Shrirasthu Shubhamasthu:ದೀಪಿಕಾಗೆ ಉತ್ತರ ಕೊಡೋಕೆ ಆಗ್ತಿಲ್ಲ; ಇತ್ತ ಹೆಂಡತಿಗೆ ಸಮಾಧಾನ ಮಾಡೋಕೆ ಆಗ್ತಿಲ್ಲ!

By Poorva

ದೀಪಿಕಾ ಕೊಟ್ಟ ಶಾಕ್‌ಗೆ ಪೂರ್ಣಿಮಾ ಮಾತ್ರ ಸೋತು ಹೋಗಿದ್ದಾಳೆ. ಆಕೆಗೆ ಜೀವನ ಪೂರ್ತಿ ತನಗೆ ಮಕ್ಕಳು ಆಗುವುದು ಇಲ್ಲ ಎಂದು ತಿಳಿದು ಬಹಳ ನೊಂದಿದ್ದಾಳೆ. ಅವಿನಾಶ್ ನನಗೆ ಈ ವಿಚಾರವನ್ನು ಈ ಮುಂಚೆಯೇ ಯಾಕೆ ಹೇಳಲಿಲ್ಲ. ಈ ವಿಚಾರ ನನಗೆ ತಿಳಿದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ ಎಂದು ಅವಿನಾಶ್ ಜೊತೆ ನೋವನ್ನು ತೋಡಿಕೊಳ್ಳಬೇಕು ಎಂದು ಪೂರ್ಣಿಮಾ ಅಂದುಕೊಳ್ಳುತ್ತಾರೆ.

ದೀಪಿಕಾ ಮಾತು ಕೇಳಿದ ಪೂರ್ಣಿಮಾಗೆ ಬಹಳ ನೋವು ಆಗಿರುತ್ತದೆ. ಇನ್ನೆಂದೂ ನಾನು ನನ್ನ ಮಗುವಿಗೆ ಜನ್ಮ ನೀಡಲು ಸಾಧ್ಯ ಇಲ್ಲವಲ್ಲ ಎಂದು ಮನಸ್ಸಿನಲ್ಲೇ ನೋವು ಅನುಭವಿಸುತ್ತಿರುತ್ತಾಳೆ. ಅಷ್ಟರಮಟ್ಟಿಗೆ ಪೂರ್ಣಿಮಾಗೆ ನೋವು ಇರುತ್ತೆ.

Shrirasthu Shubhamasthu serial April 25th episode update

ಇತ್ತ ಅವಿನಾಶ್ ತನ್ನ ಹೆಂಡತಿ ಎಲ್ಲಿಯೂ ಕಾಣಿಸುತ್ತಿಲ್ಲವಲ್ಲ ಎಂದು ಆಫೀಸ್‌ನಿಂದ ಬಂದವನೇ ಹುಡುಕಾಡುತ್ತಿರುತ್ತಾನೆ. ಕೊನೆಗೆ ರೂಮ್ ಹತ್ತಿರ ಬಂದು ನೋಡಿದಾಗ ಪೂರ್ಣಿಮಾ ಅಲ್ಲಿ ಇರುತ್ತಾಳೆ. ಪೂರ್ಣಿಮಾ ಬಳಿ ಬಹಳ ನಾಜೂಕಾಗಿ ಮಾತನಾಡುತ್ತಾನೆ. ಆಗ ಪೂರ್ಣಿಮಾ ಅಳುತ್ತಾ "ನನಗೆ ಇಂತಹ ಸುಳ್ಳು ಹೇಳಿಬಿಟ್ಟಿರಲ್ಲ" ಎಂದು ಹೇಳುತ್ತಾಳೆ. ಆಕೆ ಮಾತು ಮುಂದುವರೆಸುತ್ತಾ, "ನೀವು ನನಗೆ ಮಕ್ಕಳಾಗುತ್ತೆ ಎಂದು ಯಾಕೆ ಸುಳ್ಳು ಹೇಳಿದ್ರಿ? ನನಗೆ ನೀವು ಮಾತನಾಡಿದ್ದು ಸುಳ್ಳು ಎಂದು ಅರ್ಥ ಆಗಲೇ ಇಲ್ಲ ನೋಡಿ" ಎಂದಾಗ ಅವಿನಾಶ್ ಏನು ಅರ್ಥ ಆಗದವನ ಹಾಗೆ ನಿಲ್ಲುತ್ತಾನೆ.

ಕೊನೆಗೆ "ನಿನಗೆ ಮಕ್ಕಳಾಗುವುದು ಇಲ್ಲ ಎಂದು ಯಾರು ಹೇಳಿದ್ರು. ನಿನಗೆ ಮಕ್ಕಳು ಆಗಿಯೇ ಆಗುತ್ತದೆ."ಎಂದಾಗ ಪೂರ್ಣಿಮಾ ಡಾಕ್ಟರ್ ಕೊಟ್ಟ ರಿಪೋರ್ಟ್ ತೋರಿಸಿ ಹೇಳುತ್ತಾಳೆ. "ನಾನು ಹೇಳಿದ್ದು ಸುಳ್ಳು ಎಂದಾದರೆ ಈ ರಿಪೋರ್ಟ್‌ನಲ್ಲಿ ಇರುವುದು ಮತ್ತೇನು?" ಎಂದು ಕೇಳಿದಾಗ ಅವಿ ಮಾತನಾಡದೆ ಸುಮ್ಮನೆ ಇರುತ್ತಾನೆ. ಕೊನೆಗೆ ಪೂರ್ಣಿಮಾಗೆ ಸಮಾಧಾನ ಮಾಡುತ್ತಾನೆ. "ನನಗೆ ತಿಳಿದಿದೆ ನಿನಗೆ ಎಷ್ಟು ನೋವು ಆಗಿದೆ ಎಂದು, ಆದರೆ ನನಗೆ ಅದರ ಹತ್ತರಷ್ಟು ನೋವಾಗಿದೆ. ಪೂರ್ಣಿಮಾ ನನಗೆ ನೀನು.. ನಿನಗೆ ನಾನು ಅಷ್ಟೇ. ನಾವು ಮಕ್ಕಳಿಲ್ಲ ಎನ್ನುವ ಕೊರಗಿನಿಂದ ದೂರ ಬರೋಣ" ಎಂದು ಹೇಳುತ್ತಾನೆ.

Shrirasthu Shubhamasthu serial April 25th episode update

ಪೂರ್ಣಿಮಾ ಮಾತಿಗೆ ಉತ್ತರಿಸದ ಅವಿನಾಶ್

ಅವಿನಾಶ್ ಮಾತನ್ನು ಕೇಳಿ ಪೂರ್ಣಿಮಾ "ನಾನು ಸಾಯುವ ಮುನ್ನ ಒಂದು ಮಗುವನ್ನು ಹೆತ್ತು ಸಾಯಬೇಕು ಅಂದುಕೊಂಡು ಇದ್ದೆ. ಆದರೆ, ನಾನು ಬಂಜೆ ಆಗಿಯೇ ಸಾಯುವ ಪರಿಸ್ಥಿತಿ ಬಂತಲ್ವಾ?" ಎಂದು ಬಹಳ ಬೇಸರದಿಂದ ತನ್ನ ಮನಸ್ಸಿನಲ್ಲಿರುವ ನೋವನ್ನು ಹೊರ ಹಾಕುತ್ತಾರೆ. ಆದರೆ, ಅವಿ ಮಾತ್ರ ಪೂರ್ಣಿಮಾಗೆ ಸಮಾಧಾನ ಮಾಡುತ್ತಾನೆ. "ಇನ್ನೂ ಮುಂದೆ ನನಗೆ ನೀನು, ನಿನಗೆ ನಾನು ಅಷ್ಟೇ. ನೀನು ಅದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು" ಎಂದು ಹೇಳುತ್ತಾನೆ.

700 ಸಂಚಿಕೆ ಪೂರೈಸಿದ ಧಾರಾವಾಹಿ

ಇನ್ನೂ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಇದೀಗ 700 ಸಂಚಿಕೆ ಪೂರೈಸಿದ ಖುಷಿಯಲ್ಲಿ ಇದೆ. ಮಾಧವ ಹಾಗೂ ತುಳಸಿ ಪಾತ್ರವೂ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು, ಅಭಿಮಾನಿಗಳ ಹರುಷಕ್ಕೆ ಕಾರಣವಾಗಿದೆ. ಈ ಧಾರಾವಾಹಿ ಈಗ 700 ಸಂಚಿಕೆ ಪೂರೈಸಿದ್ದು ತಂಡದವರು ಹರುಷ ವ್ಯಕ್ತಪಡಿಸಿದ್ದಾರೆ.

More from Filmibeat

English summary
Shrirasthu Shubhamasthu serial April 25th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X