Shrirasthu Shubhamasthu: ಕಗ್ಗಂಟಾಗಿದ್ದ ಮಾಧವ್-ತುಳಸಿ ಯುದ್ಧ ಗೆದ್ದ ಖುಷಿಯಲ್ಲಿ ಶಾರ್ವರಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಹಾಗೂ ಮಾಧವ್ ಮದುವೆಯಿಂದ ಸೃಷ್ಟಿಯಾದ ಸಮಸ್ಯೆಯನ್ನು ಶಾರ್ವರಿ ಬಹಳ ಸುಲಭವಾಗಿ ಬಗೆಹರಿಸಿದ್ದಾಳೆ.
ತುಳಸಿ, ಶಾರ್ವರಿ ಮಾತಿಗೆ ಚಕಾರವೆತ್ತದೇ ಮನೆ ಬಿಟ್ಟು ಬಂದಿದ್ದಾಳೆ. ಅದೂ ಕೂಡ ಮಾಧವ್‌ಗೆ ಒಂದು ಮಾತನ್ನೂ ತಿಳಿಸದೆ, ಮನೆಯಿಂದ ಹೊರಟು ಬಂದಿದ್ದಾಳೆ. ಮಾಧವ್ ಮನೆಯಿಂದ ಹೊರಟ ತುಳಸಿ ಸೀದಾ ತನ್ನ ಮಾವನ ಮನೆಗೆ ವಾಪಸ್ ಬಂದಿದ್ದಾಳೆ. ಮನೆಯಲ್ಲಿ ಸಂಧ್ಯಾಳನ್ನು ನೋಡಿದ ತುಳಸಿಗೆ ಶಾಕ್ ಆಗಿದೆ.

ಸಿರಿ, ತುಳಸಿಗೆ ಸತ್ಯವನ್ನು ಹೇಳಿದ್ದಾಳೆ. ಸಂಧ್ಯಾ ಈಗ ಗರ್ಭಿಣಿ. ಅದಕ್ಕೆ ಸಮರ್ಥ್ ಇಲ್ಲೇ ಇರಲಿ ಎಂದು ಸಂಧ್ಯಾಳನ್ನು ಕರೆದುಕೊಂಡು ಬಂದಿದ್ದಾನೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಕೂಡಲೇ ತುಳಸಿಗೆ ಬಹಳ ಖುಷಿಯಾಗುತ್ತದೆ.
ಮಗಳು ಗರ್ಭಿಣಿ ಎಂಬ ವಿಷಯ ತಿಳಿದ ತುಳಸಿ
ತುಳಸಿ, ಸಂಧ್ಯಾಳನ್ನು ಅಪ್ಪಿಕೊಂಡು ಮಾತನಾಡಿಸುತ್ತಾಳೆ. ಹೇಗಿದ್ದೀಯಾ, ಆಸ್ಪತ್ರೆಗೆ ತೋರಿಸಿದ್ಯಾ ಎಂದೆಲ್ಲಾ ವಿಚಾರಿಸಿದಾಗ ಸಂಧ್ಯಾ ಭಾವುಕಳಾಗಿ ತಾಯಿ ತುಳಸಿಯನ್ನು ಅಪ್ಪಿಕೊಳ್ಳುತ್ತಾಳೆ. ಇದೇ ಸಮಯಕ್ಕೆ ಬರುವ ಸಮರ್ಥ್, ತುಳಸಿಯನ್ನು ನೋಡಿ ಏನೂ ಮಾತನಾಡದೇ, ಕೋಪ ಮಾಡಿಕೊಂಡು ಹೋಗುತ್ತಾನೆ. ಇನ್ನು ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುತ್ತಾರೆ. ದತ್ತ ತಾತನಿಗೆ ಸಂಧ್ಯಾ ಮೇಲೆ ಕೆಂಡದಷ್ಟು ಕೋಪವಿರುತ್ತದೆ. ಸಂಧ್ಯಾ ಮುಜುಗರದಲ್ಲಿ ಊಟ ಮಾಡುತ್ತಾಳೆ. ಆಗ ಸಮರ್ಥ್ ಕೂಡ ಬಂದು ಊಟ ಮಾಡುತ್ತಾನೆ. ಅಮ್ಮನ ಕೈ ರುಚಿ ಸವಿದು ಸಂತಸ ಪಡುತ್ತಾನೆ.

ಶಾರ್ವರಿಗೆ ಯುದ್ಧದಲ್ಲಿ ಗೆದ್ದ ಖುಷಿ
ಶಾರ್ವರಿ, ತುಳಸಿಯನ್ನೂ ತಾನೇ ಸ್ವತಃ ಮನೆಯಿಂದ ಹೊರಗೆ ಕಳಿಸಿದ್ದರೂ ಕೂಡ ಮಾಧವ್ ಬಳಿ ಸುಳ್ಳು ಹೇಳಿರುತ್ತಾಳೆ. ತುಳಸಿಯೇ ಮನೆ ಬಿಟ್ಟು ಹೋದಳು ಎಂದಿರುತ್ತಾಳೆ. ಶಾರ್ವರಿ ಮಾತನ್ನು ನಂಬಿದ ಮಾಧವ್ ಬೇಸರದಲ್ಲಿ ರೂಮಿಗೆ ಹೋಗುತ್ತಾನೆ. ಆದರೆ, ಶಾರ್ವರಿಗೆ ಇದು ತಾನು ಯುದ್ಧದಲ್ಲಿ ಗೆದ್ದಷ್ಟೇ ಸಂತಸವನ್ನು ತಂದುಕೊಡುತ್ತದೆ. ಈ ಬಗ್ಗೆ ಶಾರ್ವರಿ ಮಹೇಶ್ ಮುಂದೆ ಹೇಳಿಕೊಂಡು ಖುಷಿ ಪಡುತ್ತಿರುತ್ತಾಳೆ. ಅಭಿಯನ್ನೇ ಗಾಳವಾಗಿಟ್ಟುಕೊಂಡು ತುಳಸಿಯನ್ನು ಮನೆಯಿಂದ ಹೊರಗೆ ಹಾಕಿದೆ. ಯುದ್ಧವನ್ನು ನಾನೇ ಗೆದ್ದೆ. ಮಾಧವ್ ಭಾವನಿಗೆ ತನ್ನ ಮೇಲೆ ಅನುಮಾನ ಬರುವುದೂ ಇಲ್ಲ. ತುಳಸಿ ಮತ್ತೆ ಈ ಮನೆಗೆ ಮರಳುವುದೂ ಇಲ್ಲ ಎಂದು ಹೇಳುತ್ತಿರುತ್ತಾಳೆ. ಈ ಮಾತನ್ನು ಕೇಳಿದ ಮಹೇಶ್‌ಗೆ ಕೋಪ ಬರುತ್ತದೆ.
ಬೇಸರದಲ್ಲಿ ದಿನ ಕಳೆದ ಮಾಧವ್-ತುಳಸಿ
ಮಾಧವ್ ರೂಮ್‌ನಲ್ಲಿ ಕುಳಿತು ತುಳಸಿ ಹೇಳದೇ ಕೇಳದೇ ಹೊರಟ ವಿಚಾರಕ್ಕೆ ಬೇಸರ ಮಾಡಿಕೊಂಡಿರುತ್ತಾನೆ. ತುಳಸಿ ಕೂಡ ಬಹಳ ಬೇಸರ ಮಾಡಿಕೊಂಡಿದ್ದರು. ಈಗಿನ ಪರಿಸ್ಥಿತಿಯನ್ನು ತಾನೊಬ್ಬನೇ ಎದುರಿಸಬೇಕು ಎಂದು ಯೋಚಿಸುತ್ತಿರುತ್ತಾನೆ. ಪೂರ್ಣಿಮಾ ಬಂದು ಮಾವನಿಗೆ ಸಮಾಧಾನ ಮಾಡುತ್ತಾಳೆ. ಸಿರಿಗೆ ಫೋನ್ ಮಾಡಿ ತುಳಸಿ ಅಮ್ಮ ಎಲ್ಲಿದ್ದಾರೆ ಹಾಗೂ ಹೇಗಿದ್ದಾರೆ ಎಂಬ ವಿಚಾರವನ್ನು ತಿಳಿದುಕೊಂಡು ಮಾವನ ಮನಸ್ಸಿಗೆ ಸಮಾಧಾನವಾಗುವಂತೆ ಮಾಡುತ್ತಾಳೆ. ತುಳಸಿ ಮನೆ ಬಿಟ್ಟು ಹೋದ ಬೇಸರದಲ್ಲೇ ಮಾಧವ್ ದಿನ ಕಳೆಯುತ್ತಾನೆ.
ಸಮರ್ಥ್ ನಡವಳಿಕೆಯಿಂದ ಖುಷಿ ಪಟ್ಟ ಸಿರಿ
ತುಳಸಿ, ಮಾಧವ್ ಅವರಿಗೆ ಹೇಳದೇ ಬಂದೆ. ಅವರು ಫೋನ್ ಮಾಡಿರಬಹುದು ಎಂದು ಮೊಬೈಲ್ ಚೆಕ್ ಮಾಡುತ್ತಾಳೆ. ಆದರೆ, ಮಾಧವ್‌ನಿಂದ ಫೋನ್, ಮೆಸೇಜ್ ಎರಡೂ ಬಂದಿರುವುದಿಲ್ಲ. ಇನ್ನು ಸಿರಿ, ಸಮರ್ಥ್ ಬಳಿ ಕ್ಷಮೆ ಕೇಳಿ ಖುಷಿಯಾಗಿ ಮಾತನಾಡಿಸುತ್ತಾಳೆ. ಇವತ್ತು ಅಮ್ಮನ ಮೇಲೆ ಕೂಗಾಡದೇ ತುಂಬಾ ಒಳ್ಳೆಯ ರೀತಿಯಲ್ಲಿ ನಡೆದುಕೊಂಡೆ. ಜೊತೆಗೆ ಸಂಧ್ಯಾಳನ್ನು ಇಲ್ಲಿಗೆ ಕರೆದುಕೊಂಡು ಬಂದು ಒಳ್ಳೆಯ ಕೆಲಸ ಮಾಡಿದೆ ಎಂದು ಹೇಳುತ್ತಾಳೆ.


Click it and Unblock the Notifications











