Shrirasthu Shubhamasthu: ತುಳಸಿ ಹಾಗೂ ಮಾಧವ್ ಸ್ನೇಹ ಎರಡೂ ಕುಟುಂಬಕ್ಕೆ ಉರುಳಾಯ್ತಾ..?

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ದತ್ತ ತಾತ, ತುಳಸಿ ವಿಚಾರ ಪೇಪರ್‌ನಲ್ಲಿ ಬಂದಿದ್ದಕ್ಕೆ, ಸಂಧ್ಯಾ ಹಣ ಕದ್ದುಕೊಂಡು ಹೋಗಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾನೆ. ಇದೇ ಯೋಚನೆಯಲ್ಲಿ ದಿನವನ್ನು ಕಳೆಯುತ್ತಿದ್ದಾನೆ. ಹೀಗಾಗಿ ಸಿರಿ ಬೇಕಂತಲೇ ದತ್ತ ತಾತನನ್ನು ಎಂಗೇಜ್‌ ಆಗಿಡಲು ಸಿರಿ ಚೆಸ್‌ ಬೋರ್ಡ್ ತಂದು ಜೊತೆಗೆ ಆಟವಾಡುತ್ತಿದ್ದಾಳೆ. ಆಗ ದತ್ತ ತಾತ ಸ್ವಲ್ಪ ಆಕ್ಟೀವ್ ಆಗುತ್ತಾರೆ.

ಇನ್ನು ಸಿರಿಗೆ ಕಾಫಿ ಮಾಡಲು ಬರೋದಿಲ್ಲ ಎಂದು ರೇಗಿಸುವ ದತ್ತ ತಾತ ಇಂದು ನಾನೇ ಅಡುಗೆ ಮಾಡುತ್ತೇನೆ. ನಿನಗೆ ಏನೂ ಬರುವುದಿಲ್ಲ ಎಂದು ತಾತ ನಳ ಮಹರಾಜನಾಗಿದ್ದಾನೆ. ಶೇಷುಗೆ ಮನೆ ಇಲ್ಲದೇ, ಕೆಲಸವಿಲ್ಲದೇ ಒದ್ದಾಡುತ್ತಿರುವುದನ್ನು ನೋಡಿದ ಮಾಧವ್ ಕೆಲಸವನ್ನು ಕೊಡಿಸಿರುತ್ತಾರೆ. ತಮ್ಮದೇ ಕೆಫೆಯಲ್ಲಿ ಶೇಷುಗೆ ಲೆಕ್ಕ ಬರೆಯುವ ಕೆಲಸ ಕೊಟ್ಟು, ಸಣ್ಣ ಮನೆಯನ್ನು ಕೂಡ ಮಾಡಿಕೊಟ್ಟಿರುತ್ತಾರೆ.

Shrirasthu -Shubhamasthu -serial

ಶೇಷು ಎಲ್ಲಾ ವಿಚಾರವನ್ನು ದತ್ತ ತಾತನಿಗೆ ಫೋನ್ ಮಾಡಿ ಹೇಳುತ್ತಾನೆ. ದತ್ತ ತಾತನಿಗೆ ಶೇಷು ಸೇಫ್ ಆಗಿದ್ದಾನೆ ಎಂಬ ವಿಚಾರ ಕೇಳಿ ಖುಷಿಯಾಗುತ್ತದೆ. ಜೊತೆಗೆ ಮಾಧವ್ ಏನೂ ಹೇಳದೇ ಇಷ್ಟೆಲ್ಲಾ ಸಹಾಯ ಮಾಡುತ್ತಿದ್ದಾನಲ್ಲ ಎಂದು ಖುಷಿ ಪಡುತ್ತಾರೆ. ಜೊತೆಗೆ ಶೇಷು ಇದೆಲ್ಲವೂ ಸಾಧ್ಯವಾಗಿದ್ದು, ನಿನ್ನ ಗೆಳೆಯನಾಗಿದ್ದಕ್ಕೆ. ನಾನು ನಿನ್ನ ಗೆಳೆಯ ಎಂಬ ಕಾರಣಕ್ಕೆ ಮಾಧವ್ ನನಗೆ ಇಷ್ಟೆಲ್ಲಾ ಮಾಡಿದ್ದಾರೆ ಎಂದು ಶೇಷು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.

ತುಳಸಿಗೆ ಸೀರೆ ಕೊಡಿಸಿದ ಮಾಧವ್

ಇತ್ತ ತುಳಸಿ, ಮಾಧವ್‌ಗೆ ಫೋನ್ ಕೊಡಲೆಂದು ಸೀರೆ ಅಂಗಡಿಗೆ ಹೋಗಿರುತ್ತಾಳೆ. ಆಗ ಶಾರ್ವರಿಗೆ ಕೋಪ ಬರುತ್ತದೆ. ಪೇಪರ್‌ನಲ್ಲಿ ಮಾಧವ್ ಹಾಗೂ ತುಳಸಿ ವಿಚಾರ ಬಂದು ಒಂದು ದಿನವೂ ಕಳೆದಿಲ್ಲ. ಹಾಗಿದ್ದರೂ ಕೂಡ ಇಬ್ಬರೂ ಖುಷಿಯಾಗಿರುತ್ತಾರೆ. ಏನೂ ನಡೆದೇ ಇಲ್ಲ ಎಂಬಂತೆ ಇದ್ದಾರೆ ಎಂಬುದು ಶಾರ್ವರಿಗೆ ಸಂಕಟ ಉಂಟು ಮಾಡಿರುತ್ತದೆ. ಹಾಗಾಗಿ ಶಾರ್ವರಿ, ಜನಾರ್ಧನ್‌ಗೆ ಫೋನ್ ಮಾಡಿ, ಈ ಕೂಡಲೇ ಇಲ್ಲಿಗೆ ಬಂದು ಮಾಧವ್ ಹಾಗೂ ತುಳಸಿಗೆ ಅವಮಾನ ಮಾಡಬೇಕು ಎಂದು ಹೇಳಿಕೊಡುತ್ತಾಳೆ.

Shrirasthu -Shubhamasthu -serial

ಅವಮಾನ ಮಾಡಿದ ಜನಾರ್ಧನ್

ತುಳಸಿ ಬಂದಿದ್ದಕ್ಕೆ ಮಾಧವ್ ಹಾಗೂ ಪೂರ್ಣಿಮಾ ಸೀರೆಯನ್ನು ಕೊಡಿಸಿರುತ್ತಾರೆ. ಈ ಸೀರೆಯನ್ನು ಮಾಧವ್, ತುಳಸಿಗೆ ಕೊಡುವ ವೇಳೆಗೆ ಸರಿಯಾಗಿ ಎಂಟ್ರಿ ಕೊಡುವ ದೀಪಿಕಾ ತಂದೆ ಜನಾರ್ಧನ್ ಅವಮಾನ ಮಾಡುತ್ತಾನೆ. ನಿನ್ನೆಯಷ್ಟೇ ಹೆಂಗಸಿನ ಜೊತೆಗಿದ್ದ ಫೋಟೋ ಪೇಪರ್‌ನಲ್ಲಿ ಬಂದಿದೆ. ಮನೆ, ಮಾನ, ಮರ್ಯಾದೆಯನ್ನು ಬಿಟ್ಟು ನೀನು ಹೀಗೆ ತಿರುಗುತ್ತಿದ್ದೀಯಾ. ನಿನ್ನಂತಹವರ ಸಹವಾಸ ನನಗೆ ಬೇಡ. ನನ್ನ ಮಗಳನ್ನು ನಿಮ್ಮ ಮನೆಗೆ ಕೊಡುವುದಿಲ್ಲ ಎಂದು ಮದುವೆಗೆ ತೆಗೆದ ಸೀರೆಗಳನ್ನು ವಾಪಸ್ ಮಾಡಿ ಹೊರಟು ಬಿಡುತ್ತಾನೆ. ಇದರಿಂದ ತುಳಸಿಗೆ ಶಾಕ್ ಆಗುತ್ತದೆ.

ಕೆಲಸ ಕಳೆದುಕೊಂಡ ಸಮರ್ಥ್

ಇನ್ನು ಅಭಿ, ಸಮರ್ಥ್‌ನ್ನು ಕರೆದು ನಿನಗೆ ಕೆಲಸವಿಲ್ಲ. ಮನೆಗೆ ಹೊರಡು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಸಮರ್ಥ್‌ಗೆ ಶಾಕ್ ಆಗುತ್ತದೆ. ಇನ್ಮುಂದೆ ಈ ಪ್ರಾಜೆಕ್ಟ್‌ಗಳ ಜವಾಬ್ದಾರಿ ನನ್ನದು. ಎಲ್ಲಾ ಜವಾಬ್ದಾರಿಯನ್ನು ಹೊತ್ತಿರುವುದರಿಂದ ಯಾರು ಬೇಕು ಬೇಡ ಎಂದು ನಾನೇ ನಿರ್ಧಾರ ಮಾಡುತ್ತಾನೆ. ಇವತ್ತೇ ಮನೆಗೆ ಹೋಗು ಎಂದು ಹೇಳುತ್ತಾನೆ. ನಿನ್ನ ತಾಯಿ ನನ್ನ ತಂದೆ ಜೊತೆಗೆ ಸುತ್ತುತ್ತಿದ್ದಾರೆ. ಇದೆಲ್ಲಾ ಸರಿಯಿಲ್ಲ. ಇದೇ ಕಾರಣಕ್ಕೆ ನಿನ್ನನ್ನು ಕೆಲಸದಿಂದ ತೆಗೆಯುತ್ತಿದ್ದೇನೆ ಎಂದು ಹೇಳುತ್ತಾನೆ. ಸಮರ್ಥ್ ಅರ್ಥ ಮಾಡಿಸಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.

More from Filmibeat

English summary
Shrirasthu Shubhamasthu serial 07th Juiy Episode Written Update. here is Detials about Because of Madhav and Tulasi friendship Samarth loses job and abhi marriage cancel. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X