Shrirasthu Shubhamasthu: ಮನೆಗೆ ಬಂದ ಮಹೇಶ: ದುಪ್ಪಟ್ಟಾಯ್ತು ಸುಗ್ಗಿ ಸಂಭ್ರಮ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಮನೆಯವರೆಲ್ಲರೂ ನಂದಿಗಿರಿಗೆ ಹೋಗಿದ್ದರು. ಅಲ್ಲಿಗೆ ಹೋದಾಗಿನಿಂದಲೂ ಮಹೇಶನಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದವು.

ಓಡಾಡುವುದು, ಸರಾಗವಾಗಿ ಮಾತನಾಡುವುದನ್ನು ಶುರು ಮಾಡಿದ್ದರು. ಇದೆಲ್ಲವೂ ಮಾಧವ್ ಮನೆಯವರಿಗೆ ಖುಷಿ ಕೊಟ್ಟಿತ್ತು. ಆದರೆ ಶಾರ್ವರಿಗೆ ಅಷ್ಟೇ ಭಯವನ್ನೂ ಹುಟ್ಟಿಸಿದೆ.

Shrirasthu Shubhamasthu serial 17th January episode written update

ತುಳಸಿ ಬಳಿ ಆಕ್ಸಿಡೆಂಟ್ ಮಾಡಿಸಿದ್ದು ಯಾರು, ಸುಮತಿಯನ್ನು ಯಾರು ಕೊಂದಿದ್ದು ಎಂದು ಸತ್ಯ ಹೇಳಲು ಮುಂದಾದಾಗ ಭಯಗೊಂಡ ಶಾರ್ವರಿ ಮಹೇಶ ಕುಳಿತಿದ್ದ ವೀಲ್ ಚೇರ್ ಅನ್ನು ತಳ್ಳಿ ಬಿಟ್ಟಳು.

ಮಹೇಶನಿಗೆ ಎಲ್ಲಾ ನೆನಪಾಗಿದೆ

ಕಾರ್ ಎದುರು ಮಹೇಶ ಬಿದ್ದು ತಲೆಗೆ ಏಟು ಮಾಡಿಕೊಳ್ಳುವಂತಾಯ್ತು. ಮೊದಲು ಎಲ್ಲರೂ ತುಳಸಿ ಹೀಗೆ ಮಾಡಿದಳು ಎಂದು ಕೊಂಡು ಬೈಯುತ್ತಿದ್ದರು. ಆದರೆ ಬಳಿಕ ಮಹೇಶನಿಗೆ ಹಳೆಯದೆಲ್ಲವೂ ನೆನಪಾಗಿದ್ದಲ್ಲದೇ, ಮೊದಲಿನಂತೆ ನಡೆದಾಡಲು ಶುರು ಮಾಡಿದರು. ಇದರಿಂದ ಎಲ್ಲರೂ ತುಳಸಿಗೆ ಧನ್ಯಾವಾದ ತಿಳಿಸುತ್ತಾರೆ. ಇನ್ನು ಮಹೇಶನಿಗೆ ಸುಮತಿ ಅತ್ತಿಗೆ ಅಪಾಘಾತದಲ್ಲಿ ಸಾವಾಗಿದ್ದು ಹಾಗೂ 25 ವರ್ಷಗಳಿಂದ ತಾನು ವೀಲ್ ಚೇರ್ ಮೇಲೆ ಜೀವಿಸಿದ್ದು ಮರೆತು ಹೋಗಿದೆ. ಸುಮತಿ ಅತ್ತಿಗೆ ಅಪಘಾತದಲ್ಲಿ ಸಾವನ್ನಪ್ಪಿದ ವಿಚಾರ ಕೇಳಿ ಮಹೇಶನಿಗೆ ಬೇಸರವಾಗಿದೆ. ಶಾರ್ವರಿಯೂ ಸದ್ಯ ತಾನು ಮಾಡಿದ ಕೆಟ್ಟ ಕೆಲಸಗಳೆಲ್ಲವೂ ಮಹೇಶನಿಗೆ ನೆನಪಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾಳೆ.

Shrirasthu Shubhamasthu serial 17th January episode written update

ಡ್ರೈವರ್ ಕೆಲಸ ಮಾಡಲು ಓಕೆ ಎಂದ ಸಮರ್ಥ್

ಇತ್ತ ಸಂಧ್ಯಾ ಮಾಡಿದ ಅವಾಂತರಗಳಿಂದ ಸಿರಿ ಹಾಗೂ ಸಮರ್ಥ್ ಹಣವಿಲ್ಲದೇ, ಉದ್ಯೋಗವಿಲ್ಲದೆ ಪರದಾಡುವಂತಾಗಿದೆ. ಸಿರಿ, ಸಮರ್ಥ್‌ಗೆ ಡ್ರೈವರ್ ಕೆಲಸಕ್ಕೆ ಹೋಗಲು ಸೂಚಿಸಿದ್ದಾಳೆ. ಆದರೆ, ಸಮರ್ಥ್ ಓದಿರುವ ತಾನು ಡ್ರೈವರ್ ಕೆಲಸ ಮಾಡುವುದು ಎಷ್ಟು ಸರಿ ಎಂದು ಯೋಚನೆಗೆ ಒಳಗಾಗಿದ್ದ, ಆದರೆ ಮನೆಯವರೆಲ್ಲಾ ಬುದ್ಧಿ ಹೇಳಿದ ಮೇಲೆ ಈಗ ಡ್ರೈವರ್ ಕೆಲಸಕ್ಕೆ ಹೋಗಲು ತಯಾರಾಗಿದ್ದಾನೆ. ದತ್ತ ತಾತನ ಮನೆಯಲ್ಲಿ ಈಗ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇನ್ನೂ ಸಂಧ್ಯಾ ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡಿರುವ ವಿಚಾರ ಮನೆಯಲ್ಲಿ ಯಾರಿಗೂ ಗೊತ್ತಾಗಿಲ್ಲ.

ಮನೆಗೆ ಬಂದ ಮಹೇಶನಿಗೆ ಸ್ವಾಗತ

ಮಾಧವ್ ಮನೆಯವರೆಲ್ಲರೂ ನಂದಿಗಿರಿಯಿಂದ ವಾಪಸ್ ಮನೆಗೆ ಬರಲು ಮುಂದಾಗಿದ್ದಾರೆ. ಆದರೆ ಶಾರ್ವರಿ ಮಾತ್ರ ತನಗೊಂದು ಹರಕೆ ಇದೆ ಎಂದು ಅಲ್ಲೇ ಉಳಿದುಕೊಂಡಿದ್ದು, ಮಿಕ್ಕವರೆಲ್ಲಾ ಬೆಂಗಳೂರಿನ ಮನೆಗೆ ವಾಪಸ್ ಬಂದಿದ್ದಾರೆ. ಮಹೇಶ್ ಹುಷಾರಾಗಿ ಮನೆಗೆ ಬರುತ್ತಿರುವುದಕ್ಕೆ ಆರತಿ ತಟ್ಟೆ ಹಿಡಿದು ಪಾಪಮ್ಮ ಕಾಯುತ್ತಿದ್ದಾರೆ. ಮಹೇಶನಿಗೂ ತನ್ನ ಮನೆಗೆ ಬಂದು ಖುಷಿಯಾಗಿದೆ. ಎಲ್ಲರ ಜೊತೆಗೆ ಖುಷಿ ಖುಷಿಯಾಗಿ ಮಾತನಾಡುತ್ತಾ ಮಹೇಶ ಮನೆಗೆ ಬಂದಿದ್ದಾನೆ. ಹಬ್ಬಕ್ಕೆಂದು ಮನೆಯಲ್ಲಿ ಹಲವು ತಯಾರಿಗಳನ್ನು ಕೂಡ ಮಾಡಿಕೊಳ್ಳಲಾಗಿದೆ.

ತುಳಸಿ ಕಟ್ಟೆಯ ಸಕ್ಕರೆ ಹಚ್ಚು ಮಾಡಿದ ಮಾಧವ್

ಮಾಧವ್, ತುಳಸಿ ಮೇಲಿನ ಪ್ರೀತಿಗೆ ಸಕ್ಕರೆ ಹಚ್ಚು ಮಾಡುವಾಗ ತುಳಸಿಕಟ್ಟೆಯನ್ನು ತಯಾರಿಸಿದ್ದಾನೆ. ಇದನ್ನು ನೋಡಿದ ತುಳಸಿ ಖುಷಿಪಟ್ಟಿದ್ದು, ಪೂರ್ಣಿಮಾ ಮಾವನನ್ನು ರೇಗಿಸಿದ್ದಾಳೆ. ಇನ್ನು ಎಲ್ಲರೂ ಒಟ್ಟಿಗೆ ಕುಳಿತು ಕಬ್ಬು ತಿನ್ನುವ ಆಟವಾಡಿದ್ದಾರೆ. ಆದರೆ, ಅವಿ, ಅಭಿ, ನಿಧಿ, ಪೂರ್ಣಿಮಾ ಯಾರಿಗೂ ಕಬ್ಬನ್ನು ಜ್ಯೂಸ್ ಮಾಡಿ ಕುಡಿಯುವುದು ಬಿಟ್ಟರೆ, ಹಾಗೆ ತಿನ್ನುವುದು ಹೇಗೆ ಎಂಬುದೇ ಗೊತ್ತಿಲ್ಲ. ಮಹೇಶ ಮತ್ತು ಮಾಧವ್ ಇಬ್ಬರೂ ಕಬ್ಬು ತಿಂದು ತೋರಿಸಿಕೊಟ್ಟಿದ್ದಾರೆ. ಮಹೇಶ ಸರಿ ಹೋಗಿರುವುದು ಮಾಧವ್ ಮನೆಯಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

More from Filmibeat

English summary
Shrirasthu Shubhamasthu serial today update. madhav is very happy for mahesha getting well. Sankranthi festival at house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X