Shrirasthu Shubhamasthu: ಮಹೇಶನ ಎದುರು ಬಯಲಾಯಿತು ಶಾರ್ವರಿ ಎರಡನೇ ಮುಖ; ಮುಂದೇನು?
ಶಾರ್ವರಿಗೆ ಮಾಧವನ ಕುಟುಂಬದ ಜೊತೆ ಅದೆಷ್ಟೇ ವೈರತ್ವವನ್ನು ಹೊಂದಿದ್ದರೂ, ಮಾಧವ ಮಾತ್ರ ತನ್ನ ತಮ್ಮನ ಹೆಂಡತಿ ತನ್ನದೇ ಕುಟುಂಬ ಎಂದೆಲ್ಲ ತನ್ನ ಜೀವನವನ್ನು ಮುಡಿಪಾಗಿ ಇಟ್ಟಿದ್ದಾರೆ. ಶಾರ್ವರಿ, ಮಾಧವನ ವಿರುದ್ಧವೇ ಆತನ ಮಕ್ಕಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ. ಆಕೆಗೆ ಮಾಧವ ಎಂದರೆ ಬಹಳ ಕೋಪ. ಆತನ ಕುಟುಂಬ ಸರ್ವನಾಶ ಆಗಬೇಕು ಎಂದು ಅದೆಷ್ಟೋ ಸಲ ಬಯಸುತ್ತಾಳೆ.
ಮಹೇಶನಿಗೇ ಶಾರ್ವರಿ ಮಾಡಿದ ತಪ್ಪಿನ ಬಗ್ಗೆ ಅರಿವು ಇದೆ. ಯಾಕೆಂದರೆ, ತನ್ನ ಅಣ್ಣ ಮಾಧವ ಎಂದರೆ ಮಹೇಶನಿಗೆ ಬಹಳ ಪ್ರೀತಿ. ಮಾಧವನ ಜೊತೆ ಇದ್ದಷ್ಟು ಖುಷಿಯಲ್ಲಿ ಆತ ಬೇರೆ ಯಾರ ಜೊತೆಯೂ ಇರಲಿಲ್ಲ. ಅಷ್ಟರ ಮಟ್ಟಿಗೆ ಮಾಧವ ಎಂದರೆ ಇಷ್ಟ. ಅಂತಹ ಅಣ್ಣ ಹಾಗೂ ಅತ್ತಿಗೆಯ ಜೊತೆ ಬಹಳ ಖುಷಿಯಲ್ಲಿ ಇದ್ದ ಸಂಸಾರದಲ್ಲಿ ಶಾರ್ವರಿ ಬೆಂಕಿ ಹತ್ತಿಸುತ್ತಾರೆ. ಅದೆಲ್ಲವನ್ನೂ ಮಹೇಶ ಬಿಡಿ ಬಿಡಿ ಆಗಿಯೇ ತನ್ನ ಹೆಂಡತಿಯ ಬಳಿ ಹೇಳುತ್ತಿದ್ದಾನೆ.

ಇದೆಲ್ಲವನ್ನು ಕೇಳಿದ ಶಾರ್ವರಿಗೆ ನಡುಕ ಶುರುವಾಗುತ್ತಿದೆ. ಇದೇನಪ್ಪಾ ಮಹೇಶ್‌ಗೆ ಇದೆಲ್ಲ ಹೇಗೆ ತಿಳಿಯಿತು. ಹಿಂದಿನ ಘಟನೆಗಳು ಅವರಿಗೆ ನೆನಪಿಗೆ ಬಂತಾ? ಎನ್ನುವ ಪ್ರಶ್ನೆ ಶಾರ್ವರಿಯನ್ನು ಕಾಡುತ್ತಿದೆ. ಮಹೇಶನಿಗೆ ಹಳೇ ಘಟನೆಗಳು ಹಲವು ದಿನಗಳ ಮುಂಚೆಯೇ ಬಂದಿರುತ್ತದೆ. ಆದರೆ ಅದನ್ನು ಯಾರ ಜೊತೆಯೂ ಹೇಳಿಕೊಂಡಿರಲಿಲ್ಲ. ಕೊನೆಗೆ ಮಹೇಶ ಹಾಗೂ ಶಾರ್ವರಿಯ ಫೇವರಿಟ್ ಜಾಗಕ್ಕೆ ಬಂದಾಗ ಮನಸ್ಸಿನಲ್ಲಿದ್ದ ವಿಚಾರವನ್ನು ಹೇಳುತ್ತಾರೆ. "ಯಾಕೆ ಹೀಗೆಲ್ಲ ಮಾಡಿದೆ ಶಾರ್ವರಿ. ನೀನು ಅವತ್ತು ಅಣ್ಣ ಮತ್ತೆ ಅತ್ತಿಗೆ ಇಬ್ಬರು ಎಲ್ಲಿಗೋ ಹೊರಟು ನಿಂತಾಗ ಅವರನ್ನು ಚೆನ್ನಾಗಿಯೇ ಕಳುಹಿಸಿಕೊಟ್ಟ ನೀನು. ನಾನು ಅವರೊಟ್ಟಿಗೆ ಹೋಗುವುದನ್ನು ಯಾಕೆ ತಡೆದೆ. ಅವತ್ತೇ ಆಕ್ಸಿಡೆಂಟ್ ಆಯಿತು. ಅಂದರೆ ನೀನು ಅವರಿಬ್ಬರನ್ನು ಸಾಯಿಸಲು ಮುಹೂರ್ತ ಇಟ್ಟಿದ್ದೆ ಅಲ್ವಾ" ಎಂದಾಗ ಶಾರ್ವರಿಗೆ ಶಾಕ್ ಆಗುತ್ತೆ.
ಮಹೇಶನ ಎದುರು ನಿಂತ ಶಾರ್ವರಿಗೆ ನಡುಕ
ಇದೆಲ್ಲ ಇದೀಗ ಮಹೇಶ ಅವರ ಅರಿವಿಗೆ ಬರುತ್ತಿದೆ. ಇದೀಗ ನಾನು ಸುಮ್ಮನೆ ಇದ್ದರೆ ಉಳಿಗಾಲ ಇಲ್ಲ ಎನ್ನುವುದು ತಿಳಿಯುತ್ತದೆ. ಇತ್ತ ಮಹೇಶ ಹೇಳುತ್ತಾರೆ. "ನಾನು ಆವತ್ತು ನಿನ್ನನ್ನು ನೋಡಿದ್ದು ಸರಿಯಾಗಿ ನೆನಪಿದೆ. ಆ ಖರ್ಜೂರವನ್ನು ತಿನ್ನುತ್ತಾ ಅಣ್ಣ ಹಾಗೂ ಅತ್ತಿಗೆಯನ್ನು ಕೊಲ್ಲಲು ಸಂಚು ಮಾಡಿದ್ದರ ಬಗ್ಗೆ ಹಾಗೆಯೇ ನೀನು ಹೇಳಿದ್ದೆ" ಎಂದಾಗ ಶಾರ್ವರಿ "ಹೌದು ನಾನು ನಿಮ್ಮ ಮನೆಯನ್ನು ಸ್ಮಶಾನ ಮಾಡಲು ಹೊರಟಿದ್ದೆ. ಆದರೆ ಸುಮತಿ ಅಕ್ಕ ತೀರಿಕೊಂಡು ಬಿಟ್ಟರು. ನಾನು ಯಾವತ್ತೂ ಮಾಧವ ಅವರ ಕುಟುಂಬವನ್ನು ಸರ್ವ ನಾಶ ಮಾಡದೇ ಬಿಡುವವಳು ಅಲ್ಲ" ಎಂದು ಖಡಕ್ ಆಗಿ ಹೇಳುತ್ತಾಳೆ.

ಅಣ್ಣನ ಕುಟುಂಬ ಉಳಿಸಲು ಹರಸಾಹಸ
ಇದೆಲ್ಲವನ್ನೂ ಕೇಳಿದ ಮಹೇಶ ಕೋಪದಲ್ಲಿ ನಲುಗಿ ಹೋಗುತ್ತಾನೆ. ತನ್ನ ಹೆಂಡತಿಯಿಂದಾಗಿ ತನ್ನ ಅಣ್ಣನ ಕುಟುಂಬ ಒಡೆದು ಹೋಗಲು ನಾನು ಬಿಡುವುದಿಲ್ಲ ಎಂದು ಮಹೇಶ ಮನಸ್ಸಿನಲ್ಲಿ ಶಪಥ ಮಾಡುತ್ತಾನೆ. ಇತ್ತ ದತ್ತನ ಮನೆಯಲ್ಲಿ ಜುಗ್ಗನ ಫ್ಯಾಮಿಲಿ ಜಾಂಡವೂರಿರುವುದು ಮಾತ್ರ ದತ್ತನಿಗೆ ಸಹಿಸಿಕೊಳ್ಳಲು ಆಗದಷ್ಟು ಸಿಟ್ಟು ಬಂದಿದೆ.


Click it and Unblock the Notifications











