Shrirasthu Shubhamasthu: ಪೂರ್ಣಿಮಾಗೆ ದೀಪಿಕಾ ನಿಜ ಹೇಳಿದ್ದಾಯ್ತು; ಮುಂದೇನು ಮಾಡುತ್ತಾಳೆ?
ಶಾರ್ವರಿ ಮಾಡಿದ ಮೋಸದ ಇಂಚಿಂಚು ಎಲ್ಲವೂ ಮಹೇಶನಿಗೆ ತಿಳಿದಿದೆ. ಆದರೆ ಮಹೇಶ ಇದನ್ನೆಲ್ಲ ಮನೆ ಮಂದಿಗೆ ಹೇಳಬೇಕು ಎಂದು ಅಂದುಕೊಳ್ಳುತ್ತಾನೆ. ಶಾರ್ವರಿ ತನ್ನ ಅಣ್ಣನಿಗೆ ಮಾಡಿದ ಮೋಸಕ್ಕೆ ತಕ್ಕ ಪ್ರತಿಫಲ ಆಕೆಗೆ ನೀಡಬೇಕು. ಆಕೆ ಮಾಡಿದ್ದು ಯಾವುದು ಸರಿ ಅಲ್ಲ ಎನ್ನುವುದನ್ನು ಆಕೆಗೆ ಅರಿವು ಮಾಡಿಸಬೇಕು. ಕ್ರೌರ್ಯತನದಿಂದ ಎಲ್ಲರ ಮನಸ್ಸಿಗೆ ಬೆಂಕಿ ಇಡುತ್ತಿರುವ ಈಕೆಯನ್ನು ಹೇಗಾದರೂ ಮಾಡಿ ಮನುಷ್ಯಳನ್ನಾಗಿ ಮಾಡಬೇಕು ಎಂದು ಅಂದುಕೊಳ್ಳುತ್ತಾನೆ.
ಇತ್ತೀಚೆಗಿನ ದಿನಗಳಲ್ಲಿ ಶಾರ್ವರಿಯ ಅಟ್ಟಹಾಸ ಜೋರಾಗುತ್ತಿದೆ. ಆಕೆಗೆ ತಾನು ಮಾಡಿದ್ದು ಸರಿ ಎನ್ನುವ ಭಾವನೆ ಮನದಲ್ಲಿ ಬಂದು ಬಿಟ್ಟಿದೆ. ನನ್ನ ಮನೆಯಲ್ಲಿ ಎಲ್ಲರೂ ನಾನು ಹೇಳಿದ ಹಾಗೆಯೇ ಕೇಳಬೇಕು. ಹಾಗೆಯೇ ತನ್ನ ಮಾತೇ ನಡೆಯಬೇಕು ಎನ್ನುವ ಕಾರಣಕ್ಕೆ ಸುಮತಿಯನ್ನು ಹಾಗೂ ಮಾಧವನನ್ನು ಕೊಲೆ ಮಾಡಲು ಹುನ್ನಾರ ನಡೆಸುತ್ತಿರುತ್ತಾಳೆ. ಹಾಗೆಯೇ ಚಲಿಸುತ್ತಿದ್ದ ಕಾರಿಗೆ ಆಕ್ಸಿಡೆಂಟ್ ಮಾಡಿಸಿ, ಸುಮತಿಯನ್ನು ಸಾಯಿಸಿ ಬಿಡುತ್ತಾಳೆ. ಆದರೆ, ಅದೃಷ್ಟವಶಾತ್ ಮಾಧವ ಬದುಕಿ ಬರುತ್ತಾನೆ. ಆದರೆ, ಮಕ್ಕಳ ಮನಸ್ಸಿಗೆ ಏನೇನೆಲ್ಲಾ ತುಂಬಿ ಆತನನ್ನು ಲೆಕ್ಕಕ್ಕೆ ಇಲ್ಲದವರ ಹಾಗೆ ಮಾಡುತ್ತಾಳೆ.

ಆದರೆ, ಈ ಎಲ್ಲಾ ವಿಚಾರ ಮಹೇಶನಿಗೆ ತಿಳಿದು ಹೋಗಿದೆ. ಇದನ್ನು ಪ್ರಶ್ನೆ ಮಾಡಿದಾಗ ಶಾರ್ವರಿ ಅಸಲಿ ಬಣ್ಣ ಹೊರಗೆ ಬಂದಿದೆ. "ನನಗೆ ಅಧಿಕಾರ ಬೇಕು. ನಿಮ್ಮನ್ನು ಮದುವೆ ಆಗಿ ಬಂದ ಬಳಿಕ ನಿಮ್ಮ ಅತ್ತಿಗೆ ಸುಮತಿ ಹೇಳಿದ ಹಾಗೆ ಎಲ್ಲರೂ ಕೇಳಬೇಕಾಗಿತ್ತು. ಆ ಅಧಿಕಾರ ನನ್ನ ಪಾಲಗಬೇಕು ಎಂದು ಆಸೆ ಪಟ್ಟೆ. ಆದರೆ, ಅದಕ್ಕಾಗಿ ನಾನು ಇಷ್ಟೆಲ್ಲ ಮಾಡಬೇಕಾಗಿ ಬಂತು" ಎಂದು ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ಮಹೇಶ ನಾನು ಇದನ್ನು ಮನೆಯವರಿಗೆ ಹೇಳಿಯೇ ಹೇಳುತ್ತೇನೆ ಎಂದು ಅಲ್ಲಿಂದ ಹೋಗುತ್ತಾನೆ. ಮಹೇಶನ ಮಾತು ಕೇಳಿ ಶಾರ್ವರಿ ಜೋರಾಗಿ ನಗುತ್ತಾಳೆ.
ಮಹೇಶನ ಮಾತು ಕೇಳಿ ನಕ್ಕ ಶಾರ್ವರಿ
ಆಕೆಗೆ ತಿಳಿದಿದೆ ಮಹೇಶನ ಮಾತು ಯಾವತ್ತೂ ಯಾರು ಕೇಳುವುದಿಲ್ಲ. ಇತ್ತ ದೀಪಿಕಾ ಹಾಗೂ ಪೂರ್ಣಿಮಾ ನಡುವೆ ಕೋಲ್ಡ್ ವಾರ್ ಶುರುವಾಗಿದೆ. ದೀಪಿಕಾ, ಪೂರ್ಣಿಮಾ ಬಳಿ ನಿನಗೆ ಇನ್ಮೇಲೆ ಮಕ್ಕಳು ಆಗುವುದಿಲ್ಲ. ನೀನು ಯಾಕೆ ಇಂತಹ ವ್ರತ ಆಚರಣೆ ಮಾಡುತ್ತೀಯಾ? ಎಂದೆಲ್ಲ ಬಹಳ ತಾತ್ಸಾರ ಮಾಡಿ ಮಾತನಾಡಿದಾಗ ಪೂರ್ಣಿಮಾ ವಾದ ಮಾಡುತ್ತಾಳೆ. "ನನಗೆ ಡಾಕ್ಟರ್ ಎಲ್ಲಾ ಹೇಳಿದ್ದಾರೆ. ನನ್ನ ಬಳಿ ಎಲ್ಲಾ ವಿಚಾರವನ್ನು ಡಾಕ್ಟರ್ ಮಾತನಾಡಿದ್ದಾರೆ" ಎಂದು ಹೇಳಿದರೂ, ದೀಪಿಕಾ ಅದೆಲ್ಲ ಸುಳ್ಳು ಎಂದು ವಾದಿಸಿ ಡಾಕ್ಟರ್ ಕೊಟ್ಟ ಸರ್ಟಿಫಿಕೇಟ್ ಅನ್ನು ತೋರಿಸುತ್ತಾಳೆ.
ಸರ್ಟಿಫಿಕೇಟ್ ನೋಡಿ ಪೂರ್ಣಿಮಾ ಶಾಕ್
ಇದನ್ನು ನೋಡಿದ ಪೂರ್ಣಿಮಾಗೆ ಶಾಕ್ ಆಗುತ್ತದೆ. ಆಕೆ ಜೋರಾಗಿ ಅಳುತ್ತಾ ರೂಮ್‌ಗೆ ಹೋಗುತ್ತಾಳೆ. ಪೂರ್ಣಿಮಾ ರೂಮ್‌ನೊಳಗೆ ಅಳುತ್ತಾ ಹೋಗುವುದನ್ನು ತುಳಸಿ ನೋಡುತ್ತಾಳೆ. ದೀಪಿಕಾಗೆ ಪೂರ್ಣಿಮಾನನ್ನು ಹೇಗಾದರೂ ಮಾಡಿ ಬಗ್ಗು ಬಡಿಯಬೇಕು ಎನ್ನುವ ಆಸೆ. ಪೂರ್ಣಿಮಾ ಆಸೆಗಳಿಗೆ ಕೊಳ್ಳಿ ಇಟ್ಟರೆ ಆಕೆ ಜೀವ ಇದ್ದರೂ ಸತ್ತ ಹಾಗೆ ಎಂದು ಮನದಲ್ಲಿ ಯೋಚನೆ ಮಾಡುತ್ತಾಳೆ. ಆಕೆ ಇದೆಲ್ಲವನ್ನೂ ನೋಡಿ ಎಂಜಾಯ್ ಮಾಡುತ್ತಾಳೆ.

ಹೆಂಡತಿಯ ಕಾಳಜಿ ಮಾಡುತ್ತಿರುವ ಅವಿನಾಶ್
ಇತ್ತ ಅವಿನಾಶ್ ತನ್ನ ಹೆಂಡತಿಗೆ ಮಕ್ಕಳು ಆಗುವುದಿಲ್ಲ ಎಂದು ತಿಳಿದರೂ ತುಂಬಾ ಟೆನ್ಶನ್ ಮಾಡಿಕೊಳ್ಳುತ್ತಾನೆ. ಅದನ್ನು ಪೂರ್ಣಿಮಾ ಮುಂದೆ ತೋರಿಸಿಕೊಂಡರೆ ಎಲ್ಲಿ ನನ್ನಿಂದ ಪೂರ್ಣಿಮಾ ದೂರ ಹೋಗಿ ಬಿಡುತ್ತಾಳೋ ಅಥವಾ ಖಿನ್ನತೆಗೆ ಜಾರುತ್ತಾಳೋ ಎನ್ನುವ ಭಯ ಆತನಿಗೆ. ಆದರೂ ಏನೂ ಮಾತನಾಡದೆ ಸುಮ್ಮನೆ ಇರುತ್ತಾನೆ. ಆದರೆ ಇದೀಗ ಪೂರ್ಣಿಮಾಗೆ ದೀಪಿಕಾಳಿಂದ ನಿಜ ತಿಳಿದು ಹೋಗಿದೆ. ಅವಿನಾಶ್ ಮನದಲ್ಲಿ ಹುದುಗಿಸಿ ಇಟ್ಟ ನಿಜವನ್ನು ದೀಪಿಕಾ ಹೊರಹಾಕಿದ್ದಾರೆ.


Click it and Unblock the Notifications











