Shrirasthu Shubhamasthu: ಸಮರ್ಥ್ ಮಾತಿಗೆ ತಲೆಕೊಡದಂತೆ ಸಮಾಧಾನ ಮಾಡಿದ ದತ್ತ ತಾತ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಗ ಸಮರ್ಥ್ ಅಮ್ಮನಿಗೆ ನೀನು ನನ್ನ ಪಾಲಿಗಿಲ್ಲ. ನಾನು ಅನಾಥ ಎಂದು ಹೇಳಿದ್ದು ಬಹಳ ನೋವುಂಟು ಮಾಡಿರುತ್ತದೆ. ತುಳಸಿಗೆ ಸಮಾಧಾನ ಹೇಳಿದ ಮಾಧವ್ ಈಗಲೇ ಮನೆಗೆ ಹೋಗೋಣ ಎಂದು ಕರೆದುಕೊಂಡು ಹೊರಟಿದ್ದಾನೆ. ಮಾಧವ್ ಮತ್ತು ತುಳಸಿ ಮನೆಯಿಂದ ಹೊರಗಡೆ ಹೊರಟಿದ್ದನ್ನು ನಿಧಿ ಗಮನಿಸಿದ್ದಾಳೆ.
ಕೋಪದಲ್ಲಿ ಸಂಧ್ಯಾಳನ್ನು ಮನೆಗೆ ಕರೆದುಕೊಂಡು ಬಂದ ಸಮರ್ಥ್, ಇನ್ಮುಂದೆ ಯಾವುದೇ ಕಾರಣಕ್ಕೂ ಅವರ ಮನೆಗೆ ಹೋಗಬಾರದು ತಮಗೂ ಆ ಮನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಮನೆಯಲ್ಲಿ ದತ್ತ ತಾತನಿಗೆ ಸಮರ್ಥ್ ಗೊರಕೆ ಶಬ್ದ ಡಿಸ್ಟರ್ಬ್ ಮಾಡುತ್ತಿರುತ್ತದೆ. ಹೀಗಾಗಿ ಎದ್ದು ಓಡಾಡುತ್ತಿರುತ್ತಾರೆ. ಇದೇ ವೇಳೆಗೆ ಮನೆಯ ಕಾಲಿಂಗ್ ಬೆಲ್ ಶಬ್ಧವಾಗುತ್ತದೆ.

ಬಾಗಿಲು ತೆಗೆದು ನೋಡಿದರೆ, ತುಳಸಿ ಮತ್ತು ಮಾಧವ್ ಬಂದಿರುತ್ತಾರೆ. ಈ ಹೊತ್ತಿನಲ್ಲಿ ನೀವಿಬ್ಬರೂ ಬಂದಿದ್ಯಾಕೆ. ಏನಾದರೂ ಸಮಸ್ಯೆ ಆಗಿದೆಯಾ ಎಂದು ವಿಚಾರಿಸುತ್ತಾರೆ. ತುಳಸಿ ನಾನು ಪಾಪುನ ನೋಡಬೇಕು ಎಂದು ಕಣ್ಣಿರು ಹಾಕುತ್ತಾ ಒಳಗೆ ಹೋಗುತ್ತಾಳೆ.
ತುಳಸಿ ಕಣ್ಣೀರು
ಮಾಧವ್ ಮನೆಯಲ್ಲಿ ನಡೆದ ಘಟನೆಗಳನ್ನೆಲ್ಲಾ ದತ್ತ ತಾತನಿಗೆ ಹೇಳಿ ಅರ್ಥ ಮಾಡಿಸುತ್ತಾನೆ. ಸಮರ್ಥ್ ಹೀಗೆಲ್ಲಾ ಮಾಡಿದನೇ ಎಂದು ದತ್ತ ತಾತ ಕೂಡ ಬೇಸರ ಮಾಡಿಕೊಳ್ಳುತ್ತಾನೆ. ಕೊನೆಗೆ ಒಳಗೆ ಹೋಗುತ್ತಾರೆ. ತುಳಸಿ, ಸಮರ್ಥ್ ಬಳಿ ಕೂತಿರುತ್ತಾಳೆ. ಸಮರ್ಥ್ ನಿದ್ದೆಗಣ್ಣಿನಲ್ಲಿ ತನಗೆ ಗೊತ್ತಿಲ್ಲದೆಯೇ ತುಳಸಿ ತೊಡೆ ಮೇಲೆ ತಲೆ ಇಡುತ್ತಾನೆ. ಇದರಿಂದ ತುಳಸಿಗೂ ಖುಷಿಯಾಗುತ್ತದೆ. ಸಮರ್ಥ್ ನಿದ್ದೆಗಣ್ಣಿನಲ್ಲಿ ಮಾತನಾಡುತ್ತಾನೆ.
ತುಳಸಿ-ಮಾಧವ್ ಇಲ್ಲವೆಂದು ಶಾರ್ವರಿ ಗಾಬರಿ
ಇತ್ತ ಮಧ್ಯರಾತ್ರಿಯಲ್ಲಿ ನಿಧಿ, ಶಾರ್ವರಿ ರೂಮ್ ಬಾಗಿಲನ್ನು ತಟ್ಟುತ್ತಾಳೆ. ಶಾರ್ವರಿ ಯಾರಿಗೇನಾಯ್ತು ಎಂದು ಗಾಬರಿಯಲ್ಲಿ ಬಾಗಿಲು ತೆಗೆದರೆ, ನಿಧಿ ಮಾಧವ್ ಮತ್ತು ತುಳಸಿ ಹೊರಗಡೆ ಲಾಂಗ್ ರೈಡ್ ಹೋಗಿದ್ದಾರೆ. ಅದರಲ್ಲೂ ಮಾಧವ್ ದೊಡ್ಡಪ್ಪ ಮೊದಲು ನಿಮ್ಮನ್ನ ಕೇಳಿ ಹೋಗುತ್ತಿದ್ದರು. ಆದರೆ, ಈಗ ನಮ್ಮ ಬಳಿ ಯಾವ ವಿಚಾರ ಹೇಳುವುದಿಲ್ಲ. ಇನ್ನೇನಿದ್ದರೂ ತುಳಸಿ ಅಮ್ಮನೇ ಎಲ್ಲವೂ ಎಂದು ಹೇಳುತ್ತಾಳೆ. ಈ ಮಾತು ಕೇಳಿದ ಶಾರ್ವರಿ ಇನ್ನಷ್ಟು ಗಾಬರಿಯಾಗುತ್ತದೆ. ಈ ಹೊತ್ತಿನಲ್ಲಿ ಭಾವ ಎಲ್ಲಿಗೆ ಹೋದರು ಎಂದು ತಿಳಿಯಲು ಮುಂದಾಗುತ್ತಾಳೆ.

ಹೆಂಡತಿ ಜೊತೆಗೆ ಅಭಿ ರೊಮ್ಯಾನ್ಸ್
ಮನೆಯಲ್ಲಿ ತುಳಸಿ ವಿಚಾರಕ್ಕೆ ಗಲಾಟೆಗಳು ನಡೆಯುತ್ತಿರುವುದರ ಬಗ್ಗೆ ಪೂರ್ಣಿ ಯೋಚಿಸುತ್ತಿರುತ್ತಾಳೆ. ಆದರೆ, ಅಭಿ ರೊಮ್ಯಾಂಟಿಕ್ ಮೂಡಿನಲ್ಲಿದ್ದು, ಪೂರ್ಣಿಮಾಳಿಗೋಸ್ಕರ ಟೆರೆಸ್ ಮೇಲೆ ಡಿನ್ನರ್‌ಗೆ ಅರೇಂಜ್ ಮಾಡಿರುತ್ತಾರೆ. ಪೂರ್ಣಿಮಾ ಯಾವಾಗಲೂ ಖುಷಿಯಾಗಿರಬೇಕು ಎಂದು ಬಯಸುವ ಅಭಿ, ಅವಳನ್ನು ಸರ್ಪ್ರೈಸ್ ಆಗಿ ಕರೆದುಕೊಂಡು ಹೋಗುತ್ತಾನೆ. ಅರೇಂಜ್‌ಮೆಂಟ್ಸ್ ನೋಡಿ ಪೂರ್ಣಿಮಾಳಿಗೆ ಫುಲ್ ಖುಷಿಯಾಗಿರುತ್ತದೆ.
ಸಮರ್ಥ್ ಮಾತಿಗೆ ಎಲ್ಲರೂ ಶಾಕ್
ನಿದ್ದೆಗಣ್ಣಿನಲ್ಲಿ ಮಾತನಾಡಿದ ಸಮರ್ಥ್, ನನ್ನಮ್ಮ ನನಗೆ ಮಾತ್ರ ಅಮ್ಮ. ಅವಳು ಮಾಧವ್ ಹೆಂಡತಿ ಆಗುವಂತಿಲ್ಲ. ಅವಳು ನನಗೆ ಮಾತ್ರ ಅಮ್ಮ ಆಗಿರಬೇಕು ಎಂದು ಮಾತನಾಡುತ್ತಾನೆ. ಈ ಮಾತು ಕೇಳಿದ ಎಲ್ಲರಿಗೂ ಶಾಕ್ ಆಗುತ್ತದೆ. ದತ್ತ ತಾತ ಮಾಧವ್ ಅನ್ನು ಸಪರೇಟ್ ಆಗಿ ಕರೆದುಕೊಂಡು ಹೋಗುತ್ತಾನೆ.
ಮಾಧವ್‌ಗೆ ಸಮಾಧಾನ ಮಾಡಿದ ತಾತ
ಸಮರ್ಥ್ ಹಾಗೆಲ್ಲಾ ಮಾತನಾಡಿದ್ದಕ್ಕೆ ಬೇಸರ ಮಾಡಿಕೊಳ್ಳಬೇಡ. ನನಗೂ ತುಳಸಿ ಇಲ್ಲದೇ ಮನೆಯಲ್ಲಿ ಕಷ್ಟವಾಗುತ್ತದೆ. ಆದರೆ, ನಾನು ಅವಳಿಗೆ ಈ ಮದುವೆ ಮಾಡಿಸಿದ್ದು ಯಾಕೆ ಎಂದರೆ, ತುಳಸಿಯ ಭವಿಷ್ಯ ಚೆನ್ನಾಗಿರಲಿ ಎಂದು. ಪ್ರೀತಿ ಎಂದರೆ, ಸ್ವಾರ್ಥ ಅಲ್ಲ. ನೀನು ಬೇಸರ ಮಾಡಿಕೊಳ್ಳಬೇಡ. ಎಲ್ಲವೂ ಸರಿ ಹೋಗುತ್ತದೆ ಎಂದು ಸಮಾಧಾನ ಮಾಡುತ್ತಾರೆ.


Click it and Unblock the Notifications











