Shrirasthu Shubhamasthu: ಕೊನೆಗೂ ತುಳಸಿ ಪರ ನಿಂತ ಅವಿನಾಶ್: ಒಂದಾಗುತ್ತಿದೆ ಮಾಧವ್ ಕುಟುಂಬ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ, ತುಳಸಿಗೆ ತಿರುಗಿ ಬಿದ್ದಿದ್ದು, ಹೆಜ್ಜೆ ಹೆಜ್ಜೆಗೂ ಅವಮಾನಿಸುತ್ತಿದ್ದಾನೆ. ಸಮರ್ಥ್ ಹಾಗೂ ಸಂಧ್ಯಾಳನ್ನು ಮುಂದಿಟ್ಟುಕೊಂಡು ನೋವು ಕೊಡುತ್ತಿದ್ದಾನೆ.

ಸಂಧ್ಯಾ ಬೇರೆ ದಡ್ಡಿಯಂತೆ ಹಣಕ್ಕೋಸ್ಕರ ತಾನು ನಿಧಿ ಎಂದು ಸುಳ್ಳು ಹೇಳಿಕೊಂಡು ಹೋಗಿ ಒಂದು ಲಕ್ಷ ಹಣ ಪೀಕಿದ್ದಾಳೆ. ಇದು ಅಭಿಗೆ ಇನ್ನಷ್ಟು ಕೋಪ ಬರುವಂತೆ ಮಾಡಿದೆ.

Shrirasthu Shubhamasthu serial 23rd November episode Written update

ಸಮರ್ಥ್ ಹಣವನ್ನು ಹೊಂದಿಸಿ ವಾಪಸ್ ತಂದುಕೊಟ್ಟಾಗ ಸುಮ್ಮನಿರದೇ ಅವನ ಹೆತ್ತ ಅಪ್ಪ-ಅಮ್ಮ ಸರಿಯಿಲ್ಲ ಎಂದು ಹಿಯಾಳಿಸಿ ಮಾತನಾಡುತ್ತಾನೆ. ತುಳಸಿ, ಸಮರ್ಥ್‌ಗೆ ಬೈದು ಕಳಿಸುತ್ತಾಳೆ.

ಅಭಿಗೆ ಗ್ರಹಚಾರ ಬಿಡಿಸಿದ ಮಾಧವ್

ಎಲ್ಲಾ ವಿಚಾರವೂ ಮಾಧವ್‌ಗೆ ತಿಳಿಯುತ್ತದೆ. ಅಭಿ, ತುಳಸಿಯನ್ನು ಆಫೀಸಿಗೆ ಕರೆಸಿಕೊಂಡು ನಿತ್ಯ ಅವಮಾನಿಸುತ್ತಿದ್ದ ಎಂಬುದನ್ನು ತಿಳಿದು ಕೋಪ ಮಾಡಿಕೊಳ್ಳುತ್ತಾನೆ. ಕೂಡಲೇ ಮನೆಯವರನ್ನೆಲ್ಲಾ ಕರೆದು, ಅಭಿ ಮೇಲೆ ಕೂಗಾಡುತ್ತಾನೆ. ಇಷ್ಟು ಕೆಟ್ಟ ಮನಸ್ಥಿತಿ ಇಟ್ಟುಕೊಂಡಿದ್ದೀಯಾ ಎಂದು ಹೊಡೆಯಲು ಕೂಡ ಮುಂದಾಗುತ್ತಾನೆ. ಆದರೆ ಅಭಿ ಬಾಯಿ ಜೋರು ಮಾಡುತ್ತಲೇ ಇರುತ್ತಾನೆ. ತುಳಸಿ ಆಸ್ತಿಯನ್ನು ನೋಡಿ, ಈ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. ನಾಚಿಕೆ ಮಾನ ಮರ್ಯಾದೆ ಇಲ್ಲ ಅಂತೆಲ್ಲಾ ಹೇಳುತ್ತಾನೆ. ಮಾಧವ್, ಅಭಿಗೆ ಹೊಡೆಯಲು ಎರಡು ಮೂರು ಸಲ ಕೈ ಎತ್ತುತ್ತಾನೆ.

ತುಳಸಿಯನ್ನು ನಂಬಿದ ಅವಿ

ಮನೆಯಲ್ಲಿ ಆಗುತ್ತಿರುವ ಗಲಾಟೆ ನೋಡಿಕೊಂಡು ನಿಲ್ಲುವ ಶಾರ್ವರಿ ನೋಡುತ್ತಾ ನಿಂತಿರುತ್ತಾಳೆ. ಅಪ್ಪ- ಮಗ ಜಗಳ ಮಾಡುತ್ತಿರುವುದಕ್ಕೆ ಒಳಗೊಳಗೆ ಖುಷಿ ಪಡುತ್ತಿರುತ್ತಾಳೆ. ಅಭಿ, ತುಳಸಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಅವಿ ಬೈಯುತ್ತಾನೆ. ಹಾಗೆಲ್ಲಾ ಮಾತನಾಡಬಾರದು ಎಂದು ಹೇಳುತ್ತಾನೆ. ಆಗ ಅಭಿ, ನೀನು ಅವಳನ್ನ ನಂಬುತ್ತೀಯಾ, ನೀನು ಕೂಡ ಅವಳ ಪಾರ್ಟಿನಾ ಎಂದು ಕೇಳುತ್ತಾನೆ. ಆಗ ಅವಿ ಹಿಂದೆ ಮುಂದೆ ಯೋಚಿಸದೇ ನಾನು ಅವರನ್ನು ನಂಬುತ್ತೇನೆ. ಅವರೂ ಕೆಲವೊಂದು ತಪ್ಪುಗಳನ್ನು ಮಾಡಿರಬಹುದು. ಆದರೆ ಅವರಿಂದ ಒಳ್ಳೆಯದೂ ಆಗಿದೆ. ಅವರ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳುತ್ತಾನೆ.

Shrirasthu Shubhamasthu serial 23rd November episode Written update

ಸಮರ್ಥ್‌ಗೆ ಬುದ್ಧಿ ಹೇಳಿದ ದತ್ತ ತಾತ

ಶಾರ್ವರಿ, ಅಭಿ ರೂಮಿಗೆ ಹೋಗಿ ಸಮಾಧಾನ ಮಾಡುತ್ತಾಳೆ. ನಿನಗೆ ನಾನಿದ್ದೀನಿ ಕಂದ ಎಂದು ಅಭಿ ಮಾತುಗಳು ಸರಿ ಇದ್ದವು ಎಂಬಂತೆ ನಡೆದುಕೊಳ್ಳುತ್ತಾಳೆ. ಇತ್ತ ತುಳಸಿ ಮಗ ಸಮರ್ಥ್‌ಗೆ ಬೈದು ಕಳಿಸಿದ್ದರಿಂದ ನೊಂದುಕೊಂಡು ಫೋನ್ ಮಾಡುತ್ತಾಳೆ. ಆದರೆ, ಸಮರ್ಥ್ ಫೋನ್ ರಿಸೀವ್ ಮಾಡಿ ಅಮ್ಮನಿಗೆ ಬೈದು ಫೋನ್ ಇಡುತ್ತಾನೆ. ಅಮ್ಮನೇ ತನ್ನನ್ನು ದೂರಿದಳು ಎಂಬ ಬೇಸರ ಸಮರ್ಥ್‌ಗೆ ಇನ್ನು ದತ್ತ ತಾತ, ತುಳಸಿ ಮನೆಗೆ ಹೋಗುತ್ತಿರುವುದಾಗಿ ಹೇಳಿದಾಗ, ಸಮರ್ಥ್ ತನ್ನ ಸಮಸ್ಯೆ ಬಗ್ಗೆ ಯೋಚನೆ ಇಲ್ವಾ ಎಂದು ಕೇಳುತ್ತಾನೆ. ಅದಕ್ಕೆ ದತ್ತ ತಾತ ಬೈದು ಬುದ್ಧಿ ಹೇಳುತ್ತಾರೆ. ನಾಳೆ ನಿಮ್ಮ ಅಮ್ಮ ಹಾಗೂ ಅಪ್ಪ ಬರುತ್ತಾರೆ, ಆಗ ಎದುರಿಗೆ ಕುಳಿತುಕೊಂಡು ಸಮಸ್ಯೆ ಅನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿ ತುಳಸಿ ಮನೆಗೆ ಹೊರಡುತ್ತಾರೆ.

ತಿಂಡಿ ತಂದು ಕೊಟ್ಟ ಅವಿನಾಶ್

ಇತ್ತ ತುಳಸಿ ನಡೆದ ಘಟನೆಗಳನ್ನು ನೆನೆಯುತ್ತಾ ಬೇಸರ ಮಾಡಿಕೊಂಡಿರುತ್ತಾಳೆ. ಅದೇ ಯೋಚನೆಯಲ್ಲಿರುವಾಗ ಪೂರ್ಣಿ ಬಂದು ತಿಂಡಿ ತಿನ್ನಲು ಬಲವಂತ ಮಾಡುತ್ತಾಳೆ. ಅಷ್ಟರಲ್ಲಿ ಅವಿ, ಪೂರ್ಣಿ ಹಾಗೂ ತುಳಸಿಗೆ ತಿಂಡಿಯನ್ನು ರೂಮಿಗೆ ತಂದುಕೊಡುತ್ತಾನೆ. ಅವಿಯೇ ತಿಂಡಿ ತಂದಿದ್ದು ನೋಡಿ ತುಳಸಿಗೆ ಖುಷಿಯಾಗುತ್ತದೆ. ಅವಿ ನಿಧಾನವಾಗಿ ತುಳಸಿಯನ್ನು ಒಪ್ಪಿಕೊಳ್ಳುತ್ತಿರುವುದಕ್ಕೆ ಪೂರ್ಣಿಮಾ ಕೂಡ ಸಂತಸ ಪಡುತ್ತಾಳೆ.

More from Filmibeat

English summary
Shrirasthu Shubhamasthu kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X