Shrirasthu Shubhamasthu: ಶಾರ್ವರಿ ಮಾತನ್ನು ದಿಕ್ಕರಿಸಿ ತುಳಸಿ ಮಾಧ್ಯಮದ ಎದುರು ಬರುತ್ತಾಳಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮತ್ತೆ ಮನೆಗೆ ಬಂದಿರುವುದಕ್ಕೆ ಶಾರ್ವರಿಗೆ ಕೋಪ ನೆತ್ತಿಗೇರಿದೆ. ಆದರೂ ಕೂಡ ಮನೆಯ ಕಂಟ್ರೋಲ್ ತನ್ನ ಕೈಯಲ್ಲಿದೆ ಎಂದು ಭಾವಿಸಿದ್ದಾಳೆ. ಅವಿ, ಮಾಧವ್‌ನಂತೆಯೇ ತನ್ನ ಗುಣ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಪ್ರೂವ್ ಮಾಡುತ್ತಿರುವುದಕ್ಕೆ ಕೊಂಚ ಆತಂಕಗೊಂಡಿದ್ದರೂ ಅದನ್ನು ತೋರ್ಪಡಿಸುತ್ತಿಲ್ಲ.
ತನ್ನ ಮಾತಿಗೆ ಬೆಲೆ ಕೊಡದೆಯೇ ತುಳಸಿಯನ್ನು ವಾಪಸ್ ಕರೆದುಕೊಂಡು ಬಂದಿರುವುದಕ್ಕೆ ಶಾರ್ವರಿ ಈಗ ತನ್ನ ಬತ್ತಳಿಕೆಯಿಂದ ಮತ್ತೊಂದು ಬಾಣ ಹೂಡಿದ್ದಾಳೆ.

ಶಾರ್ವರಿ ಮಾಡಿದ ಹೊಸ ಪ್ಲಾನ್
ಈ ಹಿಂದೆ ಮಾಡಿದಂತೆಯೇ ಈಗಲೂ ಕೂಡ ಪತ್ರಕರ್ತರನ್ನು ಸೇರಿಸಿ, ಮಾಧವ್ ನನ್ನು ಮದುವೆಯ ಬಗ್ಗೆ ಪ್ರಶ್ನೆ ಮಾಡಬೇಕು. ಅದನ್ನು ಬಿತ್ತರಿಸಿ ದೊಡ್ಡ ಸುದ್ದಿ ಮಾಡಬೇಕು. ಆಗ ಮಾಧವ್ ಮಕ್ಕಳಿಗೆ ಇನ್ನಷ್ಟು ಅವಮಾನವಾಗಲಿದ್ದು, ಇದರಿಂದ ತುಳಸಿಗೂ ತೊಂದರೆಯಾಗುತ್ತದೆ ಎಂದು ಶಾರ್ವರಿ ಆಲೋಚಿಸಿ ಈ ಹೊಸ ಪ್ಲಾನ್ ಮಾಡಿದ್ದಾಳೆ. ಅದರಂತೆಯೇ ಮನೆಗೆ ಬಂದ ಪತ್ರಕರ್ತರಿಗೂ ತನಗೂ ಸಂಬಂಧವಿಲ್ಲ ಎಂಬಂತೆ ನಡೆದುಕೊಂಡಿದ್ದಾಳೆ.
ಮನೆಗೆ ಬಂದ ಪತ್ರಕರ್ತರು
ಇದೀಗ ಮನೆಗೆ ಬಂದ ಪತ್ರಕರ್ತರು ಮಾಧವ್ ಬಳಿ ಮಾತನಾಡಬೇಕು ಎಂದಾಗ ಮೊದಲು ಶಾರ್ವರಿ ಅವಕಾಶ ಮಾಡಿಕೊಡುವುದಿಲ್ಲ. ಬಳಿಕ ಮಾಧವ್ ಜೊತೆಗೆ ಸಂದರ್ಶನವನ್ನು ಏರ್ಪಡಿಸುತ್ತಾಳೆ. ಮಾಧವ್, ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ಬಹಳ ಕೂಲ್ ಆಗಿಯೇ ಉತ್ತರವನ್ನು ನೀಡುತ್ತಾನೆ. ನಮ್ಮಿಬ್ಬರಿಗೂ ಹೊಂದಾಣಿಕೆ ಎನಿಸಿತು ಹಾಗಾಗಿ ಮದುವೆಯಾದೆವು. ಈ ಹಿಂದೆ ನಾನು ಸ್ನೇಹಿತೆ ಜೊತೆಗೆ ಕ್ಯಾಬ್‌ನಲ್ಲಿ ಹೋಗುವುದನ್ನು ನೀವುಗಳೇ ಪ್ರಶ್ನೆ ಮಾಡಿ ಪುಟಗಟ್ಟಲೆ ಬರೆದಿದ್ದಿರಿ. ಸ್ನೇಹಿತೆಯ ಜೊತೆಗೆ ಸಮಾಜದಲ್ಲಿ ಬದುಕೋಕೆ ಆಗಲ್ಲ ಎಂದು ತಿಳಿದ ಮೇಲೆ ಇಬ್ಬರೂ ಒಪ್ಪಿಯೇ ಮದುವೆಯಾದೆವು. ಇದನ್ನು ತಪ್ಪು ಎಂದು ಹೇಳಲಾಗದು ಎನ್ನುತ್ತಾನೆ.
ಪ್ರಶ್ನೆಗಳ ಸುರಿಮಳೆ
ಮಾಧವ್‌ನ ಪ್ರತಿಯೊಂದು ಉತ್ತರಕ್ಕೂ ಮರು ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ನಿಮ್ಮನ್ನು ನೋಡಿ ಸಮಾಜದಲ್ಲಿರುವವರೂ ಹೀಗೆ ಮದುವೆಯಾದರೆ ಅದು ಎಷ್ಟು ಸರಿ? ನಮ್ಮ ಮನೆಯಲ್ಲೇ ನಮ್ಮ ತಂದೆ ಮದುವೆಯಾಗಿ ಬಂದು ಮಾಧವ್ ಅವರು ಮದುವೆಯಾಗಿದ್ದಾರಲ್ಲ. ಅವರಂತೆಯೇ ನಾನು ಮದುವೆಯಾದೆ ಎಂದರೆ, ಅದಕ್ಕೇನು ಹೇಳುವುದು ಎಂದು ಕೇಳುತ್ತಾರೆ.

ತುಳಸಿಯನ್ನು ತಡೆದ ಶಾರ್ವರಿ, ಅವಿ
ತುಳಸಿಗೆ ಶಾರ್ವರಿ ಮೊದಲೇ ವಾರ್ನಿಂಗ್ ಕೊಟ್ಟಿರುತ್ತಾಳೆ. ನೀನು ಮಾಧ್ಯಮದ ಎದುರು ಬರಬಾರದು. ನಿನ್ನಿಂದ ಈ ಮನೆಯಲ್ಲಿ ಯಾರಿಗೂ ನೆಮ್ಮದಿ ಇಲ್ಲ. ಮತ್ತೆ ಅವಾಂತರ ಸೃಷ್ಟಿಸಬೇಡ. ಪತ್ರಕರ್ತರು ಹೋಗುವವರೆಗೂ ರೂಮಿನಿಂದ ಹೊರಗೆ ಬರಬೇಡ ಎಂದು ಹೇಳಿರುತ್ತಾಳೆ. ಮಾಧವ್ ಬಂದು ತುಳಸಿಯನ್ನು ಬನ್ನಿ ಮಾತನಾಡಿ. ನಿಮಗೂ ಮಾತನಾಡುವ ಹಕ್ಕಿದೆ ಎಂದಾಗ ತುಳಸಿ ಅವಿಯನ್ನು ಕರೆದುಕೊಂಡು ಬಂದು ಅವರು ಯಾವುದೇ ಕಾರಣಕ್ಕೂ ಮಾಧ್ಯಮದ ಎದುರಿಗೆ ಬರಬಾರದು ಎಂದು ಹೇಳಿರುತ್ತಾನೆ. ಹೀಗಾಗಿ ಮಾಧವ್ ಒಬ್ಬನೇ ಸಂದರ್ಶನವನ್ನು ಎದುರಿಸುತ್ತಿರುತ್ತಾನೆ.
ಪತ್ರಕರ್ತರಿಗೆ ಸರಿಯಾದ ಉತ್ತರ ಕೊಟ್ಟ ತುಳಸಿ
ಕೊನೆಗೆ ಅವಿ ಹಾಗೂ ಶಾರ್ವರಿ ಮಾತನ್ನು ದಿಕ್ಕರಿಸಿ ಕೊನೆಯಲ್ಲಿ ಬರುವ ತುಳಸಿ, ತಾನೇ ಸಂದರ್ಶನ ನೀಡುತ್ತಾಳೆ. ನೀವು ಯಾರನ್ನಾದರೂ ಪ್ರೀತಿಸಿ, ಆಕೆಯ ಜೊತೆಗೆ ಓಡಾಡುವಾಗ ಸಮಾಜ ಕೆಟ್ಟದಾಗಿ ಮಾತನಾಡಿದರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸುತ್ತಾಳೆ. ಆಗ ಪತ್ರಕರ್ತ ಬೇರೆಯವರ ಬಾಯಿಗೆ ಆಹಾರ ಆಗುವುದರ ಬದಲು, ಮದುವೆಯಾಗುತ್ತೇನೆ ಎಂದು ಉತ್ತರ ಕೊಡುತ್ತಾನೆ. ತುಳಸಿಯ ಜಾಣ ಮಾತಿಗೆ ಮಾಧವ್ ಖುಷಿ ಪಟ್ಟರೆ, ಶಾರ್ವರಿ ಕೆಂಡಾಮಂಡಲವಾಗುತ್ತಾಳೆ. ಆದರೆ, ಅವಳಿಗೆ ಏನನ್ನೂ ಮಾತನಾಡಲು ಆಗದೇ, ಸುಮ್ಮನಿರುತ್ತಾಳೆ.


Click it and Unblock the Notifications











