ಶ್ವಾನಪ್ರೇಮಿ ಸುಧಾರಾಣಿ ಹಾಕಿದ ಫೋಸ್ಟ್ ವೈರಲ್: ಮಿನಿ, ಮಿಕ್ಕಿ, ಗಂಗೂ ಮೆಚ್ಚಿದ ನೆಟ್ಟಿಗರು

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿ ಪಾತ್ರಕ್ಕೆ ಜೀವ ತುಂಬುತ್ತಿರುವ ಮೂಲಕ ಕಿರುತೆರೆಯಲ್ಲಿ ಬಹಳ ಬ್ಯುಸಿಯಾಗಿರುವ ನಟಿ ಸುಧಾರಾಣಿ, ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಪೋಸ್ಟ್ ಒಂದನ್ನು ಹಾಕುವುದರ ಮೂಲಕ ಬಹಳ ವೈರಲ್ ಆಗಿದ್ದಾರೆ. ಅಸಲಿಗೆ ಸುಧಾರಾಣಿಯವರಲ್ಲ ಅವರ ಮನೆಯ ಮೂರು ಪುಟಾಣಿ ಸದಸ್ಯರು ಬಹಳಷ್ಟು ವೈರಲ್ ಆಗಿದ್ದಾರೆ.

ಹೌದು! ಅಂತರಾಷ್ಟ್ರೀಯ ಸಾಕುಪ್ರಾಣಿಗಳ ದಿನದಂದು ನಟಿ ಸುಧಾರಾಣಿ ತಮ್ಮ ಮನೆಯ ಮೂರು ಮುದ್ದು ನಾಯಿಗಳ ಫೋಟೋವನ್ನು ಶೇರ್ ಮಾಡಿದ್ದರು. ಜೊತೆಗೆ ಚಿಕ್ಕದಾಗಿ ಚೊಕ್ಕದಾಗಿ ಕ್ಯಾಪ್ಷನನ್ನು ಕೊಟ್ಟಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶ್ವಾನಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ.

Shrirasthu Shubhamasthu Serial Actress Sudharani post on International Pet Day went viral

ಅಂದಹಾಗೆ ಪ್ರಾಣಿ ಪ್ರೇಮಿ ಅದರಲ್ಲೂ ಶ್ವಾನ ಪ್ರೇಮಿಯಾಗಿರುವ ಸುಧಾರಾಣಿ ಅವರು ತಮ್ಮ ಮನೆಯಲ್ಲಿ ಮೊದಲಿನಿಂದಲೂ ಎರಡು ಗೋಲ್ಡನ್ ರಿಟ್ರಿವರ್ ನಾಯಿಗಳನ್ನು ಸಾಕಿದ್ದಾರೆ. ಆಗಾಗ ಈ ನಾಯಿಗಳ ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಲೂ ಇರುತ್ತಾರೆ. ಇದೀಗ ಒಂದು ಹೊಸ ಇಂಡಿ ನಾಯಿಯೂ ಅವರ ಕುಟುಂಬದ ಸದಸ್ಯತ್ವ ಪಡೆದುಕೊಂಡಿದ್ದು 3 ನಾಯಿಗಳ ಮುದ್ದಾದ ವಿಡಿಯೋ ಒಂದನ್ನು ನಟಿ ಹಂಚಿಕೊಂಡಿದ್ದಾರೆ.

ನೆಟ್ಟಿಗರ ಮನ ಸೆಳೆದ ಮಿನಿ, ಮಿಕ್ಕಿ ಹಾಗೂ ಗಂಗೂ

ಮಿನಿ, ಮಿಕ್ಕಿ ಹಾಗೂ ಗಂಗೂ ಎಂಬ ಹೆಸರಿನ ಈ ಮೂರು ನಾಯಿಗಳು, ಅವರ ಕುಟುಂಬದ ಸದಸ್ಯರಲ್ಲೇ ಒಂದಂತಿರುವುದು ವಿಶೇಷ. ಹಬ್ಬ ಹರಿದಿನಗಳಲ್ಲಿ, ರಕ್ಷಾ ಬಂಧನ, ಇತ್ಯಾದಿ ಬೇರೆ ಬೇರೆ ಸಂದರ್ಭಗಳಲ್ಲಿ ಈ ನಾಯಿಗಳ ಫೋಟೋಗಳನ್ನು ಆಗಾಗ ನಟಿ ಶೇರ್ ಮಾಡುತ್ತಲೇ ಇರುತ್ತಾರೆ. ನೆಟ್ಟಿಗರು ಇದಕ್ಕೆ ಬಹಳ ಖುಷಿಯೂ ಪಡುತ್ತಿರುತ್ತಾರೆ.ಅಂತೆಯೇ ಈಗ ಹಂಚಿಕೊಂಡಿರುವ ವಿಡಿಯೋಗೂ ನೆಟ್ಟಿಗರಿಂದ ಹಾಗೂ ಅಭಿಮಾನಿಗಳಿಂದ ಬಹಳಷ್ಟು ಪ್ರಶಂಸೆ, ಪ್ರೀತಿ ಹಾಗೂ ಕಮೆಂಟ್ ಮೂಲಕ ಹರಿದು ಬಂದಿದೆ.

Shrirasthu Shubhamasthu Serial Actress Sudharani post on International Pet Day went viral

ಮನೋಜ್ಞ ನಟನೆಯ ಮೂಲಕ ಸ್ಯಾಂಡಲ್ ವುಡ್‌ನಲ್ಲಿ ನಟನಾ ಕಂಪನ್ನು ಪಸರಿಸಿರುವ ನಟಿ ಸುಧಾರಾಣಿ ಜೀ ಕನ್ನಡ ವಾಹಿನಿಯ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ತುಳಸಿಯಾಗಿ ಬಣ್ಣ ಹಚ್ಚುವ ಮೂಲಕ ಕಿರುತೆರೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಸುಧಾರಾಣಿ ಮತ್ತೊಮ್ಮೆ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

More from Filmibeat

English summary
Shrirasthu Shubhamasthu Serial Actress Sudharani is also a dog lover. An updated post on International Pet Day went viral,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X