Shrirasthu Shubhamasthu: ಮಗನಿಗೆ ರಕ್ತ ಕೊಟ್ಟು ಬದುಕಿಸಿಕೊಂಡ ಮಾಧವ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಕಾಣಿಸದೇ ಇರುವ ಕಾರಣ ಅವಿ ಗಾಬರಿಯಾಗಿದ್ದಾನೆ. ಬೇರೆ ದಾರಿ ಇಲ್ಲ ಎಂದು ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಮುಂದಾಗಿದ್ದಾನೆ.
ಇತ್ತ ಮಾಧವ್, ಸಮರ್ಥ್‌ಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಮುಂದಾಗಿದ್ದಾನೆ. ಇದೇ ವೇಳೆ ಶೇಷು ಮೊದಲ ಬಾರಿಗೆ ಜೋರಾಗಿ ಸಂಧ್ಯಾ ವಿರುದ್ಧ ಮಾತನಾಡಿದ್ದಾನೆ.

ಸಂಧ್ಯಾ ತನ್ನ ತಾಯಿ ತುಳಸಿಯನ್ನು ಮದುವೆಯಾಗಿದ್ದಕ್ಕೆ ಗಲಾಟೆ ಮಾಡುತ್ತಿದ್ದಾಳೆ. ನೀನು ಮಾಡಿದ್ದು ಒಂದು ಚೂರು ಸರಿಯಿಲ್ಲ ಎಂದು ಬೈಯುತ್ತಿದ್ದಾಳೆ.
ಸಂಧ್ಯಾಗೆ ಉಗಿದು ಕಳಿಸಿದ ಶೇಷು
ಸಂಧ್ಯಾ, ತುಳಸಿ ಮೇಲೆ ಕೂಗಾಡಿದಾಗ ಸುಮ್ಮನಿರದ ಶೇಷು ಜೋರಾಗಿ ಕಿರುಚುತ್ತಾನೆ. ಮುಂದೆ ತುಳಸಿಯನ್ನು ನೋಡಿಕೊಳ್ಳುವುದಕ್ಕೆ ಯಾರಿದ್ದಾರೆ. ನೀನು ಹಣ ಕದ್ದುಕೊಂಡು ಹೋದ ಮೇಲೆ ನಿಮ್ಮ ತಾಯಿ ಎಷ್ಟು ಕಷ್ಟ ಪಡಬೇಕಾಯ್ತು ಗೊತ್ತಾ. ನಿನ್ನನ್ನು ದತ್ತ ತಾತ ಸದಾ ಬೈಯುತ್ತಿರುವಾಗ ನಾನು ಸಮಾಧಾನ ಮಾಡುತ್ತಿದ್ದೆ. ಆದರೆ, ನೀನು ಹಣ ಕದ್ದಾಗಲೇ ನಿನ್ನು ಬುದ್ಧಿ ಗೊತ್ತಾಯ್ತು.
ಮನೆಯವರ ಬಳಿ ಶೇಷು ಕ್ಷಮೆ
ನಿಮ್ಮಂತಹ ಮಕ್ಕಳಿರುವಾಗ ಮುಂದೆ ತುಳಸಿ ಬದುಕು ಹೇಗೆ? ನನ್ನನ್ನು ನಂದಿನಿ ಮನೆಯಿಂದ ಆಚೆ ಹಾಕಿದಾಗ ನನಗೆ ಅಂತ ಗೋದಾವರಿ ಇದ್ಲು. ಮುಂದೊಂದು ದಿನ ಇದೇ ಸ್ಥಿತಿ ತುಳಸಿಗೆ ಬರಬಾರದು ಅಂತಲೇ ಈ ಮದುವೆ ಮಾಡಿಸಿದ್ದು ಎಂದು ಹೇಳಿ ಸಂಧ್ಯಾಳನ್ನು ಮನೆಯಿಂದ ಆಚೆ ಹಾಕುತ್ತಾನೆ. ಬಳಿಕ ಮನೆಯವರ ಬಳಿ ಶೇಷು ಕ್ಷಮೆ ಕೇಳುತ್ತಾನೆ.

ಮಗನಿಗೆ ರಕ್ತ ಕೊಟ್ಟ ಮಾಧವ್
ತುಳಸಿ ಮನೆಗೆ ಬಂದ ಮುತೈದೆಯರಿಗೆ ತಾಂಬೂಲ ಕೊಡಲು ಮುಂದಾಗುತ್ತಾರೆ. ಆಗ ಅಲ್ಲಿದ್ದವರು ಕೆಲವರು ತುಳಸಿ ಹಾಗೂ ಮಾಧವ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಅವರ ಮಾತುಗಳನ್ನು ಕೇಳಿದ ತುಳಸಿ ಮತ್ತು ಸಿರಿಗೆ ಬೇಸರವಾಗುತ್ತದೆ. ಅಷ್ಟರಲ್ಲಿ ಅಲ್ಲೇ ಇದ್ದವರಲ್ಲಿ ಒಬ್ಬರು ಬೈಯುತ್ತಾರೆ. ಬಳಿಕ ತುಳಸಿ ಮತ್ತು ಮಾಧವ್ ಮನೆಯಿಂದ ಹೊರಡುತ್ತಾರೆ. ಆಗ ದಾರಿಯಲ್ಲಿ ಅಭಿಗೆ ಆಕ್ಸಿಡೆಂಟ್ ಆಗಿರುವುದನ್ನು ನೋಡಿ ಗಾಬರಿಯಾಗುತ್ತಾರೆ. ತುಳಸಿ ಮತ್ತು ಮಾಧವ್, ಅಭಿಯನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಚಿಕಿತ್ಸೆ ಕೊಡಿಸುವದರ ಜೊತೆಗೆ ಮಾಧವ್ ಅಭಿಗೆ ರಕ್ತವನ್ನು ಕೂಡ ಕೊಡುತ್ತಾರೆ.
ಅಪ್ಪನನ್ನು ಕ್ಷಮಿಸಲು ಮುಂದಾದ ಅವಿ
ಮಾಧವ್, ಅಭಿಯನ್ನು ಮನೆಗೆ ಕರೆದುಕೊಂಡು ಬರುತ್ತಾರೆ. ಅಭಿಯನ್ನು ನೋಡಿದ ಕೂಡಲೇ ಅವಿ ಹಾಗೂ ಶಾರ್ವರಿ ಗಾಬರಿಯಾಗುತ್ತಾರೆ. ಅಭಿ ತನಗೆ ಏನಾಯ್ತು ಎಂಬುದನ್ನು ವಿವರವಾಗಿ ತಿಳಿಸುತ್ತಾನೆ. ಆಗ ಅವಿ ಮಾಧವ್‌ಗೆ ಬೈಯುತ್ತಾನೆ. ಹೀಗಾಗಿದೆ ಎಂದು ನಮಗೆ ಹೇಳಬಾರದಾ? ನಾವಿಲ್ಲಿ ಗಾಬರಿಯಾಗಿದ್ದೆವು ಎಂದು ಹೇಳುತ್ತಾನೆ. ಆಗ ತುಳಸಿ ಇಲ್ಲ ಮಾಧವ್ ಅವರು ರಕ್ತ ಕೊಟ್ಟು, ಚಿಕಿತ್ಸೆ ಕೊಡಿಸುವ ಕೆಲಸದಲ್ಲಿ ಫೋನ್ ಮಾಡಲು ಆಗಲಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಾಳೆ.
ಅವಿ ಕಂಡಿಷನ್ ರಿಜೆಕ್ಟ್ ಮಾಡಿದ ಮಾಧವ್
ಮಾಧವ್ ಮೇಲಿದ್ದ ಕೋಪ ಅವಿಗೆ ಕರಗಿದಂತಾಗಿ ರೂಮಿಗೆ ಹೋಗುತ್ತಾನೆ. ಮಾಧವ್ ಬಳಿ ಇಷ್ಟು ವರ್ಷ ನಡೆದಿದ್ದನ್ನೆಲ್ಲಾ ಮರೆತು ಬಿಡುತ್ತೇನೆ. ಅಮ್ಮನನ್ನು ಆಕ್ಸಿಡೆಂಟ್‌ನಲ್ಲಿ ಕೊಂದಿದ್ದು, ಪೂರ್ಣಿಮಾಗೆ ಅಬಾರ್ಷನ್ ಆಗಿದ್ದು, ಅಭಿ ಮದುವೆ ಮುರಿದಿದ್ದನ್ನು ಕ್ಷಮಿಸುತ್ತೇನೆ. ಆದರೆ ನೀವು ಈಗ ಆಗಿರುವ ಮದುವೆಯನ್ನು ಮುರಿಯಬೇಕು ಎಂದು ಹೇಳುತ್ತಾನೆ. ಮಾಧವ್ ನಿನ್ನೆಲ್ಲಾ ಕಂಡೀಷನ್ ಗಳಿಗೂ ಒಪ್ಪಿಕೊಳ್ಳುತ್ತೇನೆ. ಆದರೆ, ನನ್ನನ್ನು ನಂಬಿ ಬಂದ ತುಳಸಿ ಅವರ ಕೈ ಬಿಡುವ ಮಾತೇ ಇಲ್ಲ. ಯಾವುದೇ ಕಾರಣಕ್ಕೂ ಈ ಮಾತಿಗೆ ಒಪ್ಪಿಗೆ ಕೊಡುವುದಿಲ್ಲ. ನನ್ನನ್ನು ಕ್ಷಮಿಸು ಅವಿ ಎಂದು ಹೇಳುತ್ತಾನೆ.


Click it and Unblock the Notifications











