Shrirasthu Shubhamasthu: ತವರು ಮನೆಗೆ ಬಂದ ತುಳಸಿ: ಉಲ್ಟಾ ಹೊಡೆದ ಶಾರ್ವರಿ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಹಾಗೂ ಮಾಧವ್ ಅನ್ನು ಬೇರೆ ಮಾಡಬೇಕು ಎಂದು ಪ್ರಯತ್ನ ಪಡುತ್ತಿರುವ ಶಾರ್ವರಿ ಈಗ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಯತ್ನ ಮಾಡಿದ್ದಾಳೆ.

ಅಭಿ ಬಳಿ ತುಳಸಿ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಮಾಡಿದ್ದು, ತಾನೇ ಸ್ವತಃ ತುಳಸಿಯನ್ನು ಮನೆಯಿಂದ ಹೊರಗೆ ಕಳಿಸಿದ್ದಾಳೆ. ಈ ಮೂಲಕ ಅವಿ ಹಾಗೂ ಅಭಿ ಬಳಿ ಒಳ್ಳೆಯವಳು ಎನಿಸಿಕೊಂಡಿದ್ದಾಳೆ.

Shrirasthu Shubhamasthu serial 25th September episode written update

ಇತ್ತ ಸಂಧ್ಯಾ ತಾನು ಗರ್ಭಿಣಿ ಎಂದು ಹೇಳಿ ಅಣ್ಣ ಸಮರ್ಥ್ ಬಳಿ ತನ್ನ ಕಷ್ಟಗಳನ್ನು ಹೇಳಿಕೊಂಡು ಮತ್ತೆ ತವರು ಮನೆಯಲ್ಲಿ ಜಾಗ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದಾಳೆ.

ಸಂಧ್ಯಾಳನ್ನು ವಹಿಸಿಕೊಂಡು ಮಾತನಾಡಿದ ಸಮರ್ಥ್

ದತ್ತ ತಾತ ಹಾಗೂ ಸಿರಿಗೆ ಸಂಧ್ಯಾಳನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಸಮರ್ಥ್ ಮೇಲೆ ಕೋಪ ಬಂದಿದೆ. ಸಂಧ್ಯಾಳನ್ನು ದತ್ತ ತಾತ ಬೈಯುತ್ತಾನೆ. ಕಣ್ಣೀರು ಹಾಕಿ ಮನೆಯಲ್ಲಿ ಜಾಗ ಪಡೆದುಕೊಂಡು ಮಾಡಿದ ಅವಾಂತರಗಳು ಒಂದಾ ಎರಡಾ ಎನ್ನುತ್ತಾನೆ. ಸಿರಿ ಕೂಡ ಸಮರ್ಥ್ ಬಳಿ ಮನೆಗೆ ಅನ್ಯಾಯ ಮಾಡಿ ಹಣ ತೆಗೆದುಕೊಂಡು ಹೋದವಳನ್ನು ಮತ್ತೆ ಮನೆಗೆ ಕರೆದುಕೊಂಡು ಬಂದಿರುವುದು ಸರಿಯಲ್ಲ. ಮೊದಲು ಅವರ ಮನೆಗೆ ಬಿಟ್ಟು ಬಾ ಎಂದು ಹೇಳುತ್ತಾಳೆ.

ಕೊನೆಗೂ ಒಪ್ಪಿದ ಸಿರಿ, ದತ್ತ ತಾತ

ಸಮರ್ಥ್ ಮಾತನಾಡಿ, ಸ್ವಲ್ಪ ದಿನದಲ್ಲೇ ಸಂಧ್ಯಾ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಅವಳು ಈಗ ಗರ್ಭಿಣಿ. ನನಗೂ ಅವಳ ಮೇಲೆ ಕೋಪವಿತ್ತು. ಆದರೆ, ಅವಳು ಗರ್ಭಿಣಿ ಎಂಬ ವಿಚಾರ ತಿಳಿದಾಗಿನಿಂದಲೂ ನನಗೆ ಅವಳ ಮೇಲಿನ ಕೋಪ ಕಡಿಮೆಯಾಯ್ತು ಎಂದು ಹೇಳುತ್ತಾನೆ. ಆಗ ದತ್ತ ತಾತ ಹಾಗೂ ಸಿರಿ ಕೂಡ ಏನೂ ಮಾತನಾಡದೇ ಸಂಧ್ಯಾಳನ್ನು ಮನೆಯಲ್ಲಿ ಇರಲು ಒಪ್ಪಿಕೊಳ್ಳುತ್ತಾರೆ.

Shrirasthu Shubhamasthu serial 25th September episode written update

ತುಳಸಿಯನ್ನು ಕಂಡು ಖುಷಿ ಪಟ್ಟ ದತ್ತ ತಾತ

ಇನ್ನು ಸಂಧ್ಯಾ ಮನೆಯಲ್ಲೇ ಉಳಿದಿರುವುದಕ್ಕೆ ದತ್ತ ತಾತ ಹಣ ಜೋಪಾನ ಮಾಡುತ್ತಿರುತ್ತಾರೆ. ಸಂಧ್ಯಾ ಕದ್ದರೇ ಕಷ್ಟ ಎಂದು, ಹಣವನ್ನು ಎಣಿಸಿ ಎಣಿಸಿ ಎತ್ತಿಡುತ್ತಿರುತ್ತಾರೆ. ಶೇಷು ಭೇಟಿ ಮಾಡಿಕೊಂಡು ಬರೋಣ ಮನೆಯಲ್ಲಿ ಬೋರ್ ಎಂದು ಹೇಳಿ ಹೊರಗೆ ಹೊರಟಿರುತ್ತಾರೆ. ಇದೇ ಸಮಯಕ್ಕೆ ತುಳಸಿ ಕೂಡ ಮನೆ ಬಾಗಿಲಿಗೆ ಬಂದು ಹೇಗೆ ಒಳಗೆ ಹೋಗುವುದು ಎಂದು ಯೋಚಿಸುತ್ತಿರುತ್ತಾಳೆ. ಅದೇ ವೇಳೆಗೆ ಬರುವ ದತ್ತ ತಾತ ತುಳಸಿಯನ್ನು ಕಂಡು ಖುಷಿ ಪಡುತ್ತಾರೆ. ಮನೆಯೊಳಗೆ ಕರೆದುಕೊಂಡು ಹೋಗುತ್ತಾರೆ. ಸುಮ್ಮನೆ ಬಂದಿರಬೇಕು ಎಂದು ಅವರೆಲ್ಲಾ ತಿಳಿದುಕೊಳ್ಳುತ್ತಾರೆ. ಸಿರಿ ಕೂಡ ಅತ್ತೆಯನ್ನು ನೋಡಿ ಖುಷಿ ಪಡುತ್ತಾಳೆ. ಆದರೆ, ತ೬ಉಳಸಿ ಸಂಧ್ಯಾಳನ್ನು ನೋಡಿ ಶಾಕ್ ಆಗುತ್ತಾಳೆ.

ಮಾವನ ಮನಸ್ಸನ್ನು ತಿಳಿಗೊಳಿಸಿದ ಪೂರ್ಣಿ

ಪೂರ್ಣಿಮಾ ಮಾವನ ಮನಸ್ಸು ಹಗುರವಾಗಲಿ ಎಂದು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿರುತ್ತಾಳೆ. ದೇವಸ್ಥಾನ, ಹೋಟೆಲ್ ಎಂದೆಲ್ಲಾ ಸುತ್ತಾಡಿಸಿ, ಕೊನೆಗೆ ತಾನೇ ಸ್ಕೂಟರ್ ಅನ್ನು ಡ್ರೈವ್ ಮಾಡಿಕೊಂಡು ಮಾವನನ್ನು ಮನೆಗೆ ಕರೆದುಕೊಂಡು ಬರುತ್ತಾಳೆ. ಮಾಧವ ಮನಸ್ಸು ಕೂಡ ತಿಳಿಯಾಗಿರುತ್ತದೆ.

ತುಳಸಿ ಮೇಲೆ ಗೂಬೆ ಕೂರಿಸಿದ ಶಾರ್ವರಿ

ಮನೆಗೆ ಮಾಧವ್ ಖುಷಿಯಿಂದ ಬಂದಿರುತ್ತಾನೆ. ಆದರೆ, ಪಾಪಮ್ಮ ಅಳುತ್ತಿರುವುದನ್ನು ನೋಡಿ ಯಾಕೆ ಎಂದು ವಿಚಾರಿಸುತ್ತಾರೆ. ಆಗ ಶಾರ್ವರಿ ತಾನು ತಪ್ಪಿಗೆ ಸಿಕ್ಕಿ ಬೀಳಬಾರದು ಎಂದು ಹೇಳಿ. ನೀವಿಬ್ಬರೂ ಮನೆಯಿಂದ ಹೊರಟ ಮೇಲೆ ಅಭಿ, ತುಳಸಿ ಮೇಲೆ ಕೋಪ ಮಾಡಿಕೊಂಡ. ತನ್ನಿಂದ ಮನೆಯ ನೆಮ್ಮದಿ ಹಾಳಾಗಬಾರದು ಎಂದು ತುಳಸಿ ಮನೆ ಬಿಟ್ಟು ಹೋದರು ಎಂದು ಸುಳ್ಳು ಹೇಳುತ್ತಾಳೆ. ಈ ಮಾತನ್ನು ಕೇಳಿದ ಮಾಧವ್‌ಗೆ ಬಹಳ ಬೇಸರವಾಗುತ್ತದೆ.

More from Filmibeat

English summary
Shrirasthu Shubhamasthu kannada serial today Episode,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X