'ಶ್ರೀರಸ್ತು ಶುಭಮಸ್ತು'ಯಿಂದ ಹೊರಬಂದ ಖಳನಾಯಕಿ ಯಕ್ಷಗಾನ ಕಲಾವಿದೆ ಅನ್ನೋದು ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ತನ್ನದೇ ವಿಭಿನ್ನ ಕಥೆಯಿಂದ ಜನರ ಮನ ಗೆದ್ದಿದೆ. ನಟಿ ಸುಧಾರಾಣಿಯವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ಧಾರಾವಾಹಿಯಲ್ಲಿ ಶಾರ್ವರಿ ಎಂಬ ಖಳನಾಯಕಿಯ ಪಾತ್ರವನ್ನು ನಟಿ ನೇತ್ರ ಜಾಧವ್ ಅವರು ಮಾಡುತ್ತಿದ್ದರು.
ಅಂದ ಹಾಗೆ, ಈ ನಟಿಯ ಪೂರ್ಣ ಹೆಸರು ನೇತ್ರಾ ಜಾಧವ್. ಇತ್ತೀಚೆಗಷ್ಟೇ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಿಂದ ಹೊರಬಂದ ಈಕೆ ತೆಲಂಗಾಣದ ಶೋ ಒಂದರಲ್ಲಿ ಯಕ್ಷಗಾನ ನೃತ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ನಟಿ ನೇತ್ರಾ ಜಾಧವ್ ಯಕ್ಷಗಾನ ಕಲಾವಿದೆ ಕೂಡ ಹೌದು ಎಂಬುದು ವೀಕ್ಷಕರ ಗಮನಕ್ಕೆ ಬಂದಿದೆ.

ನಟಿ ನೇತ್ರಾ ಜಾಧವ್ ಅವರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಿಂದ ಏಕೆ ಹೊರ ಬಂದಿದ್ದಾರೆ ಎಂಬ ವಿಚಾರದ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಆದರೆ, ಅವರು ಧಾರಾವಾಹಿಯಿಂದ ಹೊರಬಂದಿದ್ದಕ್ಕೆ ಅವರ ಅಭಿಮಾನಿಗಳಂತೂ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. ಅದೇ ಪಾತ್ರಕ್ಕೆ ಹೊಸ ಕಲಾವಿದೆ ಒಬ್ಬರು ಬಂದರೂ ಸಹ ತಿಂಗಳುಗಟ್ಟಲೆಯಿಂದ ಒಂದೇ ಕಲಾವಿದೆಯನ್ನು ನೋಡಿರುವ ಜನರಿಗೆ ಇದೀಗ ಹೊಸ ಕಲಾವಿದೆಯನ್ನು ಒಪ್ಪಿಕೊಳ್ಳುವುದು ಸುಲಭವಾಗಿರುವುದಿಲ್ಲ.
ಅದು ಅಲ್ಲದೆ ನಟಿ ನೇತ್ರಾ ಜಾಧವ್ ತಮ್ಮ ಅಭಿನಯದ ಮೂಲಕ ಬಹಳಷ್ಟು ದೊಡ್ಡ ಅಭಿಮಾನಿ ಬಳಗವನ್ನು ಪಡೆದಿದ್ದರು. ಹೆಸರಿಗೆ ತಕ್ಕಂತೆ ಕಣ್ಣಿನಲ್ಲಿ ನಟಿಸುತ್ತ ತಮ್ಮ ಕೆಟ್ಟ ಬುದ್ಧಿಯ ಬಗ್ಗೆ ಯಾರಿಗೂ ತಿಳಿಯದಂತೆ ನಟನೆ ಮಾಡುತ್ತಾ ಇದ್ದ ಈ ನಟಿ ಸದ್ಯಕ್ಕಂತೂ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ.
ಅಂದ ಹಾಗೆ ಈಕೆ ತಾಯಂದಿರ ದಿನದಂದು ತೆಲಂಗಾಣದ ಒಂದು ಶೋನಲ್ಲಿ ಯಕ್ಷಗಾನ ನೃತ್ಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ವಿಚಾರವನ್ನು ತಮ್ಮದೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಇವರು ತೆಲಂಗಾಣದಲ್ಲಿ ಕರ್ನಾಟಕದ ನೃತ್ಯ ಶೈಲಿಯನ್ನು ಪ್ರದರ್ಶನ ಮಾಡಲು ಬಹಳ ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ.
ವಿಚಾರವೆಂದರೆ ನಟಿ ನೇತ್ರಾ ಜಾಧವ್ ವಯಸ್ಸಿನಲ್ಲಿ ಇನ್ನೂ ಚಿಕ್ಕವರು. ಧಾರಾವಾಹಿಯಲ್ಲಿ ಇವರ ಮಕ್ಕಳು ಬೆಳೆದು ನಿಂತು ಮದುವೆಯ ವಯಸ್ಸಿಗೆ ಬಂದಿದ್ದರೂ, ನಿಜ ಜೀವನದಲ್ಲಿ ಈಕೆಗೆ ಇನ್ನೂ ಶಾಲೆಗೆ ಹೋಗುವ ಪುಟಾಣಿ ಮಕ್ಕಳಿದ್ದಾರೆ. ನಟಿ ನೇತ್ರಾ ಜಾಧವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಅಂತೂ ಬಹಳಷ್ಟು ಆಕ್ಟಿಂಗ್ ಇದ್ದು, ಆಗಾಗ ಮಾಡರ್ನ್ ಡ್ರೆಸ್‌ಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಪೋಸ್ಟ್ ಮಾಡುತ್ತಿರುತ್ತಾರೆ.
'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೊದಲು ಈಕೆ 'ರಥಸಪ್ತಮಿ' ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಸುಧಾರಾಣಿಯವರ ತಂಗಿಯ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು. ನಂತರ ಜೀ ಕನ್ನಡದ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ವಿರುದ್ಧವೇ ಖಳನಾಯಕಿ ಪಾತ್ರದಲ್ಲಿ ಮತ್ತೆ ಜನರ ಮನ ಗೆದ್ದಿದ್ದರು. ಇತ್ತೀಚಿಗೆ ನಡೆದ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಖಳನಾಯಕಿ ಎಂಬ ಅವಾರ್ಡನ್ನು ಕೂಡ ಪಡೆದುಕೊಂಡಿದ್ದಾರೆ.
ಇವರ ನಟನೆ ಹಾವಾ ಭಾವ ಹಾಗೂ ಡ್ರೆಸ್ಸಿಂಗ್ ಸೆನ್ಸ್ ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ಬಹಳ ಸಂತಸ ನೀಡಿತ್ತು. ಆದರೆ, ತಕ್ಷಣ ಇವರು ಧಾರಾವಾಹಿಯಿಂದ ಹೊರ ಬಂದಿರುವುದಕ್ಕೆ ಕಾರಣ ಏನೆಂದು ಇನ್ನೂ ಸ್ಪಷ್ಟವಾಗಿಲ್ಲ. ಇವರ ಮುಂದಿನ ಯೋಜನೆಯನ್ನು ಇನ್ನು ಬೇರೆ ಯಾವುದಾದರೂ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಯಾವುದೇ ಪ್ರಶ್ನೆಗಳಿಗೆ ಇನ್ನೂ ಉತ್ತರಿ ಸಿಕ್ಕಿಲ್ಲ.


Click it and Unblock the Notifications











