Shrirasthu Shubhamasthu:ಮಹೇಶ್ ಮಾತಿಗೆ ಬೆಚ್ಚಿ ಬಿದ್ದ ಶಾರ್ವರಿ; ಹಳೆಯದೆಲ್ಲ ನೆನಪಿಗೆ ಬಂತಾ?

By ಪೂರ್ವ

ಮಹೇಶನಿಗೆ ಹಳೆಯದ್ದೆಲ್ಲ ನೆನಪಿಗೆ ಬರುತ್ತಿದೆ. ಆತ ತುಳಸಿ ಜೊತೆ ಬೇರೆ ಮಾತನಾಡಬೇಕೆಂದು ಹೇಳುತ್ತಿದ್ದಾನೆ. ಇದನ್ನೆಲ್ಲಾ ಕೇಳಿಸಿಕೊಂಡ ಶಾರ್ವರಿಗೆ ನಡುಕ ಹುಟ್ಟಿದಂತಿದೆ. "ಇವರು ಯಾಕೆ ತುಳಸಿ ಜೊತೆ ಮಾತನಾಡಬೇಕು ಎಂದು ಹೇಳಿದ್ದಾರೆ? ಅಂತಹದ್ದು ಏನು ವಿಚಾರ ಇರಬಹುದು?" ಎಂದು ಶಾರ್ವರಿ ಆಗಾಗ ಯೋಚನೆ ಮಾಡುತ್ತಿರುತ್ತಾಳೆ. ತನ್ನ ಆಟ ಎಲ್ಲಿ ಬಯಲಾಗುತ್ತದೆ ಎನ್ನುವುದೇ ಬಹಳ ದೊಡ್ಡ ಆಲೋಚನೆ.

ಈ ಮನೆ ನನ್ನದಾಗಬೇಕು. ಈ ಮನೆಯವರೆಲ್ಲಾ ನಾನು ಹೇಳಿದಾಗೆ ಇರಬೇಕು. ಇಲ್ಲವಾದರೆ ಅವರನ್ನು ಸರ್ವನಾಶ ಮಾಡಲು ನನಗೆ ಗೊತ್ತಿದೆ ಎಂದು ಶಾರ್ವರಿ ಪಣ ತೊಟ್ಟಿರುತ್ತಾರೆ. ಆದರೆ ಈ ವಿಚಾರ ಮಹೇಶನ ಎದುರು ಹೇಳಿರುತ್ತಾರೆ. ಶಾರ್ವರಿಗೆ ಒಂದು ಮಾತ್ರ ಅರ್ಥ ಆಗುತ್ತಿಲ್ಲ. ಮಹೇಶನಿಗೆ ಹಳೆಯದೆಲ್ಲ ನೆನಪಿಗೆ ಬಂದಿದೆಯಾ ಅಥವಾ ನೆನಪಿಗೆ ಬಂದಿದ್ದರು ಬಾರದೆ ಇರುವ ಹಾಗೆ ನಾಟಕ ಮಾಡುತ್ತಿದ್ದಾರೋ ಎನ್ನುವುದು ಮಾತ್ರ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಇದರಿಂದ ದಿನವೂ ಭಯದಿಂದಲೇ ದಿನದೂಡುವ ಪರಿಸ್ಥಿತಿ ಬಂದೊದಗಿದೆ.

Shrirasthu Shubhamasthu serial

ಇನ್ನೂ ತುಳಸಿ ಮೇಲೆ ಎಲ್ಲರಿಗೆ ಅನುಮಾನ ಬರುವ ಹಾಗೆ ನಿಧಿ ನಡೆದುಕೊಂಡು ಇರುತ್ತಾಳೆ. ನಿಧಿ ಮನೆಯಲ್ಲಿ ಇರಲಿಲ್ಲಾ ಎಂಬ ವಿಚಾರದಿಂದ ತುಳಸಿ ಮನೆಯವರ ಕೆಂಗಣ್ಣಿಗೆ ಗುರಿ ಆಗಿದ್ದಾಳೆ. ಎಲ್ಲರೂ ತಿಂಡಿಗಾಗಿ ಡೈನಿಂಗ್ ಟೇಬಲ್ ಬಳಿ ಕುಳಿತುಕೊಂಡು ಇರುತ್ತಾರೆ. ಆ ವೇಳೆ ಶಾರ್ವರಿ ಆಲೋಚನೆ ಮಾಡುತ್ತಿರುತ್ತಾಳೆ. ಇದೇನಿದು ತುಳಸಿ ಬಳಿ ಇವರು ಏನು ಮಾತನಾಡಬೇಕು ಅಂತ ಇದ್ದಾರೆ. ನನ್ನ ವಿಚಾರ ಏನಾದರು ಮಾತನಾಡಬೇಕು ಎಂದಿದ್ದಾರಾ? ಎಂದು ಮನದಲ್ಲಿ ಅಂದುಕೊಂಡು ಇರುವಾಗ ಮಹೇಶ ಕರೆಕ್ಟ್ ಅದೇ ವಿಷಯ ಎಂದು ಹೇಳುತ್ತಾರೆ.

ಮಹೇಶನ ವಿಚಿತ್ರ ವರ್ತನೆ

ಇದನ್ನು ಕೇಳಿ ಮನೆ ಮಂದಿಗೆ ಶಾಕ್ ಆಗುತ್ತದೆ. ಮಹೇಶ ಏನು ಮಾತನಾಡುತ್ತಿದ್ದಾನೆ ಎನ್ನುವ ಆಲೋಚನೆ ಮಾಧವನಿಗೆ ಬರುತ್ತದೆ. ಅವಿನಾಶ್ ಇದನ್ನು ಪ್ರಶ್ನೆ ಮಾಡಿದಾಗ ಯಾರ ಯಾರ ಲೆಕ್ಕಾಚಾರ ಎಷ್ಟೆಷ್ಟು ಆಗಿದೆ. ಯಾರು ಯಾರಿಗೆ ಎಷ್ಟು ಬಾಕಿ ಕೊಡಬೇಕು ಎನ್ನುವ ವಿಚಾರ ಎಂದೆಲ್ಲ ಹೇಳಿದಾಗ ಶಾರ್ವರಿಗೆ ಮತ್ತಷ್ಟು ಟೆನ್ಶನ್ ಹೆಚ್ಚಾಗುತ್ತದೆ.

ಮಹೇಶನ ಮಾತು ಪೂರ್ಣಿಮಾಗೆ ಅರ್ಥ ಆಗ್ತಿಲ್ಲ

ಈ ವೇಳೆ ಅಭಿ, "ಚಿಕ್ಕಪ್ಪ ನೀವು ಮಾತನಾಡುತ್ತಿರುವುದು ನನಗೆ ಅರ್ಥ ಆಗುತ್ತಿಲ್ಲ" ಎಂದಾಗ ಮಹೇಶ ರಿಯಾಕ್ಷನ್ ಬೇರೆ ಥರವೇ ಇರುತ್ತದೆ. ಆ ಕೂಡಲೇ ಶಾರ್ವರಿ ಮುಖ ನೋಡಿ ಮಹೇಶ "ನಿಮಗೆ ಯಾರಿಗೂ ಅರ್ಥ ಆಗಲಿಲ್ಲ. ಆದರೆ ಇದೆಲ್ಲ ಶಾರ್ವರಿಗೆ ಅರ್ಥ ಆಯಿತು ಅಲ್ವಾ?" ಎಂದಾಗ ಶಾರ್ವರಿಗೆ ಮತ್ತಷ್ಟು ಗಾಬರಿ ಆಗುತ್ತದೆ. ಎಲ್ಲರೂ ಶಾರ್ವರಿ ಮುಖ ನೋಡುತ್ತಾರೆ. ಆ ಬಳಿಕ ಮಹೇಶ್ "ನಾನು ಹಿಂದೆ ಮಾಡಿದ್ದ ಸಾಲ ಚುಕ್ತಾ ಮಾಡಬೇಕು" ಎಂದು ಹೇಳಿದಾಗ ಮನೆಯವರಿಗೆ ಆಶ್ಚರ್ಯ ಆಗುತ್ತದೆ.

Shrirasthu Shubhamasthu serial

ಶಾರ್ವರಿ ಮನದಲ್ಲಿ ನಡುಕ

ಆಗಾಗ ಮಹೇಶ್ "ಕೆಲವೊಂದನ್ನು ಮರೆಯಲು ಆಗುವುದೇ ಇಲ್ಲ. ಆಗಾಗ ಅದು ನೆನಪಿಗೆ ಬರುತ್ತಿರುತ್ತದೆ. ಏನು ಮಾಡಲು ಆಗುವುದು ಇಲ್ಲ" ಎಂದು ಹೇಳಿದಾಗ ಮಾಧವ ಹಾಗೂ ಪೂರ್ಣಿಮಾಗೆ "ಇದೇನು ಮಹೇಶ ಅವರು ಬಹಳ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ಯಾಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ" ಎಂದು ಅನ್ನಿಸಿ ಬಿಡುತ್ತದೆ. ಶಾರ್ವರಿಗೆ ಮಾತ್ರ ನಡುಕ ಶುರುವಾಗಿದೆ. "ಇದೇನಿದು ಈ ರೀತಿ ಮಾತನಾಡುತ್ತಿದ್ದಾರೆ. ನನಗೆ ಅದ್ಯಾಕೋ ಇವರಿಗೆ ನೆನಪಿನ ಶಕ್ತಿ ವಾಪಸ್ ಬಂದಿದೆ ಅನ್ನಿಸುತ್ತಿದೆ" ಎಂದು ಮನದಲ್ಲಿ ಆಲೋಚನೆ ಮಾಡುತ್ತಿರುತ್ತಾರೆ.

More from Filmibeat

English summary
Shrirasthu Shubhamasthu serial April 09th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X