Shrirasthu Shubhamasthu:ಪೂರ್ಣಿಮಾಗೆ ಮಗು ಚಿಂತೆ; ಸತ್ಯ ಹೇಳಲಾಗದೆ ತುಳಸಿ ತೊಳಲಾಟ
ಪೂರ್ಣಿಮನಿಗೆ ಮಗು ಆಗಿಲ್ಲ ಎನ್ನುವುದೇ ತುಳಸಿಗೆ ಇರುವ ಬಹುದೊಡ್ಡ ಚಿಂತೆ. ತುಳಸಿಗೆ ದೇವರ ಬಳಿ ಇರುವುದು ಅದೊಂದೇ ಬೇಡಿಕೆ. ಪೂರ್ಣಿಮಾ ಡಾಕ್ಟರ್‌ಗೆ ಕರೆ ಮಾಡಿ ಸರ್ ನಾನು ಮೊನ್ನೆ ನಿಮ್ಮ ಆಸ್ಪತ್ರೆಗೆ ಚೆಕಪ್ಗೆ ಬಂದಿದ್ದೆ. ನಾನು ಅವಿನಾಶ್ ಪತ್ನಿ ಎಂದು ಹೇಳಿದಾಗ ಡಾಕ್ಟರ್ "ಸರಿ ಯಾವ ಕಾರಣಕ್ಕಾಗಿ ನನಗೆ ಕರೆ ಮಾಡಿದ್ದೀರಿ. ಏನಾದರೂ ವಿಚಾರ ಇತ್ತ?" ಎಂದಾಗ ಪೂರ್ಣಿಮಾಗೆ "ಚೆಕಪ್ ಮಾಡಿಸಿಕೊಂಡ ರಿಪೋರ್ಟ್ ಬೇಕು. ನಾನು ಅದನ್ನೊಮ್ಮೆ ನೋಡ್ಬೇಕು ಡಾಕ್ಟರ್" ಎಂದು ಹೇಳುತ್ತಾಳೆ.
ಡಾಕ್ಟರ್‌ಗೆ ಕೊಂಚ ಕನ್ಫ್ಯೂಷನ್ ಆಗುತ್ತದೆ. ಅವಿನಾಶ್ ಅವರು ನಿಮ್ಮ ಬಳಿ ಏನೂ ಹೇಳಿಲ್ವಾ? ಎಂದಾಗ ಪೂರ್ಣಿಮಾಗೆ ಡೌಟ್ ಬರುತ್ತದೆ. "ಇದೇನಪ್ಪಾ ಡಾಕ್ಟರ್ ಈ ರೀತಿ ನನ್ನ ಬಳಿ ಹೇಳಿದ್ದು ಯಾಕೆ?" ಎಂದು ಅನುಮಾನದಿಂದ ಪೂರ್ಣಿಮಾ ಮಾತನಾಡುತ್ತಾಳೆ. ಅವಿನಾಶ್ ನನಗೆ ಎಲ್ಲಾ ಹೇಳಿದ್ದಾರೆ. ನಾನು ಅವರ ಬಳಿ ಮಾತನಾಡಿದ್ದೇನೆ. ನನಗೆ ಒಂದಲ್ಲ ಎರಡು ಮಕ್ಕಳಾಗುತ್ತದೆ ಎಂದು ಹೇಳಿದ್ದಾರೆ ಎಂದು ಬಹಳ ಖುಷಿಯಿಂದ ಹೇಳುತ್ತಾಳೆ. ಆಕೆಯ ಮಾತುಗಳನ್ನು ಕೇಳಿದ ಡಾಕ್ಟರ್‌ಗೆ ಏನು ಮಾತನಾಡಬೇಕು ಎಂದು ತಿಳಿಯದೇ ಸುಮ್ಮನಾಗುತ್ತಾರೆ.

ಅವಿನಾಶ್ ಆಗಲೇ ಪೂರ್ಣಿಮಾ ಮಾತುಗಳನ್ನು ಕೇಳಿಸಿಕೊಂಡಿರುತ್ತಾನೆ. ಆತ ಡಾಕ್ಟರ್‌ಗೆ ಕರೆ ಮಾಡಿದಾಗ "ಪೂರ್ಣಿಮಾಗೆ ಏನು ತಿಳಿದಿಲ್ಲ. ಆಕೆಗೆ ನಿಜ ವಿಚಾರ ಹೇಳಿದರೆ ತೊಂದರೆ ಆಗುತ್ತದೆ .ಆಕೆಗೆ ನಿಜ ಹೇಳುವ ಧೈರ್ಯ ನನ್ನ ಬಳಿ ಇಲ್ಲ. ಹಾಗೆಯೇ ಆಕೆ ನಿಜ ಹೇಳಿದರೆ ಅದನ್ನು ತಡೆದುಕೊಳ್ಳುತ್ತಾಳೆ ಎಂದು ನನಗೆ ಅನಿಸುತ್ತಿಲ್ಲ' ಎಂದು ಹೇಳುತ್ತಾನೆ. ಬಳಿಕ ಪೂರ್ಣಿಮಾ ಬಳಿ ಸುಳ್ಳು ಹೇಳಿ ಮ್ಯಾನೇಜ್ ಮಾಡುತ್ತಾರೆ. ಪೂರ್ಣಿಮಾ ನನಗೆ ಮಗು ಆಗುತ್ತದೆ ಎನ್ನುವ ಖುಷಿಯಲ್ಲಿ ಇರುತ್ತಾಳೆ.
ಪೂರ್ಣಿಮಾಗೆ ಸುಳ್ಳು ಹೇಳಿದ ಡಾಕ್ಟರ್
ಆಗ ನಾಚಿದ ಪೂರ್ಣಿಮಾ ಆತನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಾಳೆ. ಇತ್ತ ತುಳಸಿ ದೇವರ ಕೋಣೆಯ ಬಳಿ ಕುಳಿತು ಹೂವು ಕಟ್ಟುತ್ತಾ ಇರುತ್ತಾಳೆ. ದೇವಾಲಯಕ್ಕೆ ಹೋಗಿ ಬಂದ ಪೂರ್ಣಿಮಾ, ತುಳಸಿ ಬಳಿ ಮಾತನಾಡುತ್ತಾಳೆ. "ಅಮ್ಮ ನಾನು ದೇವಸ್ಥಾನಕ್ಕೆ ಹೋಗಿ ಬಂದೆ. ನನಗೆ ಮಗು ಆಗುವುದಕ್ಕೆ ಪುರೋಹಿತರು ಒಂದು ವೃತ ಆಚರಣೆ ಮಾಡಲು ಹೇಳಿದ್ದಾರೆ. ನಾನು ಆ ಪ್ರಕಾರವಾಗಿ ನಡೆದುಕೊಂಡರೆ, ಖಂಡಿತ ನನಗೆ ಮಕ್ಕಳು ಆಗುತ್ತದೆ ಎಂದು ಹೇಳಿದ್ದಾರೆ" ಎಂದು ಹೇಳಿದಾಗ ಪೂರ್ಣಿಮಾ ಬಳಿ ನಿಜ ವಿಚಾರ ಹೇಳಲು ಆಗದೆ, ಏನು ಮಾಡುವುದು ಎಂದು ತಿಳಿಯದೇ ಬಹಳ ಬೇಸರ ಪಟ್ಟುಕೊಳ್ಳುತ್ತಾಳೆ.
ಮಗುವಿಗಾಗಿ ಹಂಬಲಿಸುತ್ತಿರುವ ಪೂರ್ಣಿಮಾ
"ಮಕ್ಕಳು ಆಗುವುದಿಲ್ಲ ಎಂದು ನಾನು ಹೇಗೆ ಪೂರ್ಣಿಮಾ ಬಳಿ ಹೇಳಲಿ. ಅವಿನಾಶ್ ಬೇರೆ ಈ ವಿಚಾರವನ್ನು ಎಲ್ಲಿಯೂ ಹೇಳಬಾರದು ಎಂದು ಹೇಳಿದ್ದಾರೆ" ಎಂದು ಮನಸ್ಸಿನಲ್ಲಿ ಯೋಚನೆ ಮಾಡುತ್ತಾರೆ. ಹಾಗೆಯೇ ಪೂರ್ಣಿಮಾ ಮಾತಿಗೆ ಹೌದು ಎನ್ನುವ ಉತ್ತರವನ್ನು ನೀಡುತ್ತಾಳೆ. ಪೂರ್ಣಿಮಾಗೆ ಮಕ್ಕಳು ಆಗಲೇಕು ಎನ್ನುವುದು ತುಳಸಿಯ ಆಸೆ. ಆದರೆ ಈ ವ್ರತ ಆಚರಣೆ ಮಾಡಬೇಡ. ನಿನಗೆ ಮಕ್ಕಳು ಆಗುವುದಿಲ್ಲ ಎಂದು ಹೇಳಲು ತುಳಸಿಗೆ ಧೈರ್ಯ ಸಾಲುತ್ತಿಲ್ಲ.
ಕಠಿಣ ವೃತಕ್ಕೆ ಮುಂದಾದ ಪೂರ್ಣಿಮಾ
ಪೂರ್ಣಿಮಾ ಇದೀಗ ಕಠಿಣವಾದ ವ್ರತ ಆಚರಣೆ ಮಾಡಲು ಸಿದ್ದವಾಗಿದ್ದಾರೆ. ಪೂರ್ಣಿಮಾಗೆ ತಾನು ಮಗು ಜೊತೆ ಉತ್ತಮವಾದ ಸಂಬಂಧವನ್ನು ಹೊಂದಬೇಕು. ನನಗಿಂತ ಒಂದು ಜೀವ ಬೇಕು ನನಗೆ ಎಂದು ಬಹಳ ಪ್ರೀತಿಯಿಂದ ತನ್ನ ಮಗುವಿನ ಆಗಮನದ ನಿರೀಕ್ಷೆ ಮಾಡುತ್ತಿರುತ್ತಾಳೆ. ಆದರೆ. ಆಕೆಗೆ ಅರಿವಿಲ್ಲದೆ ಕನಸಿನ ಗೋಪುರ ಕಟ್ಟಿಕೊಂಡು ಇರುತ್ತಾಳೆ. ಇನ್ನೂ ಸತ್ಯ ತಿಳಿದರೆ ಪೂರ್ಣಿಮಾ ಗತಿ ಏನಾಗುತ್ತೋ..


Click it and Unblock the Notifications











