Shrirasthu Shubhamasthu:ಅಣ್ಣನಿಗೆ ತುತ್ತು ಕೊಟ್ಟ ಸಮರ್ಥ್; ಎಲ್ಲರೆದುರು ಪೂರ್ಣಿಮಾಳನ್ನು ಅನಾಥೆ ಎಂದ ದೀಪಿಕಾ
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಪೂರ್ಣಿಮಾ ಮತ್ತು ದೀಪಿಕಾ ಅಕ್ಕ-ತಂಗಿ ಆದರೆ ಈ ಸತ್ಯ ಮಾತ್ರ ಯಾರಿಗೂ ಗೊತ್ತಿಲ್ಲ. ತುಳಸಿಗೆ ಈಗ ಸತ್ಯ ಗೊತ್ತಾಗಿದ್ದು, ಯಾರ ಬಳಿಯೂ ಹೇಳುವಂತಿಲ್ಲ.
ಮಾಧವ್‌ಗೆ ಮಾತು ಕೊಟ್ಟಿರುವ ತುಳಸಿ ಪೂರ್ಣಿಮಾ ಬಾಳಲಲ್ಲಿ ಅವರ ತಂದೆ-ತಾಯಿಯ ಆಗಮನ ಆದಷ್ಟು ಬೇಗ ಆಗಲಿ ಎಂದು ಬಯಸುತ್ತಿದ್ದಾಳೆ.
ಇತ್ತ ಅಭಿ ದೀಪಿಕಾ ಮತ್ತು ಶಾರ್ವರಿ ಮಾತು ಕೇಳಿಸಿಕೊಂಡು ಮನೆಯವರನ್ನೇ ದೂರ ಮಾಡುತ್ತಿದ್ದಾನೆ. ಮನೆಯವರೆಲ್ಲಾ ತನಗೆ ಗೌರವ ಕೊಡುತ್ತಿಲ್ಲ ಎಂದು ಅನಗತ್ಯವಾದ ಆಲೋಚನೆಗಳನ್ನು ತಂದುಕೊಂಡಿದ್ದಾನೆ.

ಅಣ್ಣನಿಗೆ ತುತ್ತು ಕೊಟ್ಟ ಸಮರ್ಥ್
ದೀಪಿಕಾ ಮಾತನ್ನು ನಂಬಿ ಭೀಮನ ಅಮಾವಾಸ್ಯೆ ದಿನವೇ ಹಬ್ಬದ ಊಟ ಮಾಡದೇ ಜಗಳ ಮಾಡಿಕೊಂಡು ಆಫೀಸಿಗೆ ಬಂದಿದ್ದಾನೆ. ಅವಿ ಬೇಕಂತಲೇ ಊಟ ತಂದುಕೊಟ್ಟಿದ್ದು, ದೀಪಿಕಾ ಕಳಿಸಿರಬಹುದು ಎಂದು ಅಭಿ ಎರಡೂ ಬಾಕ್ಸ್ ಅನ್ನು ಖಾಲಿ ಮಾಡಿದ್ದಾನೆ. ಅವಿ ಈಗ ತನಗೆ ಊಟ ಇಲ್ಲ ಎಂದು ಸಮರ್ಥ್ ಬಳಿ ಹೋಗಿದ್ದಾನೆ. ಸಮರ್ಥ್ ಊಟದಲ್ಲಿ ಪಾಲು ಕೇಳುತ್ತಾನೆ. ಮೊದಲು ಸಮರ್ಥ್ ಆಗುವುದಿಲ್ಲ ಎಂದು ಹೇಳಿದ ಬಳಿಕ ಅವಿಗಾಗಿ ತುತ್ತು ಕೊಟ್ಟಿದ್ದಾನೆ. ಒಂದೇ ಬಾಕ್ಸ್ ಅನ್ನು ಹಂಚಿಕೊಂಡಿರುವ ಸಮರ್ಥ್ ಮತ್ತು ಅವಿ ಒಟ್ಟಿಗೆ ಊಟ ಮಾಡಿದ್ದನ್ನು ನೋಡಿದ ಅಭಿಗೆ ಇನ್ನಷ್ಟು ಕೋಪ ಬಂದಿದೆ.
ಎಸ್ಕೇಪ್ ಆಗಿರುವ ಜುಗ್ಗ ಜಗನ್ನಾಥ
ಸಮರ್ಥ್ ಮನೆಯಲ್ಲಿ ರೇಷನ್ ಖಾಲಿಯಾಗಿದೆ ಎಂಬುದನ್ನು ತಿಳಿದ ಅವಿನಾಶ್, ಅವನ ಅಕೌಂಟ್‌ಗೆ ಒಂದು ವಾರ ಮುನ್ನವೇ ಸಂಬಳವನ್ನು ಹಾಕಿದ್ದಾನೆ. ಅದರಲ್ಲೂ ಈ ಸಲ ಸಂಬಳ ಹೆಚ್ಚಾಗಿದೆ. ಸಂಬಳ ಬಂದಿರುವುದಕ್ಕೆ ಖುಷಿಯಾದ ಸಮರ್ಥ್ ಮನೆಗೆ ರೇಷನ್ ತೆಗೆದುಕೊಂಡು ಹೋಗಿದ್ದಾನೆ. ತುಳಸಿ ಮನೆಯಿಂದ ದೂರ ಇದ್ದರೂ ತನ್ನ ಮಕ್ಕಳು ಚೆನ್ನಾಗಿರಬೇಕು. ಒಳ್ಳೆಯ ಬುದ್ಧಿ ಕಲಿಬೇಕು ಎಂದು ಏನೆಲ್ಲಾ ಮಾಡುತ್ತಿದ್ದಾಳೆ ಎಂದು ದತ್ತ ತಾತ ಅಂದುಕೊಳ್ಳುತ್ತಾರೆ. ಇನ್ನು ಸಂಧ್ಯಾಳ ಮಾವ ಕಾಣಿಸದೇ ಇರುವುದಕ್ಕೆ ವಿಚಾರಿಸುತ್ತಾರೆ. ಸಂಧ್ಯಾ ಅತ್ತೆ ಮನೆಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದು, ಐದು ಲಕ್ಷ ಹಣವನ್ನು ತೆಗೆದುಕೊಂಡು ಪರಾರಿಯಾಗಿರಬಹುದು ಎಂದು ಗಾಬರಿಯಾಗಿದ್ದಾಳೆ. ಹಾಗೇನಾದರೂ ಅವರ ಮಾವ ಎಸ್ಕೇಪ್ ಆಗಿದ್ದರೆ, ಸಂಧ್ಯಾ ಮತ್ತೆ ಎಲ್ಲರ ಮುಂದೆ ತಲೆ ತಗ್ಗಿಸುವುದು ಪಕ್ಕಾ.
ಪೂರ್ಣಿಯನ್ನು ಅನಾಥೆ ಎಂದ ದೀಪಿಕಾ
ಅವಿ ಸಮರ್ಥ್ ಜೊತೆಗೆ ಊಟ ಮಾಡಿದ್ದಕ್ಕೆ ಅಭೀ ಕೋಪ ಮಾಡಿಕೊಂಡಿರುತ್ತಾನೆ. ಮನೆಯವರೆಲ್ಲಾ ಒಟ್ಟಿಗೆ ಕುಳಿತಿದ್ದಾಗ ಸುಖಾ ಸುಮ್ಮನೆ ವಾದ ಮಾಡುತ್ತಾನೆ. ಅಭಿ ಮಾತುಗಳು ಯಾರಿಗೂ ಇಷ್ಟವಾಗುವುದಿಲ್ಲ. ಆದರೆ, ಮಾಧವ್ ಸಮಾಧಾನ ಮಾಡಲು ಯತ್ನಿಸುತ್ತಾನೆ. ದೀಪಿಕಾ ಕೂಡ ಅಭಿ ಪರ ನಿಂತು ಮಾತನಾಡುತ್ತಾಳೆ. ಈ ಮನೆಯಲ್ಲಿ ಅನಾಥರಿಗೆ ಎಲ್ಲಾ ಇದೆ. ಮನೆಯವರನ್ನು ಅನಾಥರಂತೆ ನೋಡುತ್ತಾರೆ ಎಂದು ಪೂರ್ಣಿಮಾಳನ್ನು ದೂರುತ್ತಾಳೆ.
ಕೊರಗುತ್ತಿರುವ ಅಮ್ಮ-ಮಗಳು
ದೀಪಿಕಾ ಆಡಿದ ಮಾತಿನಿಂದ ಪೂರ್ಣಿಮಾಳಿಗೆ ಬಹಳ ಬೇಸರವಾಗುತ್ತದೆ. ತನಗೆ ಸಿಕ್ಕ ಸರವನ್ನು ನೋಡುತ್ತಾ ತಂದೆ-ತಾಯಿಯನ್ನು ನೆನಪಿಸಿಕೊಳ್ಳುತ್ತಾಳೆ. ಒಂದು ಸಲವಾದರೂ ತನ್ನನ್ನು ನೋಡಲು ಬನ್ನಿ ಎಂದು ಕೇಳಿಕೊಳ್ಳುತ್ತಾಳೆ. ಅತ್ತ ವನಜಾ ಕೂಡ ಮಗಳ ಬಗ್ಗೆ ಕೊರಗುತ್ತಿರುತ್ತಾಳೆ. ಪೂರ್ಣಿಮಾ ಕೊರಗನ್ನು ಕಂಡ ತುಳಸಿ ಮನಸ್ಸಿಗೆ ಬಹಳ ಬೇಸರವಾಗುತ್ತದೆ. ಎಲ್ಲಾ ಸತ್ಯ ಗೊತ್ತಿದ್ದರೂ ಏನನನ್ನೂ ಹೇಳಲಾಗದೆ ಪೂರ್ಣಿ ಆಸೆ ಆದಷ್ಟು ಬೇಗ ನೆರವೇರಲಿ ಎಂದು ಮನದಲ್ಲೇ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾಳೆ. ದೀಪಿಕಾಳಿಗೆ ಪೂರ್ಣಿಮಾನೇ ತನ್ನ ಅಕ್ಕ ಎಂದು ತಿಳಿದರೆ ಏನು ಮಾಡುತ್ತಾಳೋ ಗೊತ್ತಿಲ್ಲ.


Click it and Unblock the Notifications











