Shrirasthu Shubhamasthu:ಮಗು ಹುಟ್ಟಿದ್ರೇ ಹೆಣ್ಣು ಮಕ್ಕಳ ಜೀವನ ಪರಿಪೂರ್ಣನಾ? ವೀಕ್ಷಕರು ಏನಂತಾರೆ?

By ಪೂರ್ವ

'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಅಭಿಮಾನಿಗಳಿಗೆ ಇದೀಗ ಕೊಂಚ ಮುನಿಸು ತರಿಸಿದೆ. ಏಕೆಂದರೆ ದೀಪಿಕಾ ಪೂರ್ಣಿಮಾ ಬಳಿ ನಡೆದುಕೊಳ್ಳುವ ರೀತಿ, ಹಾಗೆಯೇ ಮಗು ಆಗಿಲ್ಲ ಎಂಬ ಕಾರಣಕ್ಕೆ ಹೆಣ್ಣು ಅದೆಷ್ಟು ಕಷ್ಟ ಪಡುತ್ತಾಳೆ, ಬೇರೆಯವರ ಚುಚ್ಚು ಮಾತುಗಳನ್ನು ಕೇಳಿ ಎಷ್ಟೆಲ್ಲ ಕಷ್ಟ ಪಡಬೇಕಾಗಿದೆ ಎಂಬುದು ವೀಕ್ಷಕರಿಗೆ ಬೇಸರ.

ಇದೆಲ್ಲ ಏನೇ ಇದ್ದರೂ ದೀಪಿಕಾ ಹಾಗೂ ಪೂರ್ಣಿಮಾ ಇಬ್ಬರೂ ಅಕ್ಕ, ತಂಗಿ ಈ ವಿಚಾರ ಇನ್ನಷ್ಟೇ ಬೆಳಕಿಗೆ ಬರಬೇಕು. ದೀಪಿಕಾಗೆ ಅಭಿ ಮೇಲೆ ಬಹಳಷ್ಟು ಕೋಪ ಬಂದಿರುತ್ತೆ. ಇದನ್ನು ಅರಿತುಕೊಂಡ ಪೂರ್ಣಿಮಾ, ಅಭಿ ಬಳಿ ಆಕೆಗೆ ಸರ್ಪ್ರೈಸ್ ಪಾರ್ಟಿ ಕೊಟ್ಟರೆ ಇನ್ನಷ್ಟು ಖುಷಿಯಾಗುತ್ತೆ. ನೀವು ಹಾಗೆ ಮಾಡಿ. ಆಗ ಆಕೆಗೆ ಖುಷಿ ಆಗುತ್ತೆ. ನಿಮ್ಮನ್ನು ಇನ್ನಷ್ಟು ಪ್ರೀತಿ ಮಾಡುತ್ತಾಳೆ ಎಂದು ಪೂರ್ಣಿಮಾ ಅಭಿಗೆ ಐಡಿಯಾ ನೀಡುತ್ತಾಳೆ.

Shrirasthu Shubhamasthu serial Deepika and Poornima rivalry never ends

ಅಭಿ, ದೀಪಿಕಾಗೆ ಸರ್ಪ್ರೈಸ್ ಏನೋ ಕೊಡುತ್ತಾನೆ. ಆದರೆ ಖುಷಿಯ ಸಮಯದಲ್ಲಿ ಪೂರ್ಣಿಮಾ ಬಗ್ಗೆ ದೀಪಿಕಾ ಬಳಿ ಅಭಿ ಮಾತಾಡುವುದಕ್ಕೆ ಶುರು ಮಾಡುತ್ತಾನೆ. "ಅತ್ತಿಗೆ ಬಹಳ ಒಳ್ಳೆಯವರು. ನಮಗಾಗಿ ಏನು ಬೇಕಾದರೂ ಮಾಡಲು ಆಕೆ ಹಿಂದೆ ಮುಂದೆ ನೋಡುವುದಿಲ್ಲ. ನಿನಗೆ ಈ ಸರ್ಪ್ರೈಸ್ ಪಾರ್ಟಿಯನ್ನು ಕೊಡಲು ಅವರೇ ಹೇಳಿದ್ದು" ಎಂದು ಹೇಳಿದಾಗ ದೀಪಿಕಾಗೆ ಇನ್ನಷ್ಟು ಕೋಪ ಬರುತ್ತೆ. ಆದರೆ ಅದನ್ನು ಅಭಿಯ ಮುಂದೆ ತೋರಿಸಿಕೊಳ್ಳುವುದಿಲ್ಲ. ಆ ಕೂಡಲೇ ದೀಪಿಕಾಗೆ ಶಾರ್ವರಿ ಹೇಳಿದ ಮಾತುಗಳು ನೆನಪಿಗೆ ಬರುತ್ತೆ.

ದೀಪಿಕಾ ಮಾತಿಗೆ ಬೇಸರಗೊಂಡ ಫ್ಯಾನ್ಸ್

ನಿನಗೆ ಎಷ್ಟೇ ಕೋಪ ಬಂದರೂ ಕೂಡ ನೀನು ಬೇಗ ರಿಯಾಕ್ಟ್ ಆಗಬೇಡ ಎಂದು ಶಾರ್ವರಿ ಹೇಳಿರುತ್ತಾರೆ. ಆ ಮಾತು ನೆನಪಿಸಿಕೊಂಡ ದೀಪಿಕಾ ಅದರ ಪ್ರಕಾರವಾಗಿ ನಡೆದುಕೊಳ್ಳುತ್ತಾಳೆ. ಇನ್ನು ಪೂರ್ಣಿಮಾ ಮನೆಯ ಬಾಗಿಲಿಗೆ ರಂಗೋಲಿ ಹಾಕುತ್ತಿರುವಾಗ ದೀಪಿಕಾ ಬಹಳ ಕೆಟ್ಟದಾಗಿ ಪೂರ್ಣಿಮಾ ಬಳಿ ನಡೆದುಕೊಳ್ಳುತ್ತಾಳೆ. "ನಿಮಗೆ ಮಕ್ಕಳಾಗಲು ಈ ರೀತಿ ನೀವು ಮಾಡುತ್ತಿದ್ದೀರಾ. ನಿಮಗೆ ಖಂಡಿತವಾಗಿಯೂ ಕೂಡ ಮಕ್ಕಳು ಆಗುವುದಿಲ್ಲ" ಎಂದು ಹೇಳಿಬಿಡುತ್ತಾಳೆ. ಈ ಮಾತನ್ನು ಕೇಳಿ ಪೂರ್ಣಿಮಾಗೆ ಬಹಳ ನೋವಾಗುತ್ತೆ. ಆಕೆ ಒಂದು ಕಡೆ ಕೂತು ಸಪ್ಪೆ ಮುಖ ಹಾಕಿಕೊಂಡಿರುತ್ತಾಳೆ.

ಅವಿ ಮೇಲೆ ಪೂರ್ಣಿಮಾ ಮುನಿಸು

ಇದನ್ನು ನೋಡಿದ ಅವಿ "ಬಾ ನಾವು ದೇವಸ್ಥಾನಕ್ಕೆ ಹೋಗೋಣ" ಎಂದು ಹೇಳಿದಾಗ ಅವಿ ಮೇಲೆ ಪೂರ್ಣಿಮಾಗೆ ಬಹಳ ಕೋಪ ಬರುತ್ತೆ. ಆದರೆ ಅವಿಗೆ ಏನು ಎಂದು ಅರ್ಥವೇ ಆಗುವುದಿಲ್ಲ. ಆದರೆ, ತುಳಸಿಗೆ ಪೂರ್ಣಿಮಾ ಕೋಪ ಅರ್ಥವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪೂರ್ಣಿಮಾ ಜೊತೆ ದೀಪಿಕಾ ಬಹಳ ಕಠೋರವಾಗಿ ನಡೆದುಕೊಳ್ಳುತ್ತಿದ್ದಾಳೆ. ದೀಪಿಕಾ ಹೆಜ್ಜೆ ಹೆಜ್ಜೆಗೂ ಪೂರ್ಣಿಮಾ ಮೇಲೆ ಕೋಪ ಮಾಡಿಕೊಳ್ಳುತ್ತಾಳೆ. ಪೂರ್ಣಿಮಾ ಏನೇ ಮಾಡಿದರು ಕೂಡ ಅದಕ್ಕೆ ಏನಾದರೂ ಒಂದು ಕೊಂಕು ಮಾತುಗಳನ್ನು ಹೇಳುತ್ತಾ, ಆಕೆಯ ಮನಸ್ಸಿಗೆ ಬಹಳ ನೋವನ್ನುಂಟು ಮಾಡುತ್ತಿರುತ್ತಾಳೆ.

ತಂಗಿಯ ಮಾತಿಗೆ ನೊಂದ ಪೂರ್ಣಿಮಾ

ಇದೆಲ್ಲವೂ ಕೂಡ ಅಭಿಗೆ ಆದಷ್ಟು ಬೇಗ ತಿಳಿಯಲಿ ಎನ್ನುವುದು ಅಭಿಮಾನಿಗಳ ಪ್ರಾರ್ಥನೆ. ಇನ್ನು ಮಗು ಹುಟ್ಟಿದರೆ ಮಾತ್ರ ಹೆಣ್ಣಿನ ಜೀವನ ಪರಿಪೂರ್ಣನಾ? ಆಕೆಯನ್ನು ಮನುಷ್ಯರಂತೆ ಕಾಣಬೇಕು ಎಂದು ಅನೇಕ ಕಿರುತೆರೆ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Shrirasthu Shubhamasthu serial Deepika and Poornima rivalry never ends
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X