Shrirasthu Shubhamasthu: ಧಾರಾವಾಹಿಯಲ್ಲಿ ಸುಧಾರಾಣಿಗೆ ಮತ್ತೆ ಮದುವೆ.. ವೀಕ್ಷಕರು ಏನಂತಾರೆ?
'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಒಂದೊಳ್ಳೆ ಸಂದೇಶವನ್ನು ಹೊತ್ತು ಬರ್ತಿದೆ. ಧಾರಾವಾಹಿ ಶುರುವಾದ ಹೊಸದರಲ್ಲಿ ಎಲ್ಲರ ಮನಸ್ಸನ್ನು ಗೆದ್ದಿತ್ತು. ಅದು ಟಿಆರ್‌ಪಿ ಲಿಸ್ಟ್ ಬಂದಾಗಲೇ ಗೊತ್ತಾಗಿತ್ತು. ಹೊಸ ಹೊಸ ಧಾರಾವಾಹಿಗಳ ಮಧ್ಯೆ ಸದ್ಯದ ಪರಿಸ್ಥಿತಿಗೆ ಬೇಕಾದ ಮೆಸೇಜ್ ಹೊತ್ತು ಬಂದಿದ್ದೆ 'ಶ್ರೀರಸ್ತು ಶುಭಮಸ್ತು'.
ಈಗಾಗಲೇ ಜೀ ಕನ್ನಡಲ್ಲಿ 'ಗಟ್ಟಿಮೇಳ, 'ಪುಟ್ಟಕ್ಕನ ಮಕ್ಕಳು', 'ಹಿಟ್ಲರ್ ಕಲ್ಯಾಣ'ದಂತ ಸೀರಿಯಲ್‌ಗಳು ಬರುತ್ತಿವೆ. ಅದರಲ್ಲಿ ಜೋಡಿಗಳಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಇದ್ದಾರೆ. ಆ ಜೋಡಿಗಳ ಹೆಸರಲ್ಲಿಯೇ ಪೇಜಸ್ ಗಳು ಕೂಡ ಶುರುವಾಗಿದೆ. ಆದರೆ, ಈ ಧಾರಾವಾಹಿಯಲ್ಲಿ ಮಾಧವ-ತುಳಸಿಯ ಜೋಡಿಗೂ ಅಭಿಮಾನಿಗಳಿದ್ದಾರೆ. ಅವರಿಬ್ಬರು ಬೇಗ ಒಂದಾಗಲಿ ಎಂದೇ ಎಲ್ಲಾ ಮನಸ್ಸುಗಳು ಬಯಸುತ್ತಿವೆ.

200 ಸಂಚಿಕೆ ಪೂರೈಸಿರುವ 'ಶ್ರೀರಸ್ತು ಶುಭಮಸ್ತು'
ಜೀ ಕನ್ನಡದಲ್ಲಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಶುರುವಾದಾಗಿನಿಂದ ಎಲ್ಲರ ಮನಸ್ಸನ್ನು ಗೆದ್ದಿದೆ. ಅದರಲ್ಲೂ ಮಾಧವ ಮತ್ತು ತುಳಸಿ ಸ್ನೇಹಿತರಾದ ಮೇಲೆ ಅವರಿಬ್ಬರ ಬಾಂಡಿಂಗ್‌ಗೆ ಜನ ಮನಸೋತಿದ್ದಾರೆ. ಧಾರಾವಾಹಿಯಲ್ಲಿ ಹಲವು ಪಾತ್ರಗಳಿವೆ. ಆದರೂ ತುಳಸಿ ಮತ್ತು ಮಾಧವ ಹೈಲೈಟ್ ಜೋಡಿ. ಸದ್ಯ 'ಶ್ರೀರಸ್ತು ಶುಭಮಸ್ತು' 200 ಸಂಚಿಕೆಗಳನ್ನು ಪೂರೈಸಿದೆ. ಅದರ ಸಂಭ್ರಮವನ್ನು ಧಾರಾವಾಹಿ ತಂಡ ಈಗಾಗಲೇ ಸೆಲೆಬ್ರೇಷನ್ ಮಾಡಿದೆ. ಕೇಕ್ ಕಟ್ ಮಾಡಿ, ಸೆಲೆಬ್ರೇಷನ್ ಮಾಡಿದ್ದಾರೆ.
ಮಾಧವನ ಪರ ನಿಂತ ದತ್ತ -ಸಿರಿ
ತುಳಸಿಗೆ ಮಾಧವನ ಮೇಲಿರುವುದು ಸ್ನೇಹ ಮಾತ್ರ. ಆದ್ರೆ ಮಾಧವನಿಗೆ ಇರುವುದು ಪ್ರೀತಿ. ಇದು ದತ್ತನಿಗೆ ಅದಾಗಲೇ ತಿಳಿದಿದೆ. ಸಿರಿಗೆ ಇದು ಇಷ್ಟವೇ. ಆದ್ರೆ ಸಮರ್ಥ್‌ಗೆ ಕೊಂಚವೂ ಇಷ್ಟವಿಲ್ಲ. ಇನ್ನು ಮಾಧವನ ಮನೆಯವರಿಗೂ ಇದು ಇಷ್ಟವಿಲ್ಲ. ಈಗ ಸಿರಿ ಮತ್ತು ದತ್ತ ತಾತ ಸೇರಿಕೊಂಡು ಇಬ್ಬರನ್ನು ಒಂದು ಮಾಡಲು ಮುಂದಾಗಿದ್ದಾರೆ. ಯಾರು ಏನೇ ಹೇಳಿದರೂ ನಾನು ಒಂದು ಮಾಡುತ್ತೇನೆ ಎಂದೇ ದತ್ತ ತಾತ ಹಠ ಮುಂದುವರೆಸಿದ್ದಾನೆ.
ದತ್ತನ ಸಮ್ಮುಖದಲ್ಲಿ ಮದುವೆ
ಮೊದಲೇ ಹೇಳಿದಂತೆ ದತ್ತ ತಾತ ಇಬ್ಬರಿಗೂ ಬೆಂಬಲವಾಗಿ ನಿಂತಿದ್ದಾನೆ. ಜೊತೆಗೆ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗೆ ಅಭಿಮಾನಿಗಳು ಜಾಸ್ತಿಯಿರುವ ಕಾರಣ, ಪೇಜ್‌ಗಳು ಜಾಸ್ತಿಯಾಗಿವೆ. ಆ ಪೇಜ್‌ಗಳಲ್ಲಿ ಧಾರಾವಾಹಿಗೆ ಸಂಬಂಧಿಸಿದಂತಹ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಧಾರಾವಾಹಿಗಳ ಬಗೆಗಿನ ನಿರೀಕ್ಷೆಗಳನ್ನು ಹೇಳಿಕೊಳ್ಳುತ್ತಾರೆ. ಧಾರಾವಾಹಿಯಲ್ಲಿ ಏನೆಲ್ಲಾ ಬದಲಾವಣೆಗಳು ಆಗಬೇಕು ಅನ್ನೋದನ್ನು ತಿಳಿಸುತ್ತಾ ಇರುತ್ತಾರೆ ಇದೀಗ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದುವೇ ತುಳಸಿ - ಮಾಧವನ ಮದುವೆಯಾದ ಫೋಟೋ ಅದು. ಅದರಲ್ಲಿ ದತ್ತನೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ.

ಅಭಿಮಾನಿಗಳ ಆಸೆ ಏನಾಗಿದೆ ಗೊತ್ತಾ..?
ಈ ಫೋಟೋ ಸುಧಾರಾಣಿ ಫ್ಯಾನ್ ಪೇಜ್‌ನಲ್ಲೂ ಓಡಾಡುತ್ತಿದೆ. ಸದ್ಯ ಮಾಧವನ ಮನೆಯಲ್ಲಿ ಮಗನ ಮದುವೆ ಕಾರ್ಯ ಅದ್ದೂರಿಯಾಗಿ ನಡೆಯುತ್ತಿದೆ. ತುಳಸಿ ಬರ ಕೂಡದು ಎಂದು ಮಾಧವನ ಮಕ್ಕಳು ಸಹ ಕಂಡೀಷನ್ ಹಾಕಿದ್ದಾರೆ. ಈ ಕಡೆ ಮಾಧವನನ್ನು ಭೇಟಿ ಮಾಡಬಾರದು ಎಂದು ತುಳಸಿಯ ಮಗನ ಕಂಡೀಷನ್ ಕೂಡ ಆಗಿದೆ. ಇದರ ನಡುವೆ ದತ್ತ ಮುಂದೆ ನಿಂತು ಮದುವೆ ಮಾಡಿಸಿರುವ ಫೋಟೋ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಇದೇ ಇದೇ ನಮಗೆ ಬೇಕಾಗಿರುವುದು ಎನ್ನುತ್ತಿದ್ದಾರೆ. ಆದ್ರೆ ಇದು ನಿಜವೋ, ಎಡಿಟಿಂಗ್ ಓ ಒಂದು ತಿಳಿಯುತ್ತಿಲ್ಲ. ಬಟ್ ಮುಂದಿನ ದಿನಗಳಲ್ಲಿ ಇದು ಕೂಡ ನಡೆಯಲಿದೆ.


Click it and Unblock the Notifications











