Shrirasthu Shubhamasthu:ಪೂರ್ಣಿಮಾ ವ್ರತ ಭಂಗ ಮಾಡಿದ ದೀಪಿಕಾ ಕೈ ತಿರುಪಿ ಆವಾಜ್

By ಪೂರ್ವ

ಪೂರ್ಣಿಮಾಗೆ ತಾನು ಅಮ್ಮ ಆಗಬೇಕೆಂಬ ಕನಸು. ಅದಕ್ಕಾಗಿ ವ್ರತ ಮಾಡುತ್ತಿರುತ್ತಾಳೆ. ತನ್ನನ್ನು ಅಮ್ಮ ಎಂದು ಕರೆಯುವ ಒಂದು ಜೀವ ಬೇಕು ಎನ್ನುವ ಆಸೆ ಅವಳಿಗೆ. ಆದರೆ, ಡಾಕ್ಟರ್ ರಿಪೋರ್ಟ್ ಪ್ರಕಾರ ಇನ್ಮೇಲೆ ತುಳಸಿಗೆ ಮಗು ಆಗುವುದು ಇಲ್ಲ ಎಂದು ಹೇಳುತ್ತಾರೆ. ಆದರೆ, ಈ ವಿಚಾರ ಅವಿನಾಶ್‌ಗೂ ತಿಳಿದಿದೆ. ಅದು ಯಾವುದೂ ಪೂರ್ಣಿಮಾಗೆ ತಿಳಿಯದ ಹಾಗೆ ನೋಡಿಕೊಳ್ಳುತ್ತಾನೆ. ತುಳಸಿಗೆ ಕೂಡ ಪೂರ್ಣಿಮಾಗೆ ಮಗು ಆಗುವುದಿಲ್ಲ ಎನ್ನುವುದು ಗೊತ್ತು. ಆದರೂ ವ್ರತ ಮಾಡುವುದರಿಂದ ದೇವರು ಕಣ್ಣು ಬಿಟ್ಟು ಆಕೆಗೆ ಮಗುವಾಗುವ ಅದೃಷ್ಟ ಕರುಣಿಸಬಹುದು ಎನ್ನುವ ಆಸೆ ಆಕೆಗೆ.

ಆದರೂ ಯಾರ ಬಳಿಯೂ ಏನು ಹೇಳದೆ, ಅವಳ ಪಾಡಿಗೆ ಅವಳು ಇರುತ್ತಾರೆ. ಹಾಗೆಯೇ ಪೂರ್ಣಿಮಾಗೆ ಧೈರ್ಯವನ್ನು ಹೇಳುತ್ತಿರುತ್ತಾರೆ. ಅವಿನಾಶ್ ಕೂಡ ಪೂರ್ಣಿಮಾಗೆ ಮಕ್ಕಳಾಗುವುದಿಲ್ಲ ಎಂದು ತಿಳಿದು ಬಹಳ ಬೇಸರ ಪಟ್ಟುಕೊಂಡಿರುತ್ತಾನೆ. ಆತನಿಗೆ ಪೂರ್ಣಿಮಾ ನಿಜ ಹೇಳುವ ಧೈರ್ಯ ಇರುವುದಿಲ್ಲ. ಇತ್ತ ದೀಪಿಕಾಗೆ ಆಸ್ತಿಯ ಆಸೆ. ಪೂರ್ಣಿಮಾಗೆ ಮಗು ಆಗುವುದಿಲ್ಲ ಎಂದು ತಿಳಿದು ದೀಪಿಕಾ ಬಹಳ ಖುಷಿ ಪಡುತ್ತಾಳೆ. ಆಸ್ತಿ ಎಲ್ಲಾ ನನ್ನ ಮಕ್ಕಳಿಗೆ ಸಿಗುತ್ತದೆ. ಅದಕ್ಕೆ ವಾರಸುದಾರ ನಾನೇ ಜನ್ಮ ನೀಡುತ್ತೇನೆ. ಈ ಪೂರ್ಣಿಮಾಗೆ ನಾನು ತಕ್ಕ ಪಾಠ ಕಲಿಸುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.

Shrirasthu Shubhamasthu serial April 22nd episode update

ಪೂರ್ಣಿಮಾಗೆ ಏನು ತಿಳಿಯದೇ ದೇವರ ಮೊರೆ ಹೋಗಿದ್ದಾಳೆ. ತುಳಸಿ ಕೂಡ ಇದಕ್ಕೆ ಬೆಂಬಲ ನೀಡುತ್ತಾರೆ. ಯಾಕೆಂದರೆ, ದೇವರು ಈಕೆಗೆ ಆಶೀರ್ವಾದ ಮಾಡಿ ಮಗುವನ್ನು ಕರುಣಿಸಲಿ ಎನ್ನುವುದು ಆಕೆಯ ಬಯಕೆ. ಪೂರ್ಣಿಮಾ ಎಂತಹ ಕಠಿಣ ಸಂದರ್ಭದಲ್ಲಿ ಕೂಡ ದೇವರ ವ್ರತ ಆಚರಣೆಯನ್ನು ಪಾಲನೆ ಮಾಡುತ್ತಿರುತ್ತಾಳೆ. ಆಗ ಅಲ್ಲಿಗೆ ಫೋನ್ ಹಿಡಿದುಕೊಂಡು ಬಂದ ದೀಪಿಕಾ, ಪೂರ್ಣಿಮಾ ಎದುರಲ್ಲಿಯೇ ಜೋರಾಗಿ ಫೋನ್‌ನಲ್ಲಿ ಮಾತನಾಡುತ್ತಾಳೆ. ಆದರೆ, ಇದು ನಾಟಕ ಎನ್ನುವ ವಿಚಾರ ಪೂರ್ಣಿಮಾಗೆ ತಿಳಿದಿರುವುದಿಲ್ಲ.

ಪೂರ್ಣಿಮಾ ಬಳಿ ನಿಂತು ಡ್ರಾಮ

ಹಲೋ ಏನು ಅವಿನಾಶ್ ಅವರಿಗೆ ಆಕ್ಸಿಡೆಂಟ್ ಆಗಿದೆಯಾ? ಎಲ್ಲಿ? ಯಾವಾಗ? ಎಂದು ಶಾಕ್‌ನಲ್ಲಿ ಪ್ರಶ್ನೆ ಮಾಡುತ್ತಿರುತ್ತಾಳೆ. ಇದನ್ನು ಕೇಳಿಸಿಕೊಂಡ ಪೂರ್ಣಿಮಾ ದೇವರ ಕೋಣೆಯಿಂದ ಓಡೋಡಿ ಬರುತ್ತಾಳೆ. ನನ್ನ ಗಂಡ ಹೇಗಿದ್ದಾರೆ? ಎಂದು ತಿಳಿದುಕೊಳ್ಳುವ ಕಾತರದಲ್ಲಿ ವೃತ ಭಂಗ ಮಾಡಿಕೊಂಡು ಬರುತ್ತಾಳೆ. ದೀಪಿಕಾ ಬಳಿ ಬಂದು "ನನ್ನ ಗಂಡನಿಗೆ ಏನಾಯಿತು ದೀಪಿಕಾ?" ಎಂದು ಕೇಳಿದಾಗ, ದೀಪಿಕಾ ಜೋರಾಗಿ ನಗುತ್ತಾಳೆ. "ನಿನ್ನ ವ್ರತ ಹಾಳು ಮಾಡಲು ನಾನು ಬಂದಿದ್ದು. ಇದೀಗ ನೀನು ಮಾಡುತ್ತಿರುವ ವ್ರತ ಹಾಳಾಗಿ ಹೋಯಿತು" ಎಂದು ನಗುತ್ತಾ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಪೂರ್ಣಿಮಾಗೆ ಸಿಕ್ಕಾಪಟ್ಟೆ ಕೋಪ ಬರುತ್ತೆ.

Shrirasthu Shubhamasthu serial April 22nd episode update

ದೀಪಿಕಾ ನಾಟಕಕ್ಕೆ ಸೊಪ್ಪು ಹಾಕದ ಪೂರ್ಣಿಮಾ

"ಯಾಕೆ ಹೀಗೆಲ್ಲ ಮಾಡಿದೆ" ಎಂದು ಕೇಳುತ್ತಾಳೆ. ಆಗ ದೀಪಿಕಾ "ನಿನಗೆ ಯಾವುದೇ ಕಾರಣಕ್ಕೂ ಮಕ್ಕಳು ಆಗಬಾರದು. ಅದುವೇ ನನ್ನ ಆಸೆ. ಅದಕ್ಕೆ ನಾನು ನೀನು ಮಾಡುತ್ತಿರುವ ವ್ರತ ಭಂಗ ಮಾಡಿದೆ" ಎಂದಾಗ ಪೂರ್ಣಿಮಾ ಸುಮ್ಮನಿರುವುದಿಲ್ಲ. ದೀಪಿಕಾ ಕೈಯನ್ನು ತಿರುಗಿಸಿ "ನಾನು ಸುಮ್ಮನೆ ಇದ್ದೇನೆ ಎಂದು ಹೇಳಿದರೆ, ಅದು ನನ್ನ ಬಲ ಹೀನತೆ ಅಲ್ಲ. ನನ್ನಿಂದಾಗಿ ಯಾರಿಗೂ ಕೂಡ ನೋವು ಆಗಬಾರದು ಎನ್ನುವ ಉದ್ದೇಶ ಅಷ್ಟೇ. ನೀನು ನನ್ನ ತಂಟೆಗೆ ಬಂದರೆ, ನಾನು ಇದಕ್ಕಿಂತ ಹತ್ತು ಪಟ್ಟು ನೋವು ಜಾಸ್ತಿ ನೀಡುತ್ತೇನೆ" ಎಂದು ಖಡಕ್ ವಾರ್ನಿಂಗ್ ಕೊಡುತ್ತಾಳೆ.

ದೀಪಿಕಾ ನಾಟಕಕ್ಕೆ ಫುಲ್ ಸ್ಟಾಪ್

ಪೂರ್ಣಿಮಾ ಮಾತ್ರ ದೀಪಿಕಾಗೆ ವಾರ್ನಿಂಗ್ ನೀಡುವಾಗ ಇನ್ನಷ್ಟು ಕೋಪ ಬರುತ್ತದೆ. ಆದರೂ ಅದೆಲ್ಲವನ್ನೂ ಕಂಟ್ರೋಲ್ ಮಾಡಿಕೊಳ್ಳುತ್ತಾಳೆ. ನಾನು ಈಗ ಏನಾದರೂ ನನ್ನ ವರಸೆ ತೋರಿಸಲು ಹೋದರೆ ಖಂಡಿತವಾಗಿಯೂ ನನಗೆ ಉಳಿಗಾಲ ಇಲ್ಲ ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಅದಲ್ಲದೆ ಪೂರ್ಣಿಮಾಗೆ ಮಕ್ಕಳು ಆಗುವುದಿಲ್ಲ ಎಂಬ ಸತ್ಯವನ್ನು ಹೇಳಲು ಆಗದೆ ಮೆತ್ತಗಾಗುತ್ತಾಳೆ.

More from Filmibeat

English summary
Shrirasthu Shubhamasthu serial April 22nd episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X