Shrirasthu Shubhamasthu: ಮಹೇಶ್ ಕೈ ಮೇಲಾಯ್ತು.. ಮತ್ತೇನು ರಾದ್ಧಾಂತ ಮಾಡುತ್ತಾಳೋ ಶಾರ್ವರಿ!
ಅಭಿ ಜನಾರ್ಧನ್ ಮನೆಗೆ ಕಾಲಿಟ್ಟಿದ್ದಾರೆ. ದೀಪಿಕಾಗೆ ತನ್ನ ತಂದೆಯನ್ನು ನೋಡಬೇಕು ಎನ್ನುವ ಬಯಕೆ ಆಗುತ್ತದೆ. ಹೀಗಾಗಿ ಆತನಿಗೆ ತನ್ನ ಮಾವನ ಮನೆಗೆ ಹೋಗುವ ಅನಿವಾರ್ಯ ಪರಿಸ್ಥಿತಿ ಬಂದು ಒದಗುತ್ತದೆ. ಇತ್ತೀಚಿನ ದಿನಗಳಲ್ಲಿ ದೀಪಿಕಾಗೆ ಕ್ರಿಮಿನಲ್ ಮೈಂಡ್ ಹೆಚ್ಚಾಗುತ್ತಿದೆ. ದೀಪಿಕಾ ಮಾಡುತ್ತಿರುವ ಪ್ರತಿ ಕುತಂತ್ರದ ಹಿಂದೆ ಜನಾರ್ಧನ್ ಕೈವಾಡ ಇರುತ್ತದೆ.
ಜನಾರ್ಧನ್‌ಗೆ ಹೇಗಪ್ಪಾ ನಾನು ಮಾಧವನ ಮನೆಯನ್ನು ಒಡೆದು ಹಾಕುವುದು ಎನ್ನುವ ಆಲೋಚನೆ. ಅದಕ್ಕೆ ಪೂರಕವಾಗಿ ಅಭಿ ಹಾಗೂ ಅವಿಯ ನಡುವೆ ಬಹಳ ದೊಡ್ಡ ಜಗಳವೇ ನಡೆದು ಹೋಗಿದೆ. ಅವಿಗೇ ತನ್ನ ತಮ್ಮನ ಮೇಲೆ ಬಹಳಷ್ಟು ನಂಬಿಕೆ. ನನ್ನ ತಮ್ಮ ಯಾವತ್ತೂ ಕೇರ್ ಲೆಸ್ ಆಗಿದ್ದವನೇ ಅಲ್ಲ. ಅಂತಹದರಲ್ಲಿ ಆತ ಹೀಗೆಲ್ಲ ಮಾಡುತ್ತಿದ್ದಾನೆ ಎಂದರೆ, ಆದ್ರೀಗ ಅದನ್ನು ತಾನು ನಂಬಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬರುತ್ತದೆ. ಕಂಪನಿಗೆ ಅಭಿಯಿಂದ ಸಾಕಷ್ಟು ಮಟ್ಟದ ತೊಂದರೆ ಆಗಿದೆ.

ಯಾವತ್ತೂ ನಮಗೆ ಲಾಸ್ ಆದರೆ, ನಾವು ಮೊದಲೇ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಲಾಸ್ ಆದ ಬಳಿಕವೂ ನಿದ್ದೆಗಣ್ಣಿನಲ್ಲಿ ಇರುವುದು ಸರಿಯಲ್ಲ ಎನ್ನುವುದು ಅವಿನಾಶ್ ವಾದ. ಆದರೆ, ಇದ್ಯಾವುದೂ ಅಭಿ ಕಿವಿಗೆ ಬೀಳುವುದು ಇಲ್ಲ. ಆತನಿಗೆ ತಾನು ಮಾಡಿದ್ದೆ ಸರಿ ಮಿಕ್ಕವರೆಲ್ಲ ಮಾಡುವುದು ತಪ್ಪು ಎನ್ನುವ ಮನೋಭಾವ ಇರುತ್ತದೆ.
ಅಭಿ ಮನಸ್ಸು ಕದಡಿದ ಜನಾರ್ಧನ್
ಅಭಿ ಕಂಪನಿಯ ಪಕ್ಕದಲ್ಲಿ ಇರುವ ಜಾಗದಲ್ಲಿ ಹೇಗಾದರೂ ಮಾಡಿ ಪಬ್ ಅನ್ನು ನಡೆಸಬೇಕು ಎನ್ನುವ ಆಲೋಚನೆ ಜನಾರ್ಧನದ್ದು. ಆದರೆ, ಇದನ್ನು ಕೇಳಿದ ಅಭಿಗೆ ಮತ್ತೆ ಶಾಕ್ ಆಗುತ್ತದೆ. ಈಗಲೇ ಮನೆಯಲ್ಲಿ ಇಷ್ಟೆಲ್ಲ ಕೋಲಾಹಲ ಎದ್ದಿದೆ. ನಾನು ಮಾವನ ಪರವಾಗಿ ನಿಂತು ಮಾತನಾಡಿದರೆ ಎಲ್ಲರೂ ನನ್ನನ್ನು ದೂರ ಮಾಡುವುದು ಖಂಡಿತ ಎನ್ನುವ ಆಲೋಚನೆ ಮಾಡುತ್ತಿರುತ್ತಾನೆ. ಇನ್ನು ಜನಾರ್ದನ ಏನೇನೋ ಹೇಳಿ ಅಭಿ ತಲೆ ಕೆಡಿಸಿ ಬಿಡುತ್ತಾನೆ.

ಶಾರ್ವರಿಗೆ ಶಾಕ್ ಕೊಟ್ಟ ಮಹೇಶ
ಆ ಬಳಿಕ ಪೇಪರ್ ಒಂದಕ್ಕೆ ಸಹಿ ಬೇರೆ ತೆಗೆದುಕೊಂಡು ಕಳುಹಿಸುತ್ತಾರೆ. ಇನ್ನೂ ಮಹೇಶ್ ಮಾತ್ರ ಶಾರ್ವರಿಯನ್ನು ದೊಡ್ಡ ಹುದ್ದೆಯಿಂದ ಹೊರಗೆ ಹಾಕಲು ನೋಡುತ್ತಿದ್ದಾರೆ. ಮಹೇಶನಿಗೆ ಶಾರ್ವರಿಯನ್ನು ನೋಡಿದರೆ ಆಗುತ್ತಿಲ್ಲ. ನನ್ನ ಅತ್ತಿಗೆ ಹಾಗೂ ಅಣ್ಣನ ಬಾಳಿನಲ್ಲಿ ಆಟ ಆಡಿದ ಶಾರ್ವರಿ ಬದುಕಿನಲ್ಲಿ ಚೆಲ್ಲಾಟ ಆಡಲು ಮಹೇಶ ಶುರು ಮಾಡಿದ್ದಾನೆ.
ತುಳಸಿ ಮನೆ ಯಜಮಾನಿ ಎಂದ ಮಹೇಶ
ಇದೀಗ ಸ್ತ್ರೀ ಸಂಘದ ಅಧ್ಯಕ್ಷ ಸ್ಥಾನದಿಂದ ಶಾರ್ವರಿಯನ್ನು ಕೆಳಗಿಳಿಸಿದ್ದಾರೆ . ಹಾಗೆಯೇ ಶಾರ್ವರಿ ಮಹೇಶನಿಂದ ತನ್ನನ್ನು ಏನು ಮಾಡಲು ಸಾಧ್ಯ ಇಲ್ಲ ಎಂದುಕೊಂಡ ಶಾರ್ವರಿಗೆ ಬಿಗ್ ಶಾಕ್ ಆಗಿದೆ. ಮಹಿಳಾ ಸಂಘದ ಅಧ್ಯಕ್ಷ ಸ್ಥಾನದಿಂದ ಶಾರ್ವರಿಯನ್ನೂ ಕೆಳಗಿಳಿಸುತ್ತಾರೆ. ಇದು ಶಾರ್ವರಿಗೆ ಬಹಳ ಸಿಟ್ಟು ತರಿಸುತ್ತೆ. ತುಳಸಿ ಈ ಮನೆಯ ಯಜಮಾನಿ. ಹಾಗೆಯೇ ಆಕೆಯೇ ಸ್ತ್ರೀ ಸಂಘದ ಅಧ್ಯಕ್ಷೆ ಆಗಬೇಕು ಎಂದೆಲ್ಲ ಮಹೇಶ ಕನಸನ್ನು ಕಟ್ಟಿಕೊಂಡು ಇರುತ್ತಾನೆ. ಹಾಗೆಯೇ ಮಾಡುತ್ತಾನೆ. ಶಾರ್ವರಿ ಸ್ತ್ರೀ ಶಕ್ತಿ ಸಂಘದಲ್ಲಿ ಇದ್ದು ಏನೆಲ್ಲ ಕೆಲಸ ಮಾಡಿದಳು. ಅದನ್ನೇ ಬಹಳ ಪ್ರೀತಿಯಿಂದ ಇವರು ಮಾಡಿಯೇ ಮಾಡುತ್ತಾರೆ ಎನ್ನುವುದು ಮಹೇಶನ ಅಭಿಪ್ರಾಯ.


Click it and Unblock the Notifications











