Shrirasthu Shubhamasthu: ಸಮಸ್ಯೆಗೆ ಪರಿಹಾರ ಕೇಳಿ ಮನೆಗೆ ಬಂದ ಅವಿಗೆ ದತ್ತ ತಾತ ಹೇಳಿದ್ದೇನು?

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿ ಮತ್ತು ಮಾಧವ್ ಇಬ್ಬರೂ ದೀಪಿಕಾ ಮನೆಗೆ ಹೋಗಿ ಮತ್ತೆ ಅಭಿ ಹಾಗೂ ದೀಪಿಕಾ ಮದುವೆ ಮಾತುಕತೆಯನ್ನು ಆಡುತ್ತಾರೆ.

ಜನಾರ್ಧನ್ ಮಾತ್ರ ಮಾಧವ್ ಮೇಲಿನ ದ್ವೇಷದಿಂದ ಮದುವೆಗೆ ಒಪ್ಪುವುದೇ ಇಲ್ಲ. ನಿನ್ನ ಮನೆಗೆ ನನ್ನ ಮಗಳನ್ನು ಕೊಟ್ಟರೆ, ನನ್ನ ಮಾನ ಮರ್ಯಾದೆ ಹೋಗುತ್ತೆ ಎನ್ನುತ್ತಾನೆ. ತುಳಸಿ ಮತ್ತು ಮಾಧವ್ ಕೊಡುವ ತಾಂಬೂಲವನ್ನು ಕೂಡ ತೆಗೆದುಕೊಂಡು ಬಿಸಾಡುತ್ತಾನೆ. ಮಾಧವ್ ಎಷ್ಟು ಕೇಳಿಕೊಂಡರೂ ಜನಾರ್ಧನ್ ಕೇಳುವುದಿಲ್ಲ.

shrirasthu-shubhamasthu-serial

ಇನ್ನು ಶಾರ್ವರಿ, ಅವಿಗೆ ಐಡಿಯಾ ಕೊಟ್ಟಿರುತ್ತಾಳೆ. ತುಳಸಿ-ಮಾಧವ್‌ಗೆ ಮದುವೆ ಮಾಡಿಸಿದವರನ್ನೇ ಹೋಗಿ ಇಬ್ಬರನ್ನು ಬೇರೆ ಮಾಡಿ ಎಂದು ಕೇಳು ಎಂದಿರುತ್ತಾಳೆ. ಅವಿ ಅದೇ ಸರಿ ಎಂದುಕೊಂಡು ದತ್ತ ತಾತನನ್ನು ಹುಡುಕಿಕೊಂಡು ಹೊರಡುತ್ತಾನೆ.

ಅವಿಯನ್ನು ಆಟ ಆಡಿಸಿದ ದತ್ತ ತಾತ

ದತ್ತ ತಾತನನ್ನು ನೋಡದೇ ಇರುವುದಕ್ಕೆ ದತ್ತ ತಾತನ ಬಳಿಯೇ ಹೋಗಿ ಕೇಳುತ್ತಾನೆ. ಮಕ್ಕಳ ಜೊತೆಗೆ ಕ್ರಿಕೆಟ್ ಆಡುತ್ತಿದ್ದ ತಾತ ಬೇಕಂತಲೇ ದತ್ತನ ಮನೆ ತೋರಿಸಬೇಕು ಎಂದರೆ ನನ್ನ ಜೊತೆ ಆಟವಾಡು ಎಂದು ಆಡಿಸಿ ಕೊನೆ ಮನೆಯವರೆಗೂ ಡ್ರಾಪ್ ತೆಗೆದುಕೊಳ್ಳುತ್ತಾರೆ. ನಂತರ ಮನೆಯೊಳಗೆ ಹೋಗಿ ಬಿಡುತ್ತಾರೆ. ಅವಿ ಬಾಗಿಲು ತಟ್ಟಿದಾಗ ದತ್ತ ತಾತನೇ ಬಂದು ಬಾಗಿಲು ತೆಗೆದು ನಾನೇ ದತ್ತ ಎಂದು ಒಳಗೆ ಕರೆದುಕೊಳ್ಳುತ್ತಾರೆ. ಅವಿ ಬಳಿ ಊಟ ಬಡಿಸಿಕೊಂಡು, ಸೇವೆ ಮಾಡಿಸಿಕೊಂಡು ಬಳಿಕ ಏನು ವಿಚಾರ ಎಂದು ಕೇಳುತ್ತಾರೆ.

shrirasthu-shubhamasthu-serial

ಅವಿಗೆ ದತ್ತ ತಾತನ ಬುದ್ಧಿ ಮಾತುಗಳು

ಆಗ ಅವಿ, ಮಾಧವ್ ಹಾಗೂ ತುಳಸಿಯ ಮದುವೆಯನ್ನು ಮನೆಯವರ ಒಪ್ಪಿಗೆ ಇಲ್ಲದೇ ಮಾಡಲಾಗಿದೆ. ಇದರಿಂದ ಈಗ ಮನೆಯಲ್ಲಿ ಸಮಸ್ಯೆ ಆಗಿದೆ. ಯಾರಿಗೂ ನೆಮ್ಮದಿ ಇಲ್ಲ ಎಂದು ಹೇಳುತ್ತಾನೆ. ದತ್ತ ತಾತ ಕೂಡ ನೀವೆಲ್ಲಾ ಸ್ವಾರ್ಥಿಗಳಂತೆ ಯೋಚಿಸುತ್ತಿದ್ದೀರಾ. ಇದುವರೆಗೂ ನಿಮ್ಮ ತಂದೆಯ ಬಗ್ಗೆ ಯೋಚಿಸಿದ್ದೀರಾ ಎಂದು ಬುದ್ಧಿ ಹೇಳುತ್ತಾನೆ. ಅವರಿಬ್ಬರೂ ಮದುವೆಯಾಗಿರುವುದಕ್ಕೆ ನಿಮಗೆಲ್ಲಾ ಹೀಗೆ ಅನಿಸುತ್ತೆ. ಆದರೆ, ಆ ಮದುವೆ ಮಾಡಿರುವುದು ಸರಿಯಾಗಿಯೇ ಇದೆ ಎಂದು ಹೇಳುತ್ತಾರೆ. ಜೊತೆಗೆ ಅವಿಗೆ ನೀನು ಥೇಟ್ ನಿನ್ನ ಅಪ್ಪನಂತೆಯೇ ಇದ್ದೀಯಾ ಎನ್ನುತ್ತಾನೆ. ಈ ಮಾತು ಅವಿಗೆ ಶಾಕ್ ಆಗುವಂತೆ ಮಾಡುತ್ತದೆ.

ನಡೆದ ಘಟನೆ ವಿವರಿಸಿದ ತುಳಸಿ

ಇನ್ನು ತುಳಸಿ ಒಬ್ಬಳೇ ಮನೆಗೆ ಬರುತ್ತಾಳೆ. ಪೂರ್ಣಿಮಾ ಹಾಗೂ ಶಾರ್ವರಿ ಬಳಿ ನಡೆದ ಘಟನೆಯನ್ನೆಲ್ಲಾ ವಿವರಿಸುತ್ತಾಳೆ. ದೀಪಿಕಾಳನ್ನು ಅವರ ತಂದೆ ಅಭಿ ಎದುರಿಗೇ ದುಬೈಗೆ ಕರೆದುಕೊಂಡು ಹೋದರು. ಇದರಿಂದ ಅಭಿಗೆ ಬಹಳ ನೋವಾಯ್ತು. ಅಭಿ, ದೀಪಿಕಾಳನ್ನು ಫಾಲೋ ಮಾಡುತ್ತಾ ಹೋದ. ಮಾಧವ್, ಅಭಿ ಹಿಂದೆ ಹೋದರು. ನಾನು ಮನೆಗೆ ಬಂದೆ ಎಂದು ತುಳಸಿ ವಿವರವಾಗಿ ಹೇಳುತ್ತಾಳೆ.

ಆತಂಕ ವ್ಯಕ್ತಪಡಿಸಿದ ಶಾರ್ವರಿ ಹೇಳಿದ್ದೇನು..?

ತುಳಸಿ ಮಾತು ಕೇಳಿದವರಿಗೆ ಶಾಕ್ ಆಗುತ್ತದೆ. ಆದರೆ, ಶಾರ್ವರಿ ಕೊಂಚ ಓವರ್ ಆಗಿ ರಿಯಾಕ್ಟ್ ಮಾಡುತ್ತಾಳೆ. ನನ್ನ ಮಗನಿಗೆ ಯಾಕೆ ಹೀಗೆಲ್ಲಾ ಆಗುತ್ತಿದೆ. ಅವನಿಗೆ ಕಷ್ಟವಾಗುತ್ತಿದೆ. ಒಂದಾದ ಮೇಲೆ ಒಂದು ಕಷ್ಟ ಬರುತ್ತಿವೆ ಎಂದು ಹೇಳುತ್ತಾಳೆ. ಈ ಮನೆಗೆ ಬಂದವರಿಂದಲೇ ಹೀಗೆಲ್ಲಾ ಸಮಸ್ಯೆ ಆಗುತ್ತಿದೆ. ಬಂದವರು ಹಾಗೆ ಹೊರಟು ಹೋದರೆ ಚೆನ್ನಾಗಿರುತ್ತದೆ ಎಂದು ತುಳಸಿಗೆ ಇಂಡೈರೆಕ್ಟ್ ಆಗಿ ಹೇಳುತ್ತಾಳೆ. ಆದರೆ, ಪೂರ್ಣಿಮಾ ಶಾರ್ವರಿಗೆ ಸಮಾಧಾನದ ಮಾತುಗಳನ್ನು ಹೇಳುತ್ತಾಳೆ. ತುಳಸಿ ಶಾರ್ವರಿ ಮಾತುಗಳನ್ನು ಕೇಳಿ ಮುಂಧೇ ಏನು ಮಾಡುತ್ತಾಳೋ ಗೊತ್ತಿಲ್ಲ.

More from Filmibeat

English summary
Shrirasthu Shubhamasthu kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X