Shrirasthu Shubhamasthu: ಸಂಭ್ರಮದಲ್ಲೂ ಬೇಸರವಾಗುವಂತೆ ಮಾಡಿದ ಶಾರ್ವರಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದಸರಾ ಹಬ್ಬದ ಪ್ರಯುಕ್ತ, ದತ್ತ ತಾತ ಹಾಗೂ ಸಂಧ್ಯಾ ಇಬ್ಬರೂ ಕೂಡ ಮಾಧವ್ ಮನೆಗೆ ಬಂದಿರುತ್ತಾರೆ. ಶಾರ್ವರಿಗೆ ನೋವಾಗಬಾರದು ಎಂದು ದಸರಾ ಹಬ್ಬದ ಪೂಜೆಯನ್ನು ತುಳಸಿ ಮಾಡದೇ, ಶಾರ್ವರಿಗೆ ಬಿಟ್ಟು ಕೊಡುತ್ತಾಳೆ. ಇದು ಅವಿಗೆ ಖುಷಿ ಕೊಡುತ್ತದೆ.
ಶಾರ್ವರಿ ಹೇಗಾದರೂ ಮಾಡಿ ತುಳಸಿಯನ್ನು ಈ ಮನೆಯಿಂದ ಹೊರಗೆ ಕಳಿಸಬೇಕು ಎಂದು ಹೆಜ್ಜೆ ಹೆಜ್ಜೆಗೂ ಯೋಚಿಸುತ್ತಿರುತ್ತಾಳೆ. ಆದರೆ, ತುಳಸಿಗೆ ಕೋಪವೇ ಬರುವುದಿಲ್ಲ.

ಸಂಧ್ಯಾ ಬೇರೆ ಪೂರ್ಣಿಮಾ ಬಳಿ ಕೇಳಿ ಕೇಳಿ ಸೀರೆ ತೆಗೆದುಕೊಂಡಿದ್ದಲ್ಲದೇ, ಅವಳ ಕೆಲ ಒಡವೆಗಳನ್ನು ಕೂಡ ಧರಿಸಿಕೊಂಡಿದ್ದಾಳೆ. ಇದಕ್ಕೆ ಈಗಾಗಲೇ ಒಂದು ಸಲ ತುಳಸಿ ಬೈಯುತ್ತಾಳೆ. ಬಿಚ್ಚಿ ವಾಪಸ್ ಮಾಡು ಎಂದು ಹೇಳುತ್ತಾಳೆ. ಆದರೆ, ಸಂಧ್ಯಾ ತುಳಸಿ ಮಾತನ್ನು ಕೇಳುವುದಿಲ್ಲ. ಅದರಲ್ಲೂ ಅವಿ ಇಷ್ಟಪಟ್ಟು ತನ್ನ ಹೆಂಡತಿಗೆ ಕೊಡಿಸಿದ ಸರವನ್ನು ಕೂಡ ಹಾಕಿಕೊಂಡಿರುತ್ತಾಳೆ.
ಪೂರ್ಣಿ ಒಡವೆ ನೋಡಿದ ಅವಿ
ದಸರಾ ಹಬ್ಬ ಮುಗಿದ ಮೇಲೆ, ದತ್ತ ತಾತ ಯಾಕೆ ಈ ಹಬ್ಬವನ್ನು ಆಚರಿಸುತ್ತಾರೆ. ಇದರ ಹಿಂದಿನ ಪೌರಾಣಿಕ ಕಥೆಯೇನು ಎಂಬುದನ್ನು ತಿಳಿಸಿ ಹೇಳುತ್ತಾರೆ. ನಂತರ ಅವಿ ಎಲ್ಲರಿಗೂ ತೀರ್ಥ ಕೊಡುವಾಗ ಸಂಧ್ಯಾ ಕುತ್ತಿಗೆಯಲ್ಲಿ ಪೂರ್ಣಿ ಒಡವೆಗಳನ್ನು ನೋಡಿ ಸಿಟ್ಟು ಮಾಡಿಕೊಳ್ಳುತ್ತಾನೆ. ಆದರೆ, ಪೂರ್ಣಿಮಾ ಸುಮ್ಮನಿರಿ ಎಂದು ಕಣ್ಣಿನಲ್ಲೇ ಸನ್ನೆ ಮಾಡುತ್ತಾ ಸಮಾಧಾನ ಮಾಡುತ್ತಾಳೆ.

ಸಂಕಟ ಹೇಳಿಕೊಂಡ ಮಾಧವ್
ಇನ್ನು ಒಗ್ಗರಣೆ ಡಬ್ಬಿ ಪ್ರೋಗ್ರಾಮ್ ಅನ್ನು ನೋಡಬೇಕು ಎಂದು ದತ್ತ ತಾತ ಬಯಸುತ್ತಾರೆ. ಆದರೆ ತುಳಸಿ ಜೊತೆಗೆ ಮದುವೆಯಾದ ಬಳಿಕ ಮಾಧವ್ ಒಗ್ಗರಣೆ ಡಬ್ಬಿ ಕಾರ್ಯಕ್ರಮಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ ಟಿವಿ ಹಾಕುವುದು ಬೇಡ ಎಂದು ಎಷ್ಟು ಹೇಳಿದರೂ ಕೇಳದ ಶಾರ್ವರಿ, ಮಾಧವ್ ಮತ್ತು ತುಳಸಿಗೆ ನೋವು ಮಾಡಬೇಕು ಎಂತಲೇ ಪ್ರೋಗ್ರಾಮ್ ಅನ್ನು ಹಾಕುತ್ತಾಳೆ. ಒಗ್ಗರಣೆ ಡಬ್ಬಿ ಕಾರ್ಯಕ್ರಮದಲ್ಲಿ ಬೇರೆ ಯಾರನ್ನೋ ನೋಡಿ ಮನೆಯವರೆಲ್ಲಾ ಶಾಕ್ ಆಗುತ್ತಾರೆ. ಮಾಧವ್ ಮುಖ ಅಂತೂ ತೀರಾ ಸಪ್ಪಗಾಗುತ್ತದೆ. ಆಗ ಮಾಧವ್ ತನ್ನ ಸಂಕಟವನ್ನು ದತ್ತ ತಾತನ ಬಳಿ ಹೇಳಿಕೊಳ್ಳುತ್ತಾನೆ.
ತುಳಸಿಗೆ ನೋವಾಗುವಂತೆ ಮಾತನಾಡಿದ ಶಾರ್ವರಿ
ತಾನು ತುಳಸಿಯನ್ನು ಮದುವೆಯಾಗಿದ್ದಕ್ಕೆ, ವೀಕ್ಷಕರು ಬೇಸರ ಮಾಡಿಕೊಂಡರು ಎಂದು ಪ್ರೋಗ್ರಾಮ್ ಮಾಡದಂತೆ ಹೇಳಿದರು. ಅದಕ್ಕೆ ಅದನ್ನು ನಿಲ್ಲಿಸಿ ಬಿಟ್ಟೆ. ಆದರೆ, ಇದು ತುಳಸಿಗೆ ಗೊತ್ತಿಲ್ಲ. ಗೊತ್ತಾದರೆ, ಬೇಸರ ಮಾಡಿಕೊಳ್ಳುತ್ತಾರೆ. ನೀವು ಕೂಡ ತುಳಸಿ ಅವರಿಗೆ ಹೇಳಬೇಡಿ ಎಂದು ಮಾಧವ್ ದತ್ತ ತಾತನ ಬಳಿ ಹೇಳುತ್ತಾನೆ. ಆದರೆ, ಇತ್ತ ಶಾರ್ವರಿ ಬೇಕಂತಲೇ ತುಳಸಿ ಬಳಿ ಬಂದು. ನೋಡು ನಿನ್ನನ್ನು ಮದುವೆಯಾದ ಕರ್ಮಕ್ಕೆ ಭಾವನಿಗೆ ಇಷ್ಟವಿದ್ದ 'ಒಗ್ಗರಣೆ ಡಬ್ಬಿ' ಕಾರ್ಯಕ್ರಮವೂ ಕೈ ತಪ್ಪಿತು. ನಿನ್ನಿಂದ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದೆ. ಪಾಪ ಬಾವ, ಒಗ್ಗರಣೆ ಡಬ್ಬಿ ಕಾರ್ಯಕ್ರಮವನ್ನು ಬಹಳ ಖುಷಿಯಿಂದ ನಡೆಸಿಕೊಡುತ್ತಿದ್ದರು ಎಂದು ಚುಚ್ಚಿ ಮಾತನಾಡುತ್ತಾಳೆ. ಇದು ತುಳಸಿ ಮನಸ್ಸಿಗೆ ನೋವುಂಟು ಮಾಡುತ್ತದೆ.
ಮಾಧವ್ ಬಗ್ಗೆ ಬೇಸರ ಮಾಡಿಕೊಂಡ ತುಳಸಿ
ತುಳಸಿಗೆ ಈ ವಿಚಾರವೇ ಗೊತ್ತಿರುವುದಿಲ್ಲ. ತನ್ನಿಂದ ಈ ಸಮಸ್ಯೆ ಆಗಿದ್ದಕ್ಕೆ ತುಳಸಿ ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಇದನ್ನು ಹೇಗಾದರೂ ಮಾಡಿ ಸರಿ ಮಾಡಬೇಕು ಎಂದು ಆಲೋಚಿಸುತ್ತಾಳೆ. ಬೇಸರದಲ್ಲಿದ್ದ ಮಾಧವ್ ಕೂಡ ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರಗಡೆ ಹೊರಟಿರುತ್ತಾನೆ. ಇದು ತುಳಸಿಗೆ ಇನ್ನಷ್ಟು ಚಿಂತಿಸುವಂತೆ ಮಾಡುತ್ತದೆ.


Click it and Unblock the Notifications











