Shrirasthu Shubhamasthu: ದೇವರ ಎದುರು ಪ್ರಾರ್ಥಿಸಿದ ಮಹೇಶನ ಬೇಡಿಕೆ ಏನು..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಹಾಗೂ ಸಮರ್ಥ್ ನಡುವೆ ಜಗಳ ಕಿತ್ತಾಟ ನಡೆಯುತ್ತಿದ್ದರೂ ಕೂಡ ದತ್ತ ತಾತ ಬೇಕಂತಲೇ ಮನೆಯಲ್ಲಿ ಸತ್ಯ ನಾರಾಯಣ ಪೂಜೆ ಇಟ್ಟುಕೊಂಡಿದ್ದಾರೆ.
ತುಳಸಿ ಮತ್ತು ಮಾಧವ್‌ನನ್ನು ಮನೆಗೆ ಬನ್ನಿ ಎಂದು ಕರೆಯಲು ಹೋದಾಗ ಅಭಿ ಬೇಕಂತಲೇ ನಾವು ಬರಬಹುದಾ ಎಂದು ಕೇಳುತ್ತಾನೆ. ದತ್ತ ತಾತ ಹಿಂದೆ ಮುಂದೆ ಯೋಚಿಸಿದ ಎಲ್ಲರನ್ನು ಹಬ್ಬಕ್ಕೆ ಮನೆಗೆ ಕರೆಯುತ್ತಾರೆ.
ಮನೆಯಲ್ಲಿ ಹಣದ ಸಮಸ್ಯೆ ಇದ್ದರೂ ಕೂಡ ದತ್ತ ತಾತ ಎಲ್ಲರನ್ನೂ ಮನೆಗೆ ಕರೆದು ಊಟ ಹಾಕಿಸಲು ಮುಂದಾಗುತ್ತಾರೆ. ಅಭಿ ತುಳಸಿ ಹಾಗೂ ಸಮರ್ಥ್‌ಗೆ ಅವಮಾನ ಮಾಡಬೇಕು ಎಂತಲೇ ಬಂದಿರುತ್ತಾನೆ.

ಉತ್ತರ ಕುಮಾರನಿಗೆ ದತ್ತ ತಾತನೇ ಸರಿ
ಎಲ್ಲರನ್ನೂ ಬಾಯಿ ಮಾತಿನಲ್ಲೇ ಸುಮ್ಮನಾಗಿಸುವ ದತ್ತ ತಾತ ಈ ಬಾರಿಯೂ ಅಭಿ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಮನೆಗೆ ಬಂದ ಮಾಧವ್ ಮನೆಯವರಿಗೆಲ್ಲಾ ಕೆಲಸ ಕೊಟ್ಟು, ಗಂಡು ಮಕ್ಕಳಿಗೆಲ್ಲಾ ಎಣ್ಣೆ ಸ್ನಾನ ಮಾಡಿಸುತ್ತಾರೆ. ಸಮರ್ಥ್ ಎಂದರೆ ಉರಿದು ಬೀಳುವ ಅಭಿಗೆ ಈಗ ಪ್ರತಿಯೊಂದಕ್ಕೂ ಸಮರ್ಥ್ ಬೇಕಾಗುವಂತ ಪರಿಸ್ಥಿತಿ ಬಂದಿದೆ. ಅಭಿ ಏನೇ ಮಾತನಾಡಿದರೂ ದತ್ತ ತಾತ ಉತ್ತರ ಕುಮಾರನ ಮಾತುಗಳಿಗೆ ಸರಿಯಾದ ಉತ್ತರ ಕೊಟ್ಟು ಸುಮ್ಮನಾಗಿಸುತ್ತಿದ್ದಾರೆ. ಇದರಿಂದ ಮನೆಯಲ್ಲಿ ಸಮಸ್ಯೆ ಮಾಡಿ ಅವಮಾನಿಸಬೇಕು ಎಂದು ಬಂದ ಅಭಿ ಕೈಯಲ್ಲಿ ಏನೂ ಮಾಡಲು ಸಾಧ್ಯವಾಗಲಿಲ್ಲ.
ಶಾಂತವಾಗಿ ನಡೆದ ಸತ್ಯ ನಾರಾಯಣ ಪೂಜೆ
ಇನ್ನು ದತ್ತ ತಾತನ ಸಮ್ಮುಖದಲ್ಲಿ ಮನೆಯಲ್ಲಿ ಪೂಜೆ ಶಾಂತವಾಗಿ ನೆರವೇರುತ್ತದೆ. ತುಳಸಿ ಹಾಗೂ ಮಾಧವ್ ಸತ್ಯ ನಾರಾಯಣ ಪೂಜೆ ಕುಳಿತುಕೊಳ್ಳಲಿ ಎಂದು ಸಮರ್ಥ ಕೂಡ ಹೇಳುತ್ತಾನೆ. ಸಮರ್ಥ್‌ಗೆ ಅಮ್ಮನ ಮೇಲೆ ಎಷ್ಟೇ ಕೋಪವಿದ್ದರೂ ಕೂಡ ಮನದಲ್ಲಿ ಪ್ರೀತಿ ಹಾಗೆಯೇ ಇದೆ. ಶಾರ್ವರಿ ಮನೆಯಲ್ಲಿ ಯಾರಿಗೂ ನೋವಾಗದಂತೆ ಏನೂ ಮಾತನಾಡದೇ ಸುಮ್ಮನೆ ಇರುತ್ತಾಳೆ. ಪೂರ್ಣಿಮಾ, ಸಿರಿ, ಗೋದಾವರಿ, ತುಳಸಿ ಸೇರಿಕೊಂಡು ಅಡುಗೆ ಮಾಡಿ ಎಲ್ಲರಿಗೂ ಊಟ ಬಡಿಸುತ್ತಾರೆ.

ತುಳಸಿಗೆ ಮೋಸ ಮಾಡಿದ ಸಂಧ್ಯಾ
ದತ್ತ ತಾತನ ಮನೆಯಲ್ಲಿ ಕಷ್ಟ ಇದೆ ಎಂದು ತಿಳಿದಿದ್ದ ಅವಿ ಹಿಂದಿನ ದಿನವೇ ತಾತನಿಗೆ ಪೂಜೆಗೆಂದು ಹಣ ನೀಡಲು ಮುಂದಾಗುತ್ತಾನೆ. ಆದರೆ, ದತ್ತ ತಾತ ಇದಕ್ಕೆ ಒಪ್ಪಿರುವುದಿಲ್ಲ. ಇನ್ನು ಮಾಧವ್, ತುಳಸಿ ಕೈಗೆ ಹಣವನ್ನು ನೀಡಿ ಅದನ್ನು ಕೊಡಲು ಹೇಳಿರುತ್ತಾನೆ. ತುಳಸಿ, ಸಿರಿ ಅನ್ನು ರೂಮಿಗೆ ಕರೆದು ಹಣ ಕೊಟ್ಟಾಗ ಸಿರಿ ಮತ್ತು ಸಮರ್ಥ್ ಇಬ್ಬರೂ ಆ ಹಣ ತಮಗೆ ಬೇಡ ಎಂದು ಹೇಳಿ ಹೋಗುತ್ತಾರೆ. ಆದರೆ, ಇದೇ ಸಮಯವನ್ನೇ ಬಳಸಿಕೊಳ್ಳುವ ಸಂಧ್ಯಾ ಅಮ್ಮ ಮನೆಯಲ್ಲಿ ತುಂಬಾ ಕಷ್ಟವಿದೆ. ಆದರೆ ಅಣ್ಣ- ಅತ್ತಿಗೆ ಸ್ವಾಭಿಮಾನದಿಂದ ಹಣ ಬೇಡ ಅಂದಿದ್ದಾರೆ. ನನಗೆ ಈ ಹಣವನ್ನು ಕೊಡು. ನಾನು ಕೊಟ್ಟರೆ, ಅವರು ಏನೂ ಅಂದುಕೊಳ್ಳುವುದಿಲ್ಲ. ಎಂದು ಸಪ್ಪೆ ಮುಖ ಮಾಡಿಕೊಂಡು ಆ ಹಣವನ್ನು ತನ್ನ ಕೈ ವಶ ಮಾಡಿಕೊಳ್ಳುತ್ತಾಳೆ. ತುಳಸಿಯೂ ಕೂಡ ಸಂಧ್ಯಾ ಮಾತನ್ನು ನಂಬಿ ಆ ಹಣವನ್ನು ಕೊಟ್ಟು ಬಿಡುತ್ತಾಳೆ.
ದೇವರನ್ನು ಬೇಡಿಕೊಂಡ ಮಹೇಶ
ಇನ್ನು ಪೂಜೆ ಎಲ್ಲಾ ಮುಗಿದು, ಎಲ್ಲರಿಗೂ ಪ್ರಸಾದವನ್ನು ಹಂಚಿದ ಬಳಿಕ ಮಹೇಶ ಮಾತನಾಡುತ್ತಾನೆ. ಹೇ ದೇವರೇ.. ಶತ್ರುಗಳನ್ನು ನಾಶ ಮಾಡು ಎಂದು ಕೇಳಿಕೊಳ್ಳುತ್ತಾನೆ. ಮಹೇಶ ದೇವರನ್ನು ಬೇಡಿಕೊಂಡಿದ್ದನ್ನು ನೋಡಿದ ಮನೆಯವರಿಗೆಲ್ಲಾ ಶಾಕ್ ಆಗುತ್ತದೆ. ಮಾಧವ್, ಮಹೇಶನನ್ನು ಹೇಳಿದ್ದನ್ನು ಪೂರ್ತಿ ಹೇಳು. ಯಾರದು ಶತ್ರು ಎಂದು ಕೇಳಿದರೆ ಉತ್ತರ ಕೊಡುವುದಿಲ್ಲ. ಭಯ ಬೀಳುವ ಶಾರ್ವರಿ ತನ್ನ ಕಥೆ ಇನ್ನು ಮುಗಿಯೋದು ಪಕ್ಕಾ ಎಂದುಕೊಳ್ಳುತ್ತಾಳೆ.


Click it and Unblock the Notifications











