Shrirasthu Shubhamasthu: ಅಭಿ ಬಳಿ ಬೇಕಂತಲೇ ಚಾಡಿ ಮಾತು ಹೇಳಿದ ಶಾರ್ವರಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್, ತುಳಸಿಯ ತೊಡೆಯ ಮೇಲೆ ತಲೆಯಿಟ್ಟು ಆರಾಮಾಗಿ ನಿದ್ದೆ ಮಾಡುತ್ತಿದ್ದಾನೆ. ಮಗ ಮಲಗಿರುವುದಕ್ಕೆ ತುಳಸಿಗೂ ಖುಷಿ ಇದೆ. ಮಾಧವ್ ಹಾಗೂ ದತ್ತ ತಾತ ಕೂಡ ತುಳಸಿಗೆ ಸಮಾಧಾನವಾಗುವವರೆಗೂ ಇರಲಿ ಎಂದು ಡಿಸ್ಟರ್ಬ್ ಮಾಡದಂತೆ ಕಾಯುತ್ತಾ ಮಾತನಾಡಿಕೊಂಡು ಕುಳಿತಿರುತ್ತಾರೆ.
ಸಂಧ್ಯಾ ಮಧ್ಯರಾತ್ರಿಯಲ್ಲಿ ಎಚ್ಚರವಾಗಿ ಎದ್ದು ಬರುತ್ತಾಳೆ. ಆಗ ತುಳಸಿ ಬಂದಿರುವುದನ್ನು ನೋಡಿ ಶಾಕ್ ಆಗುತ್ತಾಳೆ. ಮಗನಿಗೋಸ್ಕರ ರಾತ್ರಿಯಲ್ಲಿ ಬಂದಿದ್ದೀಯಾ? ಎಂದು ಪ್ರಶ್ನೆ ಮಾಡುತ್ತಾಳೆ. ನಿನಗೆ ಮಗನ ಮೇಲಿರುವ ಪ್ರೀತಿ ನನ್ನ ಮೇಲೆ ಸ್ವಲ್ಪವೂ ಇಲ್ಲ. ನಿನ್ನ ಮಗ ಕೋಪ ಮಾಡಿಕೊಂಡಿದ್ದಕ್ಕೆ ಈ ಹೊತ್ತಲ್ಲಿ ಇಲ್ಲಿಗೆ ಬಂದಿದ್ದೀಯಾ. ನಾನು ನಿಮ್ಮ ಮನೆಯಲ್ಲಿ ಸ್ವಲ್ಪ ದಿನ ಇರುತ್ತೀನಿ ಎಂದು ಕೇಳಿಕೊಂಡರೂ ಕೂಡ ಒಪ್ಪಲಿಲ್ಲ ಎಂದು ಗೋಳಾಡುತ್ತಾಳೆ.

ಸಂಧ್ಯಾಳಿಗೆ ಮಾಧವ್ ಸಮಾಧಾನ ಮಾಡುತ್ತಾರೆ. ನಿನ್ನ ಮೇಲೂ ಅಮ್ಮನಿಗೆ ಅಷ್ಟೇ ಪ್ರೀತಿ ಇರುತ್ತೆ. ಅದು ನಿಮಗೆ ತಿಳಿಯುವುದಿಲ್ಲ ಅಷ್ಟೇ ಎಂದು ಸಂಧ್ಯಾಗೆ ಹೇಳುತ್ತಾನೆ. ಇದೇ ಸಂದರ್ಭವನ್ನು ಬಳಸಿಕೊಂಡ ಸಂಧ್ಯಾ ನಾನು ಇವತ್ತು ಚೆಕಪ್‌ಗೆ ಹೋಗಬೇಕಿತ್ತು ಅಮ್ಮ ನನ್ನನ್ನು ಕರೆದುಕೊಂಡು ಹೋಗಲಿಲ್ಲ ಎಂದು ಸುಳ್ಳು ಹೇಳುತ್ತಾಳೆ
ಮಾಧವ್ ಬಳಿ ಹಣ ಪಡೆದ ಸಂಧ್ಯಾ
ತಾನು ಚೆಕಪ್‌ಗೆ ಹೋಗಲು ತನ್ನ ಬಳಿ ಹಣವಿಲ್ಲ ಎಂದು ಸಂಧ್ಯಾ ನೆಪ ಹೇಳುತ್ತಾಳೆ. ತುಳಸಿ ಹಾಗೂ ದತ್ತ ತಾತ ದುಡ್ಡಿನ ವಿಚಾರವಾಗಿ ಬೈಯಲು ಬಂದಾಗ ಮಾಧವ್ ಅವರನ್ನು ತೆಡೆದು ತನ್ನ ಬಳಿ ಇದ್ದ ಹಣವನ್ನು ಕೊಡುತ್ತಾನೆ.
ಅಭಿಗೆ ಅವಿ ಮೇಲೆ ಚಾಡಿ ಹೇಳಿದ ಶಾರ್ವರಿ
ಇತ್ತ ಶಾರ್ವರ ಸರಿ ರಾತ್ರಿಯಲ್ಲಿ ಬೇಕಂತಲೇ ಅಭಿ ರೂಮಿಗೆ ಹೋಗುತ್ತಾಳೆ. ಅಭಿ ಯೋಚಿಸುತ್ತಾ ನಿದ್ದೆ ಮಾಡದೇ ಕೂತಿರುತ್ತಾನೆ. ಶಾರ್ವರಿ ಮಾತನಾಡಿಸುತ್ತಾಳೆ. ನನಗೆ ಯಾಕೋ ನಿದ್ದೆಯೇ ಬರಲಿಲ್ಲ. ನಿನ್ನನ್ನು ನೋಡಬೇಕು ಎಂದು ಅನಿಸಿತು, ಅದಕ್ಕೆ ಬಂದೆ ಎಂದು ಕಣ್ಣೀರು ಹಾಕುವಂತೆ ಮಾತನಾಡುತ್ತಾಳೆ. ಅಭಿ, ಶಾರ್ವರಿ ಮಾತನಾಡುತ್ತಿರುವುದರಲ್ಲಿ ಸುಳ್ಳಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಆಗ ಅಭಿ ನನಗೆ ಅವಿ ಅಣ್ಣ ಸ್ವಲ್ಪವೂ ಸಪೋರ್ಟ್ ಮಾಡಲಿಲ್ಲ. ಅದಕ್ಕೆ ಬೇಸರವಾಯ್ತು ಹಾಗಾಗಿ ನಿದ್ದೆ ಬರಲಿಲ್ಲ ಎಂದು ಹೇಳುತ್ತಾನೆ. ಆಗ ಶಾರ್ವರಿ ಬೇಕಂತಲೇ ಅವಿ ಸ್ವಲ್ಪ ಹಾಗೆಯೇ ಎಲ್ಲವನ್ನೂ ತೂಗಿ ಅಳೆದು ಮಾತನಾಡುತ್ತಾನೆ. ಅವರ ಅಪ್ಪನಂತೆಯೇ ಎಂದು ಹೇಳುತ್ತಾಳೆ. ಶಾರ್ವರಿ ಮಾತನ್ನು ಅಭಿ ನಂಬುತ್ತಾನೆ.

ಮತ್ತೆ ಅಮ್ಮನಿಗೆ ನೋವು ಮಾಡಿದ ಸಮರ್ಥ್
ಸಂಧ್ಯಾ ಹಣ ಪಡೆಯುತ್ತಿದ್ದಂತೆಯೇ ಎದ್ದು ಬರುವ ಸಮರ್ಥ್ ಹಣ ಕಿತ್ತುಕೊಂಡು ಮಾಧವ್‌ಗೆ ವಾಪಸ್ ಕೊಡುತ್ತಾನೆ. ನಿಮ್ಮ ಶ್ರೀಮಂತಿಕೆಯಿಂದ ನಮ್ಮನ್ನು ತೂಗುವುದು ಬೇಡ. ಎಷ್ಟೇ ಕಷ್ಟವಿದ್ದರೂ ನನ್ನ ತಂಗಿಯನ್ನು ನಾನು ನೋಡಿಕೊಳ್ಳುತ್ತೇನೆ. ಯಾರೂ ಅದಕ್ಕಾಗಿ ಹಣ ಕೊಡುವ ಅಗತ್ಯವಿಲ್ಲ ಎಂದು ಹೇಳುತ್ತಾನೆ. ಅಷ್ಟೇ ಅಲ್ಲದೇ, ನನಗೆ ಯಾರ ಸಹಾಯವೂ ಬೇಡ. ನೀವು ಮನೆಗೆ ಬರಬೇಡಿ ಅನ್ನೋದಿಲ್ಲ. ಆದರೆ, ನಮ್ಮ ನೆಮ್ಮದಿಯನ್ನು ಹಾಳು ಮಾಡಬೇಡಿ. ನಮಗೂ ನಿಮಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾನೆ.
ತುಳಸಿಯನ್ನು ವಹಿಸಿಕೊಂಡ ಮಾಧವ್
ಮತ್ತೆ ಅಮ್ಮನಿಂದ ದೂರಾಗುವ ಮಾತನ್ನು ಕೇಳಿದ ತುಳಸಿಗೆ ಇನ್ನಷ್ಟು ನೋವಾಗುತ್ತದೆ. ಆಗ ಮಾಧವ್, ತುಳಸಿ ಪರ ನಿಂತು ಮಾತನಾಡುತ್ತಾನೆ. ನೀನು ನಿದ್ದೆಗಣ್ಣಿನಲ್ಲಿ ಅಮ್ಮ ಅಮ್ಮ ಎಂದು ಕನವರಿಸುತ್ತಿದ್ದೆ. ಈಗ ಯಾವುದೋ ಸಿಟ್ಟಿಗೆ ಹೀಗೆ ಹೇಳುತ್ತಿದ್ದೀಯಾ ಅಷ್ಟೇ. ಅವರು ನಿನಗೋಸ್ಕರ ಅಲ್ಲಿಂದ ಬಂದಿದ್ದಾರೆ ಎಂದು ಹೇಳುತ್ತಾನೆ. ಆದರೆ, ಸಮರ್ಥ್ ಯಾರ ಮಾತನ್ನೂ ಕೇಳುವುದಿಲ್ಲ.


Click it and Unblock the Notifications











