Shrirasthu Shubhamasthu: ಶಾರ್ವರಿ ಬಣ್ಣ ಬಯಲಾಗುತ್ತಾ.. ಇನ್ನೊಂದು ಕಾರು ಪತ್ತೆ ಆಗುತ್ತಾ?
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಿರಿ ತುಳಸಿ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಸಾಕ್ಷಿ ಸಮೇತ ಮಾಧವ್ ಮನೆಗೆ ಬಂದು ತುಳಸಿ ಬಳಿ ಚಾಲೆಂಜ್ ಮಾಡಿದ್ದಾಳೆ. ಅಭಿ ಮುಖಕ್ಕೆ ಕಾರ್ ಪೇಪರ್‌ಗಳನ್ನು ಬಿಸಾಡಿದ ಸಿರಿ, ನಿನ್ನ ಹೆಸರಿನಲ್ಲಿ ಕಾರ್ ಇದೆ. ನೀನೇ ಆಕ್ಸಿಡೆಂಟ್ ಮಾಡಿದ್ದೀಯಾ. ಈಗ ನೀನು ತಪ್ಪಿಸಿಕೊಳ್ಳಲು ಸಮರ್ಥ್ ಮೇಲೆ ದೂರು ಹಾಕಿದ್ದೀಯಾ ಎಂದು ಹೇಳಿದ್ದಾಳೆ. ಕಾರು ಅಭಿ ಹೆಸರಿನಲ್ಲಿ ಇದ್ದ ಮಾತ್ರಕ್ಕೆ ಅವನೇ ಕ್ಸಿಡೆಂಟ್ ಮಾಡಬೇಕಿಲ್ಲ ಎಂದು ಎಲ್ಲರೂ ಸಿರಿಗೆ ಸತ್ಯವನ್ನು ಅರ್ಥ ಮಾಡಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.
ಮನೆಯವರ ಮುಂದೆ ಸತ್ಯ ಒಪ್ಪಿಕೊಂಡ ನಿಧಿ
ಗೊಂದಲದಲ್ಲಿರುವ ತುಳಸಿ ಬಾಯಿ ತಪ್ಪಿ ಮಾದವ್ ಬಳಿ ಸತ್ಯ ಹೇಳಿದ್ದಾಳೆ. ಸಮರ್ಥ್ ನಿಧಿಯನ್ನು ಬಚಾವ್ ಮಾಡಲು ತನ್ನ ಮೇಲೆ ಆರೋಪ ಹೊತ್ತುಕೊಂಡಿದ್ದಾನೆ ಎಂಬುದನ್ನು ತಿಳಿದ ಮಾಧವ್ ನಿರ್ಧಾರವೊಂದನ್ನು ಮಾಡಿದ್ದಾನೆ. ಮನೆಯವರನ್ನೆಲ್ಲಾ ಸೇರಿಸಿದ ಮಾಧವ್ ಆಕ್ಸಿಡೆಂಟ್ ಮಾಡಿರುವುದು ನಿಧಿ, ನಿಧಿಯೇ ಜೈಲಿಗೆ ಹೋಗಲಿ. ಅವಳನ್ನು ಆಮೇಲೆ ಬಿಡಿಸಿಕೊಂಡು ಬರೋಣ. ಸಮರ್ಥ್ ಜೈಲಿನಲ್ಲಿರುವುದು ಸರಿಯಲ್ಲ ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿದ ಶಾರ್ವರಿ ಎಲ್ಲರ ನಿಷ್ಠೂರಳಾಗಿದ್ದಾಳೆ. ಸಮರ್ಥ್‌ಗಾಗಿ ನನ್ನ ಮಗಳು ಜೈಲಿಗೆ ಹೋಗುವುದು ಬೇಡ ಎಂದು ಹೇಳಿದ್ದಾಳೆ. ಆದರೆ, ಮನೆಯವರೆಲ್ಲರೂ ನಿಧಿ ಜೈಲಿಗೆ ಹೋಗುವುದೇ ಸರಿ ಎಂದು ಹೇಳಿದ್ದು, ನಿಧಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಮಾಧವ್ ನಿರ್ಧಾರವನ್ನು ತಳ್ಳಿ ಹಾಕಿದ ಅವಿ
ಆದರೆ, ಮಾಧವ್ ಮಾಡಿರುವ ನಿರ್ಧಾರವನ್ನು ಅವಿನಾಶ್ ತಳ್ಳಿ ಹಾಕಿದ್ದಾನೆ. ನಿಧಿ ಕಾರು ಓಡಿಸುವಾಗ ನಡೆದಿದೆ ಎಂದ ಮಾತ್ರಕ್ಕೆ ಆ ಅಪಘಾತಕ್ಕೆ ನಿಧಿ ಕಾರಣಳಲ್ಲ ಎಂದು ಹೇಳಿದ್ದಾನೆ. ಆಕ್ಸಿಡೆಂಟ್ ಆದ ಜಾಗದಲ್ಲಿ ಇನ್ನೊಂದು ಕಾರಿನ ಚಕ್ರದ ಗುರುತು ಇದೆ. ಅದೇ ಕಾರು ಅಪಘಾತ ಮಾಡಿರಬಹುದು. ನಿಧಿ ಗಾಬರಿಯಲ್ಲಿ ತನ್ನಿಂದಲೇ ಅಪಘಾತವಾಗಿದೆ ಎಂದು ಅಪಾರ್ಥ ಮಾಡಿಕೊಂಡಿರಬಹುದು ಎಂದು ಹೇಳಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲರೂ ಸದ್ಯಕ್ಕೆ ತಾಳ್ಮೆಯಿಂದ ಇರಿ ಎಂದು ಹೇಳಿದ್ದಾನೆ. ಇನ್ನೊಂದು ಕಾರಿನ ನಂಬರ್‌ಗಾಗಿ ಹುಡುಕಾಟ ನಡೆಸುತ್ತಿರುವ ಅವಿಗೆ ಸತ್ಯ ಗೊತ್ತಾಗುತ್ತಾ ಎಂಬ ಕುತೂಹಲ ಮೂಡಿದೆ.
ಸತ್ಯ ತಿಳಿದು ಕ್ಷಮೆ ಕೇಳಿದ ಸಿರಿ
ಇನ್ನು ಈ ಎಲ್ಲಾ ಸತ್ಯವನ್ನು ತಿಳಿದ ಸಿರಿ ಈಗ ತುಳಸಿಯ ಬಳಿ ಬಂದು ಕ್ಷಮೆ ಕೇಳಿದ್ದಾಳೆ. ನಿಮ್ಮ ಬಗ್ಗೆ ನನಗೆ ಗೊತ್ತಿದ್ದರೂ ಕೂಡ, ನಾನೇ ದುಡುಕಿ ಬಿಟ್ಟೆ. ನಿಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೇ. ನನ್ನನ್ನು ಕ್ಷಮಿಸಿ ಬಿಡಿ ಎಂದು ಸಿರಿ ತುಳಸಿ ಬಳಿ ಕ್ಷಮೆ ಕೇಳಿದ್ದಾಳೆ. ಇನ್ನು ದತ್ತ ತಾತ ಕೂಡ ತುಳಸಿಯ ಕೆಲಸವನ್ನು ಮೆಚ್ಚಿಕೊಂಡಿದ್ದು, ಸದ್ಯ ನಿಜವಾಗಿಯೂ ತಪ್ಪು ಮಾಡಿರುವವರಿಗೆ ಶಿಕ್ಷೆ ಆಗಬೇಕಿದೆ. ಸಮರ್ಥ್‌ನನ್ನು ಆದಷ್ಟು ಬೇಗ ಬಿಡಿಸಬೇಕಿದೆ ಎಂದು ಮಾತನಾಡಿದ್ದಾರೆ.

ಶಾರ್ವರಿ ಎದೆಯಲ್ಲಿ ಪುಕ ಪುಕ
ಇತ್ತ ಶಾರ್ವರಿಗೆ ಮನದಲ್ಲೇ ಪುಕ ಪುಕ ಶುರುವಾಗಿದೆ. ತನ್ನ ಕಾರು ಸಿಕ್ಕಿ ಬಿದ್ದರೆ, ತಾನು ಮಾಡಿರುವ ತಪ್ಪು ಗೊತ್ತಾಗುತ್ತದೆ. ತಾನು ಜೈಲಿಗೆ ಹೋದರೆ, ಇಷ್ಟು ವರ್ಷ ಕಾಪಾಡಿಕೊಂಡು ಬಂದದ್ದೆಲ್ಲವೂ ಸರ್ವನಾಶವಾಗುತ್ತದೆ ಎಂದು ಗಾಬರಿಯಾಗಿದ್ದಾಳೆ. ಕಾರನ್ನು ಬಚ್ಚಿಟ್ಟಿರುವ ಶಾರ್ವರಿಯಲ್ಲಿ ಆತಂಕ ಹೆಚ್ಚಾಗುತ್ತಲೇ ಇದೆ. ಶಾರ್ವರಿ ವಿಲವಿಲನೇ ಒದ್ದಾಡುತ್ತಿರುವುದನ್ನು ನೋಡಿದ ತುಳಸಿ ಏನಾಯ್ತು ಎಂದು ವ್ಯಂಗ್ಯವಾಗಿ ವಿಚಾರಿಸಿದ್ದಾಳೆ. ಆದರೆ, ಶಾರ್ವರಿಯಿಂದ ರವೀಂದ್ರನ ಪ್ರಾಣ ಹೋಯ್ತು ಎಂಬ ವಿಚಾರ ಯಾವಾಗ ಗೊತ್ತಾಗುತ್ತದೋ ವೀಕ್ಷಕರು ಕಾಯುತ್ತಿದ್ದಾರೆ.


Click it and Unblock the Notifications











