ತುಳಸಿ ಮಕ್ಕಳ ಹೆಸರನ್ನು ವಂಶ ವೃಕ್ಷಕ್ಕೆ ಸೇರಿಸಲು ಅಭಿ ವಿರೋಧ; ಶಾರ್ವರಿ ತಂತ್ರ ಎಲ್ಲಾದರೂ ಫಳಿಸುತ್ತಾ?

By ಪೂರ್ವ

ತುಳಸಿ ಹಾಗೂ ಆಕೆಯ ಮಕ್ಕಳ ಹೆಸರನ್ನು ವಂಶ ವೃಕ್ಷಕ್ಕೆ ಸೇರಿಸುವ ಪ್ರಯತ್ನ ಮಾಧವ ಮಾಡುತ್ತಿದ್ದರೆ, ಶಾರ್ವರಿ ಮಾತ್ರ ಯಾವುದೇ ಕಾರಣಕ್ಕೂ ತುಳಸಿ ಹೆಸರು ಮಾತ್ರ ವಂಶ ವೃಕ್ಷದಲ್ಲಿ ನೊಂದಾಯಿಸಬಾರದೆಂದು ತಂತ್ರ ಮಾಡುತ್ತಿದ್ದಾರೆ. ಯಾಕೆಂದರೆ, ಅದಕ್ಕೆ ಸಮರ್ಥ್ ಹಾಗೂ ಸಂಧ್ಯಾ ಕೂಡ ಹಕ್ಕುದಾರರೆ ಆಗಿರುತ್ತಾರೆ. ಆದ ಕಾರಣ ತುಳಸಿ ಹೆಸರು ನಮ್ಮ ವಂಶದ ವೃಕ್ಷದಲ್ಲಿ ಇರುವುದು ಬೇಡ ಎಂದು ಶಾರ್ವರಿ ಗಂಡ ಮಹೇಶನ ತಲೆ ಕೆಡಿಸಿ ಬಿಡುತ್ತಾಳೆ. ಅವರ ಮಾತನ್ನು ಕೇಳಿ,"ಅಣ್ಣನ ಬಳಿ ಮಾತನಾಡುತ್ತೇನೆ" ಎಂದು ಹೇಳಿ ಅಲ್ಲಿಂದ ಮಹೇಶ ಹೋಗುತ್ತಾನೆ.

ಬಳಿಕ ಅವಿ ಬಳಿ ಬಂದು ಅದೇ ಮಾತನ್ನು ಹೇಳುತ್ತಾರೆ. "ತುಳಸಿ ನಮ್ಮ ಮನೆಗೆ ವಂಶವೃಕ್ಷಕ್ಕೆ ಸೇರಿದರೆ ಆಕೆಯ ಮಕ್ಕಳಿಗೆ ಕೂಡ ಈ ಮನೆಯಿಂದ ಪಾಲು ಕೊಡಬೇಕಾಗುತ್ತದೆ" ಎಂದು ಹೇಳಿದಾಗ ಅವಿ ಕೂಡ ಅವರ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಹೇಳುತ್ತಾನೆ. ಇತ್ತ ದೀಪಿಕಾ ಅಭಿ ರೂಮ್‌ನೊಳಗೆ ಬರುತ್ತಾ ಇರುವುದನ್ನು ಕಂಡು ತಂದೆಯ ಬಳಿ ಮಾತನಾಡುವ ಹಾಗೆ ನಾಟಕ ಆಡುತ್ತಾಳೆ. ಡ್ಯಾಡಿ ನಮ್ಮ ಮನೆಯಲ್ಲಿ ಈ ರೀತಿ ನಡೆಯುತ್ತಿದೆ. ನಿನಗೆ ಹ್ಯಾಂಡಲ್ ಮಾಡಲಾಗದ ಸಮಯದಲ್ಲಿ ನಿನ್ನ ಅಳಿಯನಿಗೆ ಅದೆಲ್ಲವನ್ನೂ ಬಿಟ್ಟುಕೊಡು. ಅವರು ಎಲ್ಲವನ್ನೂ ನಿಭಾಯಿಸಿ ಬಿಡುತ್ತಾರೆ ಎಂದು ಹೇಳುತ್ತಾಳೆ.

Shrirasthu Shubhamasthu serial February 26th episode update

ಇದನ್ನೆಲ್ಲ ಕೇಳಿದ ಅಭಿ ಮೆತ್ತಗೆ ಕೇಳುತ್ತಾನೆ "ಏನಾಯಿತು ದೀಪಿಕಾ ಯಾಕೆ ಹೀಗೆಲ್ಲ ಮಾತನಾಡುತ್ತಾ ಇದ್ದೀಯಾ..?" ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾನೆ. ಇದನ್ನು ಕೇಳಿದ ದೀಪಿಕಾ "ತುಳಸಿ ಅಮ್ಮನ ಹೆಸರು ವಂಶ ವೃಕ್ಷಕ್ಕೆ ಹಾಕಿದರೆ, ನಾಳೆ ದಿನ ಅವರ ಮಕ್ಕಳು ನಮ್ಮ ಬಳಿ ಬಂದು ಆಸ್ತಿ ಕೇಳುತ್ತಾರೆ. ಅದಕ್ಕಾಗಿ ನಾನು ತಂದೆಯ ಬಳಿ ಮಾತನಾಡುತ್ತಾ ಇದ್ದೆ. ನಾಳೆ ದಿನ ನಮಗೆ ಏನೂ ಇಲ್ಲ ಎಂದು ಆಗಬಾರದು ಅಲ್ವಾ" ಎಂದು ಹೇಳಿದಾಗ ಅಭಿಗೆ ಸಹಜವಾಗಿ ಕೋಪ ಬರುತ್ತದೆ.

ತಂದೆಯ ಬಳಿ ಅಭಿ ಪ್ರಶ್ನೆ

ಹಾಗೆಯೇ ಸಮರ್ಥ್ ಹಾಗೂ ಸಂಧ್ಯಾ ವಿರುದ್ದ ಕಿಡಿ ಕಾರುತ್ತ ಇರುತ್ತಾನೆ. ಹೇಗಾದರೂ ಮಾಡಿ ತುಳಸಿ ಅವರನ್ನು ವಂಶ ವೃಕ್ಷಕ್ಕೆ ಹೆಸರು ನೋಂದಾಯಿಸಲು ಬಿಡಬಾರದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನೂ ಅಭಿ ಹಾಗೂ ಅಭಿ ತಂದೆಯ ಬಳಿ ಮಾತನಾಡಲು ಬರುತ್ತಾರೆ. ಅವರಿಬ್ಬರನ್ನು ನೋಡಿದ ಮಾಧವ ಹೇಳುತ್ತಾನೆ. ಬನ್ನಿ ಮಕ್ಕಳೇ ಕುಳಿತುಕೊಳ್ಳಿ ಎಂದು ಅವರಿಬ್ಬರು ಕುಳಿತುಕೊಂಡ ಬಳಿಕ ಮಾಧವ ಏನು ವಿಚಾರ ಎಂದು ಕೇಳುತ್ತಾನೆ.

Shrirasthu Shubhamasthu serial February 26th episode update

ಅಭಿ ಮಾತಿಗೆ ಸುಮ್ಮನಾದ ಮಾಧವ

ಇದನ್ನು ಕೇಳಿದ ಅಭಿ ಹೇಳುತ್ತಾನೆ. "ನಾಳೆ ಸಮರ್ಥ್ ಹಾಗೂ ಸಂಧ್ಯಾ ಹೆಸರನ್ನು ವಂಶ ವೃಕ್ಷಕ್ಕೆ ಸೇರ್ಪಡೆ ಮಾಡಬೇಕು ಎನ್ನುವ ನಿರ್ಧಾರವನ್ನು ನೀವು ಕೈ ಬಿಡಿ. ಏಕೆಂದರೆ ಅದು ಸರಿ ಅಲ್ಲ.. ನನಗೆ ಇದರಿಂದ ತೊಂದರೆ ಕಟ್ಟಿಟ್ಟ ಬುತ್ತಿ" ಎಂದಾಗ ಮಾಧವ ಹೇಳುತ್ತಾರೆ. "ಅಭಿ, ನನಗೆ ಸಮರ್ಥ್ ಹಾಗೂ ಸಂಧ್ಯಾ ಇಬ್ಬರು ಮಕ್ಕಳೇ ಅಲ್ವಾ? ಆದ ಕಾರಣ ಅವರನ್ನು ಸೇರ್ಪಡೆ ಮಾಡೋಣ ಎಂದುಕೊಂಡೆ" ಎಂದಾಗ ಅಭಿ ತನ್ನ ತಂದೆಯ ವಿರುದ್ದ ಕೂಗಾಡುತ್ತಾನೆ. "ನೀವು ಹೀಗೆ ಮಾಡುತ್ತಾ ಇರುವುದು ಸರಿ ಅಲ್ಲ. ಇದರಿಂದ ನನಗೆ ತೊಂದರೆ ತಪ್ಪಿದಲ್ಲ ಎಂದರು" ಮಾಧವ ಕೇಳುವುದಿಲ್ಲ.

ಭಾವನಾ ಬಳಿ ಬೇಡಿಕೆ ಇಟ್ಟ ಶಾರ್ವರಿ

ಕೊನೆಗೆ ಶಾರ್ವರಿ ಹಾಗೂ ಮಹೇಶ ಕೂಡ ಅದೇ ಮಾತನ್ನು ಹೇಳುತ್ತಾರೆ. ಮಕ್ಕಳು ಹೇಳುವುದರಲ್ಲಿ ನ್ಯಾಯ ಇದೆ .. ಅವರಿಬ್ಬರನ್ನು ಸೇರ್ಪಡೆಗೊಳಿಸಿದರೆ ಮತ್ತೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ಅವರನ್ನು ಸೇರಿಸುವುದು ಬೇಡ ಎಂದು ಹೇಳಿದಾಗ ಮಹೇಶ ಕೂಡ ಅದೇ ಮಾತನ್ನು ಹೇಳುತ್ತಾನೆ .

More from Filmibeat

English summary
Shrirasthu Shubhamasthu serial February 26th episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X