Shrirasthu Shubhamasthu: ತುಳಸಿಯನ್ನು ವಾಪಸ್ ಕರೆದ ಅವಿ : ಹಕ್ಕಿನ ಬಗ್ಗೆ ತುಳಸಿ ಹೇಳಿದ್ದೇನು..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾ ಹುಟ್ಟುಹಬ್ಬಕ್ಕೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಪೂರ್ಣಿಮಾ, ಅವಿಗೆ ಫೋನ್ ಮಾಡಿದರೆ ರೆಸ್ಪಾನ್ಸ್ ಇಲ್ಲ. ಪೂರ್ಣಿಮಾಳ ಹುಟ್ಟಹಬ್ಬವನ್ನು ಆಚರಿಸಲು ಎಲ್ಲರೂ ತಯಾರಾಗಿದ್ದು, ಅವಿ ಬರುತ್ತಾನೆ. ಟೆನ್ಷನ್ ಮಾಡಿಕೊಳ್ಳಬೇಡಿ. ಅವರಿಗೆ ಮುಖ್ಯವಾದ ಮೀಟಿಂಗ್ ಇದೆ ಎಂದೆಲ್ಲಾ ಹೇಳಿ ಊಟ ಮಾಡಿಸಲು ಒಪ್ಪಿಸುತ್ತಾರೆ.
ಇತ್ತ ಅವಿಯ ಫೋನ್ ಅನ್ನು ಸಂಧ್ಯಾ ಚಾರ್ಜ್‌ಗೆ ಹಾಕಿದ್ದು, ಪೂರ್ಣಿಮಾ ಫೋನ್ ಮಾಡಿದ್ದು, ಅವಿಗೆ ಗೊತ್ತೇ ಆಗಿಲ್ಲ. ಹಾಗೂ ಮಾಧವ್ ಮನೆಯಲ್ಲಿ ಯಾರಿಗೂ ಅವಿ, ತುಳಸಿ ಮನೆಗೆ ಬಂದಿರುವುದೂ ಗೊತ್ತಿಲ್ಲ.

ತುಳಸಿ ರುಚಿ ರುಚಿಯಾಗಿ ಅಡುಗೆಯನ್ನು ಮಾಡಿರುತ್ತಾಳೆ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಸ್ವತಃ ತುಳಸಿಯೇ ಅವಿಗೆ ಊಟವನ್ನು ಬಡಿಸುತ್ತಾಳೆ. ಅವಿ ಯಾವುದೇ ಕೋಪವಿಲ್ಲದೇ, ತುಳಸಿ ಮಾಡಿದ ಅಡುಗೆಯನ್ನು ಖುಷಿಯಿಂದ ಸವಿಯುತ್ತಾನೆ.
ಒಟ್ಟಿಗೆ ಕೂತು ಊಟ ಮಾಡಿದ ಅವಿನಾಶ್
ಅವಿ ಊಟ ಮಾಡಿದ್ದನ್ನು ನೋಡಿ ತುಳಸಿಗೂ ಖುಷಿಯಾಗುತ್ತದೆ. ತಾನು ಮಾಡಿದ ಅಡುಗೆ ಎಂದು ಊಟ ಮಾಡುವುದಿಲ್ಲವೇನೋ ಎಂದು ತುಳಸಿ ಭಾವಿಸಿದ್ದಳು. ಇನ್ನು ಅವಿ ಊಟ ಮಾಡುವಾಗ ಸಮರ್ಥ್ ಅನ್ನು ಕೂಡ ಮಾತನಾಡಿಸುತ್ತಾನೆ. ಇದರಿಂದ ಸಮರ್ಥ್‌ಗೆ ಮುಜುಗರವಾಗುತ್ತದೆ.
ಅವಿ ಮಾತು ಕೇಳಿಸಿಕೊಂಡ ದತ್ತ ತಾತ
ತುಳಸಿಯನ್ನು ಮಾತನಾಡಿಸಲು ಅವಿ ಪದೇ ಪದೇ ಪ್ರಯತ್ನಿಸುತ್ತಿರುತ್ತಾನೆ. ಕೊನೆಗೆ ತುಳಸಿ ರೂಮಿನಲ್ಲಿ ಒಬ್ಬಳೇ ಇದ್ದಾಗ ಹೋಗಿ ಮಾತನಾಡಿಸುತ್ತಾನೆ. ನೀವು ಮನೆಯವರು ನಿಮ್ಮನ್ನು ಮನೆಯಿಂದ ಹೋಗಿ ಎಂದ ಕೂಡಲೇ ಒಂದೂ ಮಾತನಾಡದೇ ಬಂದಿದ್ದು ಯಾಕೆ ಅಂತ ಗೊತ್ತಿಲ್ಲ. ಮದುವೆಯಾಗಿ ಬಂದ ನಿಮಗೆ ಆ ಮನೆಯಲ್ಲಿ ಹಕ್ಕಿದೆ. ಆ ಬಗ್ಗೆ ಮಾತನಾಡಬಹುದಿತ್ತು ಎಂದು ಕೇಳುತ್ತಾನೆ. ಆಗ ತುಳಸಿ ತನ್ನ ಹಕ್ಕಿನ ಬಗ್ಗೆ ಮಾತನಾಡುವುದಕ್ಕಿಂತಲೂ ನನಗೆ ಕೊಟ್ಟು ಅಭ್ಯಾಸವಿದೆ. ಕಸಿದುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಹೇಳುತ್ತಾಳೆ.

ಅವಿಯ ಮಾತಿಗೆ ಸರಿಯಾಗಿ ಉತ್ತರ ಕೊಟ್ಟ ತುಳಸಿ
ಈ ಮಾತಿಗೆ ಅವಿ ನಿಮ್ಮನ್ನು ನಾನೀಗ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದೇನೆ. ಹಾಗಂತ ನಿಮ್ಮ ಮದುವೆಯನ್ನು ಒಪ್ಪಿಕೊಂಡಿಲ್ಲ. ನೀವು ಮನೆಯಿಂದ ಹೊರಗೆ ಬರುವಂತೆ ಮಾಡಿದ್ದು ಅನ್ಯಾಯ. ಹಾಗಾಗಿ ಬಂದೆ. ನೀವಾಗಿಯೇ ಮನೆಯನ್ನು ಬಿಟ್ಟು ಬಂದಿದ್ದರೆ, ತಪ್ಪಿರುತ್ತಿರಲಿಲ್ಲ ಎಂದು ತುಳಸಿಗೆ ನೋವಾಗುವಂತೆ ಮಾತನಾಡುತ್ತಾನೆ. ಅದಕ್ಕೆ ತುಳಸಿ ಸರಿಯಾಗಿ ಉತ್ತರ ಕೊಡುತ್ತಾಳೆ.
ನನ್ನಿಂದ ನಿಮ್ಮ ನೆಮ್ಮದಿ ಹಾಳಾಗಬಾರದು
ನಾನು ಈಗ ನಿಮ್ಮ ಮನೆಗೆ ಬರುವುದು ಸರಿ ಎಂದು ನಿಮಗೆ ಅನಿಸಿದರೆ, ನಾನು ಬರುತ್ತೇನೆ. ನನ್ನಿಂದ ನಿಮ್ಮ ನೆಮ್ಮದಿ ಹಾಳಾಗಬಾರದು ಅಂತ ಅವತ್ತು ನಾನು ಬಂದೆ ಎಂದು ಹೇಳುತ್ತಾಳೆ. ಅಲ್ಲದೇ, ನಾನಾಗಿಯೇ ನಾನು ಆ ಮನೆಯಿಂದ ಹೊರಗೆ ಬರುವುದು ನಿಮಗೆ ಖುಷಿ ಕೊಡುತ್ತದೆ ಎಂದರೆ, ಮುಂದೊಂದು ದಿನ ನಾನೇ ಆ ಮನೆಯಿಂದ ಹೊರಗೆ ಬರುತ್ತೇನೆ ಎಂದು ಹೇಳುತ್ತಾಳೆ.
ವಾಪಸ್ ಕರೆದುಕೊಂಡು ಹೊರಟ ಅವಿ
ಕೊನೆಗೆ ಅವಿ, ತುಳಸಿಯನ್ನು ತನ್ನ ಮನೆಗೆ ಕರೆದುಕೊಂಡು ಹೊರಡುತ್ತಾನೆ. ಆಗ ಸಮರ್ಥ್‌ಗೆ ಮತ್ತೆ ಅವಿ ಮೇಲೆ ಕೋಪ ಬರುತ್ತದೆ. ಯಾಕೆಂದರೆ ತುಳಸಿ, ಮಾಧವ್ ಜೊತೆಗೆ ಇರುವುದು ಕೊಂಚವೂ ಇಷ್ಟವಿರುವುದಿಲ್ಲ. ಇನ್ನು ಸಂಧ್ಯಾ ಎಲ್ಲರ ಎದುರಿಗೂ ಸ್ವಲ್ಪ ಓವರ್ ಆಗಿ ನಾಟಕ ಮಾಡುತ್ತಾಳೆ. ಅಮ್ಮ ನಿನ್ನನ್ನು ಬಿಟ್ಟಿರಲು ಆಗುವುದಿಲ್ಲ. ಆದರೆ, ನಿನ್ನ ಖುಷಿಯೂ ಮುಖ್ಯ. ನೀನು ಆ ಮನೆಯಲ್ಲಿ ಇರುವುದೇ ಸರಿ ಎಂದು ಹೇಳಿ ಕಳಿಸುತ್ತಾಳೆ. ದತ್ತ ತಾತ, ತುಳಸಿಗೆ ಯಾವುದಕ್ಕೂ ಹೆದರಬೇಡ ಎಂದು ಧೈರ್ಯ ಹೇಳಿ ಕಳಿಸುತ್ತಾನೆ.


Click it and Unblock the Notifications











