Shrirasthu Shubhamasthu: ದೀಪಿಕಾ ಮನೆಗೆ ಮಾಧವ್- ತುಳಸಿ : ಮದುವೆಗೆ ಜನಾರ್ಧನ್ ಒಪ್ಪಿಗೆ ಕೊಡುತ್ತಾನಾ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಸುಸ್ತಾಗಿ ಊಟ ಮಾಡದೇ ಮಲಗಿರುತ್ತಾಳೆ. ತುಳಸಿ ಊಟ ಮಾಡಲಿಲ್ಲ ಎಂದು ಮಾಧವ್ ಕೂಡ ಊಟ ಮಾಡುವುದಿಲ್ಲ. ಆದರೆ, ರಾತ್ರಿಯೆಲ್ಲಾ ಹಸಿದ ಹೊಟ್ಟೆಯಲ್ಲಿ ಮಲಗಲಾಗದೇ ಮಾಧವ್ ಹೊರಳಾಡಿ ಸಾಕಾಗಿ ಅಡುಗೆ ಮನೆಗೆ ಬಂದು ಊಟ ತಿನ್ನಲು ನೋಡಿದರೆ, ಎಲ್ಲಾ ಪಾತ್ರೆಗಳು ಖಾಲಿಯಾಗಿರುತ್ತವೆ.

ಮಾಧವ್ ಹಿಂದೆಯೇ ಬರುವ ತುಳಸಿ, ಮಾಧವ್‌ಗೆ ಪುಳಿಯೋಗರೆ ಮಾಡಿಕೊಡುತ್ತಾಳೆ. ಇಬ್ಬರೂ ಖುಷಿಯಿಂದ ಊಟ ಮಾಡುತ್ತಿರುತ್ತಾರೆ. ಇದನ್ನು ಗಮನಿಸಿದ ಶಾರ್ವರಿಗೆ ಕೋಪ ಬರುತ್ತದೆ. ಮೊದಲೇ ಶಾರ್ವರಿಗೆ ತುಳಸಿ ಮನೆಗೆ ಬಂದಿರುವುದು ಕೊಂಚವೂ ಇಷ್ಟವಿಲ್ಲ. ಅವಳನ್ನು ಹೇಗಾದರೂ ಮಾಡಿ ಮನೆಯಿಂದ ಹೊರಗಾಕಬೇಕು ಎಂದುಕೊಂಡಿದ್ದಾಳೆ. ಅಲ್ಲದೇ, ತುಳಸಿ ಈ ಮನೆಯಲ್ಲಿದ್ದಷ್ಟೂ ದಿನ ಅವಳಿಗೆ ನರಕ ತೋರಿಸಬೇಕು ಎಂದುಕೊಂಡಿದ್ದಾಳೆ.

Shrirasthu Shubhamasthu serial 14th September episode Written update

ಪೂರ್ಣಿಮಾ ಹಾಗೂ ಮಾಧವ್ ಇರುವುದರಿಂದ ಅದ್ಯಾವುದೂ ಸರಿ ಹೋಗುತ್ತಿಲ್ಲ. ದೇವರ ಮನೆಯಲ್ಲಿ ಪೂಜೆ ಮಾಡಬೇಡ ಎಂದರೂ ಈಗ ಪೂರ್ಣಿಮಾ ಸಪೋರ್ಟ್‌ನಿಂದ ದೇವರ ಮನೆಯಲ್ಲಿ ತುಳಸಿ ಪೂಜೆ ಮಾಡಲು ಮುಂದಾಗಿದ್ದಾಳೆ. ಇದನ್ನು ನೋಡಿ ಕೋಪ ಮಾಡಿಕೊಂಡ ಶಾರ್ವರಿ, ತುಳಸಿಗೆ ಬೈಯುತ್ತಿರುತ್ತಾಳೆ.

ಅತ್ತೆ ಬೆನ್ನೆಲುಬಾದ ಪೂರ್ಣಿಮಾ

ತುಳಸಿಗೆ ಶಾರ್ವರಿ ಬೈಯುವ್ವಾಗ ಬಂದ ಪೂರ್ಣಿಮಾ ಅತ್ತೆ ಇಲ್ಲೇ ಪೂಜೆ ಮಾಡಲಿ ಎನ್ನುತ್ತಾಳೆ. ಅತ್ತೆ ಇಲ್ಲಿ ಪೂಜೆ ಮಾಡುವುದರಿಂದಲೂ ಮನೆಯ ಸಮಸ್ಯೆಗಳು ಬಗೆ ಹರಿಯಬಹುದು. ಸುಮ್ಮನೆ ಯಾಕೆ ಕಿರಿಕಿರಿ ಮಾಡಿಕೊಳ್ಳಬೇಕು ಎಂದು ಪೂರ್ಣಿಮಾ, ತುಳಸಿಯ ಬೆನ್ನಿಗೆ ನಿಲ್ಲುತ್ತಾಳೆ.

ತುಳಸಿ ವಿರುದ್ಧ ಶಾರ್ವರಿ, ಅವಿ..?

ಶಾರ್ವರಿಗೆ ಈಗ ಮಾಧವ್ ಜೊತೆಗೆ ಪೂರ್ಣಿಮಾ ಕೂಡ ತುಳಸಿಗೆ ಸಪೋರ್ಟ್ ಮಾಡುತ್ತಿರುವುದು ಆತಂಕ ತಂದಿದೆ. ಹೇಗಾದರೂ ಮಾಡಿ ತುಳಸಿಯನ್ನು ಈ ಮನೆಯಿಂದ ಆಚೆ ಕಳಿಸಲೇಬೇಕು ಎಂದು ಯೋಚಿಸುತ್ತಿರುತ್ತಾಳೆ. ಇದೇ ವೇಳೆಗೆ ಅವಿ ಬಂದು, ಚಿಕ್ಕಮ್ಮ ತುಳಸಿ ಅವರನ್ನು ಈ ಮನೆಯಿಂದ ದೂರ ಮಾಡಲು ಏನಾದರೂ ಮಾಡಲೇಬೇಕು. ನಾನು ನಿಮಗೆ ಸಪೋರ್ಟ್ ಮಾಡುತ್ತೀನಿ ಎಂದು ಹೇಳುತ್ತಾನೆ. ಆಗ ಶಾರ್ವರಿ ಈ ಸಂಬಂಧವನ್ನು ಒಂದು ಮಾಡಿದವರಿಂದಲೇ ಅದು ಸಾಧ್ಯ ಅವಿ. ಆದರೆ, ನಾವು ಹೋಗಿ ಅವರಿಗೆ ಮದುವೆ ಮಾಡಿಸಿದ್ದು ನೀವೇ, ಈಗ ಇಬ್ಬರನ್ನೂ ನೀವೇ ಬೇರೆ ಮಾಡಬೇಕು ಎಂದು ಹೇಗೆ ಕೇಳೋದು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಅವಿ, ದತ್ತ ತಾತನ ಬಳಿ ಹೋಗಿ ಮಾತನಾಡುತ್ತಾನಾ ಎಂಬ ಕುತೂಹಲ ಮೂಡಿದೆ.

Shrirasthu Shubhamasthu serial 14th September episode Written update

ದೀಪಿಕಾ ಮನೆಗೆ ಬಂದ ದಂಪತಿ

ಇನ್ನು ಮಾಧವ್ ರೆಡಿಯಾಗುತ್ತಿರುತ್ತಾನೆ. ಆಗ ತುಳಸಿ ಕೆಫೆಗೆ ಹೊರಟಿದ್ದೀರಾ ಎಂದು ಕೇಳಿದ್ದಕ್ಕೆ, ಮಾಧವ್ ಇಲ್ಲ ದೀಪಿಕಾ ಮನೆಗೆ. ನನ್ನಿಂದ ಆದ ಸಮಸ್ಯೆ ಅನ್ನು ನಾನೇ ಬಗೆಹರಿಸಬೇಕು. ಅಭಿ ಮತ್ತು ದೀಪಿಕಾ ಮದುವೆ ಮಾಡಬೇಕು. ಅದಕ್ಕೆ ಜನಾರ್ಧನ್ ಬಳಿ ಮಾತನಾಡಲು ಹೋಗುತ್ತಿದ್ದೇನೆ ಎಂದು ಹೇಳುತ್ತಾನೆ. ಆಗ ತುಳಸಿ ತಾನೂ ಬರುವುದಾಗಿ ಹೇಳಿ, ತಾಂಬೂಲ ಹಿಡಿದು ದೀಪಿಕಾ ಮನೆಗೆ ಹೋಗುತ್ತಾರೆ.

ಸಂಬಂಧ ಬೇಡ ಎಂದ ಜನಾರ್ಧನ್

ದೀಪಿಕಾ, ವನಜಾ ಬಳಿ ಕುಳಿತು ಕಣ್ಣೀರು ಹಾಕುತ್ತಿರುತ್ತಾಳೆ. ನನಗೆ ಅಭಿ ಬೇಕೇಬೇಕು ಎಂದು ಅಳುತ್ತಿರುತ್ತಾಳೆ. ಇದೇ ಸಂದರ್ಭದಲ್ಲಿ ಮನೆಗೆ ಬರುವ ತುಳಸಿ ಮತ್ತು ಮಾಧವ್ ನಮ್ಮಿಂದ ಆದ ತಪ್ಪನ್ನು ನಾವೇ ಬಗೆ ಹರಿಸುತ್ತೇವೆ. ಅಭಿ ಹಾಗೂ ದೀಪಿಕಾ ಮದುವೆ ನಡೆಯಬೇಕು ಎಂಬುದೇ ನನ್ನ ಉದ್ದೇಶ ಎಂದು ಹೇಳುತ್ತಾರೆ. ಖುಷಿ ತಾಳಲಾರದೇ, ದೀಪಿಕಾ ಅಭಿಗೆ ಫೊನ್ ಮಾಡಿ ಬರಲು ಹೇಳುತ್ತಾಳೆ. ಆದರೆ, ಜನಾರ್ಧನ್ ಬಂದು ತಾಂಬೂಲವನ್ನು ತೆಗೆದುಕೊಂಡು ಬಿಸಾಡುತ್ತಾನೆ. ನನಗೆ ಈ ಸಂಬಂಧ ಯಾವುದೇ ಕಾರಣಕ್ಕೂ ಬೇಡ ಎಂದು ಹೇಳುತ್ತಾನೆ.

More from Filmibeat

English summary
Shrirasthu Shubhamasthu Kannada Serial Today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X