Shrirasthu Shubhamasthu:ಅಣ್ಣನ ನೆನಪಲ್ಲಿ ಅಭಿ; "ಆಯುಧ ಪೂಜೆಗೆ ನಿಂಬೆಹಣ್ಣು ಆಗ್ತಾವ್ನೆ ಅಭಿ" ಎಂದ ನೆಟ್ಟಿಗರು

By ಪೂರ್ವ

ಅವಿಯನ್ನು ಮಾಧವ ಮನೆ ಬಿಟ್ಟು ಕಳುಹಿಸಿದ್ದಾನೆ. ಆದರೆ, ಇದೀಗ ಅಭಿಗೆ ಅವಿಯ ನೆನಪು ಕಾಡುತ್ತದೆ. ಆಗಾಗ ಅಭಿ ಮನೆ ಬಿಟ್ಟು ಹೋಗುತ್ತೇನೆ ಎಂದು ಹೆದರಿಸುತ್ತಲೇ ಇದ್ದ. ಇದನ್ನು ನೋಡಿದ ಮಾಧವ ಬೇಸತ್ತು ಹೋಗಿ ಏನು ಮಾಡಬೇಕು ಎಂದು ತಿಳಿಯದೆ ನಿಂತಿರುತ್ತಾರೆ. ಆಗ ಆತನಿಗೆ ಅವಿಯನ್ನು ಮನೆ ಬಿಟ್ಟು ಕಳುಹಿಸುವುದೇ ಉತ್ತಮ ಎನ್ನುವ ಮನ:ಸ್ಥಿತಿ ಬಂದುಬಿಡುತ್ತದೆ. ಹಾಗೆ ಅದೇ ರೀತಿ ಮಾಡಿಬಿಡುತ್ತಾನೆ. ಅವಿಯಾದರೆ ಮನೆಗೆ ಕರೆದಾಗ ಖಂಡಿತವಾಗಿಯೂ ಬರುತ್ತಾನೆ ಎನ್ನುವ ಭರವಸೆಯಿದೆ.

ಆದರೆ, ಅಭಿ ಎಲ್ಲಾದರೂ ದೀಪಿಕಾ ಜೊತೆ ಮನೆ ಬಿಟ್ಟು ಹೋದರೆ ಖಂಡಿತವಾಗಿಯೂ ನಮ್ಮ ಜೊತೆ ಬರುವುದಿಲ್ಲ. ಆತನ ಮನದಲ್ಲಿ ಮತ್ತಷ್ಟು ವಿಷ ಬೀಜ ಮೊಳಕೆ ಒಡೆಯುವ ಎಲ್ಲಾ ಲಕ್ಷಣಗಳಿವೆ ಎಂದು ತಿಳಿದ ಮಾಧವ ಏನು ಮಾತನಾಡದೆ ಅಭಿಯಾನ ಮನೆ ಬಿಟ್ಟು ಕಳುಹಿಸುತ್ತಾನೆ. ಆದರೆ, ಪೂರ್ಣಿಮಾಗೆ ಬಹಳ ಬೇಸರವಾಗುತ್ತದೆ. ಅಭಿ ಹಾಗೂ ಅವಿ ಬೇರೆ ಬೇರೆಯಾಗಲು ನಾನೇ ಕಾರಣವಾಗಿ ಬಿಟ್ಟೆ ಎಂದು ಬಹಳ ಬೇಸರ ವ್ಯಕ್ತಪಡಿಸುತ್ತಾಳೆ. ಆಗ ತುಳಸಿ ಪೂರ್ಣಿಮಾಗೆ ಸಮಾಧಾನ ಹೇಳುತ್ತಾಳೆ.

Shrirasthu Shubhamasthu serial August 20th episode update

"ಆಗುವುದು ಎಲ್ಲವೂ ಒಳ್ಳೆಯದಕ್ಕಾಗಿ. ಯಾವತ್ತೂ ನಮಗೆ ಕೆಟ್ಟದಾಗುವುದಿಲ್ಲ" ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಪೂರ್ಣಿಮಾಗೆ ಕೊಂಚ ಸಮಾಧಾನ ಆದರೂ ಕೂಡ ಅಭಿ ಆಡಿದ ಮಾತುಗಳು ಆಕೆಗೆ ಪದೇ ಪದೆ ನೆನಪಾಗುತ್ತದೆ. ಇನ್ನು ಅವಿಗೆ ತಮ್ಮ ಅಭಿಯದ್ದೇ ಚಿಂತೆ. ಆತ ಏನು ಮಾಡುತ್ತಿದ್ದಾನೆ? ಹೇಗಿದ್ದಾನೆ? ಎನ್ನುವುದು ಬಹಳ ದೊಡ್ಡ ಚಿಂತೆಯಾಗಿ ಕಾಡುತ್ತಿದೆ. ಅವಿಗೆ ಅಭಿಯನ್ನು ನೆನೆಯದೇ ಊಟ ಕೂಡ ಗಂಟಲಲ್ಲಿ ಇಳಿಯುವುದಿಲ್ಲ. ಯಾವತ್ತೂ ಅಭಿ ನನ್ನ ಮೇಲೆ ಕೋಪ ಮಾಡಿಕೊಂಡರೂ, ಆತನ ಕೋಪ ಬೇಗ ಹಾರಿ ಹೋಗುತ್ತದೆ.

ಅಭಿ ಬೇಸರ ಕಂಡು ಮಾಧವ ಶಾಕ್

ಆದರೆ ಇದೀಗ ಅಭಿಯ ಕೋಪದಿಂದಾಗಿ ತನ್ನ ತಂದೆ ಮನೆ ಬಿಟ್ಟೆ ಕಳುಹಿಸಿದ್ದಾರೆ. ಆದರೆ ತನ್ನ ತಮ್ಮನ ಮನಸ್ಸು ಖಂಡಿತವಾಗಿಯೂ ನನಗಾಗಿ ಮಿಡಿಯುತ್ತಿರುತ್ತದೆ ಎಂದು ಮನಸ್ಸಿನಲ್ಲಿ ಯೋಚನೆ ಮಾಡುತ್ತಾನೆ. ಹಾಗೆಯೇ ಅದು ನಿಜ ಕೂಡ ಆಗಿರುತ್ತದೆ. ಇತ ದೀಪಿಕಾ ಬಹಳ ಖುಷಿಯಿಂದ ಕುಣಿದಾಡುತ್ತಿರುತ್ತಾಳೆ. "ಇನ್ಮೇಲೆ ಈ ಮನೆ ನನ್ನದೇ. ಈ ಮನೆಯಲ್ಲಿ ಇನ್ನು ನನಗೆ ಇಷ್ಟ ಆಗದವರು ಇರುವುದಿಲ್ಲ" ಎಂದು ಬಹಳ ಖುಷಿಯಿಂದ ಇರುವಾಗ ಅಲ್ಲಿಗೆ ಶಾರ್ವರಿ ಬರುತ್ತಾಳೆ.

ದೀಪಿಕಾಗೆ ಖುಷಿಯೋ ಖುಷಿ

ಶಾರ್ವರಿಗೆ ದೀಪಿಕಾಳ ಖುಷಿ ನೋಡಿ ಬಹಳ ಖುಷಿಯಾಗುತ್ತದೆ. ಹಾಗೆಯೇ ದೀಪಿಕಾ ತನ್ನ ಅತ್ತೆಗೆ ಸಿಹಿ ತಿನ್ನಿಸಿ ಸಂಭ್ರಮವನ್ನು ವ್ಯಕ್ತಪಡಿಸುತ್ತಾಳೆ. ತಾನು ನಿಮ್ಮ ಜೊತೆ ಮಾತ್ರ "ಈ ಸಂಭ್ರಮವನ್ನು ಹಂಚಿಕೊಳ್ಳಲು ಸಾಧ್ಯ. ಬೇರೆ ಯಾರಿಂದಲೂ ಕೂಡ ಈ ಸಂಭ್ರಮವನ್ನು ಹಂಚಿಕೊಳ್ಳಲಾಗುವುದಿಲ್ಲ. ಈ ಮನೆಯಲ್ಲಿ ನನಗೆ ಖುಷಿಯಾದರೂ ಕೂಡ ಬೇಸರವಾದಂತೆ ನಟನೆ ಮಾಡಬೇಕಾಗಿದೆ" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಶಾರ್ವರಿ ಕೂಡ ಹೌದು ಎಂದು ಹೇಳುತ್ತಾಳೆ. ಇನ್ನು ಅಭಿಗೆ ದೀಪಿಕಾ ಊಟವನ್ನು ಬಡಿಸುತ್ತಾಳೆ. ಆದರೆ, ಅಭಿಯಗವನ ಬೇರೆಲ್ಲೋ ಇರುತ್ತದೆ ಆತನಿಗೆ ತನ್ನ ಅಣ್ಣನದ್ದೇ ಚಿಂತೆ.

Shrirasthu Shubhamasthu serial August 20th episode update

ಅಣ್ಣನ ಬಗೆಗಿನ ಕಾಳಜಿಗೆ ಖುಷಿಪಟ್ಟ ಮಾಧವ

"ಅಣ್ಣ ಮನೆ ಬಿಟ್ಟು ಹೋಗಿ ಆಯಿತು. ಆದರೆ, ಆತನ ಬಳಿ ಇನ್ಮೇಲೆ ಹೇಗೆ ಮಾತನಾಡಲಿ" ಎಂದು ಯೋಚನೆ ಮಾಡುತ್ತಿರುತ್ತಾನೆ. ಹಾಗೆಯೇ ಅಭಿಗೆ ಒಂದು ತುತ್ತು ಕೂಡ ಗಂಟಲಲ್ಲಿ ಇಳಿಯುವುದಿಲ್ಲ. ಆತ ಊಟವನ್ನು ಬಿಟ್ಟು ಅಲ್ಲಿಂದ ಸೀದಾ ರೂಮ್‌ಗೆ ಹೋಗುತ್ತಾನೆ. ಆಗ ಮಾಧವ ಅಭಿಗಾಗಿ ರೂಮಿಗೆ ಊಟ ತರುತ್ತಾನೆ. "ನೀನು ಯಾಕೆ ಇಷ್ಟು ಬೇಸರ ಮಾಡಿಕೊಂಡಿದ್ದೀಯ. ನಿನಗೆ ಬೇಕಾದದ್ದು ಇದೀಗ ಸಿಕ್ಕಾಯಿತು. ನೀನು ಬೇಸರ ಮಾಡುವ ಅಗತ್ಯ ಇಲ್ಲ" ಎಂದು ಹೇಳುತ್ತಾರೆ. ಆದರೆ, ಅಭಿ ಬಹಳ ಬೇಸರದಿಂದ ಹೇಳುತ್ತಾನೆ "ನನ್ನ ಮತ್ತು ಅಣ್ಣನ ಮಧ್ಯೆ ಸಾವಿರ ಜಗಳ ನಡೆಯುತ್ತೆ. ಆದರೆ ಅವರನ್ನು ನೀವು ಮನೆ ಬಿಟ್ಟು ಹೋಗಲು ಹೇಳಿದ್ದಾದರೂ ಯಾಕೆ?" ಎಂದು ಹೇಳುತ್ತಾನೆ.

ಈ ಮಾತು ಕೇಳಿ ಮಾಧವಗೆ ಕೂಡ ಕೊಂಚ ಆಶ್ಚರ್ಯ ಆಗುತ್ತದೆ. ಏನು ಹೇಳದೆ ಸುಮ್ಮನಾಗುತ್ತಾರೆ. ಇನ್ನು ಅಲ್ಲಿಂದ ನೇರವಾಗಿ ದತ್ತನ ಮನೆಗೆ ಮಾಧವ ಹೋಗುತ್ತಾರೆ. ತುಳಸಿಯನ್ನು ಕರೆದು ಆತನ ತಲೆಯಲ್ಲಿರುವ ಪ್ಲಾನ್ ಅನ್ನ ತುಳಸಿ ಬಳಿ ಹೇಳುತ್ತಾನೆ. ಇದನ್ನು ಕೇಳಿದ ತುಳಸಿಗೆ ಬಹಳ ಖುಷಿಯಾಗುತ್ತದೆ. "ಅವರಿಬ್ಬರು ದೂರ ಇರುವುದರಿಂದಲೇ ಅವರಿಬ್ಬರು ಹತ್ತಿರವಾಗುತ್ತಾರೆ ಎಂದಾದರೆ. ನಾನು ಕೂಡ ನಿಮಗೆ ಸಪೋರ್ಟ್ ಮಾಡಲು ರೆಡಿ ಇದ್ದೇನೆ" ಎಂದು ತುಳಸಿ ಹೇಳುತ್ತಾರೆ. ಇದನ್ನು ಕೇಳಿದ ಮಾಧವನಿಗೆ ಬಹಳ ಖುಷಿಯಾಗುತ್ತೆ.

More from Filmibeat

English summary
Shrirasthu Shubhamasthu serial August 20th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X