Shrirasthu Shubhamasthu; ಕುತಂತ್ರಿ ಶಾರ್ವರಿ ಸೊಕ್ಕಡಗಿಸುತ್ತಾಳಾ ತುಳಸಿ?
ಅಭಿಗೆ ಅವಿಯನ್ನು ಕಂಡರೆ ಬೆಟ್ಟದಷ್ಟು ಪ್ರೀತಿ. ಆದರೆ ಅವಿಯ ಪ್ರೀತಿಯನ್ನು ಗುರುತಿಸುವಲ್ಲಿ ಅಭಿ ಸೋಲುತ್ತಿದ್ದಾನೆ. ದುಷ್ಟರ ಕೈಗೆ ಹಣ ಸಿಕ್ಕಿದ ಹಾಗೆ ಅಣ್ಣನ ಪ್ರೀತಿ ಅರಿವಾಗುತ್ತಿಲ್ಲ. ಅಭಿ ಅವಿ ಬಳಿ ಅದೆಷ್ಟೇ ತುಚ್ಚವಾಗಿ ನಡೆದುಕೊಂಡರೂ, ಅದೆಲ್ಲವನ್ನೂ ಸಹಿಸಿಕೊಂಡು ತನ್ನ ತಮ್ಮ ಇಂದು ಸರಿ ಹೋಗುತ್ತಾನೆ ಅಥವಾ ನಾಳೆ ಸರಿ ಹೋಗುತ್ತಾನೆ ಎಂದು ಆವಿ ಕಾಯುತ್ತಿರುತ್ತಾನೆ. ಇನ್ನು ಅವಿ, ಸಮರ್ಥ ಜೊತೆ ಹೆಚ್ಚಾಗಿ ಕ್ಲೋಸ್ ಆಗಿ ಇರುವುದರಿಂದ ಅಭಿಗೆ ಕೊಂಚ ಹೊಟ್ಟೆ ಕಿವ್ಚಿದ ಅನುಭವವಾಗುತ್ತದೆ. ಅವಿ ನನ್ನ ಜೊತೆ ಮಾತ್ರ ಇರಬೇಕು ಅಭಿ ಬಯಸುತ್ತಿದ್ದಾನೆ.
ಅವಿ ಇನ್ಯಾರ ಬಳಿಯೂ ಕೂಡ ಆತ್ಮೀಯವಾಗಿ ಇರಬಾರದು ಎನ್ನುವುದು ಅಭಿಯ ಭಾವನೆ. ಅದರಲ್ಲೂ ಸಮರ್ಥನನ್ನು ಕಂಡರೆ ಅವರಿಗೆ ಅಷ್ಟಕಷ್ಟೇ. ಅಂತದ್ರಲ್ಲಿ ಸಮರ್ಥನ ಜೊತೆಗೆ ಖುಷಿಯಿಂದ ಊಟ ಮಾಡುವುದು. ಆತನ ಜೊತೆ ಕಾಲ ಕಳೆಯುವುದು. ಇವೆಲ್ಲವೂ ಅಭಿಗೆ ಬಹಳ ಬೇಸರ ತರಿಸುತ್ತಿದೆ. ಅಣ್ಣ ತನ್ನ ಬಳಿ ಇಷ್ಟು ಕ್ಲೋಸ್ ಆಗಿ ಇರುವುದಿಲ್ಲ. ಈಗ ನನ್ನಿಂದ ಕೊಂಚ ದೂರ ಹೋಗುತ್ತಿದ್ದಾನೆ. ಆತನಿಗೆ ಇದೀಗ ಸಮರ್ಥ್ ಮೇಲೆ ಪ್ರೀತಿ ಹೆಚ್ಚಾಗಿದೆ ಎಂದು ಕೊಂಡಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಸಮರ್ಥಗೆ ತನ್ನ ಕುಟುಂಬವನ್ನು ನಿರ್ವಹಿಸಲು ಬಹಳ ಕಷ್ಟವಾಗುತ್ತಿತ್ತು. ಒಂದು ಹೊತ್ತಿನ ಊಟಕ್ಕೆ ಕೂಡ ಪರದಾಡುವ ಪರಿಸ್ಥಿತಿ ಬಂದಿತ್ತು. ಅಮ್ಮನ ಮದುವೆಯನ್ನೇನೋ ಅದ್ದೂರಿಯಾಗಿ ಮಾಡಿ ಮುಗಿಸಿದ್ದರು. ಆದರೆ, ಅದಾದ ಬಳಿಕ ಹಣದ ಬಿಕ್ಕಟ್ಟು ಬಂದಿದ್ದು ಮಾತ್ರ ಕಟು ಸತ್ಯ. ಈಗ ದತ್ತನಿಗೆ ಕೂಡ ಏನು ಮಾಡಬೇಕೆಂದು ಡಿಕ್ಕೇ ತೋಚದ ಹಾಗಾಗಿದೆ.
ಕುಡಿತದ ಚಟಕ್ಕೆ ಬಿದ್ದ ಅಭಿ
ಕುಡಿತದ ಚಟಕ್ಕೆ ದಾಸನಾಗುತ್ತಾನೆ. ಇನ್ನು ಅಭಿ ಕುಡಿದು ತೂರಾಡುತ್ತಿರುವಾಗ ಆತನಿಗೆ ಸಹಾಯ ಮಾಡಿದ್ದು ಇದೆ ಸಮರ್ಥ್. ಆತ ಅಂದು ಸಹಾಯ ಮಾಡದೆ ಇದ್ದರೆ, ಅಭಿ ಎಲ್ಲಾದರೂ ಫುಟ್‌ಪಾತ್ ಮೇಲೆ ಮಲಗಬೇಕಾಗಿತ್ತು. ಅಭಿ ಮನೆಗೆ ತೂರಾಡುತ್ತಾ ಬರುತ್ತಿರುವುದನ್ನು ಕಂಡ ಸಮರ್ಥ, ಅವಿಗೆ ಹೇಳುತ್ತಾನೆ. "ಇವರು ತುಂಬಾ ಕುಡಿದಿದ್ದಾರೆ ಎಂದು ಅನಿಸುತ್ತದೆ ದಾರಿಯಲ್ಲಿ ಕುಡಿದು ತೂರಾಡುತ್ತಿದ್ದರು. ಅದಕ್ಕೆ ಇವರನ್ನ ನಾನು ಕರೆದುಕೊಂಡು ಬಂದೆ" ಎಂದು ಹೇಳುತ್ತಾನೆ.
ಅಭಿಯ ಸೇವೆ ಮಾಡಿದ ಅಣ್ಣ
ತುಳಸಿ ಕೂಡ ಅಭಿ ಜೊತೆ ಕಾಲ ಕಳೆಯುತ್ತಾರೆ. ಹಾಗೆಯೇ ಆತ ಕುಡಿದು ಹೆಚ್ಚಾಗಿ ವಾಂತಿ ಮಾಡಿದ್ದನ್ನು ಕೂಡ ಅವಿ ಹಾಗೂ ತುಳಸಿ ಸೇರಿ ಕ್ಲೀನ್ ಮಾಡುತ್ತಾರೆ. ಅಭಿಗೆ ಬೆಚ್ಚನೆಯ ಬೆಡ್ ಶೀಟ್‌ನಲ್ಲಿ ಆತನನ್ನು ಬೆಚ್ಚಾಗಿರುವಂತೆ ಮಲಗಿಸುತ್ತಾರೆ. ತುಳಸಿ, ಅಭಿ ತಲೆ ನೇವರಿಸಿ ಮಲಗಿಸುತ್ತಾರೆ. ಇದೆಲ್ಲವನ್ನೂ ನೋಡಿದ ಮಾಧವಗೆ ಬಹಳ ಖುಷಿ ಆಗುತ್ತದೆ. ಅಭಿಗೆ ಇಬ್ಬರ ಮೇಲು ಪ್ರೀತಿ ಇದೆ.
ಶಾರ್ವರಿಯ ನಡವಳಿಕೆ ತುಳಸಿಗೆ ಅನುಮಾನ
ಇನ್ನೂ ಎಲ್ಲರೂ ಅವರವ ಕೋಣೆಯಲ್ಲಿ ಮಲಗುತ್ತಾರೆ. ಬೆಳಗ್ಗೆ ಎದ್ದು ಶಾರ್ವರಿ ಹೊರ ಬಂದಾಗ ಅಭಿಗೆ ಒಮ್ಮೆಲೆ ಎಚ್ಚರ ಆಗುತ್ತದೆ. ಆಗ ತುಳಸಿ ಕೂಡ ಮೆತ್ತಗೆ ಹೊರಗೆ ಬರುತ್ತಾಳೆ. ಆದರೆ, ತುಳಸಿ ಬಂದಿರುವ ವಿಚಾರ ಶಾರ್ವರಿಗೆ ತಿಳಿದಿರುವುದಿಲ್ಲ. ಅಭಿ, ಶಾರ್ವರಿಯನ್ನು ನೋಡಿ ಹೇಳುತ್ತಾನೆ. "ನಾನು ರಾತ್ರಿಯಿಂದ ಇಲ್ಲಿಯೇ ಇದ್ದೇನಾ ಚಿಕ್ಕಮ್ಮ, ನೀವು ನನ್ನನ್ನು ಇಲ್ಲಿ ಮಲಗಿಸಿದ್ರಾ?" ಎಂದು ಕೇಳಿದಾಗ ಶಾರ್ವಾರಿ ಹೌದು ಎಂದು ಹೇಳುತ್ತಾರೆ. ಶಾರ್ವರಿಯ ಉತ್ತರ ತುಳಸಿಗೆ ಇನ್ನಷ್ಟು ಅನುಮಾನಕ್ಕೆ ಎಡೆ ಮಾಡಿಕೊಡುತ್ತೆ. ಯಾಕೆ ಶಾರ್ವರಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ತುಳಸಿಗೆ ಅರ್ಥ ಆಗುವುದಿಲ್ಲ.


Click it and Unblock the Notifications











