Shrirasthu Shubhamasthu: ಮಾವನ ಪರ ನಿಂತ ಪೂರ್ಣಿಮಾ: ತಲೆ ಸುತ್ತಿ ಬಿದ್ದ ಶಾರ್ವರಿ
Article desc: 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮದುವೆಯಾಗಿ ದೇವಸ್ಥಾನದಿಂದ ಮಾಧವ್ ಹಾಗೂ ತುಳಸಿ ಬಂದಮೇಲೆ ದತ್ತ ತಾತ ಒಬ್ಬರೇ ಇರುತ್ತಾರೆ. ಸಿರಿ ಕೂಡ ಮನೆಗೆ ಬರುತ್ತಾಳೆ. ಮನೆಗೆ ಬಂದ ಕೂಡಲೇ ತುಳಸಿಯನ್ನು ನೆನೆದು ಬೇಸರ ಮಾಡಿಕೊಳ್ಳುತ್ತಾಳೆ.
ಚಿಕ್ಕವಯಸ್ಸಿನಲ್ಲಿ ಕಳೆದುಕೊಂಡ ಅಮ್ಮನನ್ನು ಮದುವೆಯಾದ ಬಳಿಕ ಪಡೆದುಕೊಂಡೆ. ಆದರೆ, ಈಗ ಆ ಅಮ್ಮನೂ ಕೂಡ ಇಲ್ಲ. ಅವರು ಮದುವೆಯಾಗಿ ಹೋದರು. ಇನ್ನು ಮುಂದೆ ಈ ಮನೆಯಲ್ಲಿ ಅಮ್ಮನೂ ಇಲ್ಲ. ನಾನು ಅಮ್ಮ ಇಲ್ಲದೇ ಹೇಗೆ ಇರುವುದು ಎಂದು ಯೋಚಿಸುತ್ತಿರುತ್ತಾಳೆ.

ದೇವಸ್ಥಾನದಲ್ಲಿ ಕುಳಿತು ದತ್ತ ತಾತ ಒಬ್ಬರೇ ಅಳುತ್ತಿರುತ್ತಾರೆ. ಆಗ ಶೇಷು ಬಂದು ಸಮಾಧಾನ ಮಾಡುತ್ತಾನೆ. ದತ್ತ ತಾತ, ತುಳಸಿಯನ್ನು ಬಿಟ್ಟು ಇನ್ನು ಮುಂದೆ ಹೇಗಿರುವುದು ಎಂದು ಯೋಚಿಸುತ್ತಿರುತ್ತಾರೆ. ಅದಕ್ಕೆ ಶೇಷು ಪರವಾಗಿಲ್ಲ ನೀನೀಗ ಮಾಡಿರುವುದು ಬಹಳ ಒಳ್ಳೆಯ ಕೆಲಸ. ಈ ವಯಸ್ಸಲ್ಲಿ ತುಳಸಿಗೆ ಸಂಗಾತಿಯ ಅಗತ್ಯವಿತ್ತು. ನೀನು ಒಳ್ಳೆಯದನ್ನೇ ಮಾಡಿದ್ದೀಯಾ ಎಂದು ಶೇಷು ಹೇಳುತ್ತಾರೆ.
ಬೇಸರ ಮಾಡಿಕೊಂಡಿರುವ ದತ್ತ ತಾತ
ಮಾಧವ್ ಹಾಗೂ ತುಳಸಿ ಜೊತೆಗೆ ನೀನು ಅವರ ಮನೆಗೆ ಹೋಗಬೇಕಿತ್ತು. ಅಲ್ಲಿ ಅವರಿಗೆ ಏನು ಸಮಸ್ಯೆ ಆಗಿದೆಯೋ ಏನೋ ಎಂದು ಶೇಷು ಹೇಳುತ್ತಾರೆ. ಆಗ ದತ್ತ ತಾತ, ಅವರಿಬ್ಬರು ಒಟ್ಟಿಗೆ ಕೆಲ ಸಂದರ್ಭಗಳನ್ನು ಎದುರಿಸಲಿ ಎಂಬ ಕಾರಣಕ್ಕಾಗಿಯೇ ನಾನು ಕೂಡ ಹೀಗೆ ಮಾಡಿದೆ. ಇಲ್ಲದಿದ್ದರೆ, ನಾನೂ ಜೊತೆಗೆ ಹೋಗುತ್ತಿದ್ದೆ ಎಂದು ಹೇಳಿದರು.

ಅಪ್ಪನ ಮೇಲೆ ಕೂಗಾಡಿದ ಮಕ್ಕಳು
ಇತ್ತ ಮಾಧವ್ ಕೊರಳಪಟ್ಟಿ ಹಿಡಿದು ಅಭಿ ಪ್ರಶ್ನೆ ಮಾಡುತ್ತಾನೆ. ನನ್ನ ಮದುವೆಯ ದಿನ ನೀನು ಮದುವೆಯಾಗುವ ಅವಶ್ಯಕತೆ ಏನಿತ್ತು. ನಿನ್ನೆ ಈ ಹೆಂಗಸಿಗೋಸ್ಕರ ನನ್ನ ಮೇಲೆ ಕೈ ಮಾಡಿದ್ರಿ. ಈಗ ಇವರನ್ನೇ ಮದುವೆಯಾಗಿ ಮನೆಗೆ ಬಂದಿದ್ದೀರಾ? ಎಂದು ಅಭಿ ಪ್ರಶ್ನಿಸುತ್ತಾನೆ. ನಿಧಿ ಕೂಡ ಹೀಗೆಲ್ಲಾ ಮನೆಯವರ ಬಳಿ ಒಂದು ಮಾತೂ ಕೇಳದೇ ಮದುವೆಯಾಗಿ ಬಂದಿದ್ದೀರಲ್ಲ ಇದು ಸರಿನಾ? ದೊಡ್ಡಪ್ಪ. ನಮ್ಮನ್ನೆಲ್ಲಾ ಆಫೀಸ್‌ನಲ್ಲಿ, ಕೋಚಿಂಗ್ ಸೆಂಟರ್‌ನಲ್ಲಿ ನೀವು ಮದುವೆಯಾದ ಬಗ್ಗೆ ಪ್ರಶ್ನೆ ಮಾಡಿದರೆ, ನಮಗೆ ಎಷ್ಟು ಅವಮಾನ ಆಗುತ್ತೆ ಗೊತ್ತಾ..? ಎಂದು ಕೇಳುತ್ತಾಳೆ. ಈ ಮಾತುಗಳಿಗೆಲ್ಲಾ ತುಳಸಿ ತನಗೇನು ಉತ್ತರಿಸಬೇಕು ಎಂಬುದು ತಿಳಿಯದೇ ನೋಡುತ್ತಿರುತ್ತಾಳೆ.
ಮನೆಯವರ ಬಾಯಿ ಮುಚ್ಚಿಸುತ್ತಿರುವ ಪೂರ್ಣಿ
ನಿಧಿ ಹಾಗೂ ಅಭಿಗೆ ಪೂರ್ಣಿಮಾ ಬೈಯುತ್ತಾಳೆ. ಎಲ್ಲರೂ ಮಾವನನ್ನು ಪ್ರಶ್ನಿಸುವುದು ನಿಲ್ಲಿಸಿ. ನೀವೆಲ್ಲಾ ಮನೆಯಲ್ಲಿ ಮಾವನಿಗೆ ಒಳ್ಳೆಯ ಸ್ಥಾನ ಕೊಟ್ಟಿದ್ದರೆ ಹೀಗ್ಯಾಕೆ ಆಗುತ್ತಿತ್ತು. ಎಲ್ಲರೂ ಇದ್ದು ಒಂಟಿಯಾಗಿ ಕಾಲ ಕಳೆಯುತ್ತಿದ್ದರು. ಅದಕ್ಕೆ ಮಾವ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮೊದಲು ಏನಾಯ್ತು ಎಂದು ಅವರ ಮಾತನ್ನು ಒಂದು ನಿಮಿಷ ಕೇಳಿ. ಆಮೇಲೆ ಏನು ನಿರ್ಧಾರ ಮಾಡಬೇಕು ಎಂಬುದನ್ನು ತಿಳಿಯಿರಿ ಎನ್ನುತ್ತಾಳೆ.
ತಲೆ ತಿರುಗಿ ಬಿದ್ದ ಶಾರ್ವರಿ
ಇವರು ಅಪ್ಪನನ್ನು ಮದುವೆಯಾಗುವುದಕ್ಕಾಗಿಯೇ ನನ್ನ ಪರಿಚಯ ಮಾಡಿಕೊಂಡರೇನೋ..? ಎಂದು ಅವಿ, ತುಳಸಿ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾನೆ. ಇತ್ತ ಶಾರ್ವರಿ ತಾನು ಕಂಡ ಕನಸೆಲ್ಲಾ ತುಳಸಿಯ ಆಗಮನದಿಂದ ಹಾಳಾಗುತ್ತಿದೆ ಎಂದು ಗಾಬರಿಯಾಗುತ್ತಾಳೆ. ಇದರಿಂದ ತಲೆ ಸುತ್ತಿ ಬೀಳುತ್ತಾಳೆ. ಶಾರ್ವರಿ ,ತುಳಸಿ ಹಾಗೂ ಮಾಧವ್‌ನನ್ನು ಮನೆಯೊಳಗೆ ಬರಲು ಬಿಡುತ್ತಾಳೋ ಇಲ್ಲವೋ ತಿಳಿಯಬೇಕು.


Click it and Unblock the Notifications











