Shrirasthu Shubhamasthu: ಜೋಗ್ತವ್ವ ಮಾತು ಸತ್ಯವಾಗುತ್ತಾ: ಶಾರ್ವರಿಯಿಂದ ಮನೆಯನ್ನು ತುಳಸಿ ಕಾಪಾಡುತ್ತಾಳಾ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಹೇಶನಿಗೆ ಪ್ರಜ್ಞೆ ಬಂದಿದ್ದು, ಮನೆಯಲ್ಲಿ ಸಂತಸ ಮನೆ ಮಾಡಿದೆ. ತಮ್ಮ ಹುಷಾರಾದ ಅನ್ನೋ ಖುಷಿ ಮಾಧವ್‌ನದ್ದು.

ಬುದ್ಧಿ ಬಂದಾಗಿನಿಂದಲೂ ಅಪ್ಪ ಮಾತನಾಡಿದ್ದನ್ನೇ ನೋಡಿಲ್ಲ ಎನ್ನುತ್ತಿದ್ದ ನಿಧೀಗೆ ಈಗ ಅಪ್ಪನ ಜೊತೆಗೆ ಮಾತನಾಡುತ್ತಿರುವ ಅಪ್ಪ ಓಡಾಡುತ್ತಿರುವುದೆಲ್ಲಾ ಒಂದು ರೀತಿ ನೆಮ್ಮದಿ ತಂದಿದೆ.

ಅಭಿ, ಅವಿ ಹಾಗೂ ಪೂರ್ಣಿಮಾಗೆ ಮಹೇಶ ಹುಷಾರಾಗಿರುವುದೆಲ್ಲವೂ ತುಳಸಿ ಅಮ್ಮನಿಂದಲೇ ಅನ್ನೋ ನಂಬಿಕೆ ಮನದ ಮೂಲೆಯಲ್ಲಿ ಹೊಕ್ಕಿದ್ದು, ಇದರ ಬಗ್ಗೆ ಎಲ್ಲೂ ಮಾತನಾಡಿಲ್ಲವಷ್ಟೇ.

Shrirasthu Shubhamasthu serial 19th January episode written update

ಭವಿಷ್ಯ ನುಡಿದ ಜೋಗ್ತವ್ವ

ಸಂಕ್ರಾಂತಿ ಹಬ್ಬದ ವಿಶೇಷವಾಗಿ ಮನೆಯಲ್ಲಿ ಹಬ್ಬದ ಅಡುಗೆ ತಯಾರಿಸಲಾಗಿದೆ. ಒಂದುಕಡೆ ಅಭಿ ಮದುವೆಗೆ ತಯಾರಿ ಮಾಡಿಕೊಳ್ಳಬೇಕಿದೆ. ಈಗ ಈ ಕೆಲಸಕ್ಕೆ ಮಹೇಶನ ಕೈ ಕೂಡ ಸೇರಿದೆ. ಆದರೆ, ಮಹೇಶನಿಗೆ ತಮ್ಮ ಬಿಸಿನೆಸ್ ರೈವಲ್ರಿ ಆದ ಜನಾರ್ಧನ್ ಮಗಳಿಗೆ ಕೊಟ್ಟು ಅಭಿ ಮದುವೆ ಮಾಡುತ್ತಿರುವುದು ಸ್ವಲ್ಪವೂ ಇಷ್ಟವಿಲ್ಲ. ಇನ್ನು ಇಂತಹ ಗೊಂದಲಗಳು ಇರುವಾಗಲೇ ಮನೆಗೆ ಜೋಗ್ತವ್ವನ ಎಂಟ್ರಿಯಾಗಿದೆ. ಜೋಗ್ತವ್ವ ಮನೆಗೆ ಬಂದು ಮನೆಯಲ್ಲೇ ಇರುವ ಕಳ್ಳ ಇಡೀ ಮನೆಯನ್ನು ದೋಚಲು ಮುಂದಾಗಿದ್ದಾನೆ. ಮನೆಯವರಿಗೆಲ್ಲಾ ಅಪಾಯ ತರಲಿದ್ದಾನೆ. ಎಂದು ಶಾರ್ವರಿ ಬಗ್ಗೆ ಹೇಳಿದ್ದು, ಗರತಿ ಮನೆಗೆ ಬಂದಿದ್ದು, ಈ ಮನೆಯ ರಕ್ಷಣೆ ಮಾಡುತ್ತಾಳೆ. ಎಲ್ಲರನ್ನೂ ಕಾಪಾಡುತ್ತಾಳೆ ಎಂದು ತುಳಸಿ ಬಗ್ಗೆ ಹೇಳಿದ್ದಾಳೆ.

ಶಾರ್ವರಿ ಬಗ್ಗೆ ತುಳಸಿ ಮನದಲ್ಲಿ ಅನುಮಾನ

ಜೋಗ್ತವ್ವ ಹೇಳಿದ ಮಾತುಗಳು ಹೀಗಿರುವಾಗಲೇ ತುಳಸಿ ಮನದಲ್ಲೂ ಅನುಮಾನದ ಭೂತ ಹೊಕ್ಕಿದೆ. ಶಾರ್ವರಿ ನಡೆ ಬಗ್ಗೆ ಮೊದಲಿನಿಂದಲೂ ಸಣ್ಣದಾಗಿ ಅನುಮಾನಗೊಂಡಿದ್ದ ತುಳಸಿಗೆ ಅನುಮಾನ ಹೆಚ್ಚಿದೆ. ನಂದಿಗಿರಿಗೆ ಹೋದಾಗ ಹರಕೆಯ ಬಗ್ಗೆ ಮಾತನಾಡದ ಶಾರ್ವರಿ, ಮಹೇಶ್ ಹುಷಾರಾಗುತ್ತಿದ್ದಂತೆ ಅಲ್ಲೇ ಉಳಿದುಕೊಂಡಿದ್ದು ಯಾಕಿರಬಹುದು. ಅಲ್ಲಿ ಶಾರ್ವರಿ ಯಾವ ಹರಕೆಯನ್ನು ತೀರಿಸುತ್ತಿರಬಹುದು. ಮಹೇಶನನ್ನು ವ್ಹೀಲ್ ಚೇರ್‌ನಿಂದ ದೂಡಿದ ಶಾರ್ವರಿ ತನ್ನ ಮೇಲೆ ಗೂಬೆ ಕೂರಿಸಿದ್ಯಾಕೆ? ಎಂದು ಯೋಚಿಸುತ್ತಿದ್ದು, ಅವಳಿಗೆ ಯಾವುದೂ ಅರ್ಥವಾಗುತ್ತಿಲ್ಲ.

Shrirasthu Shubhamasthu serial 19th January episode written update

ಕಾರು ಖರೀದಿಸಿದ ಸಮರ್ಥ್

ಇನ್ನು ಸಮರ್ಥ್‌ ಗೆ ಒಂದು ಒಳ್ಳೆಯ ಕೆಲಸ ಸಿಗಲಿನ ಎಂದು ಎಷ್ಟೇ ಬಯಸಿದರೂ ಅಭಿ ಮಾಡಿರುವ ಕೆಲಸಕ್ಕೆ ಎಲ್ಲೂ ಉದ್ಯೋಗ ಸಿಗಲಿಲ್ಲ. ಕೊನೆಗೆ ಸ್ವಂತ ಉದ್ಯಮವನ್ನು ಆರಂಭಿಸಲು ಮುಂದಾದ ಸಮರ್ಥ್‌ಗೆ ನೂರೆಂಟು ವಿಘ್ನಗಳು ಎದುರಾದವು. ಸ್ವಂತ ತಂಗಿ ಸಂಧ್ಯಾ ಕೂಡ ಸಮರ್ಥ್ ದಾರಿಗೆ ಮುಳ್ಳಾಗಿದ್ದಳು. ಈಗ ಎಲ್ಲಾ ಸಮಸ್ಯೆಗಳಿಂದ ಹೊರ ಬರುವ ಪ್ರಯತ್ನ ಮಾಡಿದ ಸಮರ್ಥ್ ಹೊಸ ಕಾರನ್ನು ಖರೀದಿಸಿದ್ದಾನೆ. ಮನೆಯಲ್ಲಿ ಎಲ್ಲರೂ ಸಮರ್ಥ್‌ಗೆ ಒಳ್ಳೆಯದಾಗಲಿ ಎಂದು ಖುಷಿ ಪಟ್ಟಿದ್ದಾರೆ.

ಅಮ್ಮನಿಗಾಗಿ ಕಾಯುತ್ತಿರುವ ಸಮರ್ಥ್

ಹೊಸ ಕೆಲಸ ಪ್ರಾರಂಭಿಸುವ ಮುನ್ನ ಕಾರನ್ನು ತೊಳೆದು, ದೇವಸ್ಥಾನದಲ್ಲಿ ಪೂಜೆ ಮಾಡಿಸಬೇಕು ಎಂದು ತೆಗೆದುಕೊಂಡು ಹೋಗಿದ್ದಾರೆ. ಸಮರ್ಥ್‌ಗೆ ತನ್ನ ತಾಯಿ ತುಳಸಿ ಮೇಲೆ ಹುಸಿ ಕೋಪವಿದೆ. ಹಾಗಿದ್ದರೂ ಕೂಡ ಕಾರಿಗೆ ಪೂಜೆ ಮಾಡಿಸುವ ಈ ವೇಳೆ ಸಮರ್ಥ್ ತನ್ನ ತಾಯಿ ತುಳಸಿ ಇದ್ದಿದ್ದರೆ ಚೆನ್ನಾಗಿತ್ತು ಎಂದು ಎದುರು ನೋಡುತ್ತಿದ್ದಾನೆ. ಸಮರ್ಥ್ ಮನಸ್ಸನ್ನು ಅರಿತ ದತ್ತ ತಾತ ತಮಾಷೆ ಮಾಡುತ್ತಾರೆ. ತುಳಸಿ ಅಲ್ಲಿಗೆ ಬಂದ ಕೂಡಲೇ ಸಮರ್ಥ್ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಮಗನಿಗೆ ಒಳ್ಳೆಯದಾಗಲಿ ಎಂದು ತುಳಸಿ ಆಶಿಸುತ್ತಾಳೆ. ಈ ಮೂಲಕ ಸಮರ್ಥ್ ತನ್ನ ತಾಯಿ ತುಳಸಿಯನ್ನು ಒಪ್ಪಿಕೊಳ್ಳುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Shrirasthu Shubhamasthu serial today update; Jogthavva comes home and tells about sharvari and tulasi future,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X