Shrirasthu Shubhamasthu: ಮಹೇಶನ ಮಾತು ಕೇಳಿ ತುಳಸಿ ಶಾಕ್; ಏನಿದೆ ಆಕ್ಸಿಡೆಂಡ್ ಮ್ಯಾಟರ್?

By ಪೂರ್ವ

ತುಳಸಿಗೆ ಮಹೇಶನ ಮನಸ್ಸಿನಲ್ಲಿ ಏನೋ ಕೊರೆಯುತ್ತಿದೆ ಎನ್ನುವುದು ಸರಿಯಾಗಿ ತಿಳಿದಿತ್ತು. ತುಳಸಿ ಮನೆ ಮಂದಿಯನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಳು. ಅದೇ ರೀತಿ ಮಹೇಶ ಇತ್ತೀಚೆಗಿನ ದಿನಗಳಲ್ಲಿ ಮಾತನಾಡುತ್ತಿರುವ ರೀತಿ ಬದಲಾಗುತ್ತಿದೆ. ಒಮ್ಮೊಮ್ಮೆ ಏನೋ ನೆನಪಾದವರ ಹಾಗೆ ಮಾತನಾಡುತ್ತಾರೆ. ಅವರ ಮಾತುಗಳನ್ನು ಕೇಳಿದ ತುಳಸಿಗೆ ಮನಸ್ಸಿನಲ್ಲಿ ಏನೋ ಇದೆ. ಏನೋ ವಿಚಾರವನ್ನು ಮುಚ್ಚಿಡುತ್ತಿದ್ದಾರೆ ಅನಿಸಿತ್ತು.

ಮಹೇಶ ಬಳಿ ಅದನ್ನು ಕೇಳಲೇ ಬೇಕು. ಇಲ್ಲವಾದರೆ ಮಹೇಶ ಮನಸ್ಸು ಮತ್ತಷ್ಟು ಕೆಡಬಹುದು ಎಂದುಕೊಳ್ಳುತ್ತಾರೆ. ಈ ವಿಚಾರವನ್ನು ಮಾಧವ ಬಳಿ ಕೂಡ ತುಳಸಿ ಚರ್ಚೆ ಮಾಡದೇ ಮಹೇಶನ ಬಳಿ ತುಳಸಿ ಬರುತ್ತಾರೆ. ತುಳಸಿಯನ್ನು ನೋಡಿದ ಮಹೇಶ, ತುಳಸಿಯನ್ನು ಕರೆಯುತ್ತಾರೆ. ತುಳಸಿ ಈ ಸಮಯದಲ್ಲಿ ಮಹೇಶನ ಬಳಿ "ಮಹೇಶ ಅವರೇ ನೀವು ಹುಷಾರಾಗಿ ಇದ್ದೀರಾ ಅಲ್ವಾ? ಏನು ಪ್ರಾಬ್ಲಂ ಇಲ್ಲ ತಾನೇ?" ಎಂದು ಕೇಳಿದಾಗ ಮಹೇಶ, ನಿತ್ಯ ಹೇಗೆ ಮಾತನಾಡುತ್ತಾನೆ ಅದೇ ರೀತಿಯಲ್ಲಿ ತುಳಸಿ ಬಳಿ ಮಾತನಾಡುತ್ತಾರೆ.

Shrirasthu Shubhamasthu serial April 21st episode update

ತುಳಸಿ, ಮಹೇಶನ ಬಳಿ ಕುಳಿತು "ಹಿಂದಿನ ದಿನದ್ದು ನಿಮಗೆ ಏನಾದರೂ ವಿಚಾರ ಇದೆಯಾ ಹೇಳಲು? ದಯವಿಟ್ಟು ಅದನ್ನು ನನ್ನ ಬಳಿ ಹೇಳಿಕೊಳ್ಳಿ. ನಾನು ನಿಮಗೆ ಪರಿಹಾರವನ್ನು ಕೊಡುತ್ತೇನೆ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಮಹೇಶ ಹಳೆಯದೆಲ್ಲ ನೆನಪಾದವರ ಹಾಗೆ ಮಾತನಾಡುತ್ತಾರೆ. "ಅಣ್ಣ ಹಾಗೂ ಅತ್ತಿಗೆ ಕುಳಿತುಕೊಂಡಿದ್ದ ಕಾರು ನಿಜವಾಗಿಯೂ ಆಕ್ಸಿಡೆಂಟ್ ಆಗಿರುವುದು ಅಲ್ಲ. ಅದು ನಿಜವಾಗಿ ಆಕ್ಸಿಡೆಂಟ್ ಮಾಡಿರುವುದು" ಎಂದು ಹೇಳುತ್ತಾರೆ. ಇದನ್ನು ಕೇಳಿದ ತುಳಸಿಗೆ ಶಾಕ್ ಆಗುತ್ತದೆ.

ಮಹೇಶನ ಮಾತು ಕೇಳಿ ತುಳಸಿ ಶಾಕ್

ತುಳಸಿ ಪುನಃ ಪ್ರಶ್ನೆ ಮಾಡುತ್ತಾರೆ. "ಮಹೇಶ ಅವರೇ ಯಾರು ಆಕ್ಸಿಡೆಂಟ್ ಮಾಡಿಸಿರುವುದು? ನೀವು ಏನು ಹೇಳುತ್ತಿದ್ದೀರಿ?" ಎಂದು ಕೇಳಿದಾಗ ಆತನಿಗೆ ಏನು ಮಾಡಬೇಕು ಎಂದು ತಿಳಿಯದಾಗದೆ ಹೋಗುತ್ತೆ. ಇದನ್ನೆಲ್ಲ ನೋಡಿದ ಮಹೇಶನ ಹೆಂಡತಿಗೆ ದೊಡ್ಡ ಶಾಕ್ ಆಗುತ್ತದೆ. ಮಹೇಶ ಎಲ್ಲಿ ಸತ್ಯವನ್ನು ಬಾಯಿ ಬಿಡುತ್ತಾನೆ ಏನೋ?" ಎನ್ನುವ ಆತಂಕ ಆಕೆಯ ಮನಸ್ಸಿನಲ್ಲಿ ಆವರಿಸಿಕೊಂಡು ಬಿಡುತ್ತದೆ.

ಮಕ್ಕಳಿಗಾಗಿ ಪೂರ್ಣಿಮಾ ದೇವರ ಮೊರೆ

ಇತ್ತ ಪೂರ್ಣಿಮಾ ತನಗೆ ಮಕ್ಕಳಾಗಲಿ ಎಂದು ಕಂಡ ಕಂಡ ದೇವರಲ್ಲಿ ಬೇಡಿಕೊಳ್ಳುತ್ತಾಳೆ. ಆಕೆಗೆ ತನಗೆ ಮಕ್ಕಳು ಆಗಿಲ್ಲ ಎನ್ನುವ ಕೊರಗಿನಲ್ಲಿ ಎಲ್ಲಾ ದೇವರಲ್ಲಿ ಕೂಡ ಅದೊಂದೇ ಕೋರಿಕೆಯನ್ನು ಮುಂದಿಟ್ಟಿದ್ದಾರೆ. ಇದೀಗ ಕಠಿಣ ವೃತ ಬೇರೆ ಮಾಡುತ್ತಿದ್ದಾಳೆ. ಇದನ್ನೆಲ್ಲ ನೋಡಿದ ಅವಿನಾಶ್‌ಗೆ ಮಾತೇ ಬಾರದಾಗಿ ಹೋಗಿದೆ. ಇದೀಗ ಅವಿನಾಶ್ ಕೂಡ ಪೂರ್ಣಿಮಾ ಎಲ್ಲಿ ಮಲಗುತ್ತಾಳೆ. ಅಲ್ಲಿಯೇ ಮಲಗುತ್ತಾನೆ. ಇದನ್ನು ನೋಡಿದ ತುಳಸಿಗೆ ಬಹಳ ಬೇಸರ ಆಗುತ್ತದೆ. ಯಾಕೆ ಹೀಗೆಲ್ಲ ಆಗುತ್ತಿದೆ ದೇವರೇ. ಪೂರ್ಣಿಮಾಗೆ ಮಕ್ಕಳಾಗುವ ಭಾಗ್ಯ ನೀಡು ಎಂದು ಬೇಡಿಕೊಳ್ಳುತ್ತಾರೆ.

Shrirasthu Shubhamasthu serial April 21st episode update

ಅವಿನಾಶ್ ಮಾತು ಕೇಳಿ ಧೈರ್ಯ ತುಂಬಿದ ತುಳಸಿ

ಆಕೆಯ ಮಾತು ಕೇಳಿದ ಅವಿನಾಶ್‌ಗೆ ಎಚ್ಚರ ಆಗುತ್ತದೆ. ಪೂರ್ಣಿಮಾ ಕೂಡ ಎದ್ದು ಮುಖ ತೊಳೆಯಲು ಹೋಗುತ್ತಾಳೆ. ಅವಿನಾಶ್, ತುಳಸಿ ಬಳಿ ಬಂದು "ಅಮ್ಮ ನನಗೆ ಏನು ಹೇಳಬೇಕು ಅನ್ನೋದೇ ತಿಳಿಯುತ್ತಿಲ್ಲ. ದಯವಿಟ್ಟು ಅಮ್ಮ ತುಳಸಿ ಮಾಡುತ್ತಿರುವ ಆಚರಣೆ ನನಗೆ ನೋಡಲು ಆಗುತ್ತಿಲ್ಲ. ಆಕೆಗೆ ಈ ಕಠಿಣ ವ್ರತ ಮಾಡಿದ ಬಳಿಕ ಆದರೂ ದೇವರು ಕಣ್ಣು ಬಿಟ್ಟರೆ ಒಳ್ಳೆಯದಿತ್ತು. ಪೂರ್ಣಿಮಾಗೆ ಡಾಕ್ಟರ್ ಮಕ್ಕಳಾಗುವುದು ಇಲ್ಲ ಎಂದಿದ್ದಾರೆ. ಆದರೆ ಇದನ್ನು ಆಕೆಯ ಬಳಿ ಹೇಳಲು ಆಗದೆ ತಲೆ ಕೆಟ್ಟು ಹೋಗಿದೆ" ಎಂದು ಹೇಳುತ್ತಾನೆ. ಅದಕ್ಕೆ ತುಳಸಿ "ಆಕೆಗೆ ಮಕ್ಕಳಾಗುವುದು ಇಲ್ಲ ಎಂದು ಡಾಕ್ಟರ್ ಹೇಳಿದ್ದಾರೆ ನಿಜ. ಆದರೆ, ಆ ದೇವರು ಮನಸ್ಸು ಮಾಡಿದರೆ ಅಸಾಧ್ಯ ಅಲ್ಲದ್ದನ್ನು ಸಾಧ್ಯ ಮಾಡುತ್ತಾರೆ" ಎಂದು ಧೈರ್ಯ ತುಂಬುತ್ತಾರೆ.

More from Filmibeat

English summary
Shrirasthu Shubhamasthu serial April 21st episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X