Shrirasthu Shubhamasthu:ಪೂರ್ಣಿಮಾ ತಾಯಿ ಯಾರೆಂದು ತುಳಿಸಿಗೆ ಗೊತ್ತಾಯ್ತು? ಯಾರದು?
ತುಳಸಿ ಬಹಳ ಪ್ರೀತಿಯಿಂದ ತನ್ನ ಮನೆಯವರನ್ನು ನೋಡಿಕೊಳ್ಳುತ್ತಿರುತ್ತಾಳೆ. ಯಾರಿಗೂ ಒಂದು ಚೂರು ನೋವಾಗದ ಹಾಗೆ ಕಾಳಜಿ ಮಾಡುತ್ತಾಳೆ. ಆಕೆಯ ಕಾಳಜಿಗೆ ಪ್ರೀತಿಗೆ ಮನಸೋತ ಅವಿ ತನ್ನ ಅಮ್ಮನೇ ನನಗೆ ಸಿಕ್ಕಿಬಿಟ್ಟಳು ಎನ್ನುವ ಖುಷಿಯಲ್ಲಿ ಇರುತ್ತಾನೆ. ಇನ್ನು ಸಮರ್ಥ್‌ಗೆ ತನ್ನ ತಾಯಿ ಖುಷಿಯಿಂದ ಡಬ್ಬಿಯನ್ನು ಕೊಡುತ್ತಾರೆ. ಆದರೆ ಆ ಡಬ್ಬಿಯನ್ನು ತೆಗೆದುಕೊಳ್ಳದೆ ಸಮರ್ಥ್ ಮೊಂಡಾಟ ಮಾಡುತ್ತಾನೆ.
ಕೊನೆಗೆ ಅವಿ ಕೊಂಚ ಜೋರಾಗಿಯೇ ತನ್ನ ತಂದೆ ಬಳಿಯಲ್ಲಿ ತುಳಸಿ ಅಮ್ಮನ ಅಡುಗೆಯ ಬಗ್ಗೆ ಕೊಂಡಾಡಿದಾಗ ಸಮರ್ಥ್ ಗೆ ಬಹಳ ಆಸೆ ಆಗುತ್ತದೆ ಆಗ ಕೂಡಲೇ ತಾಯಿಯ ಕೈಯಲ್ಲಿ ಇದ್ದ ಡಬ್ಬಿಯನ್ನು ಎತ್ತಿಕೊಂಡು ಆಫೀಸ್ ಗೆ ಹೋಗುತ್ತಾನೆ. ಹಾಗೆಯೇ ಮನದಲ್ಲಿಯೇ ಅಮ್ಮನ ಮೇಲಿನ ಕೋಪ ಕಂಡು ನಾಚಿಕೆ ವ್ಯಕ್ತ ಪಡಿಸುತ್ತಾನೆ. ಅಭಿ ಮಾತ್ರ ತುಳಸಿಯ ಮೇಲಿನ ಕೋಪದಿಂದಾಗಿ ಹಾಗೆಯೇ ಮನೆಯಲ್ಲಿ ನಡೆದ ಬೆಳವಣಿಗೆಯ ಬಗ್ಗೆ ಬಹಳ ಕೋಪ ಮಾಡಿಕೊಂಡಿರುತ್ತಾನೆ.

ದೀಪಿಕಾಗೆ ಹೇಗಾದರೂ ಮಾಡಿ ನಾನು ಮತ್ತೆ ಅವಿ ಬೇರೆ ಮನೆಯನ್ನು ಮಾಡಬೇಕು. ಇವರ ಜೊತೆ ನಾನು ಖಂಡಿತವಾಗಿಯೂ ಬದುಕಲು ಸಾಧ್ಯ ಇಲ್ಲ ಎಂದು ಮನಸ್ಸಿನಲ್ಲಿಯೇ ನಿರ್ಧಾರ ಮಾಡಿಕೊಂಡಿರುತ್ತಾರೆ. ಆದರೆ, ಕಾಲು ಕರೆದುಕೊಂಡು ಪೂರ್ಣಿಮಾ ಏನು ಮಾಡದೇ ಇದ್ದರೂ ಆಕೆ ಮೇಲೆ ಆಪಾದನೆಯನ್ನು ಹೊರಿಸುತ್ತಾಳೆ. ಪೂರ್ಣಿಮಾಗೆ ಬಹಳ ಆತಂಕ ಆಗುತ್ತದೆ.
ಅಭಿ ಮನೆಯಲ್ಲಿ ಮಾಡಿದ ತಿಂಡಿಯನ್ನು ತಿನ್ನದೇ ನೇರವಾಗಿ ಆಫೀಸ್‌ಗೆ ಬಂದಿರುತ್ತಾನೆ. ಇದನ್ನು ನೋಡಿದ ತುಳಸಿ, ನನ್ನ ಮಕ್ಕಳು ಯಾವತ್ತೂ ಹಸಿವಿನಿಂದ ಇರಬಾರದು ಎಂದು ಸಮರ್ಥ್ ಕೈಯಲ್ಲಿ ಟಿಫನ್ ಡಬ್ಬ ಕಟ್ಟಿ ಕೊಡುತ್ತಾಳೆ. ಮುನಿಸಿನಿಂದ ಕುಳಿತುಕೊಂಡಿದ್ದ ಅಭಿಯನ್ನೂ ನೋಡಿ ಸಮರ್ಥ್ ತೆಗೆದುಕೊಳ್ಳಿ ನಿಮ್ಮ ಕ್ಯಾರಿಯರ್ ಮನೆಯಿಂದ ಕೊಟ್ಟು ಕಳುಹಿಸಿದ್ದಾರೆ ಎಂದು ಹೇಳುತ್ತಾರೆ.
ಇದನ್ನು ಕೇಳಿದ ಅಭಿ ಯಾರು ಇದನ್ನು ಕಳುಹಿಸಿ ಕೊಟ್ಟಿದ್ದು ಎಂದು ಮೆತ್ತಗೆ ಕೇಳುತ್ತಾನೆ. ಇದನ್ನು ಕೇಳಿ ಸಮರ್ಥ್ ಮಾತ್ರ ಏನು ಹೇಳದೆ "ನನಗೆ ಕೊಟ್ಟದ್ದನ್ನು ನಾನು ನಿಮಗೆ ಕೊಡುತ್ತಿದ್ದೇನೆ. ಮಿಕ್ಕ ವಿಚಾರ ನನಗೆ ಏನು ಗೊತ್ತಿಲ್ಲ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಭಿ ಸುಮ್ಮನೆ ಆಗುತ್ತಾನೆ. ಹಾಗೆಯೇ ಅಭಿ ಮನದಲ್ಲಿ ಅಂದುಕೊಳ್ಳುತ್ತಾನೆ. ನನಗೆ ದೀಪಿಕಾ ಟಿಫನ್ ಡಬ್ಬ ಕೊಟ್ಟು ಕಳುಹಿಸುತ್ತಾಳೆ ಏನೋ ಎಂದುಕೊಂಡು ಎರಡು ಡಬ್ಬದಲ್ಲಿದ್ದ ತಿಂಡಿ ಖಾಲಿ ಮಾಡುತ್ತಾನೆ. ಇದನ್ನು ನೋಡಿದ ಸಮರ್ಥ್‌ಗೆ ಖುಷಿ. ಆದರೆ, ಅವಿ ನಿಂತು ಆಭಿಯನ್ನು ನೋಡುತ್ತಿರುತ್ತಾನೆ. ಆತನ ಬಳಿಗೆ ಮೆತ್ತಗೆ ಬಂದು ಹೇಳುತ್ತಾನೆ. ಎರಡು ಡಬ್ಬ ಖಾಲಿ ಮಾಡಿ ಬಿಟ್ಟೆಯಾ? ಇದಕ್ಕೆ ಹೇಳುವುದು ಅಮ್ಮನ ಕೈ ಅಡುಗೆಯ ರುಚಿ ಎಂದು ಅವಿ ಮಾತನ್ನು ಕೇಳಿ ಅಭಿಗೆ ಬಹಳ ಸಿಟ್ಟು ಬರುತ್ತದೆ.

ಡಬ್ಬವನ್ನು ಜೋರಾಗಿ ಕೆಳಗೆ ಎಸೆದಿದ್ದನ್ನು ನೋಡಿ ಅವಿಗೆ ಬೇಸರ ಆಗುತ್ತದೆ. ಹಾಗೆಯೇ ಇವತ್ತಿನ ಮೀಟಿಂಗ್ ಬಗ್ಗೆ ವಿವರಿಸುತ್ತಾನೆ. ಆದರೆ, ಅಭಿಗೆ ಮಾತ್ರ ಅದು ಯಾವುದರ ಯೋಚನೆ ಇರುವುದಿಲ್ಲ. ಅದೆಲ್ಲವನ್ನೂ ನೀನೇ ನೋಡಿಕೋ ಎಂದು ಹೇಳಿ ಹೋಗುತ್ತಾನೆ.
ಇನ್ನೂ ತುಳಸಿ ಮನೆಗೆ ದೀಪಿಕಾ ತಾಯಿ ವನಜಾ ಬರುತ್ತಾಳೆ. ಆಕೆಗೆ ಪೂರ್ಣಿಮಾ ತನ್ನ ಮಗಳು ಎನ್ನುವ ಸಣ್ಣ ಯೋಚನೆಯೂ ಬರುವುದಿಲ್ಲ. ವನಜಾ ಮನಸ್ಥಿತಿ ತುಳಸಿಗೆ ಚೆನ್ನಾಗಿಯೇ ಅರ್ಥ ಆಗುತ್ತದೆ. ಇನ್ನೂ ತುಳಸಿಗೆ ತನ್ನ ಮೊದಲ ಮಗಳ ಫೋಟೋ ತೋರಿಸುತ್ತಾಳೆ ವನಜಾ. ಆಗ ಪೂರ್ಣಿಮಾ ಕತ್ತಲ್ಲಿದ್ದ ಆ ಸರವನ್ನು ಮಗುವಿನ ಕತ್ತಲ್ಲಿಯೂ ನೋಡುತ್ತಾಳೆ. ಆಗಲೇ ಪೂರ್ಣಿಮಾ ನಿಜವಾದ ತಾಯಿ ಯಾರು ಎಂಬುವುದು ತುಳಸಿಗೆ ತಿಳಿಯುತ್ತೆ.


Click it and Unblock the Notifications











