Shrirasthu Shubhamasthu: ಮನೆಗೆ ವಾಪಸ್ ಬಂದ ತುಳಸಿಯನ್ನು ನೋಡಿ ಎಲ್ಲರಿಗೂ ಶಾಕ್

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾ ಮಾತುಗಳನ್ನು ಕೇಳಿದ ಅವಿಗೆ ತುಳಸಿಯನ್ನು ಮನೆಗೆ ಕರೆದುಕೊಂಡು ಬರುವುದು ಸರಿ ಎಂದು ಅನಿಸಿದೆ. ಹಾಗಾಗಿ ತಾನೇ ಖುದ್ದಾಗಿ ಹೋಗಿ ತುಳಸಿಯನ್ನು ಮನೆಗೆ ಕರೆದುಕೊಂಡು ಬರಲು ಮುಂದಾಗಿದ್ದಾನೆ. ತುಳಸಿಯನ್ನು ಅವಿ ಕರೆದುಕೊಂಡು ಹೋಗಿದ್ದಕ್ಕೆ ದತ್ತ ತಾತನಿಗೆ ಬೇಸರದ ಜೊತೆಗೆ ಖುಷಿಯೂ ಆಗಿರುತ್ತದೆ.

ತುಳಸಿ ನಮ್ಮ ಮನೆಯಲ್ಲಿ ಇರುವುದಿಲ್ಲ ಎಂಬ ಬೇಸರವಿದ್ದರೂ, ಸ್ವತಃ ಅವಿಯೇ ಮನೆಗೆ ಬಂದು ತುಳಸಿಯನ್ನು ಕರೆದುಕೊಂಡು ಹೋಗಿದ್ದಕ್ಕೆ ಖುಷಿಯಾಗಿರುತ್ತದೆ.

ಅವಿ ಮತ್ತು ತುಳಸಿ ಕಾರಿನಲ್ಲಿ ಬರುತ್ತಿರುತ್ತಾರೆ. ಪೂರ್ಣಿಮಾ ಹುಟ್ಟುಹಬ್ಬದ ಬಗ್ಗೆ ನಿಮಗೆ ಹೇಗೆ ಗೊತ್ತು ಎಂದು ಅವಿ ಕೇಳಿದ್ದಕ್ಕೆ ತುಳಸಿ, ಮಾಧವ್ ನಾಲ್ಕು ದಿನಗಳಿಂದ ಪೂರ್ಣಿ ಹುಟ್ಟುಹಬ್ಬ ಇದೆ ಎಂದು ಹೇಳುತ್ತಿದ್ದರು. ಹಾಗಾಗಿ ನನಗೂ ನೆನಪಾಯ್ತು.

shrirasthu-shubhamasthu-serial

ಅವಿಗಾಗಿ ಕಾಯುತ್ತಿರುವ ಪೂರ್ಣಿ

ಉಡುಗೊರೆಯನ್ನು ಯಾರ ಕೈಯಲ್ಲಾದರೂ ಕೊಟ್ಟು ಕಳಿಸಬೇಕು ಎಂದುಕೊಂಡಿದ್ದೆ. ಆದರೆ, ಈಗ ನಾನೇ ಹೋಗುತ್ತಿದ್ದೇನೆ ಎಂದು ಖುಷಿ ಹೇಳಿಕೊಳ್ಳುತ್ತಾಳೆ. ಇತ್ತ ಪೂರ್ಣಿ, ಅವಿಗಾಗಿ ಕಾದು ಕಾದು ಸುಸ್ತಾಗಿ ಹೋಗಿರುತ್ತಾಳೆ. ಇಷ್ಟೊತ್ತಾದರೂ ಬರಲಿಲ್ಲವಲ್ಲ ಎಂದು ಸಣ್ಣಗೆ ಕೋಪ ಮಾಡಿಕೊಂಡು ಒಬ್ಬಳೇ ಒದ್ದಾಡುತ್ತಿರುತ್ತಾಳೆ.

ಪೂರ್ಣಿಗೆ ದೊಡ್ಡ ಗಿಫ್ಟ್ ಕೊಟ್ಟ ಅವಿ

ಪೂರ್ಣಿಮಾ ಹಾಗೆ ರೂಮಿನಿಂದ ಹಾಲ್‌ಗೆ ಬರುತ್ತಾಳೆ. ಪೂರ್ಣಿ, ಹಾಲ್‌ಗೆ ಬರುತ್ತಿದ್ದ ಹಾಗೆ ಲೈಟ್ಸ್ ಆನ್ ಆಗುತ್ತವೆ. ಡೆಕೋರೇಷನ್ ನೋಡಿದ ಪೂರ್ಣಿಮಾಗೆ ಖುಷಿಯಾಗುತ್ತೆ. ಆದರೆ, ಅವಿ ಇನ್ನು ಮನೆಗೆ ಬಂದಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಅಷ್ಟರಲ್ಲಿ ಅವಿ ಬರುತ್ತಾನೆ. ಪೂರ್ಣಿಮಾ ಯಾಕಿಷ್ಟು ತಡ ಮಾಡಿದ್ದು ಎಂದು ಕೇಳುತ್ತಾಳೆ. ಆಗ ಅವಿ ನಿನ್ನ ಹುಟ್ಟು ಹಬ್ಬಕ್ಕೆ ಗಿಫ್ಟ್ ತರೋದು ಲೇಟ್ ಆಯ್ತು ಎನ್ನುತ್ತಾನೆ. ಆಗ ತುಳಸಿ ಬರುತ್ತಾಳೆ. ತುಳಸಿಯನ್ನು ನೋಡಿದ ಕೂಡಲೇ ಪೂರ್ಣಿಮಾಗೆ ಫುಲ್ ಖುಷಿಯಾಗುತ್ತದೆ.

ತುಳಸಿ ನೋಡಿ ಎಲ್ಲರೂ ಶಾಕ್

ಮತ್ತೆ ಮನೆಯಲ್ಲಿ ತುಳಸಿಯನ್ನು ಮಾಧವ್ ಮುಖವೂ ಅರಳುತ್ತದೆ. ಆದರೆ, ಶಾರ್ವರಿ ಹಾಗೂ ಅಭಿ ಇಬ್ಬರೂ ಶಾಕ್ ಆಗುತ್ತಾರೆ. ಅದರಲ್ಲೂ ಅಭಿ ಹುಟ್ಟುಹಬ್ಬವನ್ನು ಕೂಡ ಆಚರಿಸದೇ, ಹೊರಟು ಹೋಗುತ್ತಾನೆ. ಆಗ ಅವಿ ಮನಸಿನಲ್ಲೇ ಸ್ವಾರಿ ಅಭಿ ನಿನಗೆ ಕಷ್ಟವಾಗುತ್ತಿದೆ ಅಂತ ನನಗೆ ಗೊತ್ತಿದೆ. ನಿನಗೆ ನಾನು ಸಮಾಧಾನ ಮಾಡುತ್ತೇನೆ ಎಂದು ಮನಸಲ್ಲೇ ಮಾತನಾಡಿಕೊಳ್ಳುತ್ತಾನೆ.

ಅವಿ ಸಮಾಧಾನದ ಮಾತು

ಪೂರ್ಣಿಮಾ ಕೇಕ್ ಕಟ್ ಮಾಡಿ ಎಲ್ಲರಿಗೂ ಕೊಡುತ್ತಾಳೆ. ಶಾರ್ವರಿ ಬಹಳ ಕೋಪ ಮಾಡಿಕೊಂಡಿರುತ್ತಾಳೆ. ಆದರೆ, ಅವಿ ನಾನು ತುಳಸಿ ಅವರನ್ನು ಕರೆದುಕೊಂಡು ಬಂದಿದ್ದರಿಂದ ನಿಮಗೆಲ್ಲಾ ಹಿಂಸೆ ಆಗುತ್ತಿರಬಹುದು. ಆದರೆ, ಇದೆಲ್ಲಾ ಸ್ವಲ್ಪ ದಿನದಲ್ಲೇ ಸರಿ ಹೋಗುತ್ತದೆ ಎಂದು ಸಮಾಧಾನದ ಮಾತುಗಳನ್ನು ಆಡುತ್ತಾನೆ.

ಮಾಧವ್ ಬಳಿ ಕ್ಷಮೆ ಕೇಳಿದ ತುಳಸಿ

ತುಳಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಪೂರ್ಣಿಗೆ ಬಹಳ ಖುಷಿಯಾಗುತ್ತಿರುತ್ತದೆ. ಮಾವನ ಮುಖದಲ್ಲಿ ಸಂತೋಷ ನೋಡಿ ಇದು ನನಗೆ ನೀವು ಕೊಟ್ಟ ಬೆಸ್ಟ್ ಗಿಫ್ಟ್ ಎಂದು ಅವಿಗೆ ಪೂರ್ಣಿ ಹೇಳುತ್ತಾಳೆ. ತುಳಸಿ ರೂಮ್‌ಗೆ ಹೋದ ಕೂಡಲೇ ಮಾಧವ್ ಬಳಿ ನಿಮ್ಮ ಬಳಿ ಮಾತನಾಡಬೇಕು ಎಂದು ಹೇಳಿ ಮೊದಲು ಕ್ಷಮೆ ಕೇಳುತ್ತಾಳೆ. ಅವತ್ತು ನಾನು ಮನೆಯಿಂದ ಹೊರಡುವ ಮುನ್ನ ನಿಮಗೆ ಒಂದು ಬಾರಿ ಫೋನ್ ಮಾಡಬೇಕಿತ್ತು. ಇಲ್ಲ ನೀವು ಮನೆಗೆ ಬಂದಾಗಲಾದರೂ ನಾನು ಮಾತನಾಡಬೇಕಿತ್ತು. ಆದರೆ, ನಾನು ನಿಮ್ಮ ಬಳಿ ಮಾತನಾಡುವ ಧೈರ್ಯ ಮಾಡಲಿಲ್ಲ ಎಂದು ತುಳಸಿ ಹೇಳುತ್ತಾಳೆ.

More from Filmibeat

English summary
Shrirasthu Shubhamasthu kannada serail today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X