Shrirasthu Shubhamasthu: ಕುತೂಹಲಕರ ಘಟ್ಟದಲ್ಲಿ ಶ್ರೀರಸ್ತು ಶುಭಮಸ್ತು: ಪ್ರೀತಿ ಹೇಳಿಕೊಳ್ಳುತ್ತಾನಾ ಮಾಧವ್..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಈಗ ಬಹುದೊಡ್ಡ ಟ್ವಿಸ್ಟ್ ಒಂದು ಕಾದಿದೆ. ಹಲವು ದಿನಗಳಿಂದ ಪ್ರೇಕ್ಷಕರು ಕಾಯುತ್ತಿದ್ದ ದಿನ ಹತ್ತಿರವೇ ಬಂದಿದೆ. ಮಾಧವ್ ಮತ್ತು ತುಳಸಿ ಯಾವತ್ತು ಒಂದಾಗುತ್ತಾರೆ ಎಂದು ಹಲವು ವೀಕ್ಷಕರು ಕಾತುರದಿಂದ ಕಾಯುತ್ತಿದ್ದರು. ಈಗ ಆ ಸಮಯ ಬಂದಿದೆ. ದತ್ತ ತಾತನೇ ಮುಂದೆ ನಿಂತು ಸೊಸೆ ಹಾಗೂ ಮಾಧವನನ್ನು ಒಂದು ಮಾಡುತ್ತಿದ್ದಾರೆ.

ಏನೇ ಆದರೂ ಸರಿ ತುಳಸಿ ಹಾಗೂ ಮಾಧವ್‌ನನ್ನು ಒಂದು ಮಾಡಿದರೆ, ತನ್ನ ಕಾಲ ಮುಗಿದ ಮೇಲೆ ತುಳಸಿಗೆ ನೆರಳಾಗಿ ಮಾಧವ್ ಇರುತ್ತಾನೆ. ಹಾಗೆ ಬಿಟ್ಟರೆ, ತುಳಸಿ ಅನಾಥೆ ಆಗುತ್ತಾಳೆ ಎಂಬುದು ದತ್ತ ತಾತನ ಯೋಚನೆ. ಆದರೆ, ಮನೆಯಲ್ಲಿ ತನ್ನ ಸಲುವಾಗಿ ಮನೆಯಲ್ಲಿ ಮಗ ಸೊಸೆ ಜಗಳ ಆಡುತ್ತಿರುವುದನ್ನು ನೋಡಿದ ತುಳಸಿಗೆ ಬೇಸರವಾಗಿದೆ. ಹೀಗಾಗಿ ತುಳಸಿ ತನ್ನಿಂದ ಮನೆಯ ನೆಮ್ಮದಿ ಹಾಳಾಗುವುದು ಬೇಡ ಎಂದು ನಿರ್ಧರಿಸಿ, ಮನೆಯನ್ನು ಬಿಟ್ಟು ಬಂದಿದ್ದಾಳೆ.

Shrirasthu Shubhamasthu serial 09th August episode written update

ಮನೆ ಬಿಟ್ಟು ಬಂದಿರುವ ತುಳಸಿ

ಮನೆಯಲ್ಲಿ ಎಲ್ಲರೂ ಏಳುವ ಮುನ್ನವೇ ಮನೆಯಿಂದ ತುಳಸಿ ಹೊರ ನಡೆದಿದ್ದಾಳೆ. ಸಂಧ್ಯಾ ಮಾವ ಜುಗ್ಗ ಮನೆಗೆ ರೌಡಿಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡುತ್ತಾನೆ. ಆಗ ದತ್ತ ತಾತನಿಗೆ ಸೊಸೆ ಮನೆ ಬಿಟ್ಟು ಹೋಗಿರುವುದು ಗೊತ್ತಾಗುತ್ತದೆ. ಹೀಗಾಗಿ ತುಳಸಿಯನ್ನು ಹುಡುಕಿಕೊಂಡು ತಾತ ಹೊರಡುತ್ತಾರೆ. ಆಗ ಸಿರಿ ಮತ್ತೆ ಸಮರ್ಥ್ ಜೊತೆಗೆ ಜಗಳ ಮಾಡುತ್ತಾಳೆ. ನೀನು ಮಾಡೋ ಕೆಲಸಕ್ಕೆ ಅಮ್ಮ ಮನೆ ಬಿಟ್ಟು ಹೋಗಿದ್ದಾರೆ ಎಂದು ಬೈಯುತ್ತಾಳೆ.

ದೇವಸ್ಥಾನದಲ್ಲಿ ತುಳಸಿ-ಮಾಧವ್ ಮದುವೆ..?

ಇತ್ತ ತುಳಸಿ ತನಗೆ ತಿಳಿಯದೆಯೇ ಮಾಧವ್ ಮನೆಗೆ ಹೊರಟಿರುವ ಟಿಟಿ ಹತ್ತುತ್ತಾಳೆ. ಸೀದಾ ಮಾಧವ್ ಮನೆಗೆ ಹೋದ ಮೇಲೆ ಬಾಗಿಲಲ್ಲೇ ಮಾಧವ್ ನಿಂತಿರುತ್ತಾನೆ. ಇಬ್ಬರೂ ಶಾಕ್ ಆಗುತ್ತಾರೆ. ಬಳಿಕ ತುಳಸಿ ತಾನು ಮನೆ ಬಿಟ್ಟು ಬಂದಿರುವ ವಿಚಾರ ಹೇಳುತ್ತಾಳೆ. ತಕ್ಷಣವೇ ದತ್ತ ತಾತನಿಗೆ ಫೋನ್ ಮಾಡಿ ತುಳಸಿ ಬಂದಿರುವ ವಿಚಾರವನ್ನು ತಿಳಿಸುತ್ತಾನೆ. ಆಗ ದತ್ತ ತಾತ ದೇವರೇ ಸರಿಯಾದ ದಾರಿ ತೋರಿಸಿದ್ದಾರೆ ಎಂದು ಹೇಳಿ, ತುಳಸಿಯನ್ನು ಮಾಧವ್‌ಗೆ ಇಬ್ಬರೂ ಶ್ರೀನಿವಾಸ ದೇವಸ್ಥಾನಕ್ಕೆ ಬರುವಂತೆ ಹೇಳುತ್ತಾನೆ. ಮಾಧವ್, ತುಳಸಿಯನ್ನು ಕರೆದುಕೊಂಡು ಹೊರಡುತ್ತಾರೆ.

Shrirasthu Shubhamasthu serial 09th August episode written update

ಶಾರ್ವರಿಗೆ ಆತಂಕ ಮೂಡಿಸಿದ ಘಟನೆ

ಮಾಧವ್ ಮನೆಯಲ್ಲಿ ಮದುವೆ ಸಂಭ್ರಮ. ಆದರೆ, ಪೂರ್ಣಿಮಾಳಿಗೆ ಮಾವನದ್ದೇ ಧ್ಯಾನ. ಮಾವನ ವಿರುದ್ಧವಾಗಿ ಅವಿ ಹಾಗೂ ಅಭಿ ನಡೆದುಕೊಳ್ಳುತ್ತಿದ್ದಾರೆ. ಇಬ್ಬರೂ ಸೇರಿ ಮಾವನಿಗೆ ನೋವು ಕೊಡುತ್ತಿದ್ದಾರೆ ಎಂದು ಮದುವೆ ಮನೆಯಲ್ಲೂ ಬೇಸರವಾಗಿದ್ದಾಳೆ. ಆದರೆ, ಮದುವೆಗೆ ಪೂರ್ಣಿಮಾ ರೆಡಿಯಾಗಿರುವುದನ್ನು ನೋಡಿದ ಅವಿ ಕೊಂಚ ರೊಮ್ಯಾಂಟಿಕ್ ಆಗಿ ಮಾತನಾಡಿಸುವ ನೆಪದಲ್ಲಿ ಪೂರ್ಣಿಮಾಳ ಮೊಗದಲ್ಲಿ ನಗು ತರಿಸಿದ್ದಾನೆ. ಇನ್ನು ಮಾಧವ್ ತುಳಸಿ ಜೊತೆಗೆ ಹೋಗಿದ್ದನ್ನು ಮನೆ ಕೆಲಸದವಳು ನೋಡಿ ಶಾರ್ವರಿಗೆ ಹೇಳುತ್ತಾಳೆ. ಇದರಿಂದ ಗಾಬರಿಯಾಗುವ ಶಾರ್ವರಿ ಕೂಡಲೇ ಜನಾರ್ಧನ್ ಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾಳೆ. ಮಾಧವ್ ನಡೆ ಶಾರ್ವರಿಗೆ ಪದೇ ಪದೇ ಆತಂಕವನ್ನು ತರುತ್ತಿದೆ.

ಮನದಾಳದ ಪ್ರೀತಿಯನ್ನು ಹೇಳುತ್ತಾನಾ ಮಾಧವ್?

ದತ್ತ ತಾತ ಮದುವೆಗೆ ಬರುವಂತೆಯೇ ಜುಬ್ಬ ಧರಿಸಿ ದೇವಸ್ಥಾನಕ್ಕೆ ಬಂದಿದ್ದಾರೆ. ಮಾಧವ್ ಮತ್ತು ತುಳಸಿ ಬೇರೆ ಎದುರಾಗಿರುವುದಕ್ಕೆ ಅವರನ್ನೂ ದೇವಸ್ಥಾನಕ್ಕೆ ಬರಲು ಹೇಳಿದ್ದಾರೆ. ಈಗ ಇಬ್ಬರಿಗೂ ಶ್ರೀನಿವಾಸನ ದೇವಸ್ಥಾನದಲ್ಲೇ ಮದುವೆ ಮಾಡಿಸುತ್ತಾರಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ತುಳಸಿ ಮತ್ತು ಮಾಧವ್ ದೇವಸ್ಥಾನಕ್ಕೆ ಬಂದ ಮೇಲೆ ದತ್ತ ತಾತ ಸತ್ಯ ಹೇಳುವಂತೆ ಹೇಳುತ್ತಾರೆ. ನಿನ್ನ ಮನಸ್ಸಲ್ಲಿ ತುಳಸಿ ಬಗ್ಗೆ ಇರುವ ಭಾವನೆಯನ್ನು ಹೇಳಿಕೋ ಎಂದು ಹೇಳಿದ್ದಾರೆ. ಈಗ ಮಾಧವ್ ಇರುವ ಸತ್ಯವನ್ನು ಹೇಳಿ ತುಳಸಿಯನ್ನು ಸಂಗಾತಿಯನ್ನು ಪಡೆಯುತ್ತಾರಾ ಎಂಬ ಕುತೂಹಲ ಮೂಡಿದೆ.

More from Filmibeat

English summary
Shrirasthu Shubhamasthu Kannada serial Today episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X