Shrirasthu Shubhamasthu: ತಮ್ಮನಿಗಾಗಿ ಆಫೀಸ್ ಬಿಟ್ಟು ಕೊಡುತ್ತಾನಾ ಅವಿನಾಶ್..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಹಾಗೂ ತುಳಸಿಗೆ ತಮ್ಮ ಬಗ್ಗೆ ಪೇಪರ್‌ನಲ್ಲಿ ಸುದ್ದಿಯಾಗಿರುವ ವಿಚಾರ ಗೊತ್ತೇ ಇಲ್ಲ. ಆದರೆ, ಪ್ರತಿ ಬಾರಿಯೂ ಮಾಧವ್ ಹೊರಗಡೆ ಹೋದಾಗ ಇರುತ್ತಿದ್ದ ವಾತಾರಣಕ್ಕೂ ಈಗಿನ ವಾತಾವರಣಕ್ಕೂ ವ್ಯತ್ಯಾಸವಿದೆ. ಮಾಧವ್ ಮನೆಯಿಂದ ಹೊರಗೆ ಬಂದಾಗ ಜನ ಸೆಲ್ಫಿ ಕೇಳುತ್ತಿದ್ದರು. ಆದರೆ, ಈಗ ಇಬ್ಬರನ್ನು ನೋಡಿ ಪಿಸು ಪಿಸು ಎನ್ನುತ್ತಿದ್ದಾರೆ.

ಈ ದಿಢೀರ್ ಬದಲಾವಣೆಗೆ ಕಾರಣ ಏನು ಎನ್ನವುದು ಮಾಧವ್‌ಗೆ ಅರ್ಥವೇ ಆಗುತ್ತಿಲ್ಲ. ಇನ್ನು ಮಾಧವ್, ತುಳಸಿಯ ಜೊತೆಗೆ ದೇವಸ್ಥಾನಕ್ಕೆ ಹೋಗುತ್ತಾನೆ. ತನ್ನ ಮನದ ತುಮುಲಗಳನ್ನು ಹೇಳಿಕೊಳ್ಳಲು ಬಯಸುತ್ತಾನೆ. ಆದರೆ, ಮಾಧವ್‌ಗೆ ಅದು ಅರ್ಥವೇ ಆಗುವುದಿಲ್ಲ. ದೇವಸ್ಥಾನದಲ್ಲಿ ತುಳಸಿ ಬಳಿ ಏನೂ ಹೇಳಲಾಗದ ಕಾರಣ ಈಗ ಮನೆಗೆ ಬಿಡುವ ನೆಪದಲ್ಲಿ ಹೋಟೆಲ್‌ಗೆ ಕರೆದುಕೊಂಡು ಬರುತ್ತಾನೆ.

Shrirasthu Shubhamasthu serial 30th June Episode Written Update

ಹೋಟೆಲ್‌ನಲ್ಲಿ ಕಾಫಿ ಕುಡಿಯುವಾಗಲೂ ಎಲ್ಲರೂ ನೋಡಿ ಮಾತನಾಡುತ್ತಿರುತ್ತಾರೆ. ಮಾಧವ್ ನಾನು ನಿಮ್ಮ ಬಳಿ ಏನೋ ಒಂದು ವಿಚಾರವನ್ನು ಹೇಳಬೇಕು ಎಂದು ತುಳಸಿಗೆ ಹೇಳುತ್ತಾನೆ. ಅಷ್ಟರಲ್ಲಿ ಅದೇ ಹೋಟೆಲ್ ನಲ್ಲಿ ಶೇಷು ಟೇಬಲ್ ಒರೆಸುತ್ತಿರುವುದನ್ನು ನೋಡಿ ಶಾಕ್ ಆಗುತ್ತಾನೆ. ಇದೇನು ಹೀಗಾಯ್ತು ಎಂದು ಬೇಸರ ಮಾಡಿಕೊಳ್ಳುತ್ತಾನೆ.

ಮನದ ಮಾತು ತುಳಸಿಗೆ ಹೇಳಲೇಯಿಲ್ಲ

ತುಳಸಿಯನ್ನು ಆಚೆ ಕಳಿಸಿ ಶೇಷು ಹಾಗೂ ಗೋದಾವರಿ ಬಳಿ ಮಾಧವ್ ಮಾತನಾಡುತ್ತಾನೆ. ನಾನಿರುವಾಗ ನೀವು ಇಲ್ಲಿ ಇರುವುದು ಸರಿಯಿಲ್ಲ ನಿಮಗೆ ಏನಾದರೂ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ ಬರುತ್ತಾನೆ. ಈಗಲೂ ತುಳಸಿಗೆ ತನ್ನ ಮನದ ಮಾತುಗಳನ್ನು ಹೇಳಲಾಗದೇ ಒದ್ದಾಡುತ್ತಾನೆ.

Shrirasthu Shubhamasthu serial 30th June Episode Written Update


ಕದ್ದ ದುಡ್ಡಿಗೆ ನಂದಿನಿ ಸ್ಕೆಚ್

ಇತ್ತ ಸಂಧ್ಯಾ ತವರು ಮನೆಯಿಂದ ಹಣ ಕದ್ದುಕೊಂಡು ಬಂದಿದ್ದಾಳೆ. ಇದನ್ನು ಹೆಚ್ಚು ದಿನ ಸೇಫ್ ಆಗಿ ಇಡಲು ಆಗುವುದಿಲ್ಲ. ಏನಾದರೂ ಮಾಡಿ ಹಣಕ್ಕೆ ಒಂದು ವ್ಯವಸ್ಥೆ ಮಾಡಬೇಕು ಎಂದು ಅಂದುಕೊಳ್ಳುವಾಗಲೇ ನಂದಿನಿ ಫೋನ್ ಬರುತ್ತದೆ. ನಂದಿನಿ ತಾನೊಂದು ಬಿಸಿನೆಸ್ ಶುರು ಮಾಡಿದ್ದು, 20 ಸಾವಿರ ಹಣಕ್ಕೆ ಡಬಲ್ ಲಾಭ ಬಂದಿದೆ. ಅದೂ ಕೂಡ ಒಂದೇ ವಾರದಲ್ಲಿ. ಕಾಸ್ಮೆಟಿಕ್ಸ್ ಬಿಸಿನೆಸ್ ನೀನು ಮಾಡು ಎಂದು ಐಡಿಯಾ ಕೊಡುತ್ತಾಳೆ. ಸಂಧ್ಯಾಗೆ ನಂದಿನಿ ಕೊಟ್ಟ ಐಡಿಯಾ ಚೆನ್ನಾಗಿದೆ ಎನಿಸುತ್ತದೆ. ನಂದಿನಿ, ಸಂಧ್ಯಾ ಹಣವನ್ನು ಪಡೆದು ನಾಮ ಹಾಕುತ್ತಾಳಾ ಕಾದು ನೋಡಬೇಕಿದೆ.

ಸಂಧ್ಯಾಳನ್ನು ನೋಡಲು ಬಂದ ಜುಗ್ಗ ಮಾವ

ನಂದಿನಿ ಜೊತೆಗೆ ಬಿಸಿನೆಸ್ ಬಗ್ಗೆ ಮಾತನಾಡಬೇಕು ಎಂದು ಹೊರಟಾಗಲೇ ಸಂಧ್ಯಾಳನ್ನು ಹುಡುಕಿಕೊಂಡು ಅವಳ ಜುಗ್ಗ ಮಾವ ಬಂದಿದ್ದಾನೆ. ಸಂಧ್ಯಾಗೆ ತನ್ನ ಮಾವ ಬಂದಿರುವುದು ಶಾಕ್ ಆಗಿದೆ. ಪತಿಯನ್ನು ಪಕ್ಕಕ್ಕೆ ಕರೆದು ಬೈಯುತ್ತಾಳೆ. ಆದರೆ, ಪ್ರಸಾದ್, ತಾನೇನು ಮಾಡಿಲ್ಲ ಎಂದು ಹೇಳುತ್ತಾನೆ. ಜುಗ್ಗ ಮಾವನಿಗೆ ಸಂಧ್ಯಾ ಹಣ ಕದ್ದಿರುವುದು ಗೊತ್ತಾಗಿರುತ್ತದೆ. ಹೀಗಾಗಿ ಅವನು ಸಂಧ್ಯಾಳಿಂದ ಆ ಹಣವನ್ನು ಪಡೆಯಲು ಬಂದಿದ್ದಾನೆ.

ಅವಿಯಿಂದ ಅಧಿಕಾರ ಕಿತ್ತುಕೊಂಡ ಅಭಿ

ಇನ್ನು ಅಭಿಗೆ ಅಣ್ಣ ಅವಿಯ ಮೇಲಿನ ಕೋಪ ಹೆಚ್ಚಾಗುತ್ತಲೇ ಇದೆ. ತಾನು ಬೆಳೆಯುವುದಕ್ಕೆ ತನ್ನ ಅಣ್ಣನೇ ಅಡ್ಡ ಎಂದು ಭಾವಿಸಿದ್ದಾನೆ. ಹೀಗಾಗಿ ಈಗ ಅಭಿ ಅವಿಯ ಬಳಿಗೆ ಬಂದು ತನ್ನ ಬಿಸಿನೆಸ್ ಬಗ್ಗೆ ಮಾತನಾಡಿದ್ದಾನೆ. ಅವಿ ನೋಡಿಕೊಳ್ಳುತ್ತಿರುವ ಆಫೀಸ್‌ನ ಸಂಪೂರ್ಣ ಹಕ್ಕು ತನಗೆ ಬೇಕು ಎಂದು ಹೇಳಿದ್ದಾನೆ. ಅವಿ ಒಂದು ಮಾತನಾಡದೇ, ನಿನ್ನದೇ ಎಲ್ಲಾ ಎಂದು ಬಿಟ್ಟುಕೊಟ್ಟಿದ್ದಾನೆ. ನೀನು ಬೀಳುವುದು ನನಗೆ ಇಷ್ಟ ಇಲ್ಲ. ಅದಕ್ಕೆ ನಾನು ಸದಾ ನಿನ್ನ ಬೆನ್ನ ಹಿಂದೆ ಇರುತ್ತೇನೆ ಎಂದು ಹೇಳುತ್ತಾನೆ.

More from Filmibeat

English summary
Shrirasthu Shubhamasthu serial 30th June Episode Written Update. Nandini plans to get Sandhya money. She gives a business idea and plans to take all her money. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X