ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಶ್ರೀರಸ್ತು ಶುಭಮಸ್ತು' ನಟಿ; ಚಂದನಾಗೆ ಮದ್ವೆಯಲ್ಲಿ ಸುಧಾರಾಣಿ
ಚಂದನಾ ರಾಘವೇಂದ್ರ ಎಂದು ಹೇಳಿದ ಕೂಡಲೇ ಅಭಿಮಾನಿಗಳಿಗೆ ಒಮ್ಮಿಂದೊಮ್ಮೆಲೆ ಯಾರು ಎಂದು ತಿಳಿಯದೇ ಇರಬಹುದು. ಆದರೆ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಸಿರಿ ಎಂದ ಕೂಡಲೇ ಕಿರುತೆರೆ ವೀಕ್ಷಕರಿಗೆ ಆ ನಟ ಕಣ್ಮುಂದೆ ಬಂದು ಬಿಡುತ್ತಾರೆ. ಈ ನಟಿಯ ನಟನೆಯನ್ನು ಅಭಿಮಾನಿಗಳೂ ಕೂಡ ಮೆಚ್ಚಿಕೊಂಡಿದ್ದಾರೆ.
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಮರ್ಥ್‌ನನ್ನು ಕೈ ಹಿಡಿದಿದ್ದರು. ಅದೂ ಪ್ರೀತಿಸಿ ಮದುವೆ ಆಗಿದ್ದರು. ಆದರೆ ರಿಯಲ್ ಲೈಫ್‌ನಲ್ಲಿ ಚಂದನಾ ರಾಘವೇಂದ್ರ ಅವರ ಮದುವೆ ಯಾವಾಗ ಎಂದೆಲ್ಲ ಪ್ರಶ್ನೆ ಕೇಳಿಬರುತ್ತಲೇ ಇತ್ತು. ಆದ್ರೀಗ ರಿಯಲ್ ಲೈಫ್‌ನಲ್ಲಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಚಂದನಾ ರಾಘವೇಂದ್ರ ಮದುವೆಗೆ ಅವರ ಆಪ್ತರು ಹಾಗೂ ಆತ್ಮೀಯರು ಹೋಗಿ ಶುಭ ಹಾರೈಸಿದ್ದರು. ಈ ಮದುವೆಯ ವಿಡಿಯೋವನ್ನು ನಟಿ ಸುಶ್ಮಿತಾ ಜಗ್ಗಪ್ಪ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ಮೂಲಕ ನವ ದಂಪತಿಗೆ ಮದುವೆ ಶುಭಾಶಯವನ್ನೂ ತಿಳಿಸಿದ್ದಾರೆ.
'ಶ್ರೀರಸ್ತು ಶುಭಮಸ್ತು' ನಟಿ ಚಂದನಾ ರಾಘವೇಂದ್ರ ಅವರ ಕಾರ್ಯಕ್ರಮದಲ್ಲಿ ಸುಧಾರಾಣಿ ಕೂಡ ಕಾಣಿಸಿಕೊಂಡಿದ್ದಾರೆ. ಸೀರೆಯುಟ್ಟು ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಸುಧಾರಾಣಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಮದುವೆ ಶಾಸ್ತ್ರಗಳಲ್ಲಿ ಬ್ಯುಸಿಯಾಗಿದ್ದ ಚಂದನಾ, ನಟಿ ಸುಶ್ಮಿತಾ ಹಾಗೂ ಸುಧಾರಾಣಿಯವರನ್ನು ನೋಡುತ್ತಿದ್ದಂತೆ ಬಹಳ ಖುಷಿಯಿಂದ ಆಹ್ವಾನ ನೀಡಿದ್ದರು.
ನಟಿ ಸುಶ್ಮಿತಾ ಹಂಚಿಕೊಂಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಚಂದನಾ ಮದುವೆ ಬಗ್ಗೆ ಆಕೆಯ ಅಭಿಮಾನಿಗಳಿಗೆ ಯಾರಿಗೂ ಕೂಡ ತಿಳಿದಿರಲಿಲ್ಲ. ತೀರಾ ಖಾಸಗಿಯಾಗಿ ಕುಟುಂಬಸ್ಥರು, ಆತ್ಮೀಯರಿಗಷ್ಟೇ ಆಹ್ವಾನ ನೀಡಲಾಗಿತ್ತು.
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿಯ ಮಗನ ಪತ್ನಿಯಾಗಿ ನಟಿಸುತ್ತಿದ್ದಾರೆ. ಬಹಳ ಸಾಧು ಸ್ವಭಾವ. ಹಾಗೆಯೇ ಮನೆಯನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವ ಈಕೆಯ ನಡೆಗೆ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸಿಕ್ಕಿದರೆ ಇಂತಹ ಹುಡುಗಿ ಸಿಗಬೇಕು ನೆಟ್ಟಿಗರು ಕಾಮೆಂಟ್ ಕೂಡ ಮಾಡುತ್ತಾರೆ. ಚಂದನಾ ರಾಘವೇಂದ್ರ ಇದೀಗ ಹೆಚ್ಚಾಗಿ ಸಿನಿಮಾ ಕಡೆಗೆ ಹೆಚ್ಚಿನ ಒಲವನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಚಂದನಾ ನಟಿಸುತ್ತಿರುವ 'ಭಗೀರಥ' ಸಿನಿಮಾ ಕೂಡ ಬೆಂಗಳೂರಿನಲ್ಲಿ ಸೆಟ್ಟೇರಿದೆ.
ಈ ಸಿನಿಮಾದಲ್ಲಿ ಸಾಯಿ ಪ್ರಕಾಶ್, ಸುಧಾ ಬೆಳವಾಡಿ ಸೇರಿ ದೊಡ್ಡ ತಾರಾಗಣವಿದೆ. ಈ ಚಿತ್ರದಲ್ಲಿ ಚಂದನಾ ಪತ್ರಕರ್ತೆಯಾಗಿಯೂ ಮಿಂಚುತ್ತಿದ್ದಾರೆ. ಇನ್ನೂ ಈಕೆ ರೂಪಾಯಿ, ರಾಮಾಚಾರಿ 2.0 ಹಾಗೂ ಇನ್ನಿತರ ಸಿನಿಮಾದಲ್ಲಿ ನಟಿಸಿದ್ದಾರೆ. ವೃತ್ತಿ ಬದುಕು ಉತ್ತಮವಾಗಿರುವಾಗಲೇ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ.
ಇದೀಗ ಚಂದನಾ ರಾಘವೇಂದ್ರ ಜನಪ್ರಿಯ ನಟಿಯಾಗಿ ಮಿಂಚುತ್ತಿದ್ದಾರೆ. ಇನ್ನೂ ಚಂದನಾ ರಾಘವೇಂದ್ರ ಅವರ ಹೊಸ ಜೀವನಕ್ಕೆ ಅಭಿಮಾನಿಗಳು ಕೂಡ ಶುಭ ಹಾರೈಸುತ್ತಿದ್ದಾರೆ. "ಹೊಸ ಜೀವನ ಉತ್ತಮವಾಗಿ ಇರಲಿ". "ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನಿಮಗೆ ಶುಭಾಶಯಗಳು" ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.


Click it and Unblock the Notifications











