ಸಿಕ್ಕಿ ಹಾಕಿಕೊಳ್ಳುವ ಭೀತಿಯಲ್ಲಿ ದೀಪಿಕಾ : ಮನೆ ಮಂದಿಯ ಮೇಲೆ ಅನುಮಾನ ಪಡುತ್ತಿರುವ ಅವಿ

By ಪೂರ್ವ

ದೀಪಿಕಾ ಮಾಡಿರುವ ಕುತಂತ್ರಿ ಕೆಲಸಕ್ಕೆ ಮನೆ ಮಂದಿಯನ್ನು ಅವಿ ಅನುಮಾನ ಪಡುವ ಹಾಗೆ ಆಗಿದೆ. ತುಳಸಿ, ಪೂರ್ಣಿಮಾಗೆ ಮಗು ಆಗಲಿ ಎನ್ನುವ ಉದ್ದೇಶದಿಂದ ಹಳ್ಳಿ ಮದ್ದು ಮಾಡುತ್ತಾ ಇರುತ್ತಾಳೆ. ಆದರೆ, ಪೂರ್ಣಿಮಾ ಮೇಲಿರುವ ದ್ವೇಷಕ್ಕೆ ದೀಪಿಕಾ ಅದರಲ್ಲಿ ಏನೋ ಮಿಕ್ಸ್ ಮಾಡಿ ಇರುತ್ತಾಳೆ. ಪೂರ್ಣಿಮಳನ್ನು ನೋಡಿ ದೀಪಿಕಾಗೆ ಮೈ ಎಲ್ಲ ಉರಿದು ಬಿಡುತ್ತದೆ. ಆದ ಕಾರಣದಿಂದ ದೀಪಿಕಾಳ ಮೊದಲ ಟಾರ್ಗೆಟ್ ಪೂರ್ಣಿಮಾ. ಅಭಿ ಮಾತ್ರ ಇದಕ್ಕೆಲ್ಲ ಕಾರಣ ತುಳಸಿ ಎಂದು ಎಲ್ಲರೆದುರೂ ಹೇಳಿದಾಗ ಅವಿ ಮಾತ್ರ ಸುಮ್ಮನೆ ಇರುತ್ತಾನೆ.

ಆದರೆ, ಸಮರ್ಥ್ ಸುಮ್ಮನೆ ಇರುವುದಿಲ್ಲ. "ಸುಖಾ ಸುಮ್ಮನೆ ನನ್ನ ಅಮ್ಮನ ಮೇಲೆ ಈ ಥರ ಆರೋಪ ಮಾಡುತ್ತಿರೋದು ಸರಿ ಅಲ್ಲ. ನನ್ನ ಅಮ್ಮ ಯಾವ ತಪ್ಪೂ ಮಾಡಿ ಇಲ್ಲ. ಅಮ್ಮ ನಿನಗಾಗಿ ಎಷ್ಟೆಲ್ಲ ಸಹಾಯ ಮಾಡಿದರು. ಆದರೆ, ಅದರ ಪ್ರತಿಫಲವಾಗಿ ನೀವು ಅವರ ಜೊತೆ ಈ ರೀತಿ ನಡೆದುಕೊಳ್ಳುವುದು ಸರಿ ಅಲ್ಲ" ಎಂದು ಅಮ್ಮನ ಮುಖ ನೋಡಿ ಹೇಳುತ್ತಾನೆ. "ಸಮರ್ಥ್ ನಾನು ಅದೆಷ್ಟು ಬಾರಿ ಹೇಳಿದ್ದೇನೆ. ಇವರಿಗೆಲ್ಲ ಸಹಾಯ ಮಾಡಲು ಹೋಗಬೇಡ. ಹಾವಿಗೆ ಹಾಲು ಎರೆದು ಹಾಗೆ ಅದು" ಎಂದು ಹೇಳಿದಾಗ ಅಭಿ ಹಾಗೂ ಸಮರ್ಥ್ ಇಬ್ಬರೂ ಜಗಳ ಮಾಡುತ್ತಾರೆ.

 Shrirasthu Shubhamasthu serial February 21th update about Avi Deepika scene

ಈ ವೇಳೆ ಇವರ ಜಗಳ ಬಿಡಿಸಲು ಮಹೇಶ ಬರಬೇಕಾಯಿತು. ಇನ್ನು ಮನೆ ಮಂದಿಯ ಹೇಳಿಕೆ ಪ್ರಕಾರ ಕೆಲಸದಾಕೆಯ ಮೇಲೆ ಅನುಮಾನ ಬಂದು ಸಮರ್ಥ್ ಆಕೆಯ ಮನೆಯನ್ನು ಹುಡುಕಿಕೊಂಡು ಹೋದಾಗ ಮನೆಗೆ ಬೀಗ ಹಾಕಿ ಇರುತ್ತದೆ. ಆದರೆ ಆ ವೇಳೆ ಅಲ್ಲಿಗೆ ಮಾಧವನ ಮನೆಯಲ್ಲಿ ಕೆಲಸ ಮಾಡುವಾಕೆ ಬರುತ್ತಾಳೆ. ಆಕೆ ಸಮರ್ಥ್‌ನನ್ನು ನೋಡಿ ಓಡಲು ಶುರು ಮಾಡುತ್ತಾಳೆ. ಆದರೆ, ಸಮರ್ಥ್ ಓಡಿ ಹೋಗಿ ಮನೆ ಕೆಲಸದಾಕೆಯನ್ನೂ ಹಿಡಿದು ಅಲ್ಲಿ ನಡೆದ ಬಗ್ಗೆ ಎಲ್ಲವನ್ನೂ ಕೇಳುತ್ತಾನೆ.

ಸಮರ್ಥ್ ಮಾತಿಗೆ ಹೆದರಿದ ಕೆಲಸದಾಕೆ

ಕೆಲಸದಾಕೆ ಸಮರ್ಥ್ ಪ್ರಶ್ನೆಗೆ ಹೆದರಿ ಎಲ್ಲಾ ವಿಚಾರ ಹೇಳುತ್ತಾಳೆ. ಇನ್ನೂ ಅವಿನಾಶ್ ಮನೆ ಮಂದಿಯನ್ನು ಹಾಗೆಯೇ ಮನೆ ಕೆಲಸದವರನ್ನು ಎಲ್ಲರನ್ನೂ ಕರೆದು ಪ್ರಶ್ನೆ ಮಾಡುತ್ತಾನೆ. ಪೂರ್ಣಿಮಾ ತೆಗೆದುಕೊಳ್ಳುತ್ತಾ ಇದ್ದ ಮೆಡಿಸಿನ್‌ನಲ್ಲಿ ವಿಷ ಮಿಕ್ಸ್ ಆಗಿದೆ. ಈ ಕೆಲಸ ಯಾರು ಮಾಡಿದ್ದೀರಿ ಎಂದು ಸತ್ಯ ಒಪ್ಪಿಕೊಳ್ಳಿ ಎಂದಾಗ ಪಾಪಮ್ಮ ಬಹಳ ಬೇಸರದಿಂದ ಹೇಳುತ್ತಾಳೆ. ನಮ್ಮ ಮೇಲೆ ಅನುಮಾನ ಪಡುತ್ತಾ ಇದ್ದೀರಾ ಚಿಕ್ಕ ಯಜಮಾನರೆ?

 Shrirasthu Shubhamasthu serial February 21th update about Avi Deepika scene

ಅವಿ ಮಾತಿಗೆ ಅತ್ತ ಪಾಪಮ್ಮ

"ನಾವು ಯಾವತ್ತೂ ಪೂರ್ಣಿಮಾಳನ್ನು ಹಾಗೆ ನಡೆಸಿಕೊಂಡಿಲ್ಲ. ನನ್ನ ಮಗಳ ಹಾಗೆ ನೋಡಿಕೊಂಡು ಇದ್ದೇವೆ" ಎಂದು ಅಳುತ್ತಾರೆ. ಆದರೆ ಇದೆಲ್ಲವನ್ನೂ ನೋಡಿದ ಅವಿ ಹೇಳುತ್ತಾನೆ. "ನಾನು ನಿಮಗೆ ಈ ರೀತಿ ಕೇಳಿರುವುದು ನೋವು ತಂದಿರಬಹುದು. ಆದರೆ ನನಗೆ ಪೂರ್ಣಿಮಾಗೆ ಹೀಗೆ ಆಗಿರುವುದು ನೋಡಿ ಬಹಳ ಆತಂಕ ಆಗಿದೆ" ಎಂದು ಹೇಳುತ್ತಾನೆ. ಆ ಕೂಡಲೇ ಮತ್ತೊಬ್ಬ ಕೆಲಸದಾತ ಹೇಳುತ್ತಾನೆ. "ಅವಿ ಸರ್.. ದೀಪಿಕಾ ಮೇಡಂ ಅವರು ಪೂರ್ಣಿಮಾ ರೂಮ್‌ಗೆ ಹೋಗುವುದನ್ನು ನಾನು ನೋಡಿದೆ" ಎಂದಾಗ ಮನೆಯವರ ಚಿತ್ತ ದೀಪಿಕಾ ಮೇಲೆ ಹೋಗುತ್ತದೆ.

ಕೆಲಸದವನ ಮಾತು ಕೇಳಿ ದೀಪಿಕಾ ಶಾಕ್

ದೀಪಿಕಾಗೆ ಶಾಕ್ ಆಗುತ್ತದೆ. ಏನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ. ದೀಪಿಕಾ ಮಾಡಿದ ಕೆಲಸಕ್ಕೆ ಆಕೆಗೆ ತಾನು ಎಲ್ಲಿ ಸಿಕ್ಕಿ ಬೀಳುತ್ತೆನಾ ಎನ್ನುವ ಭಯದಲ್ಲಿ ಇರುತ್ತಾಳೆ. ಶಾರ್ವರಿ ಮುಖವನ್ನು ಆಗಾಗ ನೋಡುತ್ತಾ ಇರುತ್ತಾಳೆ. ದೀಪಿಕಾ ಏನಾದರು ಡ್ರಾಮ ಮಾಡಿ ಈ ವೇಳೆ ತಪ್ಪಿಸಿಕೊಳ್ಳಬಹುದು. ಆದರೆ ಸಮರ್ಥ್ ರೆಡ್ ಹ್ಯಾಂಡ್ ಆಗಿ ದೀಪಿಕಾ ಸಂಚನ್ನು ಹೊರ ತೆಗೆಯುವ ಪ್ರಯತ್ನ ಮಾಡುತ್ತಿದ್ದಾನೆ.

More from Filmibeat

English summary
Shrirasthu Shubhamasthu serial February 21th update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X