Shrirasthu Shubhamasthu: ಒಂದಾದ ತಂದೆ-ಮಗ: ಅಭಿಗೆ ಆಸರೆಯಾದ ಮಾಧವ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತನ ಬಳಿ ಮಾತನಾಡಲು ಬಂದಿದ್ದ ಅವಿ, ಸಮರ್ಥ್ ಕೆಲಸ ಹೋಗಿರುವ ವಿಚಾರವನ್ನು ಹೇಳಿರುತ್ತಾನೆ. ಅದೂ ಅಲ್ಲದೇ, ಹೋದ ಕೆಲಸವನ್ನು ಮತ್ತೆ ಕೊಡಿಸುವುದಾಗಿ ಆಫರ್ ಅನ್ನು ಕೂಡ ಕೊಟ್ಟಿರುತ್ತಾನೆ. ಮಾಧವ್-ತುಳಸಿ ಅನ್ನು ಬೇರೆ ಮಾಡಿದರೆ, ಸಮರ್ಥ್‌ಗೆ ಕೆಲಸ ಕೊಡುವುದಾಗಿ ಹೇಳಿರುತ್ತಾನೆ.
ಆಫರ್ ಅನ್ನು ತಿರಸ್ಕರಿಸಿದ್ದ ದತ್ತ ತಾತ, ಸಮರ್ಥ್ ಮನೆಗೆ ಬರುತ್ತಿದ್ದಂತೆ ವಿಚಾರಿಸುತ್ತಾರೆ. ನಿನ್ನ ಕೆಲಸ ಹೋಗಿ ಎಷ್ಟು ದಿನವಾಯ್ತು..? ಯಾಕೆ ನಮಗೆ ಹೇಳಿಲ್ಲ ಎಂದು ಕೇಳುತ್ತಾರೆ.

ಸಮರ್ಥ್ ಮನೆಯವರಿಗೆಲ್ಲಾ ಕಷ್ಟ ಆಗುತ್ತೆ. ನನ್ನನ್ನು ಕೀಳಾಗಿ ನೋಡುತ್ತೀರಾ ಎಂದು ಹೇಳಲಿಲ್ಲ. ತುಂಬಾ ಕಡೆ ಕೆಲಸಕ್ಕೆ ಟ್ರೈ ಮಾಡಿದ್ದೀನಿ ಎನ್ನುತ್ತಾನೆ. ದತ್ತ ತಾತ ಸಮರ್ಥ್‌ಗೆ ಮನೆಯವರ ಬಳಿ ಏನೇ ಕಷ್ಟವಿದ್ದರೂ ಹೇಳಿಕೋ. ನಾವ್ಯಾರೂ ನಿನ್ನನ್ನು ಆಡಿಕೊಳ್ಳುವುದಿಲ್ಲ ಎಂದು ಬುದ್ಧಿ ಹೇಳುತ್ತಾರೆ. ಸಮರ್ಥ್, ಸಿರಿ ಈ ವಿಚಾರವನ್ನು ಹೇಳಿರಬಹುದು ಎಂದುಕೊಂಡು ಹೋಗುತ್ತಾನೆ.
ಬಾಲ ಸುಟ್ಟ ಬೆಕ್ಕಿನಂತಾಯ್ತು ಶಾರ್ವರಿ ಕಥೆ
ಇತ್ತ ಶಾರ್ವರಿ ಬಹಳ ಅವಸರದಲ್ಲಿ ಆಚೆ ಹೋಗುತ್ತಿರುತ್ತಾಳೆ. ಅದೇ ಸಮಯಕ್ಕೆ ನಿಧಿ ಬಂದು ತಡೆಯುತ್ತಾಳೆ. ತನಗೆ ಎಂಜಾಯ್ ಮಾಡಲು ಹಣ ಬೇಕು ಎಂದು ಶಾರ್ವರಿ ಬಳಿ ಪೀಡಿಸುತ್ತಾಳೆ. ಆದರೆ, ಶಾರ್ವರಿ ತುಳಸಿ-ಮಾಧವ್ ವಿಚಾರದಲ್ಲಿ ಆತಂಕದಲ್ಲಿದ್ದು, ನಾನು ಸಂಕಷ್ಟದಲ್ಲಿರುವಾಗಲೂ ನಿನಗೆ ಎಂಜಾಯ್‌ಮೆಂಟ್ ಬೇಕಾ.? ತುಳಸಿ ಮನೆಗೆ ಬಂದಿದ್ದಾಳೆ. ನನ್ನ ಕನಸೆಲ್ಲ ಹಾಳಾಗುವ ಹೊತ್ತಿದು, ಎನ್ನುತ್ತಾ ಬಾಲ ಸುಟ್ಟ ಬೆಕ್ಕಿನಂತೆ ಒದ್ದಾಡುತ್ತಿರುತ್ತಾಳೆ.

ತುಳಸಿಗೆ ನಿಧಿ ವಾರ್ನಿಂಗ್
ಮನೆಯಲ್ಲಿ ಯಾರೂ ಇರುವುದಿಲ್ಲ. ಮಹೇಶ್‌ಗೆ ಊಟ ಮಾಡಿಸಲು ಶಾರ್ವರಿ ಹಾಗೂ ಮಾಧವ್ ಇಬ್ಬರೂ ಹೊರಗೆ ಹೋಗಿರುತ್ತಾರೆ. ಹೀಗಾಗಿ ಪಾಪಮ್ಮ, ಮಹೇಶ್ ಅವರಿಗೆ ಊಟ ಮಾಡಿಸುವವರು ಇಲ್ಲ ಎನ್ನುವಾಗಲೇ ತುಳಸಿ ಬಂದು ತಿನ್ನಿಸುತ್ತೇನೆ. ನನಗೂ ಅಭ್ಯಾಸವಾಗುತ್ತದೆ ಎಂದು ಮಹೇಶ್‌ಗೆ ಊಟ ಮಾಡಿಸುತ್ತಿರುತ್ತಾಳೆ. ಇದೇ ವೇಳೆಗೆ ರೂಮಿಗೆ ಬರುವ ನಿಧಿ ಶಾಕ್ ಆಗುತ್ತಾಳೆ. ತುಳಸಿಗೆ ವಾರ್ನಿಂಗ್ ಕೂಡ ಕೊಡುತ್ತಾಳೆ. ದೊಡ್ಡಪ್ಪನನ್ನು ಬುಟ್ಟಿಗೆ ಹಾಕಿಕೊಂಡಂತೆ ಈಗ ಮನೆಯವರನ್ನೆಲ್ಲಾ ನಿನ್ನ ಪರ ಮಾಡಿಕೊಳ್ಳಲು ಯತ್ನಿಸುತ್ತಿದ್ದೀಯಾ. ನನ್ನ ಅಪ್ಪನಿಗೆ ಊಟ ತಿನ್ನಿಸೋದು ಬೇಕಿಲ್ಲ. ಇನ್ನೊಂದು ದಿನ ನಾನು ನಿನ್ನ ಇಲ್ಲಿ ನೋಡಿದರೆ, ನಿನ್ನ ಗ್ರಹಚಾರ ಸರಿ ಇರೋದಿಲ್ಲ ಎಂದು ಹೇಳಿ ಕಳುಹಿಸುತ್ತಾಳೆ.
ಮುಕ್ತವಾಗಿ ಮಾತನಾಡಿದ ತಂದೆ-ಮಗ
ಇನ್ನು ಮಾಧವ್, ಅಭಿ ಅನ್ನು ಫಾಲೋ ಮಾಡಿಕೊಂಡು ಬಂದಿರುತ್ತಾನೆ. ಅಭಿ ಫೀಲಿಂಗ್‌ನಲ್ಲಿ ಕುಡಿಯುತ್ತಿರುತ್ತಾನೆ. ಮಾಧವ್ ಅವನ ಹಿಂದಿನ ಟೇಬಲ್‌ನಲ್ಲಿ ಕುಳಿತು ನೋಡುತ್ತಿರುತ್ತಾನೆ. ಅಭಿ ಮನೆಗೆ ಎದ್ದು ಹೊರಟಾಗ ತೂರಾಡುತ್ತಿರುತ್ತಾನೆ. ಆಗ ಮಾಧವ್ ಹೋಗಿ ಅಭಿ ಅನ್ನು ಹಿಡಿದುಕೊಳ್ಳುತ್ತಾನೆ. ಅಭಿ, ಅಪ್ಪ ನಿಮ್ಮ ಜೊತೆಗೆ ನಾನು ಮಾತನಾಡಬೇಕಿತ್ತು. ಥ್ಯಾಂಕ್ಸ್ ಬಂದಿದ್ದಕ್ಕೆ ಎಂದು ಹೇಳಿ ಮಾಧವ್ ಜೊತೆಗೆ ಜಾಲಿಯಾಗಿ ಮನೆಗೆ ಹೊರಡುತ್ತಾನೆ.
ತಂದೆಯನ್ನು ತಬ್ಬಿಕೊಂಡ ಅಭಿ
ದಾರಿ ಮಧ್ಯೆ ಗಾಡಿ ನಿಲ್ಲಿಸಲು ಹೇಳಿದ ಅಭಿ, ತನ್ನ ತಂದೆಯ ಜೊತೆಗೆ ಮುಕ್ತವಾಗಿ ಮಾತನಾಡುತ್ತಾನೆ. ನೀನು ನನ್ನ ಭವಿಷ್ಯಕ್ಕೆ ಅಡ್ಡ ಆದೆ. ನನಗೆ ಕೆಫೆ ಕೊಡಲಿಲ್ಲ. ನನ್ನ ಮದುವೆಗೂ ಅಡ್ಡ ಆದೆ. ಯಾಕೆ ಹೀಗೆಲ್ಲಾ ಮಾಡಿದ್ದು ಎಂದು ಪ್ರಶ್ನಿಸುತ್ತಾನೆ. ನಿನಗೆ ಈಗ ಹೇಳಿದರೆ ಅರ್ಥವಾಗುವುದಿಲ್ಲ. ಮನೆಗೆ ಹೋಗೋಣ. ನಿನ್ನ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ಕೊಡುತ್ತೇನೆ ಎಂದು ಹೇಳುತ್ತಾನೆ. ಅಭಿ ಸಂಕಟದಿಂದ ಮಾಧವ್‌ನನ್ನು ತಬ್ಬಿಕೊಳ್ಳುತ್ತಾನೆ.


Click it and Unblock the Notifications











