Shrirasthu Shubhamasthu: ಅವಿಯನ್ನು ಮನೆಯಿಂದ ಹೊರ ಹಾಕಿದ ಮಾಧವ; ಯಾಕೆ ಹೀಗಾಯ್ತು?
ಸಮರ್ಥ್ ಜೊತೆ ಅವಿನಾಶ್ ಹೆಚ್ಚಾಗಿ ಬೆರೆಯುತ್ತಿರುವುದನ್ನು ನೋಡಿದ ಅಭಿಗೆ ಅಸೂಯೆ ಮೂಡುತ್ತಿದೆ. ನನ್ನ ಅಣ್ಣ ನನಗೆ ಮಾತ್ರ ಸ್ವಂತ ಎನ್ನುವ ಹಾಗೆ ಆತ ನಡೆದುಕೊಳ್ಳುತ್ತಿದ್ದಾನೆ. ಸಮರ್ಥ್ ಜೊತೆ ಅವಿ ಕುಳಿತು ಊಟ ಮಾಡುತ್ತಿರುವುದನ್ನು ನೋಡಿದ ಅಭಿ ಇನ್ನಷ್ಟು ಕೋಪ ಮಾಡಿಕೊಂಡು ಜೋರಾಗಿ ಕಿರುಚಾಡಿ ಮಾತನಾಡುತ್ತಾನೆ. ಸಮರ್ಥ್‌ಗೆ ಅಮ್ಮ ಎಂದರೆ ಪ್ರಾಣ. ಆದರೆ, ಅಮ್ಮನ ಮಾತಿಗೆ ಕಿವಿ ಕೊಡದ ಹಾಗೆ ಇರುತ್ತಾನೆ. ಇದನ್ನೆಲ್ಲ ನೋಡಿದ ಅವಿನಾಶ್ ಹಾಗೂ ಪೂರ್ಣಿಮಾಗೆ ಅಮ್ಮ ಮಗನನ್ನು ಒಂದು ಮಾಡಬೇಕು. ಅವರಿಬ್ಬರೂ ಒಂದಾದರೆ ಜೀವನದಲ್ಲಿ ಬಹಳ ಖುಷಿಯಾಗಿ ಇರುತ್ತಾರೆ ಎಂದು ಅಂದುಕೊಳ್ಳುತ್ತಾರೆ.
ಇನ್ನೂ ಅವಿ, ಸಮರ್ಥ್‌ನನ್ನು ಕೊಂಚ ಬೇಗ ಮನೆಗೆ ಬರಲು ಹೇಳುತ್ತಾನೆ. ಆದ ಕಾರಣ ಸಮರ್ಥ್ ಮೆತ್ತಗೆ ಮನೆಯ ಬಾಗಿಲ ಬಳಿ ಬಂದು ನಿಂತಾಗ ಪೂರ್ಣಿಮಾ ರಂಗೋಲಿ ಹಾಕುತ್ತಿರುತ್ತಾರೆ. ಇನ್ನೂ ಸಮರ್ಥ್‌ನನ್ನು ನೋಡಿಯೂ ನೋಡದೆ ಹಾಗೆ ಮಾಡಿದ ಪೂರ್ಣಿಮಾ, ಆತನಿಗೆ ಮನೆಯ ಒಳಗೆ ಪ್ರವೇಶ ಮಾಡಲು ಬಿಡುವುದು ಇಲ್ಲ. ಅತ್ತ ಕಡೆಯಿಂದ ಇತ್ತ ಕಡೆಗೆ, ಇತ್ತ ಕಡೆಯಿಂದ ಅತ್ತ ಕಡೆಗೆ ಸಖತ್ ಆಗಿ ಆಟ ಆಡಿಸುತ್ತಾಳೆ. ಇನ್ನೂ ಅವಿನಾಶ್ ಸಮರ್ಥ್‌ನನ್ನು ನೋಡಿ "ಬಾ ಸಮರ್ಥ್ ಅಲ್ಲಿಯೇ ಯಾಕೆ ನಿಂತಿದ್ದಿಯಾ? ಎಂದಾಗ ಮೆತ್ತಗೆ ಸಮರ್ಥ್ ಮನೆ ಒಳಗೆ ಬರುತ್ತಾನೆ.

ಸಮರ್ಥ್ ನೋಡಿದ ಪೂರ್ಣಿಮಾ ಮೆತ್ತಗೆ ನಗುತ್ತಾಳೆ. ಹಾಗೆಯೇ ಅವರಿಬ್ಬರೂ ಮಾತನಾಡುತ್ತಿರುವುದನ್ನು ನೋಡಿ ಬಹಳ ಖುಷಿ ಪಡುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ತುಳಸಿ ಕೂಡ ಬರುತ್ತಾಳೆ. ತುಳಸಿ ಓಡಿ ಹೋಗಿ ಸಮರ್ಥ್‌ಗೆ ಹಾಗೂ ಅವಿಗೆ ಕಾಫಿ ಕೊಡುತ್ತಾಳೆ. ಆದರೆ ಕಾಫಿ ತೆಗೆದುಕೊಳ್ಳಲು ಸಮರ್ಥ್ ಹಿಂದೇಟು ಹಾಕುತ್ತಾನೆ. ಆಗ ಅವಿ "ಹಾಗೆಲ್ಲ ಮುಜುಗರ ಪಟ್ಟುಕೊಳ್ಳಬೇಡಿ ಸಮರ್ಥ್ ಕಾಫಿ ಕುಡಿಯಿರಿ" ಎಂದು ಹೇಳುತ್ತಾನೆ .
ಸಮರ್ಥ್ ನೋಡಿ ಖುಷಿಪಟ್ಟ ತುಳಸಿ
ಇನ್ನೂ ಸಮರ್ಥ್ ಬಿಸಿ ಇರುವಾಗಲೇ ಕಾಫಿ ಕುಡಿದು ನಾಲಗೆ ಸುಟ್ಟುಕೊಳ್ಳುತ್ತಾನೆ. ಇನ್ನೂ ಮನೆಯಲ್ಲಿ ಪೂಜೆ ಇರುವಾಗಲೇ ದೀಪಿಕಾ ಏನೋ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ಮನೆಯಲ್ಲಿ ನಡೆಯುತ್ತಿರುವ ಅವಘಡಕ್ಕೆ ಪೂರ್ಣಿಮಾ ಕಾರಣ ಎಂದು ಅಭಿ, ಅತ್ತಿಗೆಯ ಬಳಿ ಜೋರಾಗಿ ಮಾತನಾಡುತ್ತಾನೆ. ಕೊನೆಗೆ ಆಕೆಯನ್ನು ಜೋರಾಗಿ ತಳ್ಳಿ, ಅದಕ್ಕೆ ನಿಮಗೆ ಮಕ್ಕಳಾಗದೇ ಇರುವುದು. ನೀವು ಬೇರೆಯವರಿಗೆ ಕೆಡುಕು ಬಯಸುತ್ತೀರಿ. ಇದರಿಂದ ನಿಮಗೆ ತುಂಬಾ ಕೆಟ್ಟದು ಆಗುತ್ತದೆ ಎಂದು ಹೇಳುತ್ತಾರೆ.

ಅಭಿ ಮಾತಿಗೆ ತುಳಸಿ ಮನಸ್ಸು ನುಚ್ಚುನೂರು
ಈ ಮಾತನ್ನು ಕೇಳಿ ಆಕೆಗೆ ಸಿಡಿಲು ಬಡಿದ ಹಾಗೆ ಆಗುತ್ತದೆ. ಅಭಿ ನನ್ನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುತ್ತಿದ್ದಾನಾ? ಎಂದು ಆಕೆಗೆ ಬಹಳಷ್ಟು ನೋವು ಆಗುತ್ತದೆ. ಆಗ ಕೋಪಗೊಂಡ ಅವಿ ಅಭಿಯ ಕೆನ್ನೆಗೆ ಹೊಡೆಯುತ್ತಾನೆ. ಇದನ್ನು ನೋಡಿ ಮಾಧವನಿಗೆ ಸಿಟ್ಟು ಬರುತ್ತದೆ. "ಅವಿ ನೀನು ಮಾಡಿದ್ದು ಚೂರು ಸರಿ ಇಲ್ಲ. ಯಾಕೆ ನೀನು ಹೀಗೆ ಮಾಡುತ್ತಿದ್ದೀಯ ಅವಿ? ನೀನು ಇಲ್ಲಿ ಇರುವುದು ಸರಿ ಅಲ್ಲ. ಮನೆ ಬಿಟ್ಟು ಆಚೆ ಹೋಗು" ಎಂದು ಮಾಧವ ಹೇಳುತ್ತಾರೆ. ಮಾಧವನ ನಿರ್ಧಾರ ಕಂಡು ಎಲ್ಲರಿಗೂ ಶಾಕ್ ಆಗುತ್ತದೆ.
ತುಳಸಿಗೆ ಖಡಕ್ ಮಾತು ಹೇಳಿದ ಮಾಧವ
ತುಳಸಿ, ಮಾಧವನನ್ನು ಪ್ರಶ್ನೆ ಮಾಡಿದಾಗ "ನನ್ನ ಮಕ್ಕಳ ಬಗ್ಗೆ ಯಾರು ಮಾತನಾಡುವ ಅಗತ್ಯ ಇಲ್ಲ" ಎಂದು ಬಹಳ ಕಟುವಾಗಿ ಹೇಳುತ್ತಾರೆ. ಕೊನೆಗೆ ಆ ಮನೆಯಿಂದ ಪೂರ್ಣಿಮಾ, ಅವಿ ಹಾಗೂ ತುಳಸಿ ಆಚೆ ಹೋಗುತ್ತಾರೆ. ದೀಪಿಕಾಗೆ ಬಹಳ ಖುಷಿ ಆಗುತ್ತದೆ. ಆದರೆ, ಅಭಿ ಮಾತ್ರ ಅಣ್ಣ ಮನೆ ಬಿಟ್ಟು ಹೋಗುತ್ತಿರುವುದನ್ನು ನೋಡುತ್ತಲೇ ನಿಲ್ಲುತ್ತಾನೆ.


Click it and Unblock the Notifications











