ಕುಟುಂಬ ಅಂದ್ರೆ ಹೀಗಿರಬೇಕು: ಸೀರಿಯಲ್ ಬಿಟ್ಟು ಹೋಗಿದ್ದೆಲ್ಲಿಗೆ ಮಾಧವನ ಫ್ಯಾಮಿಲಿ?

By ಎಸ್ ಸುಮಂತ್

ಸೀರಿಯಲ್ ಆಗ್ಲಿ ಸಿನಿಮಾ ಆಗ್ಲಿ ತೆರೆ ಮೇಲೆ ದ್ವೇಷ ಮಾಡುವವರು, ಶತ್ರುವಿನಂತೆ ಕಾಣುವವರು ಕೂಡ ಹೊರಗಡೆ ಪ್ರಪಂಚದಲ್ಲಿ ಬೇರೆ ರೀತಿಯಾಗಿಯೇ ಇರುತ್ತಾರೆ. ಈಗ ಅದಕ್ಕೊಂದು ಉದಾಹರಣೆ ಎಂದರೆ ಮಾಧವನ ಕುಟುಂಬ. ಅಂದ್ರೆ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಕುಟುಂಬ. ಆರಂಭದಲ್ಲಿ ಈ ಧಾರಾವಾಹಿಯಲ್ಲಿ ಪ್ರೀತಿಗಿಂತ ದ್ವೇಷವೇ ಜಾಸ್ತಿ ಇತ್ತು. ಆದರೆ, ದಿನಗಳು ಕಳೆದಂತೆ ಸಾಕಷ್ಟು ಸಂಬಂಧಗಳು ಬದಲಾಗಿವೆ. ಮುಖವಾಡಗಳು ಕಳಚಿ ಬೀಳುತ್ತಿವೆ. ಈಗ ಮಾಧವನದ್ದು ಕೂಡು ಕುಟುಂಬವಾಗಿದೆ. ಅದರಲ್ಲಿ ಶಾರ್ವರಿಯನ್ನು ಬಿಟ್ಟು. ಅಂದ್ರೆ ಸ್ವಪ್ನ ಕೃಷ್ಣ ಕರಾಳ ಮುಖ ಮಾತ್ರ ಇನ್ನು ಬದಲಾದಂತೆ ಕಾಣಿಸುತ್ತಿಲ್ಲ. ಇದೆಲ್ಲ ಸೀರಿಯಲ್ ಜೀವನ. ಆದರೆ ರಿಯಲ್ ಲೈಫ್‌ನಲ್ಲಿ ಅವರೆಲ್ಲ ಇರುವುದೇ ಬೇರೆ ಗೊತ್ತೇ.

ಇಡೀ ಕುಟುಂಬ ಒಂದೊಳ್ಳೆ ಪ್ರವಾಸವನ್ನ ಮಾಡಿದ್ದಾರೆ. ಸದಾ ಶೂಟಿಂಗ್, ಗ್ಯಾಪ್ ಸಿಕ್ಕರೆ ಆ ಕೆಲಸ ಈ ಕೆಲಸ ಅಂತ ಬ್ಯುಸಿಯಾಗುವ ಮಂದಿ ಒಟ್ಟುಗೂಡಿ, ಸೀರಿಯಲ್ ಅನ್ನೇ ಮರೆತು ಫುಲ್ ಖುಷಿಯಾಗಿದ್ದಾರೆ. ಕೇರಳದ ಪ್ರಕೃತಿ ಸೌಂದರ್ಯದಲ್ಲಿ ಮಿಂದೆದ್ದಿದ್ದಾರೆ. ಆದರೆ ಒಬ್ಬರು ಮಿಸ್ ಆಗಿದ್ದಾರೆ ಅದುವೇ ಪ್ರೀತಿಯ ಅಮ್ಮ ತುಳಸಿ. ನಟಿ ಸುಧಾರಾಣಿ ಒಬ್ಬರು ಈ ಟ್ರಿಪ್ ನಲ್ಲಿ ಮಿಸ್ ಆಗಿದ್ದಾರೆ. ಶಾರ್ವರಿ ಸೀರಿಯಲ್‌ನಲ್ಲಿ ಮಾತ್ರ ಇನ್ನೇನು ಕೊಂದು ಬಿಡುವಷ್ಟು ದ್ವೇಷ ಮಾಡ್ತಾರೆ. ಆದರೆ, ಈಗ ಟ್ರಿಪ್‌ನಲ್ಲಿ ನೋಡಿದ್ರೆ ಫುಲ್ ಜಾಲಿ ಜಾಲಿಯಾಗಿದ್ದಾರೆ.

Shrirasthu Shubhamasthu serial actors shared Kerala trip video

ಗಮನ ಸೆಳೆದಿದ್ದಿ ಏನಂದ್ರೆ ಅವರು ಮಾಡಿರುವ ಒಂದು ರೀಲ್ಸ್. ತುಂಬಾನೇ ಕ್ರಿಯೇಟಿವ್ ಆಗಿ ಮಾಡಿದ್ದಾರೆ. 'ನವಗ್ರಹ' ಸಿನಿಮಾದ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಕನ್ನಡ ಸಿನಿಮಾ ತೆಗೆಯೋಣ್ವಾ ಎಂಬ ಸಾಲಿನಿಂದ ಹಾಡನ್ನು ತೆಗೆದುಕೊಂಡಿದ್ದಾರೆ. ಮಾಧವ, ಶಾರ್ವರಿ, ಅವಿನಾಶ್, ಅಭಿ, ಪೂರ್ಣಿ, ದೀಪಿಕಾ ಎಲ್ಲರೂ ಒಂದೊಂದು ಸಾಲಿಗೆ ಸ್ಟೆಪ್ ಹಾಕಿದ್ದಾರೆ. ಕೊನೆಯಲ್ಲಿ ಸ್ವಿಮ್ಮಿಂಗ್ ಪೂಲ್ ಬಳಿ ಎಲ್ಲರು ಒಟ್ಟಾಗಿ ಸ್ಟೆಪ್ ಹಾಕಿದ್ದಾರೆ. ಇಂಥ ವಿಡಿಯೋಗಳನ್ನೆಲ್ಲಾ ನೋಡಿದಾಗ ಯಾರಿಗೆ ಆಗಲಿ ನಾವೂ ಕೂಡ ಒಂದು ಟ್ರಿಪ್ ಹೋಗಬೇಕು ಅಂತ ಅನ್ನಿಸದೆ ಇರಲಾರದು. ನಾವೂ ಎಲ್ಲಾ ಬೆಸ್ಟ್ ಫ್ರೆಂಡ್ ಈ ರೀತಿ ಪ್ರವಾಸಕ್ಕೆ ಹೋಗಿ, ಅಲ್ಲೊಂದು ಸುಂದರವಾದ ರೀಲ್ ಮಾಡೋಣಾ ಬನ್ನಿ ಅಂತ ಹೊರಟು ಬಿಡಬೇಕು ಎನಿಸುತ್ತದೆ. ಅಷ್ಟು ಅದ್ಭುತವಾಗಿದೆ ಅವರೆಲ್ಲರ ರೀಲ್ಸ್.

ಕೇರಳದ ವಯನಾಡ್‌ನಲ್ಲೆಲ್ಲಾ ಸುತ್ತಾಟ ನಡೆಸಿದ ಮಾಧವನ ಫ್ಯಾಮಿಲಿ ಹಾಗೇ ಫನ್ನಿ ಗೇಮ್‌ಗಳನ್ನು ಆಟ ಆಡಿದ್ದಾರೆ. ಜಿಪ್ ಲೈನ್ ಹಾಡಿ ಖುಷಿ ಪಟ್ಟಿದ್ದಾರೆ. ಅಲ್ಲಿನ ಸ್ಥಳವನ್ನೆಲ್ಲ ಫೋಟೋ ತೆಗೆದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಮಾಧವನ ಫ್ಯಾಮಿಲಿಯಲ್ಲಿರುವ ದೀಪಿಕಾ ಅಲಿಯಾಸ್ ದರ್ಶಿನಿ ಮೊದಲೇ ಒಳ್ಳೆಯ ಕೊರಿಯೋಗ್ರಾಫರ್. ಹೀಗಿರುವಾಗ ಒಳ್ಳೆಯ ಸ್ಟೆಪ್ ಬರದೆ ಇರುತ್ತದೆಯಾ. ಹೀಗಾಗಿಯೇ ಆ ಹಾಡಿಗೂ ಸ್ಟೆಪ್‌ಗೂ ಸಖತ್ತಾಗಿ ಬಂದಿದೆ. ಆ ರೀಲ್ಸ್ ಅನ್ನ 885 ಸಾವಿರ ಮಂದಿ ನೋಡಿದ್ದಾರೆ. ಮಾಧವನ ಫ್ಯಾಮಿಲಿ ಹೀಗೆ ಇರಲಿ ಅಂತ ಹಾರೈಸಿದವರು ಕೂಡ ಜಾಸ್ತಿ ಜನಾನೇ. ಅಷ್ಟೇ ಅಲ್ಲ ಶಾರ್ವರಿಯನ್ನ ಆದಷ್ಟು ಬೇಗ ಬದಲಾಗಿ ಅಂತ ಕೇಳಿಕೊಳ್ಳುತ್ತಾ ಇದ್ದಾರೆ. ಅಂದ್ರೆ ಈಗ ಟ್ರಿಪ್‌ನಲ್ಲಿ ಹೇಗೆ ಎಲ್ಲರೂ ಅನ್ಯೋನ್ಯವಾಗಿದ್ದಿರೋ ಅದೇ ರೀತಿ ಇರಿ ಅಂತಿದ್ದಾರೆ. ಆರು ಜನರು ಫ್ಯಾಮಿಲಿಯನ್ನ ಕರೆದುಕೊಂಡು ಹೋಗದೆ ಕೇವಲ ಸೀರಿಯಲ್ ತಂಡದ ಬಳಗ ಮಾತ್ರ ಹೋಗಿ ಎಂಜಾಯ್ ಮಾಡಿದ್ದಾರೆ. ಆ ಸುಂದರ ಕ್ಷಣಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.

More from Filmibeat

English summary
Shrirasthu Shubhamasthu serial actors shared Kerala trip video;
Read more about: life style serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X