Shrirasthu Shubhamasthu: ತುಳಸಿ ಜೊತೆಗೆ ಮಾತನಾಡಲು ಯತ್ನಿಸಿದ ಮಾಧವ್ ಸಹೋದರ ಮಹೇಶ್

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ, ತುಳಸಿಯನ್ನು ಒಪ್ಪಿಕೊಂಡವನಂತೆ ನಾಟಕ ಮಾಡಿ ಅವಮಾನ ಮಾಡಿದ್ದಾನೆ. ಆದರೆ ತುಳಸಿ ಹಾಗೂ ಅಭಿ ಮಧ್ಯೆ ನಡೆದದ್ದು ಯಾರಿಗೂ ಗೊತ್ತಿಲ್ಲ. ಶಾರ್ವರಿಗೆ ಮಾತ್ರವೇ ಅಭಿ ಆಫೀಸಿನಲ್ಲಿ ಏನು ನಡೆಯಿತು. ತುಳಸಿಯನ್ನು ಅಭಿ ಯಾಕೆ ಊಟ ತರಲು ಹೇಳಿದ ಎಂಬ ಸತ್ಯವನ್ನು ಶಾರ್ವರಿಗೆ ಹೇಳಿರುತ್ತಾನೆ.

ಸತ್ಯ ತಿಳಿದ ಶಾರ್ವರಿಗೆ ಬಹಳ ಖುಷಿಯಾಗಿರುತ್ತದೆ. ಅಭಿ ಎಷ್ಟೇ ಆದರೂ ತನ್ನ ಮಗ. ಅವನೊಬ್ಬ ಸಾಕು ಈ ಮನೆಯಲ್ಲಿನ ಸಂತೋಷವನ್ನು ಹಾಳು ಮಾಡಲು ಎಂದು ಖುಷಿ ಪಡುತ್ತಾಳೆ.

Shrirasthu Shubhamasthu serial 14th November episode Written update

ತುಳಸಿಗೆ ಅಭಿ ಅಷ್ಟು ಅವಮಾನ ಮಾಡಿದ್ದರೂ ಆಕೆಗೆ ತನ್ನ ಬಗ್ಗೆ ಕೊಂಚವೂ ಯೋಚನೆ ಇರುವುದಿಲ್ಲ. ತನ್ನ ಮಗ ಸಮರ್ಥ್‌ಗೆ ತಕ್ಕುನಾದ ಕೆಲಸ ಅದಲ್ಲ. ಅಷ್ಟೇ ಅಲ್ಲದೇ, ಅಭಿ ಆತನಿಗೆ ಅವಮಾನ ಮಾಡಬೇಕೆಂದೇ ಆ ಕೆಲಸ ನೀಡಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ.

ಮಗನ ಕೆಲಸದ ಚಿಂತೆಯಲ್ಲಿ ತುಳಸಿ

ತುಳಸಿ ನೇರವಾಗಿ ಅಭಿ ಬಳಿ ಹೋಗಿ, ಸಮರ್ಥ್‌ಗೆ ನೋವು ಮಾಡಬೇಡ. ಅವನಿಗೆ ಇದು ಸರಿಯಾದ ಕೆಲಸವಲ್ಲ. ಅವನಿಗೆ ಅವಮಾನಿಸಬೇಡ ಎಂದು ಕೇಳಿಕೊಳ್ಳುತ್ತಾಳೆ. ಆದರೆ ಅಭಿ, ತುಳಸಿ ಮಾತಿಗೆ ಒಪ್ಪುವುದಿಲ್ಲ. ಇತ್ತ ದತ್ತನ ಮನೆಯಲ್ಲಿ ಸಮರ್ಥ್‌ಗೆ ಅಭಿ ಒಳ್ಳೆಯ ಕೆಲಸವನ್ನೇ ನೀಡಿದ್ದಾನೆ ಎಂದು ಭಾವಿಸಿದ್ದಾನೆ. ಸಮರ್ಥ್ ಕೂಡ ಬೇರೆ ದಾರಿ ಇಲ್ಲದೇ, ಪಾಟ್ನರ್‌ಶಿಪ್ ಎಂದು ಬೊಗಳೆ ಬಿಟ್ಟಿದ್ದಾನೆ. ಆದರೆ ಸತ್ಯ ಯಾವಾಗ ಗೊತ್ತಾಗುತ್ತದೋ ಕಾದು ನೋಡಬೇಕಿದೆ.

ನಂದಿನಿಯನ್ನು ಕದ್ದು ಭೇಟಿಯಾದ ಸಂಧ್ಯಾ

ಇನ್ನು ಸಂಧ್ಯಾ ತಾನು ಗರ್ಭಿಣಿ ಎಂದು ಸುಳ್ಳು ಹೇಳಿ ತವರು ಮನೆಯಲ್ಲಿ ಸೆಟಲ್ ಆಗಿದ್ದಾಳೆ. ಈಗ ಅದ್ಯಾರನ್ನೋ ಭೇಟಿ ಮಾಡಲು ಮನೆಯಿಂದ ಹೊರಟಿದ್ದಾಳೆ. ಆದರೆ ದತ್ತ ತಾತ, ಸಂಧ್ಯಾಳನ್ನು ಒಬ್ಬಳೇ ಕಳಿಸದೇ ತಾನೂ ಜೊತೆಗೆ ಹೋಗಿದ್ದಾನೆ. ಸಂಧ್ಯಾ ದಾರಿಯಲ್ಲಿ ತಾತನನ್ನು ಯಾಮಾರಿಸಿ, ತನ್ನ ಹಳೆಯ ಗೆಳತಿ ನಂದಿನಿ ಭೇಟಿ ಮಾಡಿದ್ದಾಳೆ. ನಂದಿನಿ ಇನ್ನೂ ಒಂದು ಲಕ್ಷ ಹಣ ಕೊಟ್ಟರೆ, ಒಳ್ಳೆಯ ಲಾಭ ಸಿಗುತ್ತೆ ಎಂದು ಕೇಳಿದ್ದಾಳೆ. ಆದರೆ ಸಂಧ್ಯಾ ಸುತಾರಾಂ ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.

Shrirasthu Shubhamasthu serial 14th November episode Written update

ತುಳಸಿ ಬಳಿ ಮಾತನಾಡಿದ ಮಹೇಶ್

ಇತ್ತ ಮಹೇಶ್ ಮಾತ್ರೆಯೊಂದನ್ನು ತೆಗೆದುಕೊಳ್ಳಲು ಯತ್ನಿಸುತ್ತಾನೆ. ಇದನ್ನು ಗಮನಿಸಿದ ತುಳಸಿ, ಮಹೇಶ್‌ಗೆ ಸಹಾಯ ಮಾಡಲು ಹೋಗುತ್ತಾಳೆ. ಆಗ ಶಾರ್ವರಿ ಅಲ್ಲಿಗೆ ಬಂದು ಮಾತ್ರೆಗಳನ್ನು ಕಸಿದುಕೊಂಡು ಬಚ್ಚಿಟ್ಟುಕೊಳ್ಳಲು ಯತ್ನಿಸುತ್ತಾಳೆ. ತುಳಸಿಗೆ ಇದು ಅನುಮಾನ ಮೂಡಿಸುತ್ತದೆ. ನನ್ನ ರೂಮಿಗೆ ಬರಬೇಡ, ನನ್ನ ಗಂಡನ ಬಗ್ಗೆ ನಿನಗೆ ಕಾಳಜಿ ಬೇಡ ಎಂದು ಬೈದು ಕಳಿಸುತ್ತಾಳೆ. ತುಳಸಿ ರೂಮಿನಿಂದ ಹೋಗುವಾಗ ಮಹೇಶ್, ಅವಳು ಸರಿಯಿಲ್ಲ. ಕರ್ಜೂರ ಎಂದು ಮಾತನಾಡುತ್ತಾನೆ. ಇದನ್ನು ಕೇಳಿಸಿಕೊಂಡ ತುಳಸಿಗೆ ಅರ್ಥವಾಗುವುದಿಲ್ಲ.

ಪೂರ್ಣಿಮಾ ಆಸೆಗೆ ನೆರವಾಗುತ್ತಾಳಾ ತುಳಸಿ..?

ಪೂರ್ಣಿಮಾಳಿಗೆ ಇತ್ತೀಚೆಗೆ ತನಗೆ ಮಗು ಬೇಕು ಎಂಬ ಆಸೆ ಹೆಚ್ಚಾಗುತ್ತಿದೆ. ಹಾಗಾಗಿ ಅವಿ, ಪೂರ್ಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ವೈದ್ಯರು ಪೂರ್ಣಿ ಗರ್ಭಕೋಶ ವೀಕ್ ಆಗಿದೆ. ಮಗು ಆಗುವುದು ಕಷ್ಟ ಎಂದಿದ್ದಾರೆ. ಈ ಮಾತನ್ನು ಕೇಳಿ ಬೇಸರದಲ್ಲಿರುವ ಪೂರ್ಣಿಮಾಳಿಗೆ ತುಳಸಿ ನೆರವಾಗಿದ್ದಾಳೆ. ಆಯುರ್ವೇದ ಟ್ರೀಟ್‌ಮೆಂಟ್ ತೆಗೆದುಕೋ ಎಲ್ಲಾ ಒಳ್ಳೆಯದಾಗುತ್ತೆ. ಒಂದಲ್ಲ ಎರಡು ಮಕ್ಕಳೂ ಆಗುತ್ತೆ ಎಂದು ಸಮಾಧಾನ ಮಾಡಿದ್ದಾಳೆ.

More from Filmibeat

English summary
Shrirasthu Shubhamasthu Kannada serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X