Shrirasthu Shubhamasthu: ಮನೆಗೆ ಮತ್ತೆ ಬಂದ ಸಂಧ್ಯಾ: ಮನೆ ಬಿಟ್ಟು ಹೊರಟ ತುಳಸಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತನಿಗೆ ಭವಿಷ್ಯ ಕೇಳುವ ಹುಚ್ಚು. ಇಂದೂ ಕೂಡ ದತ್ತ ತಾತ ಟಿವಿ ಹಾಕಿಕೊಂಡು ಭವಿಷ್ಯವನ್ನು ಕೇಳುತ್ತಿರುತ್ತಾರೆ.
ಭವಿಷ್ಯದಲ್ಲಿ ವೃಶ್ಚಿಕ ರಾಶಿಯವರಿಗೆ ಇಂದು ಶನಿ ಮನೆಯಲ್ಲಿ ಕಾಲು ಮುರಿದುಕೊಂಡು ಕುಳಿತಿರುತ್ತಾನೆ ಎಚ್ಚರ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ದತ್ತ ತಾತನಿಗೆ ಶಾಕ್ ಆಗುತ್ತದೆ.
ಟಿವಿಯಲ್ಲಿ ಬಂದ ಭವಿಷ್ಯದ ವಿಚಾರವನ್ನು ದತ್ತ ತಾತ ಯೋಚಿಸುತ್ತಾ ಕುಳಿತಿರುತ್ತಾರೆ. ಸಿರಿ, ದತ್ತ ತಾತನನ್ನು ಮಾತನಾಡಿಸುತ್ತಾಳೆ. ದತ್ತ ತಾತ ತಮ್ಮ ಚಿಂತೆಯನ್ನು ಸಿರಿ ಬಳಿ ಹೇಳಿಕೊಳ್ಳುತ್ತಾರೆ.

ತುಳಸಿ ಬಟ್ಟೆ ಪ್ಯಾಕ್ ಮಾಡಿದ ಶಾರ್ವರಿ
ಇತ್ತ ಶಾರ್ವರಿ, ಅಭಿಯನ್ನು ಮುಂದಿಟ್ಟುಕೊಂಡು ತುಳಸಿಯ ಬಟ್ಟೆ ಬ್ಯಾಗ್‌ನಲ್ಲಿ ಪ್ಯಾಕ್ ಮಾಡುತ್ತಿರುತ್ತಾಳೆ. ನಿಧಿ ಬಂದು ಏನ್ ಮಾಡುತ್ತಿದ್ದೀಯಾ ಅಮ್ಮ? ನೀನೇ ತುಳಸಿಯನ್ನು ಹೊರಗೆ ಹಾಕಿದರೆ, ಎಲ್ಲರ ಮುಂದೆ ಹೇಗೆ ಎಂದು ನಿಧಿ ಕೇಳುತ್ತಾಳೆ. ಅದಕ್ಕೆ ಶಾರ್ವರಿ, ನನಗೆ ಯಾವಾಗ ಏನು ಮಾಡಬೇಕು ಎಂದು ತುಂಬಾ ಚೆನ್ನಾಗಿ ಗೊತ್ತಿದೆ. ನೀನು ಸುಮ್ಮನೆ ನಿಂತು ನೋಡು ಸಾಕು ಎಂದು ಬ್ಯಾಗ್ ಅನ್ನು ತೆಗೆದುಕೊಂಡು ಸೀದಾ ತುಳಸಿ ಬಳಿ ಹೋಗುತ್ತಾಳೆ.
ದೇವಸ್ಥಾನಕ್ಕೆ ತೆರಳಿದ ಮಾವ-ಸೊಸೆ
ಮಾಧವ್ ಜೊತೆಗೆ ಪೂರ್ಣಿಮಾ ಹೊರಗೆ ಹೊರಟಿರುತ್ತಾಳೆ. ದಾರಿ ಮಧ್ಯೆ ದೇವಸ್ಥಾನ ಸಿಕ್ಕಾಗ ಪೂರ್ಣಿಮಾ ಗಾಡಿ ನಿಲ್ಲಿಸಲು ಹೇಳಿ ಇಬ್ಬರೂ ದೇವಸ್ಥಾನಕ್ಕೆ ಹೋಗುತ್ತಾರೆ. ದೇವರ ಮುಂದೆ ಪೂರ್ಣಿಮಾ ಮಾವ ಖುಷಿಯಾಗಿರಲಿ ಎಂದು ಹಾಗೂ ಮಾಧವ್ ತುಳಸಿ ಬಗ್ಗೆ ಕೇಳಿಕೊಳ್ಳುತ್ತಾನೆ. ನಂತರ ಇಬ್ಬರೂ ಪ್ರಸಾದ ತಿನ್ನುತ್ತಾ ಮಾತನಾಡುತ್ತಾರೆ. ಪೂರ್ಣಿಮಾ ನಿಮ್ಮ ಜೊತೆ ನಾನು ಸದಾ ಇರುತ್ತೇನೆ. ನೀವು ಯಾವುದಕ್ಕೂ ಹೆದರಬೇಡಿ ಎಂದು ಧೈರ್ಯ ತುಂಬುತ್ತಾಳೆ.

ಮನೆಗೆ ತಿರುಗಿ ಬಂದ ಸಂಧ್ಯಾ
ಸಂಧ್ಯಾ, ಸಮರ್ಥ್ ಅನ್ನು ಆಸ್ಪತ್ರೆಗೆ ಕರೆಸಿಕೊಳ್ಳುತ್ತಾಳೆ. ಯಾಕೆ ಎಂದು ಸಮರ್ಥ್ ಕೇಳಿದ್ದಕ್ಕೆ ನಾನು ಪ್ರೆಗ್ನೆಂಟ್ ಮಗು ತೆಗೆಸಲು ಬಂದಿದ್ದೇನೆ. ನನ್ನ ಈ ಕಷ್ಟದ ಪರಿಸ್ಥಿತಿಯಲ್ಲಿ ಮಗುವನ್ನು ಹೆರಲು ಸಾಧ್ಯವಿಲ್ಲ ಎಂದು ತನ್ನ ಮನೆಯ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಾಳೆ. ಸಂಧ್ಯಾ ಹೇಳಿದ ಮಾತುಗಳನ್ನು ಕೇಳಿದ ಸಮರ್ಥ್ ಸೀದಾ ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಸಿರಿ ಬಾಗಿಲು ತೆಗೆದಾಗ ಸಂಧ್ಯಾಳನ್ನು ನೋಡಿದ ಸಿರಿ ಮತ್ತು ದತ್ತ ತಾತ ಶಾಕ್ ಆಗುತ್ತಾರೆ. ದತ್ತ ತಾತನಿಗೆ ಹೆಗಲೇರಿರುವ ಶನಿ ಸಂಧ್ಯಾನೇ ಇರಬಹುದು ಎಂದು ವೀಕ್ಷಕರು ಊಹಿಸಿದ್ದಾರೆ.
ಮನೆ ಬಿಟ್ಟು ಹೊರಟ ತುಳಸಿ
ಶಾರ್ವರಿ, ತುಳಸಿ ಬಳಿ ಬಂದು ಲಗೇಜ್ ಬ್ಯಾಗ್ ಇಟ್ಟು. ನೋಡಿ ನಿಮ್ಮ ಜೊತೆಗೆ ನಮ್ಮ ಮನೆಯಲ್ಲಿ ಯಾರೂ ಹೊಂದಿಕೊಳ್ಳಲು ಇಷ್ಟಪಡುತ್ತಿಲ್ಲ. ನೀವು ಮನೆಗೆ ಬಂದಾಗಿನಿಂದಲೂ ಎಲ್ಲರಿಗೂ ಕಷ್ಟಗಳೇ ಬರುತ್ತಿದೆ. ದಯವಿಟ್ಟು ನನ್ನ ಸಂಸಾರ ಉಳಿಸಿಕೊಳ್ಳಬೇಕು. ಈ ಮನೆಯನ್ನು ನಂದಾಗೋಕುಲದಂತೆ ಹಲವು ವರ್ಗಳಿಂದ ಕಾಪಾಡಿಕೊಂಡು ಬಂದಿದ್ದೀನಿ. ಈಗ ನೀವು ಬಂದಿದ್ದರಿಂದ ಮನೆ ಛಿದ್ರ ಛಿದ್ರವಾಗುತ್ತಿದೆ. ದಯವಿಟ್ಟು ಮನೆ ಬಿಟ್ಟು ಹೊರಟು ಬಿಡಿ. ನನಗೆ ಹೀಗೆ ಹೇಳುವುದಕ್ಕೆ ಮನಸ್ಸಿಲ್ಲ. ಆದರೆ, ಹೇಳದೇ ಬೇರೆ ದಾರಿಯೂ ಇಲ್ಲ ಎಂದು ಹೇಳುತ್ತಾಳೆ. ನಿಮ್ಮ ವಸ್ತುಗಳನ್ನೆಲ್ಲಾ ಈ ಬ್ಯಾಗ್ ನಲ್ಲಿ ಇಟ್ಟಿದ್ದೀನಿ. ಇನ್ನು ನೀವು ಹೊರಡಬಹುದು ಎಂದು ಹೇಳಿ ಬ್ಯಾಗ್ ಅನ್ನು ಮನೆಯಿಂದ ಹೊರಗೆ ಇಟ್ಟು ಬರುತ್ತಾಳೆ. ತುಳಸಿ ಆ ಬ್ಯಾಗ್ ಅನ್ನು ವಾಪಸ್ ತಂದು ಮನೆಯೊಳಗೆ ಇಟ್ಟು ನಾನು ಮನೆಗೆ ಬರುವಾಗ ಬರಿಗೈಯಲ್ಲಿ ಬಂದಿದ್ದೆ. ಈಗಲೂ ಹಾಗೆ ಹೋಗುತ್ತೇನೆ ಎಂದು ಹೊರಟು ಹೋಗುತ್ತಾಳೆ.


Click it and Unblock the Notifications











