Shrirasthu Shubhamasthu: ಮೊದಲ ಬಾರಿಗೆ ಮಾಧವ್ ಬಳಿ ಬೇಸರದಿಂದ ಮಾತನಾಡಿದ ತುಳಸಿ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತ, ಸಮರ್ಥ್ ಬಳಿ ಕೆಲಸದ ಬಗ್ಗೆ ಕೇಳಿದ್ದಕ್ಕೆ ಆತನಿಗೆ ಬೇಸರವಾಗಿರುತ್ತದೆ. ಸಿರಿ ಈ ವಿಚಾರವನ್ನು ದತ್ತ ತಾತನಿಗೆ ಹೇಳಿದ್ದು ಎಂದು ತಿಳಿದ ಸಮರ್ಥ್ ಬೈಯುತ್ತಾನೆ.

ನಿನ್ನ ಮೇಲೆ ನಂಬಿಕೆ ಇಟ್ಟು ಹೇಳಿದೆ. ಆದರೆ ನೀನು ನನಗೆ ಕೆಲಸವಿಲ್ಲ ಅಂತ ದತ್ತ ತಾತನಿಗೆ ಹೇಳಿ ಅವಮಾನ ಮಾಡುತ್ತಿದ್ದೀಯಾ. ಇನ್ಮುಂದೆ ನಾನು ಹೇಗೆ ತಲೆ ಎತ್ತುಕೊಂಡು ಓಡಾಡಲಿ ಎಂದು ಪ್ರಶ್ನಿಸುತ್ತಾನೆ.

ಸಿರಿ ಆಗ ಅವಿನಾಶ್ ಮನೆಗೆ ಬಂದ ವಿಚಾರವನ್ನು ಹೇಳುತ್ತಾಳೆ. ಅವರಿಂದಲೇ ಸತ್ಯ ಗೊತ್ತಾಗಿದ್ದು, ನಾನು ಹೇಳಿಲ್ಲ. ಆದರೆ, ನಿನಗೆ ನನ್ನ ಮೇಲೆಯೇ ನಂಬಿಕೆ ಇಲ್ಲದಂತಾಯ್ತಲ್ವಾ ಎಂದು ಸಿರಿ, ಸಮರ್ಥ್ ಮೇಲೆ ಬೇಸರ ಮಾಡಿಕೊಳ್ಳುತ್ತಾಳೆ.

shrirasthu-shubhamasthu-serial

ತುಳಸಿಗೆ ಚುಚ್ಚಿ ಮಾತನಾಡಿದ ಶಾರ್ವರಿ

ಅಭಿಯನ್ನು ಹುಡುಕಿಕೊಂಡು ಶಾರ್ವರಿ ಹೋಗಿರುತ್ತಾಳೆ. ಆದರೆ, ಸಿಕ್ಕಿರುವುದಿಲ್ಲ. ಇದೇ ಬೇಸರದಲ್ಲಿ ಶಾರ್ವರಿ ಮನೆಗೆ ಬರುತ್ತಾಳೆ. ಆಗ ನಿಧಿ, ಶಾರ್ವರಿಗೆ ಅಭಿ ಬ್ರೋ ಸಿಗಲಿಲ್ವಾ? ಎಂದು ಚುಡಾಯಿಸುವಂತೆ ಕೇಳುತ್ತಾಳೆ. ತುಳಸಿ ಕೂಡ ಅಲ್ಲೇ ಇದ್ದ ಕಾರಣ ಶಾರ್ವರಿ ತನ್ನ ಕೋಪವನ್ನೆಲ್ಲಾ ಅವಳ ಮೇಲೆ ಹಾಕುತ್ತಾಳೆ.

ಶಾರ್ವರಿ ಖಾರವಾದ ಮಾತು

ಹೇಗೋ ಈ ಮನೆ ನಂದಾಗೋಕುಲದಂತೆ ಇತ್ತು. ಇವಳು ಬಂದು ಎಲ್ಲಾ ಹಾಳು ಮಾಡಿಬಿಟ್ಟಳು. ಜನಾರ್ಧನ್ ಮನೆಗೆ ಭಾವ ಮಾತ್ರ ಹೋಗಿದ್ದರೆ, ಎಲ್ಲವೂ ಸರಿ ಆಗುತ್ತಿತ್ತೋ ಏನೋ. ಇವಳು ಹೋಗಿ ಕೆಲಸ ಕೆಡಿಸಿದ್ದಾಳೆ. ಈ ಮನೆಗೆ ಬಂದಾಗಿನಿಂದ ಮನೆಯ ನೆಮ್ಮದಿಯನ್ನೆಲ್ಲಾ ಕಿತ್ತುಕೊಂಡು ಬಿಟ್ಟಳು ಎಂದು ಖಾರವಾಗಿ ಮಾತನಾಡುತ್ತಾಳೆ.

shrirasthu-shubhamasthu-serial

ಮನೆಗೆ ಒಟ್ಟಿಗೆ ಬಂದ ತಂದೆ-ಮಗ

ಅಷ್ಟರಲ್ಲಿ ಮನೆಗೆ ಅವಿ ಬರುತ್ತಾನೆ. ಅವಿಗೆ ಅಭಿ ಹೊರಗೆ ಹೋಗಿರುವುದು ತಿಳಿದು ಅವನೂ ಕೂಡ ತುಳಸಿ ಮೇಲೆ ಕೂಗಾಡುತ್ತಾನೆ. ನಮ್ಮ ಮನೆಯ ವಿಚಾರದಲ್ಲಿ ತಲೆ ಹಾಕಬೇಡಿ ಎಂದರೂ ಯಾಕೆ ಹೀಗೆ ಮಾಡೋದು ಎಂದು ಪ್ರಶ್ನೆ ಮಾಡುತ್ತಾನೆ. ಇದೇ ಸಮಯಕ್ಕೆ ಮಾಧವ್ ಹಾಗೂ ಅಭಿ ಇಬ್ಬರೂ ಸ್ಕೂಟರ್ ನಲ್ಲಿ ಬರುತ್ತಾರೆ. ಶಾರ್ವರಿಗೆ ಇದು ಶಾಕ್ ಆಗುತ್ತದೆ.

ಮಾಧವ್‌ಗೆ ಅಭಿ ಮುತ್ತು

ಅಭಿ, ಮಾಧವ್‌ಗೆ ಸೇಫ್ ಆಗಿ ಕರೆದುಕೊಂಡು ಬಂದಿದ್ದಕ್ಕೆ ಪ್ರೀತಿಯಿಂದ ಕುಡಿದ ಮತ್ತಿನಲ್ಲಿ ಮುತ್ತನ್ನು ಕೂಡ ಕೊಡುತ್ತಾನೆ. ಅವಿ ಮತ್ತು ಮಾಧವ್ ಇಬ್ಬರೂ ಸೇರಿ ಅಭಿ ಅನ್ನು ರೂಮ್‌ಗೆ ಕರೆದುಕೊಂಡು ಹೋಗುತ್ತಾರೆ. ಇದೆಲ್ಲಾ ನೋಡಿದ ಶಾರ್ವರಿಗೆ ಇನ್ನಷ್ಟು ಕೋಪ ಬರುತ್ತದೆ.

ಮನದ ಮಾತುಗಳನ್ನು ಆಡಿದ ತುಳಸಿ

ತುಳಸಿ ಬಳಿಕ ಶಾರ್ವರಿ ಆಡಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಅಳುತ್ತಿರುತ್ತಾಳೆ. ಮಾಧವ್ ಬಂದು ಮಾತನಾಡಿಸಿದಾಗಲೂ ಸರಿಯಾಗಿ ಮಾತನಾಡುವುದಿಲ್ಲ. ಈಗ ಮನೆಯಲ್ಲಿ ನಡೆಯುತ್ತಿರುವುದೆಲ್ಲದಕ್ಕೂ ನಮ್ಮ ಮದುವೆಯೇ ಕಾರಣ. ನಮ್ಮಿಂದಾಗಿ ಎಲ್ಲರೂ ಗೋಳಾಡುವಂತಾಗಿದೆ. ಈ ಮನೆಯಲ್ಲಿ ಹಾಗೂ ನನ್ನ ಮನೆಯಲ್ಲಿ ಎರಡೂ ಕಡೆ ಎಲ್ಲರೂ ನರಳುತ್ತಿದ್ದಾರೆ. ಇಷ್ಟೆಲ್ಲಾ ಆಗುತ್ತಿರುವುದು ನಮ್ಮಿಬ್ಬರ ಮದುವೆ ನಿರ್ಧಾರದಿಂದ ಈಗ ನಾವು ಇದನ್ನು ಸರಿ ಮಾಡುವುದು ಹೇಗೆ? ಎಂದು ತನ್ನ ಮನದ ಮಾತುಗಳನ್ನು ಆಡುತ್ತಾಳೆ.

ಮದುವೆ ಬಗ್ಗೆ ತುಳಸಿಗೆ ಬೇಸರ

ನೀವು ನನ್ನನ್ನು ಮದುವೆ ಆಗುವುದರ ಬದಲು ಬೇರೆ ದಾರಿನೇ ಇರಲಿಲ್ವಾ..? ಅವತ್ತು ನಾನು ನಿಮ್ಮ ಜಾಗದಲ್ಲಿ ಇದ್ದಿದ್ದರೆ, ಖಂಡಿತವಾಗಿಯೂ ಮದುವೆ ಆಗುತ್ತಿರಲಿಲ್ಲ. ಒಬ್ಬರಿಗೆ ನೋವುಕೊಟ್ಟು ಬದುಕುವುದಕ್ಕಿಂತ, ನಾವು ನೋವು ಅನುಭವಿಸುವುದೇ ಸರಿ ಎಂದು ಹೇಳುತ್ತಾಳೆ. ತುಳಸಿ ಬಹಳ ನೊಂದು ಕೊಂಡು ಮಾತನಾಡುತ್ತಾಳೆ. ಮಾಧವ್‌ ಕೂಡ ತುಳಸಿ ಮಾತುಗಳನ್ನು ಕೇಳಿ ಬೇಸರ ಮಾಡಿಕೊಳ್ಳುತ್ತಾನೆ.

More from Filmibeat

English summary
Shrirasthu Shubhamasthu Kannada serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X