Shrirasthu Shubhamasthu: ತುಳಸಿಗೆ ಸಂಕಷ್ಟ ತಂದಿಟ್ಟ ಜನಾರ್ಧನ್: ಮಕ್ಕಳಿಗಾಗಿ ತ್ಯಾಗ ಮಾಡುತ್ತಾಳಾ?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಮತ್ತು ದೀಪಿಕಾ ಮದುವೆ ಜೋರಾಗಿ ನಡೆಯುತ್ತಿದೆ. ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಅಭಿಗೆ ಇಷ್ಟವಿಲ್ಲದಿದ್ದರೂ ತುಳಸಿ ತಾಯಿ ಸ್ಥಾನದಲ್ಲಿ ನಿಂತು ಎಲ್ಲಾ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾಳೆ. ಅಭಿಗೆ ನಿಂತು ಹೋಗಿದ್ದ ಮದುವೆ ನಡೆಯುತ್ತಿರುವ ಖುಷಿ ಇದೆ.

ತುಳಸಿ ಮನೆಯವರು, ಮಾಧವ್ ಮನೆಯವರು ಎಲ್ಲರೂ ಒಟ್ಟಿಗೆ ಸೇರಿದ್ದಾರೆ. ಜನಾರ್ಧನ್ ಕೂಡ ಎಲ್ಲಾ ದ್ವೇಷವನ್ನು ಮರೆತು ಅದ್ಧೂರಿಯಾಗಿ ಮದುವೆಯನ್ನು ನಡೆಸಿಕೊಡುತ್ತಿದ್ದಾನೆ.

Shrirasthu Shubhamasthu serial 31st January episode written update

ಮದುವೆ ಮನೆಯಲ್ಲಿ ಮಾಧವ್ ಕುಟುಂಬ

ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ, ನಾಂದಿ ಪೂಜೆ, ಮೆಹಂದಿ ಹೀಗೆ ಪ್ರತಿಯೊಂದು ಶಾಸ್ತ್ರವೂ ಅದ್ಧೂರಿಯಾಗಿ ನಡೆಯುತ್ತಿದೆ. ಮಾಧವ್‌ಗೆ ಮಕ್ಕಳು ಹತ್ತಿರವಾಗುತ್ತಿದ್ದಾರೆ ಎಂಬ ಖುಷಿ ಇದ್ದು, ಮಹೇಶ್ ಕೂಡ ಅಣ್ಣ ಮತ್ತು ಅವರ ಮಕ್ಕಳು ಸರಿಯಾಗಲಿ ಎಂದು ಬಯಸಿದ್ದಾನೆ. ಈ ಮದುವೆ ಸಮಾರಂಭದಲ್ಲಿ ಎಲ್ಲವೂ ಸರಿ ಹೋಗುವ ಸೂಚನೆ ಕಾಣಿಸುತ್ತಿದೆ. ದೀಪಿಕಾ ಮತ್ತು ಅಭಿ ಪ್ರೀತಿಸಿ ತಮ್ಮ ಹಠ ಬಿಡದೇ ಮದುವೆಯಾಗುತ್ತಿದ್ದಾರೆ. ಸಿರಿ, ಸಮರ್ಥ್, ಸಂಧ್ಯಾ, ದತ್ತ ತಾತ, ತುಳಸಿ, ಮಾಧವ್, ಪೂರ್ಣಿಮಾ, ಅವಿನಾಶ್, ಶಾರ್ವರಿ, ನಿಧಿ, ಜನಾರ್ಧನ್, ಮಹೇಶ ಎಲ್ಲರೂ ಸಂಭ್ರಮಿಸುತ್ತಿದ್ದಾರೆ.

ಜನಾರ್ಧನ್ ಹಿಂದೆ ಬಿದ್ದ ಶಾರ್ವರಿ

ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಇದ್ದರೆ, ಶಾರ್ವರಿಗೆ ತನ್ನ ಅಸ್ತಿತ್ವದ ಪ್ರಶ್ನೆ ಎದ್ದಿದೆ. ಎಲ್ಲದಕ್ಕೂ ತುಳಸಿಯನ್ನು ಕರೆಯುತ್ತಿದ್ದಾರೆ. ಹೀಗೆ ಆದರೆ, ಅಭಿ ಕೂಡ ತನ್ನ ಕೈ ತಪ್ಪಿ ಹೋಗುತ್ತಾನೆ. ಈ ಮದುವೆ ನಡೆದರೆ, ಎಲ್ಲರೂ ತುಳಸಿಯನ್ನು ಒಪ್ಪಿಕೊಳ್ಳುತ್ತಾರೆ ಎಂದು ಒಬ್ಬಳೇ ಆಲೋಚಿಸುತ್ತಿದ್ದಾಳೆ. ಜರ್ನಾಧನ್ ಅನ್ನು ಕರೆದು ಮದುವೆ ನಿಲ್ಲಿಸುವಂತೆ ಒತ್ತಾಯಿಸುತ್ತಿದ್ದಾಳೆ.

Shrirasthu Shubhamasthu serial 31st January episode written update

ಜನಾರ್ಧನ್‌ನ ಹೆದರಿಸಿದ ಶಾರ್ವರಿ

ಮಗಳು ದೀಪಿಕಾ ಮದುವೆ ನಿಲ್ಲಿಸಲು ಜನಾರ್ಧನ್ ಯಾರಿಲ್ಲ. ಯಾಕೆಂದರೆ, ತನ್ನ ಮಗಳ ಖುಷಿಯೇ ಮುಖ್ಯ ಎಂದು ಜನಾರ್ಧನ್ ಶಾರ್ವರಿ ಮಾತನ್ನು ಕೇಳುವುದನ್ನು ನಿಲ್ಲಿಸಿದ್ದಾನೆ. ಹೀಗಾಗಿ ಶಾರ್ವರಿ, ಜನಾರ್ಧನ್‌ನ ಬ್ಲ್ಯಾಕ್ ಮೇಲ್ ಮಾಡುತ್ತಾಳೆ. ನೀನು ಈ ಮದುವೆ ನಿಲ್ಲಿಸದೇ ಹೋದರೆ, ಸುಮತಿ ಸಾವಿನ ಹಿಂದೆ ನೀನು ಇದ್ದೆ ಎಂಬ ಸತ್ಯ ಎಲ್ಲರಿಗೂ ತಿಳಿಯುವಂತೆ ಮಾಡುತ್ತೇನೆ ಎಂದು ಬೆದರಿಸುತ್ತಾಳೆ.

ತುಳಸಿಗೆ ಸಂಕಷ್ಟ ತಂದೊಡ್ಡಿದ ಜನಾರ್ಧನ್

ದೀಪಿಕಾ ಕೂಡ ಮದುವೆಯಾಗಿ ಬರುತ್ತಿರುವುದು ಮಾಧವ್ ಕುಟುಂಬವನ್ನು ಸುಡಲು. ಅವಳಿಗೂ ತುಳಸಿ ಮತ್ತು ಮಾಧವ್ ಮದುವೆಯಾಗಿ ಬಂದದ್ದು ಇಷ್ಟವಿಲ್ಲ. ಅದಕ್ಕೆ ಈ ಮದುವೆಯನ್ನು ನಾನೂ ಖುಷಿಯಿಂದ ಮಾಡುತ್ತಿದ್ದೇನೆ ಎಂದು ಜನಾರ್ಧನ್ ಹೇಳುತ್ತಾನೆ. ಈ ಮಾತನ್ನು ಕೇಳಿದ ಶಾರ್ವರಿಗೆ ಖುಷಿಯಾಗುತ್ತದೆ. ಆದರೆ ಮದುವೆ ಮುಗಿಯುವದರ ಒಳಗೆ ತುಳಸಿಗೆ ಒಂದು ಗತಿ ಕಾಣಿಸಬೇಕು ಎಂದು ಪ್ಲಾನ್ ಮಾಡಿ ಜನಾರ್ಧನ್‌ಗೆ ಹೇಳಿಕೊಡುತ್ತಾಳೆ. ಜನಾರ್ಧನ್ ಕೂಡ ಶಾರ್ವರಿ ಮಾತನ್ನು ಕೇಳಿ ತುಳಸಿಗೆ ಸಂಕಷ್ಟ ತಂದೊಡ್ಡಿದ್ದಾನೆ.

ತುಳಸಿಯನ್ನು ಕಾಪಾಡುತ್ತಾನಾ ಸಮರ್ಥ್..?

ದೀಪಿಕಾ ಮದುವೆ ನಡೆಯಬೇಕು ಅವಳು ಮಾಧವ್ ಮನೆಗೆ ಬರಬೇಕು ಎಂದರೆ, ನೀನು ಮಾಯವಾಗಬೇಕು ಎಂದು ತುಳಸಿಗೆ ಜನಾರ್ಧನ್ ಹೇಳುತ್ತಾನೆ. ತುಳಸಿ ಯಾರಿಗೂ ತಿಳಿಯದಂತಹ ಜಾಗಕ್ಕೆ ಹೊರಟು ಹೋಗಬೇಕು ಎಂದು ಜನಾರ್ಧನ್ ಹೆದರಿಸುತ್ತಾನೆ. ತುಳಸಿ ಈ ಮದುವೆ ನಡೆಯಬೇಕು ಎಂಬ ಕಾರಣಕ್ಕೆ ತಾನು ಮನೆಯವರಿಂದ ದೂರ ಆಗಲು ಮುಂದಾಗಿದ್ದಾಳೆ. ಈ ಮಾತಗಳನ್ನೆಲ್ಲಾ ಸಮರ್ಥ್ ಕೇಳಿಸಿಕೊಂಡಿದ್ದಾನೆ. ಸಮರ್ಥ್ ಈಗ ತನ್ನ ತಾಯಿಯನ್ನು ಸಂಕಷ್ಟದಿಂದ ಪಾರು ಮಾಡುತ್ತಾನಾ? ಇಲ್ಲ ಏನಾದರೂ ಮಾಡಿಕೊಳ್ಳಲಿ ಎಂದು ಸುಮ್ಮನಿದ್ದು ಬಿಡುತ್ತಾನಾ? ಕಾದು ನೋಡಬೇಕಿದೆ.

More from Filmibeat

English summary
Shrirasthu Shubhamasthu serail today episode update, janardhan forces tulasi to leave house. This was heard by samarth;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X