ಅಲ್ಲು ಅರ್ಜುನ್, ಧನುಷ್, ಯಶ್ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿರೋ ಈ ನಟಿ ಯಾರು?

By ಅನಿತಾ ಬನಾರಿ

ಹಿರಿಯ ಕಲಾವಿದೆ ಸುಧಾರಾಣಿಯವರ ನಟಿಸುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ವೀಕ್ಷಕರನ್ನು ಸೆಳೆಯುತ್ತಿದೆ. ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ದರ್ಶಿನಿ ನಾಗರಾಜ್ ಅವರು ದರ್ಶನಿ ಡೆಲ್ಟಾ ನಾಗರಾಜ್ ಎಂದೇ ಪ್ರಸಿದ್ಧಿ. ಅವರ ತಂದೆ ನಾಗರಾಜ್ ಅವರು ಡೆಲ್ಟಾ ಕಂಪನಿಯನ್ನು ನಡೆಸುತ್ತಿದ್ದರಿಂದ ಅವರಿಗೆ ಡೆಲ್ಟಾ ನಾಗರಾಜ್ ಎಂಬ ಹೆಸರು ಬಂತು. ಮುಂದೆ ಮಗಳಿಗೂ ಆ ಹೆಸರು ಮುಂದುವರೆಯಿತು.

ಅಂದಹಾಗೆ ಸದ್ಯಕ್ಕೆ ಕನ್ನಡ ಕಿರುತೆರೆಯ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ದರ್ಶಿನಿ ನಾಗರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕ ಅವಿನಾಶ್ ಸಹೋದರ ಅಭಿಯ ಹೆಂಡತಿ ದೀಪಿಕಾ ಪಾತ್ರದಲ್ಲಿ ನಟಿಸುತ್ತಿರುವ ದರ್ಶಿನಿ ಮೂಲತಃ ಡ್ಯಾನ್ಸರ್ ಕೂಡ ಹೌದು. ಭಾರತ ಕಂಡ ಅತ್ಯುನ್ನತ ಕೊರಿಯೋಗ್ರಾಫರ್‌ಗಳಾದ ಪ್ರಭುದೇವ್, ಮಾಸ್ಟರ್ ಜಾನಿ ಮುಂತಾದವರೊಂದಿಗೆ ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.

Shrirasthu Shubhamasthu serial actress Darshini Delta Nagaraj is also a choreographer

ಇನ್ನು ನಟನೆಯ ಹೊರತಾಗಿ ಭರತನಾಟ್ಯ ಡ್ಯಾನ್ಸರ್ ಆಗಿರುವ ಇವರು, ಕಂಟೆಂಪರರಿ ಡ್ಯಾನ್ಸಿಂಗ್‌ನಲ್ಲೂ ಸೈ. ಸಂಗೀತದಲ್ಲೂ ಮಾಸ್ಟರ್ಸ್ ಮಾಡಿದ್ದಾರಂತೆ. ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಅಷ್ಟೇ ಅಲ್ಲದೆ ಸ್ವತಂತ್ರವಾಗಿಯೂ ಎಷ್ಟೋ ಸಿನಿಮಾಗಳಿಗೆ ಕೊರಿಯೋಗ್ರಾಫಿ ಮಾಡಿರುವ ಹೆಗ್ಗಳಿಕೆ ಇವರದ್ದು.

ಅತೀ ಚಿಕ್ಕ ವಯಸ್ಸಿನಲ್ಲಿ ಬಹು ಮುಖ್ಯ ಪ್ರತಿಭೆಯಾಗಿ ಹೊರಹೊಮ್ಮಿದ ಈಕೆ ತನ್ನ ವೃತ್ತಿ ಜೀವನದಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವುದು ಸಂತಸದ ವಿಚಾರ. ಸಿನಿಮಾರಂಗದ ದಿಗ್ಗಜರಾದ ಅಲ್ಲು ಅರ್ಜುನ್, ಧನುಷ್, ಯಶ್, ನಟ ಜೂನಿಯರ್ ಎನ್‌ಟಿಆರ್ ಮುಂತಾದವರ ಸಿನಿಮಾಗಳಿಗೆ ಇವರು ಡಾನ್ಸ್ ಕೊರಿಯೋಗ್ರಾಫಿ ಮಾಡಿದ್ದಾರಂತೆ.

ಕನ್ನಡದ 'ಉಪಾಧ್ಯಕ್ಷ' ಸಿನಿಮಾದಲ್ಲಿ ಚಿಕ್ಕಣ್ಣ ಹಾಗೂ ಮಲೈಕಾ ಅವರ ಡ್ಯಾನ್ಸ್‌ಗೂ ಇವರು ಕೋರಿಯೋಗ್ರಾಫಿ ಮಾಡಿದ್ದಾರೆ. ಚಿಕ್ಕಂದಿನಿಂದಲೂ ಡ್ಯಾನ್ಸಿಂಗ್ ಬಗ್ಗೆ ಬಹಳಷ್ಟು ಆಸಕ್ತಿಯನ್ನು ಹೊಂದಿದ್ದ ಈಕೆ ಹಲವಾರು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದರಂತೆ. ವಿಶೇಷವಾಗಿ ತೆಲುಗು ರಿಯಾಲಿಟಿ ಡ್ಯಾನ್ಸ್ ಶೋಗಳಲ್ಲಿ ಭಾಗವಹಿಸಿರುವ ಇವರು ಇದೀಗ ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆಗಳನ್ನು ಮಾಡಿ ಸಿನಿಮಾ ಕಿರುತೆರೆ ಹಾಗೂ ಡಾನ್ಸ್ ಲೋಕದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.

Shrirasthu Shubhamasthu serial actress Darshini Delta Nagaraj is also a choreographer

ಅಂದ ಹಾಗೆ ಶಿವರಾಜಕುಮಾರ್, ಅದಿತಿ ಪ್ರಭುದೇವ್, ಚರಣ್ ಮುಂತಾದವರು ದರ್ಶಿನಿ ಡೆಲ್ಟಾ ನಾಗರಾಜ್ ಅವರ ಕೊರಿಯಾಗ್ರಫಿ ಸ್ಕಿಲ್ ಅನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ನಟಿಯಾಗಿಯೂ ಬೆಳೆಯುತ್ತಿರುವ ಡೆಲ್ಟಾ ನಾಗರಾಜ್ ಅವರ ಮತ್ತೊಂದು ಪ್ರತಿಭೆ ಕೊರಿಯೋಗ್ರಫಿ ಕೂಡ ಅಷ್ಟೇ ಜನಪ್ರಿಯತೆ ಪಡೆದಿದೆ.

More from Filmibeat

English summary
Multi-talented Serial actress Darshini Delta Nagaraj big achievement at a young age:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X