ಸಂಧ್ಯಾ ದುರಾಸೆಗೆ ನೋವುಂಡವರು ಯಾರು? ತುಳಸಿ ಮಕ್ಕಳನ್ನು ನೋಡಿ ಮನೆ ಮಂದಿ ಕಿಡಿ ಕಾರುತ್ತಿರೋದೇಕೆ?
ಸಂಧ್ಯಾಳಿಂದಾಗಿ ಸಮರ್ಥ್ ಇಕ್ಕಟ್ಟಿಗೆ ಸಿಲುಕುವ ಪ್ರಸಂಗ ಎದುರಾಗಿದೆ. ತುಳಸಿ ಅಚಾನಕ್ ಆಗಿ ದತ್ತನ ಮನೆಗೆ ಬರುತ್ತಾಳೆ. ಮಾವನನ್ನು ಕಂಡ ತುಳಸಿ ಹಿರಿ ಹಿರಿ ಹಿಗ್ಗುತ್ತಾಳೆ. ತುಳಸಿ ಮಾವನ ಮನೆಗೆ ಬರಲು ಒಂದು ಕಾರಣ ಕೂಡ ಇದೆ. ಅದೇನೆಂದರೆ ಮಾಧವ ಅವರ ಕುಟುಂಬದ ವಂಶ ವೃಕ್ಷದಲ್ಲಿ ತನ್ನ ಮಕ್ಕಳ ಹೆಸರನ್ನು ಹಾಕಿಸುವುದು ಬೇಡ ಎನ್ನುವುದು ಆಕೆಯ ನಿಲುವಾಗಿತ್ತು. ಆ ಕಾರಣಕ್ಕೆ ತುಳಸಿ ಮಾವನ ಮನೆಗೆ ಬಂದಿದ್ದಳು. ಹಾಗೆಯೇ ಆಕೆಯ ಅಭಿಪ್ರಾಯ ಮಾವನ ಬಳಿ ಹೇಳಿಕೊಂಡಾಗ ದತ್ತನಿಗೆ ತುಳಸಿ ನಿರ್ಧಾರ ಅದ್ಯಾಕೋ ಸರಿ ಅನ್ನಿಸಿದೆ.
ಇನ್ನೂ ಈ ವಿಚಾರವನ್ನು ಸಮರ್ಥ್ ಹಾಗೂ ಸಂಧ್ಯಾ ಬಳಿಯೂ ತುಳಸಿ ಹೇಳಿಕೊಂಡಾಗ "ನಾವು ಆ ವಂಶ ವೃಕ್ಷದ ಹೆಸರಿನಲ್ಲಿ ನಮ್ಮ ಹೆಸರನ್ನು ತಳುಕು ಹಾಕಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ. ಹಾಗೆಯೇ ನಮಗೆ ಆ ಕುಟುಂಬಕ್ಕೆ ಸೇರಿಕೊಳ್ಳಲು ಇಷ್ಟ ಇಲ್ಲ" ಎಂದು ನೇರವಾಗಿ ಹೇಳಿರುತ್ತಾನೆ ಸಮರ್ಥ್. ಇದಕ್ಕಿಂತ ಮುಂಚಿತವಾಗಿ ಸಮರ್ಥ್‌ಗೆ ಅಭಿ ನೇರವಾಗಿ ಟಾಂಗ್ ಕೊಟ್ಟಿರುತ್ತಾನೆ. ನೀನು ಕೂಡ ನಮ್ಮ ಕುಟುಂಬದ ವಂಶ ವೃಕ್ಷಕ್ಕೆ ಸೇರಿಕೊಳ್ಳುತ್ತಾ ಇದ್ದೀಯಾ ಅಲ್ವಾ ? ನಿನಗೆ ಕೂಡ ಇದು ಖುಷಿಯ ಸುದ್ದಿ ಅಲ್ವಾ..? ಎಂದು ಹೇಳಿದಾಗ, ಸಮರ್ಥ್ "ನಾನು ನಿನ್ನ ಕುಟುಂಬವನ್ನು ಯಾವತ್ತೂ ಸೇರುವುದು ಇಲ್ಲ" ಎಂದು ಹೇಳಿ ಇರುತ್ತಾನೆ.

ಆ ಮಾತನ್ನು ತುಳಸಿ ಬಳಿಯೂ ಹೇಳುತ್ತಾನೆ. "ನೀವು ಅವರ ಕುಟುಂಬದ ವಂಶ ವೃಕ್ಷಕ್ಕೆ ಸೇರ್ಪಡೆಗೊಳ್ಳಲಿ. ನನ್ನ ಹೆಸರನ್ನು ಸೇರ್ಪಡೆಗೊಳಿಸುವ ಅವಶ್ಯಕತೆ ಇಲ್ಲ" ಎಂದಾಗ ಸಂಧ್ಯಾ "ಅಮ್ಮನಿಗೆ ನನ್ನ ಹೆಸರನ್ನು ಸೇರಿಸಲು ಹೇಳು" ಎಂದಾಗ ಸಮರ್ಥ್ "ನಾನು ಖಂಡಿತವಾಗಿಯೂ ನಿನ್ನ ಹೆಸರನ್ನು ಸೇರಿಸಲು ಬಿಡುವುದು ಇಲ್ಲ" ಎನ್ನುತ್ತಾನೆ. ಇದನ್ನು ಕೇಳಿದ ತುಳಸಿ "ವಂಶ ವೃಕ್ಷದಲ್ಲಿ ನಿಮ್ಮ ಇಬ್ಬರ ಹೆಸರನ್ನು ನಾನು ಸೇರಿಸುವುದು ಇಲ್ಲ" ಎಂದು ಹೇಳುತ್ತಾರೆ. ಬಳಿಕ ಅಲ್ಲಿಂದ ನೇರವಾಗಿ ಮಾಧವನ ಮನೆಗೆ ಬರುತ್ತಾರೆ.
ಮಾಧವನ ಮನೆಗೆ ಬಂದ ಲಾಯರ್
ಮರುದಿನ ಕುಟುಂಬದ ವಂಶವೃಕ್ಷ ಹೆಸರು ನೋಂದಾಯಿಸಲು ವಕೀಲರು ಬರುತ್ತಾರೆ. ತುಳಸಿ ಹೆಸರನ್ನು ಸೇರಿಸುತ್ತಾರೆ. ಹಾಗೆಯೇ ಅವರ ಮಕ್ಕಳ ವಿಚಾರ ಬಂದಾಗ ಅವರಿಬ್ಬರೂ ಅಲ್ಲಿಗೆ ಅವರ ಮನೆಗೆ ಬರುತ್ತಾರೆ. ಈ ಬಾರಿ ವಂಶ ವೃಕ್ಷದಲ್ಲಿ ತುಳಸಿ ಹೆಸರು ಮಾತ್ರ ಸೇರ್ಪಡೆ ಆಗುತ್ತದೆ . ಅವರ ಮಕ್ಕಳ ಹೆಸರನ್ನು ಸೇರಿಸುವುದು ಇಲ್ಲ ಎಂದು ಕೊಳ್ಳುತ್ತಾರೆ. ಆದರೆ, ಸಮರ್ಥ್ ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸುವುದು ಇಲ್ಲ .
ಮಾಧವನ ಆಸ್ತಿ ಲಪಟಾಯಿಸಲು ಸಂಧ್ಯಾ ಹೊಂಚು
ಆದರೆ, ಸಂಧ್ಯಾ ಮಾತ್ರ ಸರಿ "ನನ್ನ ಹೆಸರನ್ನು ನೊಂದಾಯಿಸಿ" ಎಂದಾಗ ಎಲ್ಲರಿಗೂ ಶಾಕ್ ಆಗುತ್ತದೆ. ಸಮರ್ಥ್‌ಗೆ ಕೂಡ ಏನು ಹೇಳಬೇಕು ಎಂದು ತಿಳಿಯದಾಗುತ್ತೆ. ಸಂಧ್ಯಾ ದುರಾಸೆಯಿಂದ ಸಮರ್ಥ್‌ನನ್ನು ಒಪ್ಪಿಸುವ ಹಾಗೆ ಮಾಡುತ್ತಾಳೆ. ಇದರಿಂದ ತುಳಸಿಗೆ ಬಹಳ ಶಾಕ್ ಆಗುತ್ತೆ.

ಆಣೆ ಪ್ರಮಾಣ ಮಾಡಿಸಿಕೊಂಡ ಸಂಧ್ಯಾ
ಮಗು ಮೇಲೆ ಆಣೆ ಪ್ರಮಾಣ ಮಾಡಿಸಿಕೊಂಡ ಸಂಧ್ಯಾ ಮಾತಿಗೆ ಸಮರ್ಥ್‌ಗೆ ಏನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ. ಸಂಧ್ಯಾಗೆ ಬಹಳ ದುರಾಸೆ. ಅದಕ್ಕೆ ಇದೀಗ ದತ್ತನ ಮನೆಗೆ ಬಂದು ಸೇರಿಕೊಂಡಿದ್ದಾಳೆ. ತಾನು ಗರ್ಭಿಣಿ ಎಂದು ನಾಟಕವಾಡಿ ದತ್ತನ ಮನೆಗೆ ಬಂದು ಕುಳಿತಿದ್ದಾಳೆ. ಆದರೆ ಆಕೆ ಹೇಳುತ್ತ ಇರುವುದೆಲ್ಲ ಸುಳ್ಳು ಎನ್ನುವುದು ಯಾರಿಗೂ ಕೂಡ ತಿಳಿದು ಇರುವುದಿಲ್ಲ.


Click it and Unblock the Notifications











