Shrirastu Shubhamasthu: ಮಾಧವ್ ಮನೆ ತುಂಬಿದ ತುಳಸಿ, ಸಮರ್ಥ್‌ನಿಂದ ದೂರವಾಗುತ್ತಾಳ ಸಿರಿ?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಿರಿ ತುಳಸಿಯ ಹೊಸ ಬಾಳಿಗೆ ಸಹಾಯ ಮಾಡಿದ್ದಾಳೆ. ಆದರೆ, ಈಗ ಅದು ಅವಳ ಬದುಕಿಗೆ ಮುಳ್ಳಾಗಿದೆ. ಸಮರ್ಥ್‌ಗೆ ತನ್ನ ತಾಯಿ ಹಾಗೂ ಮಾಧವ್ ಮದುವೆ ನಡೆದಿರುವುದು ಕೊಂಚವೂ ಇಷ್ಟವಿಲ್ಲ. ಮೊದಲಿನಿಂದಲೂ ಮಾಧವ್‌ನನ್ನು ಕಂಡರೆ ಕೆಂಡ ಕಾರುತ್ತಿದ್ದ ಸಮರ್ಥ್, ಈಗ ಈ ಮದುವೆಯನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಸಮರ್ಥ್ ತನ್ನ ತಾಯಿಗೆ ನಿನ್ನ ನನ್ನ ಸಂಬಂಧ ಇಂದಿಗೆ ಮುಗಿದು ಹೋಯ್ತು ಎಂದು ಹೇಳಿದ್ದಾನೆ. ಇನ್ನು ಸಿರಿ ಮೇಲೆ ಸಮರ್ಥ್‌ಗೆ ಬಹಳ ಕೋಪ ಇದೆ.
ಸಮರ್ಥ್ - ಸಿರಿ ಡಿವೋರ್ಸ್..?
ತನಗಿಷ್ಟವಿಲ್ಲ ಎಂಬುದು ಗೊತ್ತಿದ್ದರೂ ಕೂಡ ಸಿರಿ ಮುಂದೆ ನಿಂತು ಮದುವೆಯನ್ನು ಮಾಡಿಸಿದ್ದಾಳೆ. ಇದು ಸರಿಯಾದುದ್ದಲ್ಲ ಎಂದು ಸಮರ್ಥ್ ಕೋಪ ಮಾಡಿಕೊಂಡಿದ್ದಾನೆ. ಸಿರಿ ಮಾತನ್ನು ಕೇಳದ ಸಮರ್ಥ್ ನನಗೆ ನಿನ್ನಿಂದ ಬಿಡುಗಡೆ ಬೇಕು ಎಂದು ಕೇಳಿದ್ದಾನೆ. ಅಷ್ಟೇ ಅಲ್ಲದೇ, ನನ್ನ ಮಾತನ್ನು ನೀನು ಕೇಳುವುದಿಲ್ಲ. ನನ್ನ ಇಷ್ಟಕ್ಕೆ ವಿರುದ್ಧವಾಗಿ ನಡೆಯುತ್ತೀಯಾ. ನಾನು ಮಾತ್ರ ಯಾಕೆ ನಿನ್ನ ಮಾತನ್ನು ಕೇಳಬೇಕು ಎಂದು ಜಗಳ ಮಾಡಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ಸಮರ್ಥ್ ನೀನು ನನಗೆ ಡಿವೋರ್ಸ್ ಕೊಟ್ಟರೆ, ಆಗ ನಾನು ನಿನ್ನ ಮಾತು ಕೇಳುವಂತಿರುವುದಿಲ್ಲ. ನನ್ನ ಪಾಡಿಗೆ ನಾನು ಹಾಗೂ ನಿನ್ನ ಪಾಡಿಗೆ ನೀನು ಇರಬಹುದು ಎಂದು ಹೇಳಿದ್ದಾನೆ. ಈ ಮಾತು ಸಿರಿಗೆ ಶಾಕ್ ಕೊಟ್ಟಿದೆ. ಇದೇ ಸಮಯಕ್ಕೆ ದತ್ತ ತಾತ ಸಿರಿ ಅವರ ತಂದೆಯನ್ನು ಮನೆಗೆ ಕಳಿಸಿದ್ದಾರೆ. ಸಿರಿ ತಂದೆಯೂ ಕೂಡ ಸಾಂತ್ವಾನ ಹೇಳಿದ್ದು, ಎಲ್ಲಾ ಸರಿ ಹೋಗುತ್ತೆ ಎಂದು ಸಮಾಧಾನ ಮಾಡಿದ್ದಾರೆ.
ಮನೆ ತುಂಬಿಸಿಕೊಂಡ ಪೂರ್ಣಿಮಾ
ಇತ್ತ ಎಲ್ಲರೂ ಮಾಧವ್ ಜೊತೆಗೆ ಜಗಳ ಮಾಡಿಕೊಂಡು ಮನೆಯೋಳಗೆ ಹೋಗಿದ್ದಾರೆ. ಅಭಿ ಮದುವೆಯನ್ನು ಜನಾರ್ಧನ್ ಕ್ಯಾನ್ಸಲ್ ಮಾಡಿದ್ದಾನೆ. ಆದರೆ, ಪೂರ್ಣಿಮಾ ಯಾವ ವಿಚಾರವನ್ನೂ ತಲೆಗೆ ಹಾಕಿಕೊಂಡಿಲ್ಲ. ಬದಲಿಗೆ ಮಾಧವ್ ಮತ್ತು ತುಳಸಿಗೆ ಆರತಿ ಮಾಡಿ ನವ ಜೋಡಿಗಳನ್ನು ಖುಷಿಯಿಂದ ಮನೆ ತುಂಬಿಸಿಕೊಂಡಿದ್ದಾಳೆ. ಸೇರನ್ನು ಒದ್ದು ಮನೆಯೊಳಗೆ ಬಂದ ತುಳಸಿಗೆ ಪೂರ್ಣಿಮಾ ಮನೆಯಲ್ಲಿರುವ ದೇವರ ಕೋಣೆ ಅನ್ನು ತೋರಿಸಿದ್ದಾಳೆ.

ತುಳಸಿ - ಅವಿ ಮುಖಾಮುಖಿ
ಇದನ್ನೆಲ್ಲಾ ದೂರದಲ್ಲಿ ನಿಂತು ಅವಿ ನೋಡುತ್ತಿದ್ದಾನೆ. ಅವನಿಗೆ ಈಗ ಮಾಧವ್‌ಗಿಂತಲೂ ತುಳಸಿ ಮೇಲೆ ಕೋಪ ಹೆಚ್ಚಾಗಿದೆ. ತುಳಸಿ ದೇವರ ಮನೆಗೆ ಹೋಗಿ ಬೇಡಿಕೊಳ್ಳುತ್ತಾಳೆ. ತನ್ನಿಂದ ತಪ್ಪಾಗಿದ್ದರೆ ಕ್ಷಮಿಸು. ಈ ಮನೆಯಲ್ಲಿ ತನ್ನಿಂದ ಎಲ್ಲರಿಗೂ ನೋವಾಗಿದೆ. ಆ ನೋವನ್ನು ತಾನೇ ಮರೆಸುವಂತಾಗಲಿ. ನನಗೆ ತಾಳ್ಮೆ ಮತ್ತು ಶಕ್ತಿಯನ್ನು ಕೊಡು ದೇವರೇ ಎಂದು ಕೇಳಿಕೊಂಡಿದ್ದಾಳೆ. ಬಳಿಕ ಮಾಧವ್ ಪತ್ನಿಯ ಫೋಟೋ ನೋಡಿ ಕೈ ಮುಗಿದಿದ್ದಾಳೆ. ನಿನ್ನ ಸ್ಥಾನ ತುಂಬಲು ಯತ್ನಿಸುತ್ತೇನೆ ಎನ್ನುತ್ತಾಳೆ. ಆಗ ಅವಿ ಬಂದು ಅದರ ಅವಶ್ಯಕತೆ ಇಲ್ಲ ಎಂದು ಕೋಪದಲ್ಲಿ ಹೇಳುತ್ತಾನೆ.
ಕೋಪದಲ್ಲಿರುವ ಶಾರ್ವರಿ
ಇನ್ನು ಶಾರ್ವರಿಗಂತೂ ಕರೆಂಟ್ ಹೊಡೆದಂತೆ ಆಗಿದೆ. ತಾನು ಅಂದುಕೊಂಡಿದ್ದೇ ಒಂದು. ಇಲ್ಲಿ ನಡೆದಿದ್ದೇ ಒಂದು ಎಂದು ಗಾಬರಿಯಾಗಿದ್ದಾಳೆ. ಈಗ ಏನು ಮಾಡಬೇಕು ಎಂಬುದು ಗೊತ್ತಾಗದೇ, ದಿಗ್ಬ್ರಾಂತಳಾಗಿ ಕುಳಿತುಕೊಂಡಿದ್ದಾಳೆ. ಮಹೇಶ್ ಸ್ವಾದೀನ ಕಳೆದುಕೊಂಡು ಕೂತಿದ್ದರೆ, ಅವನ ಎದುರಿಗೆ ಪರಿಸ್ಥಿತಿ ಅನ್ನು ಎದುರಿಸಲಾಗದೇ ಶಾರ್ವರಿ ಚಿಂತಿಸುತ್ತಾ ಕೂತಿದ್ದಾಳೆ. ನಿಧಿ ಬಂದು ಶಾರ್ವರಿ ಅನ್ನು ರೇಗಿಸುತ್ತಾ ಮಾತನಾಡಿಸಿದರೂ ಕೇಳುವುದಿಲ್ಲ. ಕೋಪದಲ್ಲಿ ನೀರಿನ ಲೋಟವನ್ನು ಬಿಸಾಡುತ್ತಾಳೆ. ಈಗ ತುಳಸಿ ವಿಚಾರದಲ್ಲಿ ಶಾರ್ವರಿ ಮುಂದೆ ಯಾವ ಹೆಜ್ಜೆಯನ್ನು ಇಡುತ್ತಾಳೋ ಕಾದು ನೋಡಬೇಕಿದೆ.


Click it and Unblock the Notifications











