ ಓಡಿ ಹೋಗಿ ಮದುವೆ ಆಗೋಣ ಎಂದು ಕೇಳುತ್ತಾನೆ. ಆದರೆ, ದೀಪಿಕಾ ಅದು ಸಾಧ್ಯವೇ ಇಲ್ಲ. ನಾನು ಅಪ್ಪನ ಮಾತನ್ನು ಮೀರುವುದಕ್ಕೆ ಆಗಲ್ಲ. ಅವರು ತೋರಿಸಿದ ಹುಡುಗನನ್ನು ಮದುವೆಯಾಗುತ್ತೀನಿ. ನನ್ನನ್ನು ಮರೆತು ಬಿಡು ಎಂದು ಹೇಳಿ ಹೊರಟು ಹೋಗುತ್ತಾಳೆ.

ಸಮರ್ಥ್ ಜೊತೆಗೆ ಮಾಧವ್ ಮುಕ್ತ ಮಾತು
ಇತ್ತ ದತ್ತ ತಾತನ ಮನೆಯಲ್ಲಿ ಎಲ್ಲರೂ ಖುಷಿಯಿಂದ ಇರುತ್ತಾರೆ. ತುಳಸಿ ಹಾಗೂ ಮಾಧವ್ ಜೊತೆ ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡುತ್ತಿರುತ್ತಾರೆ. ಇದೇ ವೇಳೆಗೆ ಸಮರ್ಥ್ ಬರುತ್ತಾನೆ. ಸಮರ್ಥ್ ಕೋಪದಿಂದ ಮಾಧವ್ ಹಾಗೂ ತುಳಸಿಯನ್ನು ನೋಡಿ ಅಲ್ಲಿಂದ ತನ್ನ ರೂಮಿಗೆ ಹೋಗುತ್ತಾನೆ. ಆಗ ಹಿಂದೆಯೇ ಹೋಗುವ ಮಾಧವ್, ಸಮರ್ಥ್ ನನ್ನು ಮಾತನಾಡಿಸಲು ಯತ್ನಿಸುತ್ತಾನೆ. ಸಮರ್ಥ್‌ನ ನಿಮ್ಮ ಮೇಲೆ ಹೆಚ್ಚಿನ ಕೋಪವಿದೆ. ಸುಮ್ಮನೆ ಇಲ್ಲಿಂದ ಹೊರಟು ಬಿಡಿ ಎಂದು ಹೇಳುತ್ತಾನೆ. ಆಗ ಮಾಧವ್ ಪರಿಸ್ಥಿತಿ ಅರ್ಥ ಮಾಡಿಸುತ್ತಾನೆ. ನೀನು ಯಾರ ಮೇಲೆ ಕೂಗಾಡಿದರೂ ಪರವಾಗಿಲ್ಲ. ನಿಮ್ಮ ತಾಯಿ ತುಳಸಿ ಬಳಿ ಹಾಗೆಲ್ಲಾ ನಡೆದುಕೊಳ್ಳಬೇಡಿ ಎಂದು ಹೇಳುತ್ತಾನೆ.
ಮನೆಗೆ ಬಂದು ಗಲಾಟೆ ಮಾಡಿದ ಸಂಧ್ಯಾ
ಅಷ್ಟರಲ್ಲಿ ಮನೆಗೆ ಸಂಧ್ಯಾ ಬರುತ್ತಾಳೆ. ಮನೆಗೆ ಬಂದವಳೇ ತನ್ನ ತಾಯಿ ಎದುರು ನಿಂತು ಬಾಯಿಗೆ ಬಂದ ಹಾಗೆ ಬೈಯುತ್ತಾಳೆ. ಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ? ಜನರೆಲ್ಲಾ ನಮ್ಮನ್ನೆಲ್ಲಾ ಆಡಿಕೊಳ್ಳುತ್ತಿದ್ದಾರೆ. ನಿನ್ನಿಂದ ನಮ್ಮ ಮರಿಯಾದೆ ಹೋಗುತ್ತಿದೆ ಎಂದು ಕೂಗಾಡುತ್ತಾಳೆ. ಸಂಧ್ಯಾ ಮಾತು ಕೇಳಿದ ಶೇಷಗಿರಿ, ಸಂಧ್ಯಾಗೆ ಬೈಯುತ್ತಾನೆ. ತುಳಸಿಯನ್ನು ನೋಡಿಕೊಳ್ಳುವವರು ಯಾರಿದ್ದಾರೆ ಎಂದು ಪ್ರಶ್ನಿಸುತ್ತಾನೆ.
ಅಪಘಾತಗೊಂಡ ಅಭಿ ಇದ್ದ ಕಾರು
ದೀಪಿಕಾ ಬಿಟ್ಟು ಹೋಗಿದ್ದಕ್ಕೆ ಅಭಿಗೆ ಬಹಳ ನೋವಾಗುತ್ತದೆ. ದೀಪಿಕಾ ಇಲ್ಲದೇ ತನ್ನ ಬದುಕು ಹೇಗೆ ಎಂದು ಕೊರಗುತ್ತಾನೆ. ಕಾರನ್ನು ಓಡಿಸುವಾಗಲೂ ದೀಪಿಕಾ ಬಗ್ಗೆಯೇ ಯೋಚಿಸುತ್ತಾನೆ. ಈ ವೇಳೆ, ಅಭಿ ಎದುರಿಗೆ ಬಂದ ಗಾಡಿಯನ್ನು ಅವಾಯ್ಡ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆಯುತ್ತಾನೆ. ಕಾರು ಅಪಘಾತದಿಂದ ಅಭಿ ತಲೆಗೆ ಪೆಟ್ಟಾಗಿ ಪ್ರಜ್ಞೆ ತಪ್ಪುತ್ತಾನೆ.


Click it and Unblock the Notifications











